ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು


Team Udayavani, Mar 13, 2020, 5:52 AM IST

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು

ವಿಶೇಷ ವರದಿ ಕಾರ್ಕಳ: ಸರಕಾರ ಮಾ. 11ರಂದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿರುವುದರಿಂದ ಚುನಾವಣೆ ನಡೆದು ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಹುದ್ದೆಗೇರುವವರ ಬಗ್ಗೆ ಲೆಕ್ಕಾಚಾರ ಜೋರಾಗಿದೆ.

ಹೊಸ ನಿರೀಕ್ಷೆ
2018ರ ಆಗಸ್ಟ್‌ 31ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸೆ. 3ರಂದು ಫ‌ಲಿತಾಂಶ ಘೋಷಣೆಯಾಗಿತ್ತು. ಫ‌ಲಿತಾಂಶ ಘೋಷಣೆಯಾದ ಬಳಿಕ ಅಂದಿನ ಸರಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿತ್ತು. ಅನಂತರ ಪ್ರಕಟಿಸಿರುವ ಪಟ್ಟಿಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದ್ದು, ಇದರ ವಿರುದ್ಧ ಕೋರ್ಟ್‌ ಮೊರೆ ಹೋದರು. ಈ ನಿಟ್ಟಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಕಗ್ಗಂಟಾಗಿಯೇ ಉಳಿಯಿತು. ಇದೀಗ ಮಾ. 11ರಂದು ಸರಕಾರ ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವುದರಿಂದ ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡುವಂತಾಗಿದೆ.
ಕಾರ್ಕಳ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ 11 ಬಿಜೆಪಿ ಹಾಗೂ 11 ಕಾಂಗ್ರೆಸ್‌ ಸದಸ್ಯರಿದ್ದರೆ, ಓರ್ವ ಪಕ್ಷೇತರ ಸದಸ್ಯರಿದ್ದಾರೆ.

ಡಿಸಿ ಆದೇಶ
ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶೀಲ್ದಾರ್‌ ಚುನಾವಣಾ ದಿನಾಂಕ ಪ್ರಕಟಿಸಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಬಿಜೆಪಿ ಸದಸ್ಯರ ಪೈಕಿ ಯೋಗೀಶ್‌ ದೇವಾಡಿಗ ಎರಡನೇ ಬಾರಿಗೆ ಪುರಸಭಾ ಸದಸ್ಯರಾಗಿದ್ದರೆ, ಶೋಭಾ ಆರ್‌. ದೇವಾಡಿಗ ಈ ಹಿಂದೊಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ಉಳಿದಂತೆ ಬಿಜೆಪಿಯ ನೀತಾ ಆಚಾರ್ಯ, ಶಶಿಕಲಾ ಶೆಟ್ಟಿ, ಮಮತಾ, ಭಾರತಿ ಅಮೀನ್‌, ಪ್ರದೀಪ್‌ ಮಾರಿಗುಡಿ, ಕೆ.ಪಿ. ಪ್ರಶಾಂತ್‌, ಸುಮಾ ಕೇಶವ, ಪಲ್ಲವಿ, ಮೀನಾಕ್ಷಿ ಗಂಗಾಧರ ಮೊದಲ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಎಂಎಲ್‌ಎ, ಎಂಪಿ ಮತ ನಿರ್ಣಾಯಕ
ಬಿಜೆಪಿ, ಕಾಂಗ್ರೆಸ್‌ ತಲಾ 11 ಸ್ಥಾನ ಹೊಂದಿರುವ ಕಾರಣ ಪುರಸಭೆ 6ನೇ ವಾರ್ಡ್‌ನ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಅವರು ಕಿಂಗ್‌ಮೇಕರ್‌ ಆಗಬೇಕಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಸ್ಥಳೀಯ ಶಾಸಕರ ಮತ್ತು ಸಂಸದರ ಮತ ಪರಿಗಣನೆಯಾಗುವುದರಿಂದ ಅವರ ಮತಗಳೇ ನಿರ್ಣಾಯಕವಾಗಲಿದೆ.

ಟಾಪ್ ನ್ಯೂಸ್

14

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

1-wqeqwewwqe

Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ

1-rerre

Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ

12-kaup

Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ

1-asdd-asd

Channagiri: ದುಷ್ಕರ್ಮಿಗಳಿಂದ ದಾಳಿಗೊಳಗಾದ ಪೊಲೀಸ್ ಠಾಣೆಗೆ ರಘುಪತಿ ಭಟ್ ಭೇಟಿ

1-ewee

2020 ರ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್‌

C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-kaup

Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ

6-shirva

Shirva: ನಿವೃತ್ತ ಶಿಕ್ಷಕ ಬೆಳಂಜಾಲೆ ಭಾಸ್ಕರ ಶೆಟ್ಟಿ ನಿಧನ

5-temple

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

4-kmc

KMC ಸಂತಾನೋತ್ಪತ್ತಿ ಔಷಧ,ಶಸ್ತ್ರಚಿಕಿತ್ಸೆ ವಿಭಾಗ: ಐವಿಎಫ್, ಫರ್ಟಿಲಿಟಿ ಕೇಂದ್ರಗಳಲ್ಲಿ ಒಂದು

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

14

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

1-wqeqwewwqe

Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ

1-rerre

Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ

12-kaup

Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ

1-br–ab

Bahrain; ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.