ಕೋವಿಡ್ 19 ಹಾವಳಿ ತಡೆಗೆ ಮುಳ್ಳಿನ ಕಾಯಿ ತೋರಣ!


Team Udayavani, Apr 5, 2020, 4:50 PM IST

ಕೋವಿಡ್ 19 ಹಾವಳಿ ತಡೆಗೆ ಮುಳ್ಳಿನ ಕಾಯಿ ತೋರಣ!

ಬೀದರ: ಸಾವಿನ ರಣಕೇಕೆ ಹಾಕುತ್ತ ಭೀತಿ ಹೆಚ್ಚಿಸುತ್ತಿರುವ ಕೋವಿಡ್ 19 ಹಾವಳಿಯಿಂದ ಹೊರಬರಲು ಬೀದರನಲ್ಲಿ ವಿನೂತನ ಆಚರಣೆ ಶುರುವಾಗಿದೆ. ಕೋವಿಡ್ 19  ಮಾದರಿಯ ಧತ್ತುರಿ (ಮುಳ್ಳಿನ ಕಾಯಿ) ಹಣ್ಣಿನ ತೋರಣ ಕಟ್ಟಿದರೆ ಸೋಂಕು ಮನೆ ಅಂಗಳಕ್ಕೆ ವಕ್ಕರಿಸುವುದಿಲ್ಲ ಎಂಬ ನಂಬಿಕೆ ಹೆಚ್ಚಿದೆ.

ಕೋವಿಡ್ 19  ದಾಳಿಯಿಂದ ದೇಶ ತತ್ತರಿಸಿದ್ದು, ವೈರಸ್‌ನ ಕಬಂಧ ಬಾಹು ಈಗಾಗಲೇ ಬೀದರ ಜಿಲ್ಲೆಗೂ ಚಾಚಿಕೊಂಡಿದೆ. ಲಾಕ್‌ಡೌನ್‌ ಬಳಿಕ ಕೋವಿಡ್ 19 ಸೋಂಕಿತರ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ಗುರುವಾರ ಒಂದೇ ದಿನ 10 ಪಾಸಿಟಿವ್‌ ವರದಿ ಆಗಿರುವುದರಿಂದ ಜಿಲ್ಲೆ ಮತ್ತಷ್ಟು ಆತಂಕಕ್ಕೆ ಜಾರಿದೆ. ವೈರಸ್‌ನ ಭೀತಿಯಿಂದ ಜನ ಈಗ ಧತ್ತುರಿ ಕಾಯಿಯ ಮೊರೆ ಹೋಗಿದ್ದಾರೆ. ಮುಳ್ಳಿನ ಕಾಯಿಯನ್ನು ತೋರಣ ಮಾಡಿ ಕಟ್ಟಿದರೆ ಕೋವಿಡ್ 19  ವೈರಸ್‌ ಬರೋದಿಲ್ಲ ಅನ್ನೋ “ಮೌಡ್ಯ’ದ ಮಾತು ಈಗ ಹಳ್ಳಿಯಿಂದ ಹಳ್ಳಿಗೆ ವ್ಯಾಪಿಸಿದೆ.

ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯುವ ಧತ್ತುರಿ ಹಣ್ಣನ್ನು ಶಿವರಾತ್ರಿ ಮತ್ತು ಗಣೇಶ ಉತ್ಸವ ಸಮಯದಲ್ಲಿ ಪೂಜೆಗಾಗಿ ಬಳಸಲಾಗುತ್ತದೆ. ಹಣ್ಣು ಮುಳ್ಳಿನ ಕಾಯಿಯಂತಿದ್ದು, ಕೊರೊನಾ ಸೋಂಕಿನ ಚಿತ್ರವನ್ನೇ ಹೋಲುವುದರಿಂದ ಅದನ್ನು ತೋರಣವಾಗಿ ಕಟ್ಟಿದರೆ ತಮ್ಮ ಮನೆಗೆ ಕೋವಿಡ್ 19 ದಿಂದ ತೊಂದರೆಯಾಗುವುದಿಲ್ಲ ಎಂದು ನಂಬಿದ್ದಾರೆ. ಹಾಗಾಗಿ ಈ ಕಾಯಿಯನ್ನು ಹೂವು, ಮಾವು ಮತ್ತು ಬೇವಿನ ಸೊಪ್ಪು ಜತೆಗೆ ಮನೆ ಬಾಗಿಲಿಗೆ ಕಟ್ಟಿ ಕುಂಕುಮ ಮತ್ತು ಅರಶಿಣದಿಂದ ಪೂಜೆ ಮಾಡುತ್ತಿದ್ದಾರೆ.

ಹೊಸ ಆಚರಣೆ ಶುರುವಾಗುತ್ತಿದ್ದಂತೆ ಜನ ಮರುಳ್ಳೋ ಜಾತ್ರೆ ಮರುಳ್ಳೋ ಎಂಬಂತೆ ಬೇಲಿ ಮುಳ್ಳಿನ ಕಾಯಿಗೆ ಈಗ ಡಿಮ್ಯಾಂಡ್‌ ಹೆಚ್ಚಿದೆ. ಕಾಯಿಗಾಗಿ ಜನ ಬೇಲಿ ಬೇಲಿ ಹುಡುಕಾಡುತ್ತಿದ್ದಾರೆ. ನಗರದ ಹೊರವಲಯದ ಲಾಡಗೇರಿ ಗ್ರಾಮದ ಸುತ್ತಮುತ್ತ ಎಲ್ಲರ ಮನೆ ಬಾಗಿಲಲ್ಲಿ ಧತ್ತುರಿ ಕಾಯಿಯ ತೋರಣ ಕಾಣಸಿಗುತ್ತಿದೆ. ಈ ಆಚರಣೆ ಈಗ ಬಹುತೇಕ ಹಳ್ಳಿಗಳಿಗೂ ಹಬ್ಬಿದೆ. ಇನ್ನು ಶುಕ್ರವಾರ ಔರಾದ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕುಂಕುಮ, ಬೇವಿನ ಸೊಪ್ಪು, ಹೂವಿನಿಂದ ಬಾಗಿಲಿಗೆ ಪೂಜೆ ಮಾಡಿದ್ದಾರೆ. ಇದರಿಂದ ಕೊರೊನಾ ಸೋಂಕು ಮನೆಗೆ ಪ್ರವೇಶಿಸುವುದಿಲ್ಲ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದೆ.

 

ಕೋವಿಡ್ 19  ಮಾದರಿಯ ಧತ್ತುರಿ (ಮುಳ್ಳಿನ ಕಾಯಿ) ಹಣ್ಣನ್ನು ಮನೆ ಬಾಗಿಲಿಗೆ ತೋರಣ ಕಟ್ಟಿ ಪೂಜೆ ಮಾಡುವುದರಿಂದ ಸೋಂಕಿನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬ ನಂಬಿಕೆ ಗ್ರಾಮದ ಜನರಲ್ಲಿ ಹುಟ್ಟಿಕೊಂಡಿದೆ. ಹಾಗಾಗಿ ಇಲ್ಲಿಯ ಪ್ರತಿ ಮನೆಗಳಿಗೆ ಕಾಯಿಯ ತೋರಣ ಕಟ್ಟಿ, ಮಹಿಳೆಯರು ಪೂಜೆ ಮಾಡಿದ್ದಾರೆ.  –ಸುನೀಲ ಭಾವಿಕಟ್ಟಿ, ಲಾಡಗೇರಿ ನಿವಾಸಿ.

 

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-bidar

Bidar: ಅಕ್ರಮ ಆಸ್ತಿ: 4 ವರ್ಷ ಶಿಕ್ಷೆ, 25 ಲಕ್ಷ ದಂಡ

1-aasasa

Bidar: ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ‌ ಢಿಕ್ಕಿಯಾದ ಸಾರಿಗೆ ಬಸ್

ಜೋಶಿ

Bidar; ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಜೋಶಿ

4-bidar

Bidar: ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ‌ ಅಕ್ಕ ಅನ್ನಪೂರ್ಣ ತಾಯಿ ನಿಧನ

ಎನ್‌ಇಪಿ ರದ್ದು, ರಾಜಕೀಯ ಪ್ರೇರಿತ: ಬೊಮ್ಮಾಯಿ

Bidar; ಎನ್‌ಇಪಿ ರದ್ದು ರಾಜಕೀಯ ಪ್ರೇರಿತ: ಬೊಮ್ಮಾಯಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.