51 ವರ್ಷಗಳ ದಾಂಪತ್ಯ ಆರೇ ನಿಮಿಷ ಆಂತರದಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾಯ್ತು!

ಸೋಂಕಿನಿಂದ ನಲುಗಿರುವ ಫ್ಲೋರಿಡಾದಲ್ಲಿನ ವ್ಯಥೆಯ ಕಥೆ ; ಸಾಮಾಜಿಕ ಅಂತರ, ಪರಿಸ್ಥಿತಿ ಅರಿತುಕೊಳ್ಳಲು ಪುತ್ರ ಮಾಡಿದ ವಿಡಿಯೋ ವೈರಲ್‌

Team Udayavani, Apr 6, 2020, 5:59 AM IST

51 ವರ್ಷಗಳ ದಾಂಪತ್ಯ ಆರೇ ನಿಮಿಷ ಆಂತರದಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾಯ್ತು!

ಫ್ಲೋರಿಡಾ: ಅಮೆರಿಕದಲ್ಲೀಗ ಕೋವಿಡ್ 19 ವೈರಸ್ ನದ್ದೇ ರಣಕೇಕೆ. ಅಮೆರಿಕದ ಹಿರಿಯ ದಂಪತಿ ಅದಕ್ಕೆ ಬಲಿಯಾಗಿದ್ದಾರೆ. ಅದೂ ಕೇವಲ ಆರು ನಿಮಿಷಗಳ ಅಂತರದಲ್ಲಿ ಮಾ.29ರಂದು ನಿಧನರಾಗಿದ್ದಾರೆ.

ಅಸುನೀಗಿದ ದಂಪತಿಯ ಹೆಸರು ಸ್ಟುವರ್ಟ್‌ ಬೇಕರ್‌ (74), ಪತ್ನಿ ಆ್ಯಡ್ರಿಯನ್‌ ಬೇಕರ್‌ (72). ಸ್ಟುವರ್ಟ್‌ ಬೇಕರ್‌ಗೆ ಮಾರ್ಚ್‌ ತಿಂಗಳ ಮಧ್ಯಭಾಗದಲ್ಲಿ ಕೊಂಚ ಅಸ್ವಸ್ಥತೆ ಉಂಟಾಗಿತ್ತು. ಹೀಗಾಗಿ  ಕುಟುಂಬದ ವೈದ್ಯರು ಸ್ಟುವರ್ಟ್‌ಗೆ ಚಿಕಿತ್ಸೆ ನೀಡಿದರೂ, ಪರಿಸ್ಥಿತಿ ಸುಧಾರಿಸಿದೇ ಇದ್ದ ಕಾರಣ ಅವರನ್ನು ಫ್ಲೋರಿಡಾದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಕೂಡ ಮನೆಗೆ ವಾಪಸ್‌ ಕಳುಹಿಸಿ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದರು.

ಮಾ.19ರ ವೇಳೆ ಸ್ಟುವರ್ಟ್‌ಗೆ ಜ್ವರ ಮತ್ತು ಅಸ್ತಮಾ ಕಾಣಿಸಿಕೊಂಡದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಮಾ.24 ರಂದು ಅವರಿಗೆ ಕೊರೊನಾ ಸೋಂಕು ಇರುವುದು  ಖಚಿತವಾಯಿತು.

ಇದೇ ವೇಳೆ ಅವರ ಪತ್ನಿ ಆ್ಯಡ್ರಿಯನ್‌ಗೆ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿತ್ತು. ಪತಿಯಲ್ಲಿ ಸೋಂಕು ಇದ್ದದ್ದು ಖಚಿತವಾಗುತ್ತಲೇ, ಪತ್ನಿಗೂ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರಿಬ್ಬರಿಗೆ ಒಂದೇ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಶುರುಮಾಡಲಾಯಿತು. ಅಂತಿಮವಾಗಿ ಮಾ.29 ರಂದು ಹಿರಿಯ ದಂಪತಿ ಕೇವಲ ಆರು ನಿಮಿಷಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಪುತ್ರ ಬಡ್ಡಿ ಬೇಕರ್‌ ವೈರಸ್‌ನಿಂದ ಉಂಟಾಗಿರುವ ಸಮಸ್ಯೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ಮಾಡಿಕೊಂಡಿರುವ ಮನವಿ ಈಗ ವೈರಲ್‌ ಆಗಿದೆ.

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

IMD

Pakistan; ತಾಪ 52 ಡಿಗ್ರಿ: ಆರ್ಥಿಕ ಸಂಕಷ್ಟದ ನಡುವೆ ಏರಿದ ಬಿಸಿಲು

1-qweqweqw

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

nawaz sharif

India ಜತೆಗಿನ ಒಪ್ಪಂದ ಉಲ್ಲಂಘನೆ: ನವಾಜ್‌ ಶ‌ರೀಫ್ ತಪ್ಪೊಪ್ಪಿಗೆ

1-eqweeweqwe

LGBT ಅವಹೇಳನ: ಪೋಪ್‌ ಫ್ರ್ಯಾನ್ಸಿಸ್‌ ಕ್ಷಮಾಪಣೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.