Udayavni Special

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ


Team Udayavani, Apr 2, 2020, 7:20 PM IST

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಜಗತ್ತಿನಾದ್ಯಂತ ಈಗ ಕೋವಿಡ್ 19 ವೈರಸ್‌ನದ್ದೇ ಸುದ್ದಿ. ಈ ಚಿಕ್ಕ ವೈರಸ್‌ ಜಗತ್ತಿನ ಆರ್ಥಿಕತೆಯ ಮೇಲೆ, ಜನಜೀವನದ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ. ಅತ್ಯಂತ ವೇಗವಾಗಿ ಹರಡಬಲ್ಲ ಈ ಸೋಂಕಿನ ಕುರಿತು ಮುಖ್ಯ ವಾಹಿನಿ ಮಾಧ್ಯಮಗಳಲ್ಲಷ್ಟೇ ಅಲ್ಲದೇ, ಸೋಷಿಯಲ್‌ ಮೀಡಿಯಾಗಳಲ್ಲೂ ಅತೀವ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ 4ಜಿ ಫೋನ್‌ಗಳು-ಅಂತರ್ಜಾಲ ಸಂಪರ್ಕದ ನಿಲುಕು ಅಧಿಕವಿರುವ ಭಾರತದಂಥ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಸಂಖ್ಯೆ ಅಧಿಕವಿದೆ. ಇದೊಂದು ರೀತಿಯಲ್ಲಿ ವರವೂ ಹೌದು – ಶಾಪವೂ ಹೌದು. ಇಂಥ ಆಪತ್ತಿನ ಸಮಯದಲ್ಲಿ ಜನರೆಡೆಗೆ ಬೇಗನೇ ಸಂದೇಶಗಳನ್ನು ತಲುಪಿಸಲು ಸರಕಾರಗಳಿಗೆ ಸುಲಭವಾಗುತ್ತಿದೆ.

ಆದರೆ ಇದೇ ವೇಳೆಯಲ್ಲೇ ಹುಸಿ ಸುದ್ದಿಗಳ ಹಾವಳಿಯೂ ವಿಪರೀತವಾಗುತ್ತಿದೆ. ಎಲ್ಲರೂ ಈಗ ಮನೆಯಲ್ಲೇ ಇರುವುದರಿಂದ ಹಾಗೂ ಅನಿಶ್ಚಿತತೆ ಎದುರಾಗಿರುವುದರಿಂದ ಆತಂಕ ಎದುರಾಗುವುದು ಸಹಜವೇ. ಜನರ ಈ ಆತಂಕ, ಅಸಹಾಯಕತೆಯನ್ನೇ ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಅದರಲ್ಲೂ ಲಾಕ್‌ಡೌನ್‌ ಅನಂತರದಿಂದ ಭಾರತೀಯರ ಅಂತರ್ಜಾಲ ನಿತ್ಯ ಬಳಕೆ ಪ್ರಮಾಣ 3 ಗಂಟೆ ಅಧಿಕವಾಗಿದೆ ಎನ್ನುತ್ತಿವೆ ಕೆಲವು ವರದಿಗಳು. ಈಗಿನ ಸ್ಥಿತಿಯಲ್ಲಿ ಜನರು ಸಾಮಾಜಿಕ ಮಾಧ್ಯಮಗಳಿಗೆ ತೆರೆದುಕೊಳ್ಳುವುದು ಸಹಜವೇ ಆಗಿರುತ್ತದೆ. ಇದರಿಂದಾಗಿ ಪ್ರತಿಯೊಬ್ಬರ ಡಿವೈಸ್‌ಗಳಲ್ಲೂ ದಿನನಿತ್ಯ ಹಲವಾರು ವದಂತಿಗಳು, ಸುಳ್ಳು ಸುದ್ದಿಗಳು ಬಂದು ಕೂರಲಾರಂಭಿಸಿವೆ.

ಫೇಸ್‌ಬುಕ್‌, ವಾಟ್ಸ್‌ ಆÂಪ್‌ ಮತ್ತು ಟ್ವಿಟರ್‌ಗಳಲ್ಲಿ ಕೋವಿಡ್ 19 ಹರಡುವಿಕೆಯ ಕುರಿತು ಕೆಲ ದಿನಗಳಿಂದ ಸುಳ್ಳು ಸಂಗತಿಗಳು ಹರಿದಾಡಲಾರಂಭಿಸಿವೆ. ಉದಾಹರಣೆ- ಈ ವೈರಾಣು ಸೊಳ್ಳೆಗಳಿಂದ ಹಾಗೂ ಸಾಕು ಪ್ರಾಣಿಗಳಿಂದ ಹರಡುತ್ತದೆ ಎನ್ನುವುದು. ಇದು ಶುದ್ಧ ಸುಳ್ಳು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸಾರಿ ಸಾರಿ ಹೇಳುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ರೀತಿಯ ಸಂದೇಶಗಳ ಕೊನೆಗೆ ದೇಶದ ಹೆಸರಾಂತ ವೈದ್ಯರ, ತಜ್ಞರ, ಸಂಸ್ಥೆಗಳ, ರಾಜಕಾರಣಿಗಳ, ಸರಕಾರಗಳ ಹೆಸರುಗಳನ್ನು ಸೇರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಜನ ಈ ಸುಳ್ಳನ್ನು ಸತ್ಯವೆಂದು ಭಾವಿಸುವ ಅಪಾಯವಿದೆ.

ಕೋವಿಡ್ 19 ಹೇಗೆ ಹರಡುತ್ತದೆ, ಅದನ್ನು ಹೇಗೆ ತಡೆಯಬೇಕು ಎನ್ನುವ ಬಗ್ಗೆ ಸರಕಾರ, ಆರೋಗ್ಯ ಇಲಾಖೆಗಳು, ಆರಂಭದಿಂದಲೇ ಜಾಗೃತಿ ಮೂಡಿಸುತ್ತಾ
ಬರುತ್ತಿವೆ. ಸ್ವ-ದಿಗ್ಬಂಧನ , ಆರೋಗ್ಯಯುತ ಜೀವನ ಶೈಲಿ, ಸ್ವತ್ಛತೆ ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಸದ್ಯಕ್ಕೆ ಈ ವೈರಸ್‌ ವಿರುದ್ಧ ಲಸಿಕೆ ಇಲ್ಲ, ಹೀಗಿದ್ದರೂ, ಮನೆಮದ್ದುಗಳಿಂದ ವೈರಸ್‌ ನಾಶವಾಗುತ್ತದೆ ಎಂಬ ಸುದ್ದಿ ಹರಡಲಾಗುತ್ತಿದೆ.

ನಿಮ್ಮಲ್ಲಿ ಚಿಂತೆ ಮೂಡಿಸುವ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರೊಂದಿಗೆ
ಮಾತನಾಡಿ, ಅವರ ಸಲಹೆ ಪಡೆಯಿರಿ. ಅವರು ಹೇಳುವ ಕ್ರಮಗಳನ್ನು
ಪಾಲಿಸಿರಿ. ಎಲ್ಲಕ್ಕಿಂತ ಮುಖ್ಯವಾಗಿ, ಹೀಗೆ ಹರಿದಾಡುತ್ತಿರುವ ಸುಳ್ಳು
ಸುದ್ದಿಗಳು, ವದಂತಿಗಳ ಬಗ್ಗೆ ಪತ್ರಿಕೆಗಳು, ಸರಕಾರ, ವಿಶ್ವ ಆರೋಗ್ಯ ಸಂಸ್ಥೆ
ಹಾಗೂ ಹಲವಾರು ಫ್ಯಾಕ್ಟ್ ಚೆಕ್‌ ಜಾಲತಾಣಗಳು ನಿತ್ಯವೂ ಜಾಗೃತಿ
ಮೂಡಿಸುತ್ತಿದ್ದು, ಅವುಗಳ ಮೊರೆ ಹೋಗಿ. ವಾಟ್ಸ್‌ ಆಪ್‌, ಫೇಸ್‌ಬುಕ್‌ನ‌
ಸುಳ್ಳು ಸುದ್ದಿಗಳು ಸೃಷ್ಟಿಸುತ್ತಿರುವ ಆತಂಕವು ಅನಗತ್ಯ ಪ್ರಯೋಗಗಳಿಗೆ,
ತನ್ಮೂಲಕ ಅಪಾಯಕಾರಿ ಫ‌ಲಿತಾಂಶಗಳಿಗೆ ಕಾರಣವಾಗದಿರಲಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

Web-tdy-1

ಸೈಕಲ್ ಮೆಕ್ಯಾನಿಕ್ ಸಮಾಜ ಸೇವೆ ಮಾಡಿ ಪದ್ಮ ಶ್ರೀ ಗೌರವ ಪಡೆದದ್ದು ಹೇಗೆ ಗೊತ್ತಾ ?

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ ; ಶತಕ ಬಾರಿದ ಸೋಂಕಿತರ ಸಂಖ್ಯೆ

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು ; ಸಹೋದರ ಪಾರು

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು, ಸಹೋದರ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಸ್ರೇಲ್‌-ಭಾರತ ಸಹಭಾಗಿತ್ವ ಪ್ರಯತ್ನ ಫ‌ಲಿಸಲಿ

ಇಸ್ರೇಲ್‌-ಭಾರತ ಸಹಭಾಗಿತ್ವ ಪ್ರಯತ್ನ ಫ‌ಲಿಸಲಿ

ಬದಲಾಗದ ಜನರ ವರ್ತನೆ ಅಪಾಯವಿನ್ನೂ ದೂರವಾಗಿಲ್ಲ

ಬದಲಾಗದ ಜನರ ವರ್ತನೆ ಅಪಾಯವಿನ್ನೂ ದೂರವಾಗಿಲ್ಲ

ಕೋವಿಡ್ 19 ತಂದ ಸಂಕಷ್ಟ ಸುಧಾರಿಸಲಿ ಬದುಕು

ಕೋವಿಡ್ 19 ತಂದ ಸಂಕಷ್ಟ ಸುಧಾರಿಸಲಿ ಬದುಕು

ಚೀನ-ನೇಪಾಲ ತಂಟೆ : ಕೋವಿಡ್ ಸಮಯದಲ್ಲಿ ಗದ್ದಲ

ಚೀನ-ನೇಪಾಲ ತಂಟೆ : ಕೋವಿಡ್ ಸಮಯದಲ್ಲಿ ಗದ್ದಲ

ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ

ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

varma trailer

ಭಯ ಹುಟ್ಟಿಸುತ್ತಲೇ ಬಂದ ಕೋವಿಡ್‌ 19‌ ಟ್ರೇಲರ್‌!

wild-kar-holl

ವೈಲ್ಡ್‌ ಕರ್ನಾಟಕದಲ್ಲಿ ಚಿತ್ರ ನಟರು

suna-swabhimana

ಸುಮಲತಾ ಸ್ವಾಭಿಮಾನದ ಗೆಲುವಿಗೆ ವರ್ಷ

abhi suri bad

ಅಭಿಷೇಕ್‌ ಚಿತ್ರ ಬ್ಯಾಡ್‌ ಮ್ಯಾನರ್ಸ್‌

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.