ಅಭಿವೃದ್ಧಿಗೆ ಸಾಲ ಮನ್ನಾ ತೊಡಕಾಗಬಾರದು

Team Udayavani, Jul 6, 2018, 11:57 AM IST

abhivruddige.jpg

ಕೆಂಗೇರಿ: ರೈತರ ಸಾಲ ಮನ್ನಾ ಕ್ರಮದಿಂದ ಬೆಂಗಳೂರು ನಗರದ ಅಭಿವೃದ್ಧಿಗೆ ತೊಡಕಾಗಬಾರದು ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿದರು. ಹೇರೋಹಳ್ಳಿಯ ಕೆಂಪೇಗೌಡ ಪಾಲಿಕೆ ಭವನದಲ್ಲಿ ಗುರುವಾರ ಶಾಸಕರ ನೂತನ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದರು.

ಸಾಲ ಮನ್ನಾ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಆದರೆ ಸಾಲ ಮನ್ನಾ ಮಾಡಿರುವುದು ಬೆಂಗಳೂರು ನಗರದ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು. ಬಿಬಿಎಂಪಿಯಿಂದ ಬರುವ ಆದಾಯವನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.

ಸಾಲ ಮನ್ನಾ ಯೋಜನೆಯ ನಿಜವಾದ ಪ್ರಯೋಜನ ಆಗಬೇಕಿರುವುದು, ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿರುವ ರೈತರಿಗೆ. ಆದರೆ ಬ್ಯಾಂಕ್‌ಗಳು, ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ವರ್ಷಗಟ್ಟಲೆ ಮರು ಪಾವತಿ ಮಾಡದೆ ತಪ್ಪಿಸಿಕೊಳ್ಳುವ ರೈತರು ಇಂದು ಸಾಲ ಮನ್ನಾದ ನಿಜವಾದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಶವಂತಪುರ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲೂ ಶಾಸಕರ ಕಚೇರಿ ತೆರೆಯುವುದಾಗಿ ತಿಳಿಸಿದ ಸೋಮಶೇಖರ್‌, ಈಗಾಗಲೇ ಎಲ್ಲ ವಾರ್ಡ್‌ಗಳಲ್ಲಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದು, ಹಂತಹಂತವಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಎಲ್ಲ ವಾರ್ಡ್‌ ಕಚೇರಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಶಾಸಕರು, ದಿನೇಶ್‌ ಗುಂಡೂರಾವ್‌ ಅವರು ಅತ್ಯುತ್ತಮ ಪಕ್ಷ ಸಂಘಟಕರು. ಇದೇ ಉದ್ದೇಶದಿಂದ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್‌ ಆಯ್ಕೆ ಮಾಡಿದೆ. ಅವರ ನೇಮಕದಿಂದ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಂತಸವಾಗಿದೆ ಎಂದರು. ಪಾಲಿಕೆ ಸದಸ್ಯರಾದ ಆರ್ಯ ಶ್ರೀನಿವಾಸ್‌, ರಾಜಣ್ಣ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಿವಮಾದಯ್ಯ, ಕೆಪಿಸಿಸಿ ಕಾರ್ಯದರ್ಶಿ ಡಾ.ಎನ್‌.ನಂಜುಂಡೇಶ ಉಪಸಿœತ್ತರಿದ್ದರು.

ಟಾಪ್ ನ್ಯೂಸ್

2

‌Bollywood: ಮತ್ತೆ ನಿರ್ದೇಶನದತ್ತ ಕರಣ್‌ ಜೋಹರ್:‌ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

1

ಕಾರ್ತಿ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್‌ -2ʼ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

hardik pandya and natasa stankovic getting divorced?

Divorced? ಮುರಿದು ಬಿತ್ತಾ ಹಾರ್ದಿಕ್- ನತಾಶಾ ಸಂಬಂಧ? 70% ಆಸ್ತಿ ಕಳೆದುಕೊಳ್ತಾರಾ ಪಾಂಡ್ಯ?

10-gundlupete

Gundlupete: ಕಲ್ಲುಕಟ್ಟೆ ಜಲಾಶಯಕ್ಕೆ ಹಾರಿ ಯುವಕ ಆತ್ಮಹತ್ಯೆ

8-dharmasthala

CM Siddaramaiah: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

2

‌Bollywood: ಮತ್ತೆ ನಿರ್ದೇಶನದತ್ತ ಕರಣ್‌ ಜೋಹರ್:‌ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’

Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’

1

ಕಾರ್ತಿ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್‌ -2ʼ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.