ತೆಂಕಬೈಲು ಭಾಗವತರಿಗೆ ಪದ್ಯಾಣ ಪ್ರಶಸ್ತಿ

Team Udayavani, Nov 23, 2018, 6:00 AM IST

1.jpg

ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಈಗ ಎಪ್ಪತ್ತೆçದರ ಹರೆಯ. ಐದು ದಶಕಕ್ಕೂ ಮಿಕ್ಕಿದ ಕಲಾಯಾನದಲ್ಲಿ ಮಾಗಿದ ಅನುಭವ ಸಂಪತ್ತು. ಮೇಳ ತಿರುಗಾಟ ಹದಿನಾರು ವರುಷ. ಮಿಕ್ಕಂತೆ ಹವ್ಯಾಸಿ ರಂಗಕ್ಕೆ ಸಮರ್ಪಿತ. 

 ಸೋದರ ಮಾವಂದಿರಿಂದ ಮದ್ದಳೆ, ಭಾಗವತಿಕೆಗೆ ಶ್ರೀಕಾರ. ಗುರು ಮಾಂಬಾಡಿ ನಾರಾಯಣ ಭಾಗವತರಿಂದ ಶಿಲ್ಪಕ್ಕೆ ಆಕಾರ. ಯಾರದ್ದೇ ಪ್ರತಿಯಾಗದ ಭಾಗವತಿಕೆ. ಪ್ರತ್ಯೇಕವಾದ ತೆಂಕಬೈಲು ಮಟ್ಟಿನ ಜನಸ್ವೀಕೃತಿ.ಭಾಗವತರಾದ ಬಳಿಕ ಬದುಕಿಗೆ ಹೊಸ ತಿರುವು. ಕೂಟ, ಆಟಗಳಿಗೆ ಬೇಡಿಕೆ. ನಿಜಾರ್ಥದ ರಂಗನಿರ್ದೇಶಕನಾಗಿ ಬಿಡುವಿರದ ದುಡಿತ. ದಕ್ಷಾಧ್ವರ, ಕಂಸವಧೆ, ಕರ್ಣಪರ್ವ ಪ್ರಸಂಗಗಳು ಇಷ್ಟದವುಗಳು. ರಸಗಳೇ ಕುಣಿವ ಸೌಂದರ್ಯ. ಈ ಪ್ರಸಂಗಗಳಿದ್ದರೆ ಪದ್ಯ ಕೇಳಲೆಂದೇ ಬರುವ ಪ್ರೇಕ್ಷಕ ವರ್ಗ. ಪದ್ಯ ಮುಗಿದಾಗ ವೇಷಧಾರಿ ಅರ್ಥ ಹೇಳಬೇಕಾಗಿಲ್ಲ. ಆ ಸನ್ನಿವೇಶವೇ ಅರ್ಥ ಹೇಳುತ್ತಿತ್ತು! “ಪುತ್ತೂರಿನ ದಭೆìಯಲ್ಲಿ ಜರುಗಿದ ದûಾಧ್ವರ ಪ್ರಸಂಗದ ಆಟದಲ್ಲಿ ನೋಟಿನ ಮಾಲೆ ಹಾಕಿದ್ದರು’ ಎನ್ನುವಾಗ ಶಾಸ್ತ್ರಿಗಳಿಗೆ ನಾಚಿಕೆ! ಆ ನಾಚಿಕೆಯ ಸೊಗಸಿನಲ್ಲಿ ಆರ್ಧ ಶತಮಾನದ ಅನುಭವ ಇಣುಕುತ್ತಿತ್ತು. ಕಾಳಿಕಾಂಬ ಕ್ಷೇತ್ರ ಮಹಾತ್ಮೆ, ಏಕವೀರಚಕ್ರ ಪ್ರಸಂಗಗಳ ರಚಯಿತರು. ಹಲವಾರು ಮಂದಿ ಶಿಷ್ಯರನ್ನು ರೂಪಿಸಿದ ಗುರು. “ನನ್ನ ಶಿಷ್ಯಂದಿರು ವಿದ್ಯಾವಂತರು. ಅವರೆಲ್ಲಾ ಪೂರ್ಣಕಾಲಿಕ ಮೇಳದ ಕಲಾವಿದರಲ್ಲ. ಹಾಗಾಗಿಯೋ ಏನೋ ನಾನು ಹೆಚ್ಚು ಪಬ್ಲಿಕ್‌ ಇಲ್ಲ’ ಎಂದು ನಗುತ್ತಾ, “ಕಲಾವಿದನಾಗಬೇಕಾದರೆ ಮೇಳದ ತಿರುಗಾಟ ಮಾಡಲೇ ಬೇಕು’ ಎಂದರು. 

    ಕಾಲದ ಓಟದಲ್ಲಿ ರಂಗವು ಪಲ್ಲಟದೆಡೆಗೆ ಹೊರಳಿದೆ. ಈ ವಿಚಾರವನ್ನು ಶಾಸ್ತ್ರಿಗಳ ಗಮನಕ್ಕೆ ತಂದಾಗ ಒಂದೆರಡು ವಾಕ್ಯದಲ್ಲಿ ವರ್ತಮಾನವನ್ನು ಕಟ್ಟಿಕೊಟ್ಟರು “ಒಂದೆರಡು ದಶಕಗಳ ಹಿಂದೆ ಭಾಗವತನಿಗೆ ಸಂಭಾವನೆ ಸಿಗದಿದ್ದರೂ ರಂಗತೃಪ್ತಿಯಿತ್ತು. ಈಗ ಸಂಭಾವನೆಯ ಮೊತ್ತ ಜಾಸ್ತಿಯಿದೆ. ರಂಗತೃಪ್ತಿಯು ಅರ್ಥ ಕಳೆದುಕೊಂಡಿದೆ.’ 

    ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನೂರಾರು ಸಮ್ಮಾನಗಳಿಂದ ಪುರಸ್ಕೃತರು. ಪ್ರಶಸ್ತಿಗಳಿಂದ ಮಾನಿತರು. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಅಭಿಮಾನಿ ಬಳಗವಿದೆ. ಈಗವರಿಗೆ ಪ್ರತಿಷ್ಠಿತ ಪದ್ಯಾಣ ಪ್ರಶಸ್ತಿಯ ಬಾಗಿನ. 2018 ನವಂಬರ್‌ 26ರಂದು ಅಪರಾಹ್ನ ಬಂಟ್ವಾಳ ತಾಲೂಕಿನ ಕರೋಪಾಡಿಯ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.                                      
ನಾ ಕಾರಂತ ಪೆರಾಜೆ 

ಟಾಪ್ ನ್ಯೂಸ್

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.