ಜನಮನ ರಂಜಿಸಿದ ಭಸ್ಮಾಸುರ ಮೋಹಿನಿ


Team Udayavani, Jan 4, 2019, 12:30 AM IST

x63.jpg

ಷಷ್ಠಿ ಜಾತ್ರೆಯ ಅಂಗವಾಗಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಯಕ್ಷ ಮಿತ್ರರು ಕುಡುಪು ಇವರ ಸಂಯೋಜನೆಯಲ್ಲಿ ವೃತಿ ಪರ ಮೇಳದ ಕಲಾವಿದರಿಂದ “ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ನಡೆಯಿತು. ಪೌರಾಣಿಕ ಪ್ರಸಂಗಗಳಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗವನ್ನು ಎಷ್ಟು ಬಾರಿ ನೋಡಿದರೂ ಕಲಾಭಿಮಾನಿಗಳಿಗೆ ಬೇಸರವೆನಿಸುವುದಿಲ್ಲ. ಏಕೆಂದರೆ ವಿಭಿನ್ನ ಕಲಾವಿದರು ಈ ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ಭಿನ್ನ ರೀತಿಯಲ್ಲಿ ನಿರ್ವಹಿಸಿದಾಗ ಕಲಾಪ್ರದರ್ಶನದಲ್ಲಿ ಏಕತಾನತೆಯ ಅನುಭವವಾಗಲಾರದು. ಇಲ್ಲಿ ನಡೆದ ಪ್ರದರ್ಶನವೂ ಕಲಾವಿದರ ಸೊಗಸಾದ ನಿರ್ವಹಣೆಯಿಂದ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಶಿವನ ಪಾತ್ರವನ್ನು ನಿರ್ವಹಿಸಿದವರು ಎಡನೀರು ಮೇಳದ ಹಿರಿಯ ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿ ಹಾಗೂ ಪಾರ್ವತಿಯಾಗಿ ಕಟೀಲು ಮೇಳದ ಪ್ರಶಾಂತ್‌ ನೆಲ್ಯಾಡಿ ಕಾಣಿಸಿಕೊಂಡರು. ಇವರಿಬ್ಬರ ಪ್ರಬುದ್ಧ ಅಭಿನಯ, ನಾಟ್ಯ, ಸಂಭಾಷಣೆಗಳು ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಶಿವ ಮತ್ತು ಭಸ್ಮಾಸುರನ ನಡುವಿನ ಹಾಸ್ಯಮಿಶ್ರಿತ ಸಂಭಾಷಣೆಗಳೂ ಮನರಂಜನೆ ನೀಡಿದವು. ಭಸ್ಮಾಸುರನಾಗಿ ರಂಗವನ್ನೇರಿದವರು ಎಡನೀರು ಮೇಳದ ಇನ್ನೊಬ್ಬ ಪ್ರಮುಖ ಕಲಾವಿದ ಮಧೂರು ರಾಧಾಕೃಷ್ಣ ನಾವಡ. ಅಬ್ಬರದಿಂದ ರಂಗಸ್ಥಳ ಪ್ರವೇಶಿಸಿದ ಇವರು ಭಸ್ಮಾಸುರನಾಗಿ ಉತ್ತಮವಾಗಿ ಅಭಿನಯಿಸಿ ಮನಸೂರೆಗೊಂಡರು.ಮಾತಿನ ಶೈಲಿ, ಕುಣಿತ ಮತ್ತು ಹಾಸ್ಯಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕುಡುಪು ಕ್ಷೇತ್ರದಲ್ಲಿ ನಾವಡರು ಭಸ್ಮಾಸುರನ ವೇಷ ಮಾಡಿದ್ದು ಇದೇ ಪ್ರಥಮ. ಕಲಾಭಿಮಾನಿಗಳ ನಿರೀಕ್ಷೆಯಂತೆ ಕಟೀಲು ಮೇಳದ ಶ್ರೀ ದೇವಿ ಪಾತ್ರಧಾರಿ ಅಕ್ಷಯ ಕುಮಾರ್‌ ಮಾರ್ನಾಡ್‌ ಮೋಹಿನಿಯಾಗಿ ವಿಶಿಷ್ಟ ಶೈಲಿಯಲ್ಲಿ ಪ್ರವೇಶ ನೃತ್ಯ ಮಾಡಿದಾಗ ಒಮ್ಮೆಲೇ ಮಿಂಚಿನ ಸಂಚಾರದ ಆನುಭವವಾಯಿತು. ಮೋಹಿನಿಯಾಗಿ ಬಹಳಷ್ಟು ಕಡೆ ಪಾತ್ರ ನಿರ್ವಹಿಸಿ ಅಪಾರ ಜನಮನ್ನಣೆ ಪಡೆದಿರುವ ಇವರು, ಪ್ರತಿ ಬಾರಿ ನವೀನ ಶೈಲಿಯಲ್ಲಿ ಮೋಹಕವಾಗಿ ಪ್ರವೇಶ ನೃತ್ಯ ಮಾಡುತ್ತಾರೆ. ವೈವಿಧ್ಯಮಯ ನೃತ್ಯ, ಹಾವ, ಭಾವ, ಅಭಿನಯ ಮತ್ತು ಹಾಸ್ಯ ಮಿಶ್ರಿತ ಮೋಹಕ ಸಂಭಾಷಣೆಗಳ ಮೂಲಕ ಮೋಹಿನಿ ಪಾತ್ರವನ್ನು ಸೊಗಸಾಗಿ ನಿರ್ವಹಿಸುವ ಇವರು ಒಬ್ಬ ಪ್ರತಿಭಾವಂತ ಕಲಾವಿದ. ಭಸ್ಮಾಸುರ ಮೋಹಿನಿಯಾಗಿ ತೆಂಕು ತಿಟ್ಟಿನ ಯಕ್ಷಗಾನದಲ್ಲಿ ನಾವಡ ಹಾಗೂ ಮಾರ್ನಾಡ್‌ ಅತ್ಯುತ್ತಮ ಜೋಡಿ ಎಂದರೂ ತಪ್ಪಾಗಲಾರದು. ಇವರಿಬ್ಬರ ನಡುವಿನ ಹಾಸ್ಯ ಸಂಭಾಷಣೆಯೂ ನಗು ಉಕ್ಕಿಸಿತು. ಇನ್ನು ಉಮೇಶ್‌ ಕುಪ್ಪೆಪದವು(ವೀರಭದ್ರ) ಹಾಗೂ ರವಿ ಅಲೆವೂರಾಯ(ವಿಷ್ಣು) ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಭಾಗವತರಾಗಿ ಗಿರೀಶ್‌ ರೈ ಕಕ್ಯಪದವು ಸುಮಧುರ ಕಂಠದಿಂದ ಹಾಡಿ ರಂಜಿಸಿದರು. ಚೆಂಡೆ-ಮದ್ದಳೆಯಲ್ಲಿ ರಾಮಪ್ರಕಾಶ್‌ ಕಲ್ಲೂರಾಯ ಹಾಗೂ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಚಕ್ರತಾಳದಲ್ಲಿ ವಾಮಂಜೂರು ಅನಂತ ಉಪಾಧ್ಯಾಯರು ಸಹಕರಿಸಿದರು. ಒಟ್ಟಿನಲ್ಲಿ ಪ್ರತಿಭಾವಂತ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಅತ್ಯುತ್ತಮ ನಿರ್ವಹಣೆಯಿಂದ ಕಿಕ್ಕಿರಿದು ನೆರೆದಿದ್ದ ಯಕ್ಷಗಾನ ಪ್ರಿಯರಿಗೆ ಭರಪೂರ ಮನರಂಜನೆ ದೊರಕಿತು.

ನರಹರಿ ರಾವ್‌ ಕೈಕಂಬ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.