ಮಂತ್ರ ನಾಟ್ಯಕಲಾ ಗುರುಕುಲದ ನಾಟ್ಯೋತ್ಸವ

Team Udayavani, Mar 22, 2019, 12:35 AM IST

mantra-1.jpg

ಮಂತ್ರ ನಾಟ್ಯಕಲಾ ಗುರುಕುಲ ಅಕಾಡೆಮಿಯ ಗುರುಕುಲ ಉತ್ಸವ  2019, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. 

ಮೊದಲಿಗೆ ಕೂಚು ಪುಡಿ ಕಲಾವಿದ ರವಿ ಜಿ. ನೃತ್ಯ ಪ್ರದರ್ಶನ ನೀಡಿದರು. ಕವಿ ದಯಾನಂದ ಸರಸ್ವತಿ ಅವರ ಕೃತಿ ರಾಗ ರೇವತಿ ಆದಿ ತಾಳದ “ಭೋ ಶಂಭೋ’ಗೆ ಬಹಳ ಮನೋಜ್ಞವಾಗಿ ನೃತ್ಯ ಪ್ರಸ್ತುತಿ ನೀಡಿದರು. ಶಿವನ ಕರುಣಾಪೂರ್ಣ ಕಥಾ ಭಾಗದ ಸಂಚಾರಿಗಳನ್ನು ಸುಲಲಿತವಾಗಿ ಅಭಿನಯಿಸಿದರು, ತದ ನಂತರ ಕೂಚಿಪುಡಿ ನೃತ್ಯದಲ್ಲಿ ಬಹಳ ಅನೂಹ್ಯ ನೃತ್ಯ “ತರಂಗಂ’ ನರ್ತಿಸಿದರು, ಸಾಹಿತ್ಯ ಭಾಗದಲ್ಲಿ ಶ್ರೀಕೃಷ್ಣನ ಗುಣಗಾನ ಮಾಡುವ ಈ ಪ್ರಸ್ತುತಿಯಲ್ಲಿ ನರ್ತಕನ ಮೈ ಬಾಗುವಿಕೆ, ತಟ್ಟೆಯ ಮೇಲೆ ಕ್ಲಿಷ್ಟಕರ ಚಾಲನೆ, ಚುರುಕಾದ ಹೆಜ್ಜೆಗಾರಿಕೆ ಮನಸೆಳೆಯಿತು. 

ಹಿರಿಯ ನೃತ್ಯ ಕಲಾವಿದೆ, ಗುರು ಉಮಾ ದೋಗ್ರ ಇವರ ಕಥಕ್‌ ನೃತ್ಯ ಈ ಸಂದರ್ಭದಲ್ಲಿ ಬಹಳ ಪ್ರಬುದ್ಧತೆಯಿಂದ ಮೂಡಿಬಂತು. ಮೊದಲಿಗೆ ಕಲಾವಿದೆ “ಗಣೇಶ ವಂದನಾ’ ಮಾಡಿದರು. ಇದರಲ್ಲಿ ಗಣಪತಿಯ ವರ್ಚಸ್ಸು ಹಾಗೂ ಗುಣಗಳನ್ನು ಹೊಗಳುವ ತುಣುಕನ್ನು ಪ್ರದರ್ಶಿಸಿದರು. ತದ ನಂತರ ಕವಿ ಸೂರದಾಸರ “ಶ್ಯಾಮ್‌ ತೇರಿ ಬನ್ಸಿ ನೇಕ್‌ ಬಜಾವು’ ಭಜನೆಯೊಂದಕ್ಕೆ ನೃತ್ಯ ಪ್ರದರ್ಶಿಸಿದರು, ರಾಧಿಕೆ ಹೇಗೆ ತನ್ನನ್ನು ತಾನೇ ಕೃಷ್ಣನಂತೆ ಪರಿವರ್ತನೆಗೈದು, ಕೃಷ್ಣನ ಹಾಗೂ ತನ್ನ ಮಧ್ಯದ ಮಧುರಾನುಭೂತಿಗೆ ಸಾಕ್ಷಿಯಾಗುತ್ತಾಳೆ ಅನ್ನುವ ಮುಗ್ಧ ಹಾಗೂ ಸರಳ ಸಹಜ ಅಭಿ ನಯ ನೀಡಿದರು. ಮುಂದಿನ ಪ್ರಸ್ತುತಿ ಯಾಗಿ ಜಯದೇವ ಕವಿಯ “ಸಖೀ…. ಹೇ’ ಅನ್ನುವ ಅಷ್ಟಪದಿಯನ್ನು ಪ್ರಸ್ತುತ ಪಡಿಸಿದರು, ನಾಯಕಿಯು ತನ್ನ ಸಖೀಯಲ್ಲಿ ತನ್ನ ನಾಯಕ ನಾದ ಕೃಷ್ಣ ನನ್ನು ಕಾಣಬೇಕು, ಒಂದಾಗಬೇಕು ಎನ್ನುವ ಸಾಹಿತ್ಯಾ ಭಿನಯವನ್ನು ಬಹಳ ಸುಲಲಿತ ವಾಗಿ ಹಾಗೂ ಪ್ರಬುದ್ಧವಾಗಿ ಅಭಿನಯಿಸಿದರು.

ನಂತರ ಮಂತ್ರ ನಾಟ್ಯಕಲಾ ಗುರುಕುಲದ ಗುರು ವಿದ್ವಾನ್‌ ಶ್ರಾವಣ್‌ ಉಳ್ಳಾಲ್‌ ಇವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನಡೆಯಿತು, ಹಾಡುಗಾರಿಕೆಯಲ್ಲಿ ಶೀಲಾ ದಿವಾಕರ್‌, ಮೃದಂಗದಲ್ಲಿ ಬಾಲಚಂದ್ರ ಭಾಗವತ್‌ ಹಾಗೂ ಕೊಳಲಿನಲ್ಲಿ ಮುರಳೀಧರ್‌ ಸಹಕರಿಸಿದರು.  

– ಸೌಮ್ಯ ಸುಧೀಂದ್ರ ರಾವ್‌

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.