CONNECT WITH US  

ಮತ್ತೆ ಬಂದ್ರು ಕೂಡ್ಲು ರಾಮಕೃಷ್ಣ

ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರ ಹೊಸ ಚಿತ್ರ "ಮಾರ್ಚ್‌ 22'ಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಬೆಳಗಾವಿಯ ಚಚಡಿ ನಾಗರಾಜ ದೇಸಾಯಿಯವರ ವಾಡೆ ಮನೆಯಲ್ಲಿ ಮುಹೂರ್ತ ಮಾಡಲಾಗಿದ್ದು, ಚಿತ್ರತಂಡ ಈಗ ಚಿತ್ರೀಕರಣಕ್ಕೆ ಅಣಿಯಾಗಿದೆ.  "ಮಾರ್ಚ್‌ 22'ನ್ನು  ಜಲ ದಿನ ಎಂದು ಆಚರಿಸಲ್ಪಡುತ್ತದೆ.

ಈ ದಿನವನ್ನೇ ಚಿತ್ರದ ಟೈಟಲ್‌ ಆಗಿ ಬಳಸಿಕೊಂಡಿರೋದರ ಹಿಂದೆಯೂ ನಿಖರವಾದ ಕಾರಣ ಕೂಡಾ ಇದೆಯಂತೆ.  ನೀರಲ್ಲಿಯೂ ಜಾತಿ ಧರ್ಮ ನೋಡುವವರಿದ್ದಾರೆ.  ಆದರೆ ನೀರಿಗೆ ಯಾವುದೇ ಕಟ್ಟು ಪಾಡುಗಳಿಲ್ಲ.  ಅದು ಜಾತಿ, ಧರ್ಮ ಮೀರಿದ್ದು.  ಇದೇ ರೀತಿಯ ಜೀವಪರ ಆಶಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ಹೇಳಲಿದ್ದಾರಂತೆ. 

ಚಿತ್ರದಲ್ಲಿ ನೀರಿನ ಸದ್ಭಳಕೆಯ ಬಗ್ಗೆ ಅರಿವು ಮೂಡಿಸುವ ವಿಚಾರವೂ ಇದೆಯಂತೆ. ಕೂಡ್ಲು ಪ್ರಕಾರ, ಇದು ಹೊಸ ಬಗೆಯ ಸಿನಿಮಾವಾಗಲಿದೆ.  ಈ ಚಿತ್ರದದಲ್ಲಿ ಆರ್ಯವರ್ಧನ, ಕಿರಣ್‌ ರಾವ್‌, ಮೇಘಶ್ರೀ, ದೀಪಾ ಶೆಟ್ಟಿ, ಶರತ್‌ ಲೋಹಿತಾಶ್ವ, ರವಿಶಂಕರ್‌, ರವಿಕಾಳೆ, ಜೈಜಗದೀಶ್‌, ವಿನಯಾ ಪ್ರಸಾದ್‌, ಪದ್ಮಜಾ ರಾವ್‌, ಪವಿತ್ರ ಲೋಕೇಶ್‌ ಮುಂತಾದವರು ನಟಿಸುತ್ತಿದ್ದಾರೆ.

ಇನ್ನುಳಿದಂತೆ ರವಿಶೇಖರ್‌ ಸಂಗೀತ, "ಕರ್ವ' ಮೋಹನ್‌ =ಛಾಯಾಗ್ರಹಣ, ಸುಭಾಶ್‌ ಕಡಕೋಳ ಕಲೆ, ಬಿ.ಎ ಮಧು ಸಂಭಾಷಣೆ,  ಬಸವರಾಜ ಅರಸ್‌ ಸಂಕಲನವಿರುವ ಈ ಚಿತ್ರವನ್ನು ಹರೀಶ್‌ ಶೇರಿಗಾರ್‌, ನರೇಂದ್ರ ಹಾಗೂ ರಾಜಶೇಖರ್‌ ನಿರ್ಮಿಸುತ್ತಿದ್ದಾರೆ.

Trending videos

Back to Top