CONNECT WITH US  

ಇನ್ಮುಂದೆ ಜಗಳವಾಡಲ್ಲ ಈಶ್ವರಪ್ಪ- ಯಡಿಯೂರಪ್ಪ ಪ್ರಮಾಣ!

ಬೆಂಗಳೂರು: ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಾ, ಜಗಳವಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಈಶ್ವರಪ್ಪ ಮತ್ತೆ ಒಂದಾಗಿದ್ದಾರೆ. ತಾವು ಇನ್ನು ಮುಂದೆ ಯಾವತ್ತೂ ಜಗಳವಾಡಿಕೊಳ್ಳುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದರ ಜತೆ ಒಬ್ಬರನ್ನು ಒಬ್ಬರು ಮನಸಾರೆ ಹೊಗಳಲಿದ್ದಾರೆ.

ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಇಬ್ಬರ ಮಧ್ಯೆ ನಡೆಯಲಿರುವ ಮಲ್ಲ ಯುದ್ಧ, ಕುಸ್ತಿ ಯುದ್ಧ, ದೃಷ್ಟಿಯುದ್ಧ ಹೀಗೆ ನಾನಾ ರೀತಿಯ ಪರೀಕ್ಷೆ ನಡೆಸಿ ಇಬ್ಬರಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ಈಶ್ವರಪ್ಪ ಮತ್ತು ಯಡಿಯೂರಪ್ಪ ಬೆಂಬಲಿಗರು ಕೂಡ ದೇವಾಸ್ಥಾನಕ್ಕೆ ತೆರಳಿ, ತಾವು ಒಬ್ಬರ ಮೇಲೆ ಇನ್ನೊಬ್ಬರು ಹಲ್ಲೆ ನಡೆಸುವುದಿಲ್ಲ. ಚುನಾವಣೆ ಮುಗಿಯವ ವರೆಗೂ ಚಕಾರ ಎತ್ತುವುದಿಲ್ಲ ಎಂದು ದೇವಸ್ಥಾನದಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.


Trending videos

Back to Top