ನೀನು ಜೊತೆಗಿದ್ದರೆ ಕತ್ತಲಲ್ಲೂ ಬೆಳ್ಳಿ ಬೆಳಕು!


Team Udayavani, Aug 7, 2018, 6:00 AM IST

11.jpg

ನನ್ನ ವಿಚಿತ್ರ ಆಸೆಗಳಿಗೆಲ್ಲ ನಿನ್ನ ಸಮ್ಮತಿಯ ಮುದ್ರೆ ಬಿದ್ದರೆ ನನಗದೇ ಸ್ವರ್ಗ. ಇವೆಲ್ಲ ಅತಿಯಾಯಿತೆನ್ನಿಸಿದರೆ ನಿನ್ನೊಂದು ಮುಗುಳ್ನಗೆಯನ್ನಾದರೂ ನನ್ನತ್ತ ಹರಿಸಿಬಿಡು. ಹಾಗಾದರೂ ನನ್ನೆಲ್ಲ ಕನಸುಗಳು ಹಸಿಯಾಗಿರಲಿ, ಹಸಿರಾಗಿರಲಿ. 

ಎತ್ತಲಿಂದೆತ್ತಲೋ ಬೀಸುವ ಈ ತಂಗಾಳಿಯ ಮೃದುವಾಣಿ ನಿನ್ನ ನೆನಪಿನ ಗರಿ ಬಿಚ್ಚುತ್ತಲೇ, ಸುತ್ತೆಲ್ಲ ಘಮ ಸೂಸುತ್ತದೆ. ಕಳೆಗಟ್ಟುವ ಮೋಡದಲ್ಲಿ ನಿನ್ನ ಮುನಿಸು ಮನದ ಮೂಲೆಯಲ್ಲಿ ವ್ಯಾಕುಲತೆಯನ್ನು ಹಬ್ಬಿಸುತ್ತದೆ. ಹನಿಯುವ ಸೋನೆಮಳೆ, ಮುಂಗುರುಳ ಹೊರಳಾಟದ ಉತ್ಸಾಹ ಹೆಚ್ಚಿಸುತ್ತದೆ. ಈ ನಡುವೆ ಹುಟ್ಟುವ ಸಣ್ಣಗಿನ ಚಳಿ, ದೀರ್ಘ‌ಕಾಲದ ಆಲಿಂಗನದ ಹೆಬ್ಟಾಸೆಯನ್ನು ಮೂಡಿಸಿ, ಮನದೊಳಗೆ ಬಿರುಗಾಳಿ ಏಳಿಸುತ್ತದೆ. 

ನಿನ್ನ ಸಾಮೀಪ್ಯ ನನ್ನೀ ಹೃದಯಕ್ಕೆ ಬೃಹತ್‌ ಜಾತ್ರೆ. ಅಲ್ಲೆಲ್ಲ ಓಡಾಡುವ ನೀ ಬಿಟ್ಟ ಉಸಿರನ್ನು ಕದ್ದು ಹಿಡಿಯುವ ವಿಚಿತ್ರ ಯತ್ನ ನನ್ನದು. ನಿನ್ನೊಂದು ರೆಪ್ಪೆ ಬಡಿತಕ್ಕೂ ನನ್ನೆದೆ ಹೆಜ್ಜೆ ಹಾಕುವ ನರ್ತಕ. ಹುಣ್ಣಿಮೆಯಂತೆ ಅಪರೂಪಕ್ಕೆ ಸೂಸುವ ನಿನ್ನ ಬೆಳ್ನಗು, ಬೃಂದಾವನದಲ್ಲಿನ ಪುಷ್ಪಗಳನ್ನೆಲ್ಲ ಅರಳಿಸುವ ಸುಂದರ ಮಾಯಾಕಲೆ. ನಿನ್ನ ಕುಡಿಕಣ್ಣೋಟ ಒಮ್ಮೆ ಸೆಳೆದರೆ ಮತ್ತೆತ್ತಲೂ ನೋಡದಂತೆ ಕಟ್ಟಿಹಾಕುವ ಮಾಯಾಜಾಲ. ನಿನ್ನ ಆಗಮನದಿಂದ ಬದುಕಿನಲ್ಲಾದ ಬದಲಾವಣೆಗಳ್ಳೋ ಪಟ್ಟಿಗೂ ನಿಲುಕದ್ದು! ನಿನ್ನ ಆಗಮನದ ಪಿಸುಮಾತು ನನ್ನೆದೆಯ ಬಡಿತಕ್ಕೆ ಮೀಟಿದಾಗಲೇ ಪ್ರೇಮ ಕಣೆªರೆದದ್ದು ಸತ್ಯ. ಆ ಪ್ರೇಮ ಸಮ್ಮತಿಯ ಕಣ್ಣಾಮುಚ್ಚಾಲೆ ಆಟದಲ್ಲೇ ಸಿಹಿಸಂಕಟದ ಸಂಭ್ರಮವನ್ನು ಶಾಶ್ವತವಾಗಿ ಅನುಭವಿಸುವ ಆಸೆ ಮೂಡಿದ್ದು ಸಹಜವೇ. 

ನನ್ನ ಕೆಲ ಆಸೆಗಳನ್ನು ನಿನ್ನೆದುರು ಹರವಿಡುವೆ. ನೀ ಹೋದ ಜಾಗದಲ್ಲೆಲ್ಲ, ನೀ ಕಾಣುವ ವಸ್ತುವಲ್ಲೆಲ್ಲ ನನ್ನ ಬಿಂಬವೇ ಮೂಡಬೇಕು. ನಿನ್ನ ಗೆಜ್ಜೆದನಿಯ ಸಂಗೀತದಲ್ಲಿ ನನ್ನೆದೆ ಬಡಿತದ ನಾದವಿರಬೇಕು. ನಿನ್ನುಸಿರೂ ಕೂಡ ನನ್ಹೆಸರ ಕನವರಿಸಬೇಕು. ನಿನ್ನ ಆ ಕೇಶರಾಶಿಗೆ ನನ್ನ ಗಲ್ಲ ಸವರುವ ಹೆಬ್ಬಯಕೆ ಸುಳಿಯಬೇಕು. ನಿನ್ನ ಕಣ್ಣೋಟ ನನ್ನೊಳಗೆ ಕ್ಷಣಮಾತ್ರಕ್ಕಾದರೂ ಬಂಧಿಯಾಗಬೇಕು. ನಿನ್ನೊಂದು ಬಿಸಿಯಪ್ಪುಗೆಯ ಬಂಧನದೊಳಕ್ಕೆ ಸಿಕ್ಕಿ ಬಂಧಿಯಾಗುವ ಅದೃಷ್ಟಶಾಲಿ ನಾನಾಗಬೇಕು. ಆ ನನ್ನ ವಿಚಿತ್ರ ಆಸೆಗಳಿಗೆಲ್ಲ ನಿನ್ನ ಸಮ್ಮತಿಯ ಮುದ್ರೆ ಬಿದ್ದರೆ ನನಗದೇ ಸ್ವರ್ಗ. ಇವೆಲ್ಲ ಅತಿಯಾಯಿತೆನ್ನಿಸಿದರೆ ನಿನ್ನೊಂದು ಮುಗುಳ್ನಗೆಯನ್ನಾದರೂ ನನ್ನತ್ತ ಹರಿಸಿಬಿಡು. ಹಾಗಾದರೂ ನನ್ನೆಲ್ಲ ಕನಸುಗಳು ಹಸಿಯಾಗಿರಲಿ, ಹಸಿರಾಗಿರಲಿ. ನೀ ಜೊತೆಗಿದ್ದರೆ ಕತ್ತಲೂ ಬೆಳಗು, ಬೆಳಗೂ ನಲ್ಮೆಯ ಬೆಳದಿಂಗಳು!

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.