ನಿನ್ನ ಫೋಟೋ ನನ್ನಲ್ಲಿದೆ ನನ್ನ ಹೃದಯ ನಿನ್ನಲ್ಲಿದೆ!

Team Udayavani, Sep 18, 2018, 8:08 AM IST

26.jpg

ಹಾಯ್‌ ಅಪರಿಚಿತೆ, 
ನೀ ಯಾರೆಂದು ನನಗೆ ತಿಳಿಯದು, ನಾ ಯಾರೆಂದು ನಿನಗೂ ತಿಳಿಯದು. ಆದರೂ ಮೊದಲ ನೋಟದಲ್ಲೇ ನಿನಗೆ ಮನಸೋತುಬಿಟ್ಟೆ. ಲವ್‌ ಅಟ್‌ ಫ‌ಸ್ಟ್ ಸೈಟ್‌ ಅಂತಾರಲ್ಲ, ಹಾಗೆ.   

ಆವತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೀನು ಎನ್‌.ಸಿ.ಸಿ. ಪರೇಡ್‌ನ‌ಲ್ಲಿ ಭಾಗವಹಿಸಲು ಬಂದಿದ್ದೆ. ನಾನು ಫೋಟೋ ಕವರೇಜ್‌ ಮಾಡಲು ಫೋಟೋಗ್ರಾಫ‌ರ್‌ ಆಗಿ ಅಲ್ಲಿಗೆ ಬಂದಿದ್ದೆ. ನನ್ನ ಪಾಡಿಗೆ ನಾನು ಫೋಟೋ ತೆಗೆಯುತ್ತಿದ್ದಾಗ. ನೂರಾರು ಜನರ ಮಧ್ಯೆ ನೀನೊಬ್ಬಳು ಮಾತ್ರ ಕ್ಯಾಮೆರಾ ಕಣ್ಣಿಗೆ ವಿಶೇಷ ಆಕರ್ಷಣೆಯಾಗಿ ಕಾಣಿಸಿದೆ. ಯಾಕಂದ್ರೆ, ಕ್ಯಾಮೆರಾ ಕಡೆ ತಿರುಗಿ ನೋಡುತ್ತಾ ನೀನು ಚಿತ್ರ-ವಿಚಿತ್ರವಾಗಿ ಪೋಸ್‌ ಕೊಡುತ್ತಿದ್ದುದೇ ನಿನ್ನ ಮೇಲೆ ನನ್ನ ಕಣ್ಣು ಬೀಳಲು ಕಾರಣ. ನೀನು ಸ್ವಲ್ಪ ಮರೆಯಾದರೂ, ನನ್ನ ಕ್ಯಾಮೆರಾವಷ್ಟೇ ಅಲ್ಲ, ಕಣ್ಣುಗಳೂ ನಿನ್ನನ್ನು ಹುಡುಕಲು ಶುರುಮಾಡುತ್ತಿದ್ದವು. 

ಹಾಗೆ ಬೆಳಗ್ಗೆ 9 ಗಂಟೆಯಲ್ಲಿ ನಮ್ಮಿಬ್ಬರ ನಡುವೆ ಸಂಭವಿಸಿದ ಆ ಆಕರ್ಷಣೆ, ಮಧ್ಯಾಹ್ನ 2 ಗಂಟೆಯೊಳಗೆ ಮಾತಿನ ದಾರಿ ಕಂಡುಕೊಂಡಿತ್ತು. ನೀನೇ ಬಳಿಗೆ ಬಂದು, ನೀವು ತುಂಬಾ ಫೋಟೋಸ್‌ ತೆಗೆದಿದ್ದೀರಲ್ವಾ? ಅದ್ರಲ್ಲಿ ನಾನಿರೋ ಎಲ್ಲ ಫೋಟೋಗಳನ್ನು ನನಗೆ ಕಳಿಸಿ ಪ್ಲೀಸ್‌ ಎಂದು ಹೇಳಿ ಜಿಂಕೆಯಂತೆ ಓಡಿಹೋದೆ. ನಾನು ಮಾತು ಶುರು ಮಾಡುವುದರೊಳಗೆ ನೀನು ಕಣ್ಮರೆಯಾಗಿದ್ದೆ. 

ಆ ಜನಸಾಗರದಲ್ಲಿ ನಿನ್ನನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಾಗಿರಲಿಲ್ಲ. ನಿನ್ನ ಹೆಸರು ಗೊತ್ತಿಲ್ಲ, ಯಾವ ಕಾಲೇಜಿನವಳೆಂದೂ ಗೊತ್ತಿಲ್ಲ. ಫೋಟೋ ಕಳಿಸಿ ಅಂತ ಹೇಳಿ ಓಡಿ ಹೋದರೆ, ಕಳಿಸುವುದಾದರೂ ಎಲ್ಲಿಗೆ? ಅವತ್ತಿನಿಂದ, ನಾನೂ ನಿನ್ನನ್ನು ಹುಡುಕಲು ಬಹಳಷ್ಟು ಪ್ರಯತ್ನ ಮಾಡಿದ್ದೇನೆ. ಯಾವ್ಯಾವುದೋ ನೆಪ ಮಾಡಿಕೊಂಡು ಐದಾರು ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಿದ್ದೇನೆ. ಆದರೂ ನಿನ್ನನ್ನು ಪತ್ತೆ ಹಚ್ಚಲಾಗಲಿಲ್ಲ. ನೀನು ಬೇಗ ಸಿಗಲೇಬೇಕು. ಯಾಕಂದ್ರೆ, ನಿನ್ನ ಫೋಟೋಸ್‌ ನನ್ನ ಹತ್ತಿರ ಇದೆ, ನನ್ನ ಹೃದಯ ನಿನ್ನ ಬಳಿ ಉಳಿದುಕೊಂಡಿದೆ.

ಯಾರಿಗೆ, ಯಾರ ಮೇಲೆ, ಯಾವ ಸಮಯದಲ್ಲಿ ಪ್ರೀತಿ ಉಂಟಾಗುತ್ತದೆ ಅಂತ ಯಾರಿಗೂ ಹೇಳಲಾಗುವುದಿಲ್ಲ. ನನಗೆ ನಿನ್ನ ಮೇಲೆ ಅರ್ಧ ದಿನದಲ್ಲಿ ವಿಪರೀತವಾಗಿ ಪ್ರೀತಿಯಾಗಿದೆ. ಮುದ್ದಾದ ನಿನ್ನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅದನ್ನು ಕಣ್ಣೊಳಗೆ ಮತ್ತು ಮನದೊಳಗೆ ಶಾಶ್ವತವಾಗಿ ಉಳಿಸಿಕೊಂಡಿದ್ದೇನೆ. ಒಂದು ಎಕ್ಸ್‌ಟ್ರಾ ಕಾಪಿಗಷ್ಟೇ ಫ್ರೆಮ್‌ ಹಾಕಿಸಿ, ಅದನ್ನು ಕೊಡುವ ಉದ್ದೇಶದಿಂದ ನಿನಗಾಗಿ ಕಾಯ್ತಾ ಇದ್ದೀನಿ. ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಡಿಪಿ,ಸ್ಟೇಟಸ್‌ ಹಾಕೋಕೆ ಒಂದು ವರ್ಷಕ್ಕಾಗುವಷ್ಟು ಫೋಟೋಸ್‌ ಇದೆ ಮಾರಾಯ್ತಿ… ಅದರ ಆಸೆಗಾದ್ರೂ ನೀನೇ ನನ್ನನ್ನು ಹುಡುಕಿಕೊಂಡು ಬಾ..  

ಇಂತಿ ನಿನಗಾಗಿ ಕಾಯುತ್ತಿರುವ

ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.