ರೈಲಲ್ಲ, ಸ್ಕೂಲು !


Team Udayavani, Sep 8, 2018, 4:15 PM IST

79.jpg

ತಮ್ಮ ಶಾಲೆ ಉಳಿದೆಲ್ಲ ಶಾಲೆಗಳಿಗಿಂತ ಭಿನ್ನವಾಗಿ ಕಾಣಬೇಕು ಮತ್ತು ಅದು ಪುಟಾಣಿಗಳ ಮನಸನ್ನು ಆಕರ್ಷಿಸುವಂತೆಯೂ ಇರಬೇಕು ಎಂಬ ಕನಸು ಶಿಕ್ಷಕ ದೊರೆಸ್ವಾಮಿ ಅವರಿಗಿತ್ತು. ಅದರ ಪರಿಣಾಮವೇ ಈ ರೈಲ್‌ಸ್ಕೂಲ್‌ !

ಈ ಕಟ್ಟಡದ ಮುಂದೆ ನಿಂತರೆ ರೈಲಿನ ಮುಂದೆ ನಿಂತಂತೆ ಭಾಸವಾಗುತ್ತದೆ. ರೈಲೇ ಸಂಚರಿಸದ ಈ ಗ್ರಾಮದಲ್ಲಿ  ಕಡುನೀಲಿ ಬಣ್ಣದ  ಈ ರೈಲು ಬಂದಿದ್ದಾರೂ ಎಲ್ಲಿಂದ?ಯಾವಾಗ? ಈ ರೈಲು  ಎಲ್ಲಿಗೆ ಹೋಗುತ್ತದೆ ಎಂಬ ಯೋಚನೆ ಮೂಡಿದರೆ ಆಶ್ಚರ್ಯವೇನಿಲ್ಲ, ಏಕೆಂದರೆ ಈ ಕಟ್ಟಡವನ್ನೂ ರೈಲಿನ ರೀತಿಯಲ್ಲೇ ನಿರ್ಮಿಸಲಾಗಿದೆ.  ಶೃಂಗರಿಸಲಾಗಿದೆ. ಆದರೆ, ಇದು ರೈಲೂ ಅಲ್ಲ ಬೋಗಿಯೂ ಅಲ್ಲ, ಇದೊಂದು ಸರ್ಕಾರಿ ಶಾಲೆ.

 ರೈಲಿನಂತೆ ಕಾಣುವ ಈ ಶಾಲೆ ಇರುವುದು ಮೈಸೂರು ಜಿಲ್ಲೆಯ  ನಂಜನಗೂಡು ತಾಲೂಕಿನ ಹಾರೋಪುರದಲ್ಲಿ. ಶಾಲೆಯನ್ನೂ ಹೀಗೂ  ಸಿಂಗರಿಸಬಹುದೆಂದು ತೋರಿಸಿಕೊಟ್ಟವರು ವೃತ್ತಿಪರ ವಿನ್ಯಾಸಕಾರರಾಗಲಿ ಅಥವಾ ಸಿವಿಲ್‌ ಎಂಜಿನಿಯರಾಗಲಿ ಅಲ್ಲ.  ಇದೇ ಶಾಲೆಯ ಶಿಕ್ಷಕ ದೊರೆಸ್ವಾಮಿ ಅವರ ಕಲ್ಪನೆಯ ಕೂಸು ಈ ಶಾಲೆ.  ದೂರದಿಂದ ಮಾತ್ರವಲ್ಲ ಹತ್ತಿರ ಬಂದಾಗಲೂ ಕಂಬಿಯ ಮೇಲೆ ರೈಲು ನಿಂತಂತೆ ಭಾಸವಾಗುತ್ತದೆ. ಈ ಶಾಲೆ ಮೂರು ಕೊಠಡಿಗಳಿಗೆ ರೈಲಿನ ಬಣ್ಣ ಬಳಿದು  ಕಡು ನೀಲಿ ಬೋಗಿಯ ರೂಪ ಕೊಟ್ಟು ಶೃಂಗರಿಸಲಾಗಿದೆ.

 ಸರ್ಕಾರಿ ಶಾಲೆ ಎಂದರೆ ದೊಡ್ಡಿಕೊಟ್ಟಿಗೆಯಂತೆ ಕಾಣುವ ಈ ರೂಮುಗಳಷ್ಟೇ ಇರುತ್ತವೆ. ಹಾಗಿರುವಾಗ,  ಈ ಕಾಲದಲ್ಲಿ ಖಾಸಗಿ  ಶಾಲೆಗಳಿಗೆ ಸೆಡ್ಡು ಹೊಡೆಯವಂತಹ ರೀತಿಯಲ್ಲಿ ಈ ಶಾಲೆ ಕಂಗೊಳಿಸುತ್ತಿದೆ.  ತಮ್ಮ ಶಾಲೆ ಬೇರೆಲ್ಲ ಶಾಲೆಗಿಂತ ಭಿನ್ನವಾಗಿ ಕಾಣಬೇಕು ಹಾಗೂ ಅದು ಪುಟಾಣಿಗಳ ಮನಸ್ಸನ್ನು ಆಕರ್ಷಿಸುವಂತಿರಬೇಕು ಎಂಬ ದೊರೆಸ್ವಾಮಿ ಅವರ ಹೆಬ್ಬಯಕೆಯ ಪರಿಣಾಮವೇ  ಶಾಲೆ ಈ ರೀತಿಯಾಗಿ ಬದಲಾಗಲು ಕಾರಣವಂತೆ.  ಸಹ ಶಿಕ್ಷಕರ ಈ ಕಲ್ಪನೆಗೆ ನೀರೆರದು ಪೋಷಿಸಿದವರು ಶಾಲೆಯ ಮುಖ್ಯ ಶಿಕ್ಷಕ ಬಸವನಾಯಕ, ತರನಂ ಖಾನ್‌ ನೇತ್ರಾವತಿ.

  ಶಾಲೆಯ ಅಭಿವೃದ್ಧಿಗಾಗಿ ಅನುದಾನದಲ್ಲಿ ಉಳಿತಾಯ ಮಾಡಿದ  ಸ್ವಲ್ಪ ಹಣದೊಂದಿಗೆ ಈ ನಾಲ್ವರೂ ಸ್ವಂತ ಹಣ ಖರ್ಚುಮಾಡಿ ತಮ್ಮ ಶಾಲೆಗೆ ವಿಶೇಷ ರೂಪ ನೀಡಿದ್ದಾರೆ.  

“ಇದಕ್ಕಾಗಿ ನಾವೇನೂ ಹೆಚ್ಚು ಕರ್ಚು ಮಾಡಿಲ್ಲ’ ಎನ್ನುವ ಬಸವನಾಯಕರು,  ಈ ರೀತಿಯ ಪ್ರಯೋಗದಿಂದ ಸರ್ಕಾರಿ ಶಾಲೆಗಳ ಕಡೆ ವಿದ್ಯಾರ್ಥಿಗಳು ಮುಖ ಮಾಡುತ್ತಾರೆ ಎನ್ನುತ್ತಾರೆ. 

ಶ್ರೀಧರ್‌ ಆರ್‌. ಭಟ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.