CONNECT WITH US  

ಸುದ್ದಿ ಕೋಶ: ವೃದ್ಧಿಸುತ್ತಿದೆ ನಿರಾಶ್ರಿತರ ಸಂಖ್ಯೆ

ಭಾರತದಿಂದ 7 ಸಾವಿರ ಮಂದಿ 2017ರಲ್ಲಿ ಅಮೆರಿಕದ ಆಶ್ರಯ ಬಯಸಿದ್ದಾರೆ. ಹೀಗೆಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವರದಿ ತಿಳಿಸಿದೆ. ಕಳೆದ ವರ್ಷ ಅಮೆರಿಕಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ಕೋರಿ ಮನವಿ ಸಲ್ಲಿಕೆಯಾಗಿದೆ. ಸತತ ಐದನೇ ವರ್ಷ ಕೂಡ ಜಗತ್ತಿನಲ್ಲಿ ನಿರಾಶ್ರಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ.

ಸಮಸ್ಯೆಗೆ ಕಾರಣವೇನು?
ಯುದ್ಧ ಮತ್ತು ಇತರ ಹಿಂಸಾಕೃತ್ಯಗಳಿಂದಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವ ಸಂಖ್ಯೆ ಹೆಚ್ಚಳ

ದಕ್ಷಿಣ ಸುಡಾನ್‌, ಕಾಂಗೋಗಳಲ್ಲಿ ಯುದ್ಧ, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾಗಳ ವಿರುದ್ಧ ಕಾರ್ಯಾಚರಣೆ

ನಿರಾಶ್ರಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ತೊಂದರೆ

ಅಮೆರಿಕದಲ್ಲಿ ಉತ್ತರ ಮತ್ತು ಸೆಂಟ್ರಲ್‌ ಅಮೆರಿಕ ಭಾಗ ದಿಂದ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ

2013ರ ಬಳಿಕ ಆಶ್ರಯ ಕೋರಿ ಸಿರಿಯಾದಿಂದ ವಿಶ್ವದ ಇತರ ರಾಷ್ಟ್ರಗಳಿಗೆ ಹೊಸತಾಗಿ ಮನವಿ ಸಲ್ಲಿಕೆಯಾಗಿಲ್ಲ. 

ಅಫ್ಘಾನಿಸ್ತಾನದಿಂದ 80 ವಿವಿಧ ರಾಷ್ಟ್ರಗಳಿಗೆ ಆಶ್ರಯ ಕೋರಿ 1,24,900 ಮನವಿಗಳು. 

25.4 ಮಿಲಿಯ- ಇಷ್ಟು ಮಂದಿ ತಮ್ಮ ದೇಶದಲ್ಲಿನ ಅಸ್ಥಿರ ಪರಿಸ್ಥಿತಿ ತಪ್ಪಿಸಿಕೊಳ್ಳಲು ಅಥವಾ ಕಾನೂನು ಕ್ರಮದಿಂದ 
ಪಾರಾಗಲು ಪಲಾಯನ

68.5 ಮಿಲಿಯ- ಜಗತ್ತಿನ ಒಟ್ಟು ನಿರಾಶ್ರಿತರ ಸಂಖ್ಯೆ

16.2 ಮಿಲಿಯ- ಇಷ್ಟು ಮಂದಿ ಕಳೆದ ಒಂದೇ ವರ್ಷದಲ್ಲಿ ನಿರಾಶ್ರಿತರಾದವರು. 

2016ಕ್ಕೆ ಹೋಲಿಕೆ ಮಾಡಿದರೆ 2.9 ಮಿಲಿಯ ಸಂಖ್ಯೆಯಷ್ಟು ಹೆಚ್ಚಳ

ಅಮೆರಿಕಕ್ಕೆ ಮನವಿ ಸಲ್ಲಿಸಿದ ರಾಷ್ಟ್ರಗಳು
ವೆನಿಜೂವೆಲಾ 29,900
ಮೆಕ್ಸಿಕೋ 26,100
ಚೀನಾ 17,400
ಹೈಟಿ 8,600
ಭಾರತ 7,400

1,97,146 ಭಾರತದಲ್ಲಿರುವ ನಿರಾಶ್ರಿತರು
10,519 ಭಾರತದಲ್ಲಿ ಆಶ್ರಯ ಕೋರಿ ಸಲ್ಲಿಕೆಯಾಗಿರುವ ಮನವಿ
2017ರಲ್ಲಿ ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ನಿರಾಶ್ರಿತರ ಸಂಖ್ಯೆ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಗುಂಪು.

ಮ್ಯಾನ್ಮಾರ್‌ ನಿರಾಶ್ರಿತರು ಆಶ್ರಯ ಪಡೆದಿರುವ ರಾಷ್ಟ್ರಗಳು
9,32,000ಬಾಂಗ್ಲಾದೇಶ
1,00,000ಥೈಲ್ಯಾಂಡ್‌
98,000ಮಲೇಷ್ಯಾ
18,100ಭಾರತ

2016ರಲ್ಲಿ ಸಲ್ಲಿಕೆಯಾಗಿರುವ ಅರ್ಜಿ
67,400 ಟರ್ಕಿ
16,400 ಜರ್ಮನಿ
6,600 ಫ್ರಾನ್ಸ್‌
4,500 ಭಾರತ

3 ಲಕ್ಷ ದಿಂದ 30 ಲಕ್ಷ - 2017 ಡಿ.31ಕ್ಕೆ ಅಂತ್ಯವಾಗಿರುವಂತೆ ಹೆಚ್ಚಾಗಿರುವ ಆಶ್ರಯ ಕೋರಿರುವವರ ಸಂಖ್ಯೆ
ಇದೇ ವರ್ಷ ಗ್ರೀಸ್‌ಗೆ ಅಫ್ಘಾನಿ ಸ್ತಾನದಿಂದ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 7,600


Trending videos

Back to Top