ಯಾರೂ ಬರಲಿ, ಹೋಗಲಿ ಬದುಕು ನಿಲ್ಲುವುದಿಲ್ಲ !


Team Udayavani, Mar 15, 2019, 12:30 AM IST

x-54.jpg

ಬೆಳಗಾತ ಡೊಂಬಿವಲಿ ಕಡೆಯಿಂದ ಮುಂಬೈಗೆ ಹೋಗುವ ರೈಲು ಹತ್ತುವುದೇ ಕಷ್ಟ . ಎಲ್ಲಿಯಾದರೂ ಹೋಗುವುದಿದ್ದರೆ ನಿಲ್ಲುವಷ್ಟಾದರೂ ಜಾಗ ಸಿಗುವ ರೈಲು ಬರುವವರೆಗೆ ಕಾಯುತ್ತೇನೆ. ಹತ್ತಿದ ನಂತರ ಬೋಗಿಯ ಒಳಗಡೆ ಮಂದಿಯ ನಡುವೆ ಸಿಲುಕಿಕೊಂಡರೆ ಸ್ವಲ್ಪವೂ ಕದಲದಂತಹ ಸ್ಥಿತಿ ! ಮಧ್ಯಾಹ್ನದ ವೇಳೆಗೆ ಕೆಲವೊಮ್ಮೆ ಕುಳಿತುಕೊಳ್ಳಲು ಜಾಗ ಸಿಗುವುದುಂಟು. ಆ ಸಮಯದಲ್ಲಿ ಪುಸ್ತಕ ತೆಗೆದು ಓದುವ ಪ್ರಯತ್ನ ಮಾಡಿದರೂ ಸಾಧ್ಯವಾಗುವುದಿಲ್ಲ. ಮನಸ್ಸು, ಬೋಗಿಯೊಳಗಡೆ ಬಂದು ಹೋಗುವವರನ್ನು ನೋಡುವುದರಲ್ಲಿಯೇ ಹೆಚ್ಚು ಆಸಕ್ತಿ ವಹಿಸುತ್ತದೆ. ಅವರು ತೊಡುವ ಉಡುಪು, ಆಭರಣ, ಭಾವಭಂಗಿಗಳನ್ನು  ನೋಡುತ್ತ, ಅವರಾಡುವ ಮಾತು-ಜಗಳಗಳನ್ನು ಕೇಳುತ್ತಿದ್ದರೆ, ಇಳಿಯುವ ತಾಣ ಬಂದದ್ದೇ ಗೊತ್ತಾಗುವುದಿಲ್ಲ. ಹೀಗೆ ಅನೇಕರ ಜೀವನಶೈಲಿಯ ಒಂದು ಕಿರುನೋಟ ರೈಲಿನೊಳಗೆ ಕಾಣಸಿಗುತ್ತದೆ.

ಬೆಳಗಾತ ಹೊರಡುವ ಅವಸರ    
ಬೆಳಗಾತ ಎದ್ದು ಮನೆಗೆಲಸ ಮುಗಿಸಿಕೊಂಡು ಕೆಲಸಕ್ಕೆ ಹೊರಡುವ ಹೆಚ್ಚಿನ ಮಹಿಳೆಯರು ತಮ್ಮಲ್ಲಿ  ಏನಾದರೊಂದು ಗುರುತುಗಳನ್ನು ಉಳಿಸಿಕೊಂಡಿರುತ್ತಾರೆ. ಚಪಾತಿ ಹಿಟ್ಟು ಕಲಸಿದ ಬೆರಳುಗಳು ಒಂದು ಚೂರು ಹಿಟ್ಟನ್ನು ತನ್ನ ಉಗುರಿನ ಸಂದಿಯಲ್ಲಿ ಇರಿಸಿಕೊಂಡಿರುತ್ತದೆ. ಗಡಿಬಿಡಿಯಲ್ಲಿ ಗ್ಯಾಸ್‌ ಸ್ಟವ್‌ ಮೇಲಿನ ಬಿಸಿ ಪಾತ್ರೆಗಳನ್ನು ಮುಟ್ಟಿಸಿಕೊಂಡ ಪರಿಣಾಮ, ತೋಳಿನ ಚರ್ಮದ ಮೇಲಿನ ಗೀರು ಗಾಢ ಕಂದುಬಣ್ಣದಲ್ಲಿ ಹೊಳೆಯುತ್ತಿರುತ್ತದೆ. ಕಾದು ಸಿಡಿದ ಎಣ್ಣೆ ಜಿಗಿದು, ಮುಖ ಅಥವಾ ಕುತ್ತಿಗೆಯಲ್ಲಿ ಉಬ್ಬಿ ಕೂತಿರುತ್ತದೆ. ಚಾಕುವಿನಿಂದ ಕತ್ತರಿಸಿಕೊಂಡ ಬೆರಳು ನೂಕುನುಗ್ಗಲಿಗೆ ಬಾಯ್ಬಿಟ್ಟು ಕರವಸ್ತ್ರ ಅಥವಾ ತೊಟ್ಟ ಬಟ್ಟೆಯನ್ನೆ ಕೆಂಪಾಗಿಸುವುದುಂಟು. ಇವತ್ತು ಇಂಥದ್ದೇ ಅಡುಗೆ ಮಾಡಿರಬಹುದು ಎಂದು ಅವರೊಡನೆ ಬಂದ ಸಾಂಬಾರಿನ ಪರಿಮಳ ಹೇಳುತ್ತದೆ. ಕೆಲವರು ಬೆಳಗ್ಗಿನ ತಿಂಡಿ ತಿನ್ನಲು ಸಮಯವಿಲ್ಲದೆ, ಬ್ಯಾಗಿನಲ್ಲಿಟ್ಟು ತಂದು ರೈಲಿನೊಳಗಡೆ ನಿಂತುಕೊಂಡೇ ತಿಂದು ನೀರು ಕುಡಿಯುತ್ತಾರೆ. ಹೀಗೆ ಕಾಲೇಜಿಗೋ ಆಫೀಸಿಗೋ ಲೇಟಾಗುವ ಕಾರಣಕ್ಕೆ ಓಡೋಡಿ ಬಂದು ರೈಲು ಹತ್ತುವ ಹುಡುಗಿಯರು, ಒಳಗಡೆ ಬಂದ ಮೇಲೆ ತಲೆತಿರುಗಿ ಬೀಳುವುದುಂಟು. ಆ ಸಮಯದಲ್ಲಿ ನೀರು, ಚಾಕಲೇಟು, ಕೀ ಗೊಂಚಲೋ! ಅವರಿಗೆ ಬೇಕಾದ ಎಲ್ಲ  ಶುಶ್ರೂಷೆಯನ್ನು ಅಲ್ಲಿರುವ ಮಹಿಳೆಯರು ಮಾಡುತ್ತಾರೆ. 

ಯಾರೇ ಬರಲಿ ಹೋಗಲಿ, ಬದುಕು ನಿಲ್ಲುವುದಿಲ್ಲ
ಎಲ್ಲಿ ಹೋದರೂ ನಮ್ಮ ಭಾಷೆಯ ನಂಟು ನಮ್ಮನ್ನು ಹತ್ತಿರ ಸೆಳೆಯುತ್ತದೆ. ಲೋಕಲ್‌ ಟ್ರೆ„ನಿನಲ್ಲಿ ಕನ್ನಡದವರು ಯಾರಾದರೂ ಸಿಕ್ಕಿದರೆ ಪರಿಚಯ ಇಲ್ಲದಿದ್ದರೂ ಮಾತಾಡಿಸುತ್ತೇವೆ. ಒಂದೆರಡು ಬಾರಿ ನನ್ನ ಕೈಯಲ್ಲಿ ಕನ್ನಡ ಪುಸ್ತಕ ನೋಡಿ, “”ನೀವು ಕನ್ನಡದವರಾ?” ಅಂತ ಎದುರಿನವರು ಕೇಳುವಾಗ ಅವರ ಮುಖದಲ್ಲಿ ಬೇರೆಯೇ ಹೊಳಪು ಕಾಣಿಸುತ್ತದೆ. “ಹೌದು’ ಅಂದ ಕೂಡಲೇ ಮಾತು ಶುರು. ಒಮ್ಮೆ ಮಹಿಳಾ ಬೋಗಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗಿಯೊಬ್ಬಳು ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತ ಇದ್ದಳು. ಅವಳು ಆಡುತ್ತಿರುವ ಭಾಷೆ ಕನ್ನಡವಾಗಿದ್ದರಿಂದ ನನ್ನ ಗಮನ ಕೊಂಚ ಅವಳತ್ತ ಸರಿಯಿತು. ಅವಳು ಪ್ರಿಯಕರನ ಜೊತೆಗೆ ಮಾತನಾಡುತ್ತಿದ್ದಾಳೆಂಬುದು ಅವಳ ಮುಖಭಾವದಲ್ಲಿಯೇ ತಿಳಿಯುತ್ತಿತ್ತು. ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ಅತ್ತಿತ್ತ ನೋಡುತ್ತಲೇ ಉತ್ತರಿಸುತ್ತಿದ್ದಳು. ಕಣ್ಣಲ್ಲಿ ಆಗಾಗ ನೀರು ತುಂಬಿ ಬರುತ್ತಿತ್ತು. ಕಂಠ ಗದ್ಗದಿತವಾದಂತೆ, ದುಃಖ ನುಂಗಿಕೊಂಡು ಕಷ್ಟದಲ್ಲಿ ಮಾತಾಡುತ್ತಿರುವಂತೆ ತೋರುತ್ತಿತ್ತು. “”ಹಾಗನ್ಬೇಡ ಕಣೋ. ನಿನ್ನನ್ನು ಬಿಟ್ಟು ಇರೋಕಾಗಲ್ಲ” ಎಂದು ಪದೇ ಪದೇ ಹೇಳುತ್ತಿದ್ದಳು. ಕೆಲವೊಂದು ಕಡೆ ನೆಟ್‌ವರ್ಕ್‌ ಸಮಸ್ಯೆಯಿಂದ ಸಂಪರ್ಕ ಕಡಿದುಕೊಂಡಾಗ, ಮತ್ತೆ ಮತ್ತೆ ಆ ನಂಬರಿಗೆ ಕರೆ ಮಾಡುತ್ತಿದ್ದಳು. ಅವಳೊಡನೆ ಮಾತನಾಡುವ ವ್ಯಕ್ತಿ ಏನು ಹೇಳುತ್ತಿದ್ದನೋ! ಅವಳ ರೋದನ ಇನ್ನಷ್ಟು ಹೆಚ್ಚಾಯಿತು. ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಮೌನವಾಗಿ ಕೇಳಿಸಿಕೊಳ್ಳತೊಡ ಗಿದಳು. ಸುಮಾರು ಅರ್ಧ ಗಂಟೆ¿å ನಂತರ ಅವರ ಸಂಭಾಷಣೆ ಮುಕ್ತಾಯಗೊಂಡಿತು. ಆದರೆ, ಅವಳ ಅಳು ನಿಂತಿರಲಿಲ್ಲ.

ಒಂದೈದು ನಿಮಿಷದಲ್ಲಿ ಆ ಹುಡುಗಿ ನಿಂತಲ್ಲಿಂದಲೇ ನನ್ನತ್ತ ವಾಲತೊಡಗಿದಳು. ಬೋಗಿ ತುಂಬಿದ್ದರಿಂದ ಅವಳನ್ನು ಕೆಳಗಡೆ ಕೂರಿಸುವ ಹಾಗೂ ಇರಲಿಲ್ಲ. ನನ್ನ ತೋಳಿನಲ್ಲಿ ಬಳಸಿಕೊಂಡು ಅವಳ ತಲೆಯನ್ನು ಭುಜಕ್ಕೆ ಒರಗಿಸಿಕೊಂಡೆ. ಎದುರಿನ ಹೆಂಗಸು ಬಾಟಲಿಯಿಂದ ನೀರು ಕುಡಿಸಿ, ಮುಖಕ್ಕೂ  ಚಿಮುಕಿಸಿದರು. ನಾನು ಇಳಿಯಲಿರುವ ತಾಣ ಬರಲು ಇನ್ನೂ ಹತ್ತು ನಿಮಿಷ ಬಾಕಿ ಇತ್ತು. “”ಕುರ್ಲಾದಲ್ಲಿ ಇಳಿಯುತ್ತಿದ್ದೇನೆ. ನೀನೆಲ್ಲಿ ಹೋಗುವವಳು?” ಎಂದು ಕೇಳಿದೆ. ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿದವಳೆ, ನನ್ನನ್ನೊಮ್ಮೆ ತಲೆಯೆತ್ತಿ ನೋಡಿದಳು. ಏನನಿಸಿತೋ ಏನೋ! “”ನಾನೂ ಕುರ್ಲಾದಲ್ಲಿಯೇ ಇಳಿಯುತ್ತೇನೆ. ಸ್ನೇಹಿತೆಯನ್ನು ಬರಲು ಹೇಳುತ್ತೇನೆ” ಅಂದಳು. ಕಿಕ್ಕಿರಿದು ತುಂಬಿದ ಜನಸಂದಣಿಯ ನಡುವೆ ಅವಳನ್ನು ಬೋಗಿಯಿಂದ ಇಳಿಸುವಲ್ಲಿ ಇತರ ಮಹಿಳೆಯರೂ ಸಹಕರಿಸಿದರು. 

ನಿಲ್ದಾಣದಲ್ಲಿ ಒಂದೆಡೆ ಕೂತು ಅವಳ ಸ್ನೇಹಿತೆಗೆ ಕರೆ ಮಾಡಿ ಮಾತನಾಡಿದಳು. ನನ್ನತ್ತ ನೋಡಿ, “”ಹದಿನೈದು ನಿಮಿಷದಲ್ಲಿ ನನ್ನ ಸ್ನೇಹಿತೆ ಬರುತ್ತಾಳೆ. ಥ್ಯಾಂಕ್ಯೂ ಸೋಮಚ್‌. ನೀವು ಹೋಗಿ” ಅಂದಳು. ನನ್ನ ತೋಳಿನಲ್ಲಿ ಹದಿನೈದು ನಿಮಿಷಗಳ ಕಾಲ ಅವಳನ್ನು ಮಗಳಂತೆ ಆಲಂಗಿಸಿಕೊಂಡಿದ್ದ ಕಾರಣವೋ ಅಥವಾ ಅವಳ ಆವಾಗಿನ ಸ್ಥಿತಿಯೋ ಅವಳಲ್ಲಿ ಆಪ್ತತೆಯ ಭಾವ ಮೂಡಿತ್ತು. ಕಾರ್ಯಕ್ರಮಕ್ಕೆ ತಡವಾದರೂ ಪರವಾಗಿಲ್ಲ. ಅವಳ ಸ್ನೇಹಿತೆ ಬರುವವರೆಗೆ ಒಂದಷ್ಟು ಹೊತ್ತು ಇರೋಣ ಎಂದೆನಿಸಿತು. “”ನನಗೇನೂ ಕೆಲಸವಿಲ್ಲ. ಸ್ವಲ್ಪ ಹೊತ್ತು ನಿನ್ನ ಜೊತೆ ಇರುತ್ತೇನೆ” ಅಂದು ಬ್ಯಾಗಿನಿಂದ ಒಂದು ಚಾಕಲೇಟು ತೆಗೆದು ಕೊಟ್ಟೆ. ಮತ್ತೆ ಅವಳ ಕಣ್ಣು ತುಂಬಿದ್ದನ್ನು ಕಂಡು, “”ಯಾಕೆ ಇನ್ನೂ ಅಳುತ್ತಿದ್ದೀಯ?” ಎಂದು ಕೇಳಿದೆ. ಅವಳ ಪ್ರಿಯಕರನೊಂದಿಗಿನ ಸಂಭಾಷಣೆ ನಾನು ಕೇಳಿಸಿಕೊಂಡಿದ್ದೇನೆಂಬ ಅರಿವು ಅವಳಿಗೂ ಆಗಿರಬೇಕು. “”ಬ್ರೇಕ್‌ಅಪ್‌ ಆಯ್ತು ಆಂಟಿ” ಅಂತ ಮತ್ತೆ ಅಳುವುದಕ್ಕೆ ಶುರು ಮಾಡಿದಳು. “”ಅಂಥದ್ದೇನಾಯ್ತು?” ಅಂದೆ. ಸುಮಾರು ಮೂರು ವರ್ಷದ ಅವಳ ಪ್ರೇಮ ಕಥೆಯನ್ನು ಹೇಳುವುದಕ್ಕೆ ಶುರು ಮಾಡಿದಳು. ಅವನಾಗಿಯೇ ಪ್ರೀತಿ ಅಂತ ಬಳಿಗೆ ಬಂದಿದ್ದು, ಇವಳು ಅವನನ್ನು ಗಾಢವಾಗಿ ಪ್ರೀತಿಸುವವರೆಗೆ ಕಾಡಿದ್ದು, ಆಮೇಲೆ ಮಾತು ಮಾತಿಗೂ ಮನಸ್ತಾಪ ಬಂದು, ಜಗಳ ಶುರುವಾಗಿ, ಅವನಿಂದ ಕೆಟ್ಟದಾಗಿ ಬೈಸಿಕೊಂಡಿದ್ದು, ಆನಂತರ ಇವಳೇ ಹೊಂದಾಣಿಕೆ ಮಾಡಿಕೊಂಡಾಗ ಅವನು, “”ನೀನು ಬಲಹೀನೆ ನಿನ್ನಲ್ಲಿರುವುದು ಪ್ರೀತಿಯೇ ಅಲ್ಲ. ನನಗೆ ಅಸಹ್ಯವಾಗುತಿದೆ. ನನ್ನೊಳಗೆ ಈಗ ಎಳ್ಳಷ್ಟೂ ಪ್ರೀತಿ ಉಳಿದಿಲ್ಲ” ಅಂದಿದ್ದು- ಎಲ್ಲವನ್ನೂ ಹೇಳತೊಡಗಿದಳು. 

ಅವಳ ಮಾತು ಮುಗಿದ ಮೇಲೆ, “”ನಿನ್ನ ನಿರ್ಧಾರ ಏನು?” ಎಂದು ಕೇಳಿದೆ. “”ಒಂದು ಸಣ್ಣ ಮನಸ್ತಾಪ ಬಂದರೂ ದೂರ ಹೋಗು ಎಂದು ಅವನು ಪ್ರತಿಬಾರಿಯೂ ಹೇಳುತ್ತಿದ್ದ. ಆದರೆ ನಾನ್ಯಾವತ್ತೂ ಆ ಮಾತನ್ನು ಸೀರಿಯಸ್ಸಾಗಿ ತಗೊಂಡಿಲ್ಲ. ಆದರೆ ಇಂದು ಅವನು,  ಅಂತಿಮವಾಗಿ ಹೇಳುತ್ತಿದ್ದೇನೆ. ನಿಜವಾಗಿಯೂ ನನ್ನ‌ಲ್ಲಿ ಪ್ರೀತಿ ಇದ್ದರೆ ದೂರ ಹೋಗು. ನನಗೆ ಫ್ರೀಡಮ್‌ ಬೇಕು ಎಂದು ಒತ್ತಿ ಒತ್ತಿ ಹೇಳಿದ. ನಮ್ಮ ಪ್ರೀತಿಗೆ ಅಡ್ಡಿಯಾಗದಿರಲೆಂದು ಒಳ್ಳೆಯ ಸ್ನೇಹಿತರನ್ನು ಕೂಡ ದೂರ ಮಾಡಿದ್ದೇನೆ. ಐ ಆ್ಯಮ್‌ ಅಲೋನ್‌, ಇಟ್ಸ್‌ ಓಕೆ. ಅವನು ಸುಖವಾಗಿರಲಿ” ಅನ್ನುತ್ತ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹಾಗೆ ಹೇಳುವಾಗ ಅವಳ ಕಣ್ಣುಗಳಲ್ಲಿ ಆಕ್ರೋಶವಿರಲಿಲ್ಲ. ಮಾತಿನಲ್ಲಿ  ಯಾವುದೇ ರೀತಿಯ ಪ್ರತಿಕಾರವೂ ಇರಲಿಲ್ಲ. ಅವಳ ತಲೆ ನೇವರಿಸಿ, “”ಅಳಬೇಕಾಗಿರೋದು ನೀನಲ್ಲ, ಅವನು! ನಿನ್ನಂತಹ ಮುದ್ದು ಮನಸ್ಸಿನ ಹುಡುಗಿಯ ಪ್ರೀತಿಯನ್ನು ಉಳಿಸಿಕೊಳ್ಳುವ ಭಾಗ್ಯವಿಲ್ಲದ ನತದೃಷ್ಟ . ಯಾರು ಬರಲಿ, ಹೋಗಲಿ ಈ ಬದುಕು ನಿಲ್ಲುವುದಿಲ್ಲ. ಆದರೆ, ಎಲ್ಲವನ್ನು ಎದುರಿಸುವ ದೃಢ ಮನೋಭಾವ ನಿನ್ನಲ್ಲಿರಬೇಕು” ಎಂದು ಸಾಂತ್ವನಿಸಿದೆ.

ಆ ಹುಡುಗಿ ಸಿಕ್ಕಿ ಬಿದ್ದಿರುವುದು ಓರ್ವ ವಿಕೃತ ಮನಸ್ಸಿನವನ ತೆಕ್ಕೆಗೆ. ಈ ರೀತಿಯ ಮನಸ್ಸು ಹುಡುಗಿಯರಲ್ಲಿಯೂ ಇರಬಹುದು. ಹುಡುಗರೂ ಇಂಥಾದ್ದೇ ಸ್ಥಿತಿಗೆ ಒಳಗಾಗಿರಬಹುದು. ಕಾಸಿಲ್ಲದವನು, ಪ್ರತಿಭೆಯಿಲ್ಲದವನು ಬಡವನಲ್ಲ. ಪ್ರೀತಿಸುವವರ ಭಾವನೆಗಳಿಗೆ ಬೆಲೆ ಕೊಡಲು ಗೊತ್ತಿಲ್ಲದವನು ನಿಜವಾದ ಬಡವ. ಆ ಹುಡುಗಿ ಪ್ರಾಮಾಣಿಕವಾಗಿ ಪ್ರೀತಿಸಿದವಳು. ಪ್ರೀತಿಯನ್ನು ಹೊತ್ತು ಕಳೆಯುವ ಸಾಧನವಾಗಿ ಬಳಸಿಕೊಂಡಿದ್ದರೆ ಅವಳಿಷ್ಟು ಜರ್ಝರಿತಳಾಗುತ್ತಿರಲಿಲ್ಲ. ಪ್ರಾಮಾಣಿಕರಾಗಿರುವವರು ನೋವನ್ನು ಅನುಭವಿಸುವುದೇ ಹೆಚ್ಚು. ಹೀಗಿರುವಾಗ ಪ್ರಾಮಾಣಿಕತೆಗೆ ಬೆಲೆ ಇದೆಯೇ ಅನ್ನುವುದು ಅದೆಷ್ಟೋ ಬಾರಿ ನನ್ನನ್ನು ಕಾಡಿದ್ದಿದೆ. ನಾವು ನಮ್ಮ ಆಪ್ತರಿಗೆ  ಖುಷಿ ನೀಡಲು ಸಾಧ್ಯವೋ ಇಲ್ಲವೋ! ಆದರೆ ಹಿಂಸಿಸುವ ಮನಸ್ಥಿತಿಯವರಾಗಿರಬಾರದು. ನಮ್ಮ ಸ್ವಭಾವ ಯಾರ ಮನಸ್ಸಿಗೂ ನೋವು ಮಾಡದಂತಿರಬೇಕು. ಪ್ರೀತಿ, ಮಾನವೀಯ ಸಂಬಂಧಗಳನ್ನು ಬೆಸೆದು, ಮನಸ್ಸು ಮನಸ್ಸುಗಳನ್ನು ಅರಳಿಸುವಂತಿರಬೇಕು. ರಸ್ತೆಯ ತಿರುವುಗಳಲ್ಲಿ, ರೈಲ್ವೆ , ಮೇಲ್ಸೇತುವೆಯ ಮೂಲೆಗಳಲ್ಲಿ ಪ್ರೇಮಿಗಳು ಗುಟ್ಟಾಗಿ ಮಾತನಾಡುತ್ತಿರುವುದನ್ನು ಕಂಡಾಗಲೆಲ್ಲ ಆ ಹುಡುಗಿ ಮತ್ತೆ ಮತ್ತೆ ನೆನಪಾಗುತ್ತಾಳೆ.

ಅನಿತಾ ಪಿ. ತಾಕೊಡೆ

ಟಾಪ್ ನ್ಯೂಸ್

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.