ಹೋಮಿಯೋಪಥಿ; ಅವಕಾಶ ಹಲವು; ಆಸಕ್ತಿಯೇ ನಿರ್ಣಾಯಕ

Team Udayavani, Jan 22, 2020, 4:02 AM IST

ವೈದ್ಯರಾಗಿ, ಹೋಮಿಯೋಪಥಿ ಬೋಧಕರಾಗಿ, ಸಂಶೋಧನ ಕ್ಷೇತ್ರದಲ್ಲಿಯೂ ಮುಂದುವರಿಯಬಹುದು. ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳಾಗಿ, ಹೋಮಿಯೋಪಥಿ ಔಷಧಾಲಯ, ಪೀಡಿಯಾಟ್ರಿಕ್ಸ್‌, ಡರ್ಮಟಾಲಜಿ ವಿಭಾಗಗಳಲ್ಲಿ ವಿಶೇಷ ತಜ್ಞರಾಗಿ ಕರ್ತವ್ಯ ನಿರ್ವಹಿಸಬಹುದು. ಕೆಲ ಕಾಲ ವೈದ್ಯರಾಗಿದ್ದು, ಬಳಿಕ ಪ್ರಾಧ್ಯಾಪಕ ವೃತ್ತಿಯಲ್ಲಿ ಮುಂದುವರಿಯಬಹುದು. ಸ್ವಂತ ಕ್ಲಿನಿಕ್‌ ತೆರೆದು ಜನ ಸೇವೆ ಮಾಡಬಹುದು.

ವೈದ್ಯಕೀಯ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಕ್ಷೇತ್ರವು ಬೆಳೆದಂತೆ ಯುವ ವೈದ್ಯರಿಗೆ ಅವಕಾಶಗಳೂ ವಿಸ್ತಾರವಾಗುತ್ತಿವೆ. ಅತಿ ಹೆಚ್ಚು ಮನ್ನಣೆ ಗಳಿಸಿರುವ ವೈದ್ಯಕೀಯ ರಂಗದಲ್ಲಿ ಯಶಸ್ಸು ಸಾಧಿಸುವುದು ಸವಾಲು ಮತ್ತು ಸುಲಭವೂ ಆಗಿದೆ. ಅದಕ್ಕಾಗಿಯೇ ವೈದ್ಯಕೀಯ ರಂಗದಲ್ಲಿರುವ ಬೇರೆ ಬೇರೆ ಕೋರ್ಸ್‌ ಗಳತ್ತ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದಾರೆ.

ವೈದ್ಯಕೀಯ ರಂಗದಲ್ಲಿ ಭಾರತೀಯ ವೈದ್ಯ ಪದ್ಧತಿಗಳಿಗೆ ಅವಕಾಶ ಹೆಚ್ಚುತ್ತಿದೆ. ಪ್ರಾಚೀನ ಪರಂಪರಾಗತವಾಗಿ ನಡೆದುಕೊಂಡು ಬಂದ ಆಯುರ್ವೇದ, ಯುನಾನಿ, ಹೋಮಿಯೋಪಥಿಯಂತಹ ಸಾಂಪ್ರದಾಯಿಕ ವೈದ್ಯ ಪದ್ಧತಿ ಪ್ರಸ್ತುತದ ದಿನಗಳಲ್ಲಿ ಮನ್ನಣೆ ಗಳಿಸುತ್ತಿದೆ. ಈ ವೈದ್ಯ ಪದ್ಧತಿಗಳಲ್ಲಿ ಪ್ರಮುಖವಾಗಿರುವ ಹೋಮಿಯೋಪಥಿಗೆ ಬೇಡಿಕೆ ತುಂಬಾ ಇದೆ.

ಆಯುಷ್‌ ಕೋರ್ಸ್‌ನಲ್ಲಿ ಹೋಮಿಯೋಪಥಿ
ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಈ ಎಲ್ಲ ವಿಷಯಗಳು ಆಯುಷ್‌ ಕೋರ್ಸ್‌ ಅಡಿಯಲ್ಲಿ ಬರುತ್ತವೆ. ಆಯುರ್ವೇದದಂತೆ ಹೋಮಿಯೋಪಥಿ ವೈದ್ಯ ಪದ್ಧತಿಯೂ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದ್ದು, ವಿಶ್ವಾದ್ಯಂತ ಬಹುತೇಕ ಕಡೆಗಳಲ್ಲಿ ಈ ಕೋರ್ಸ್‌ ಕಲಿಕೆಗೆ ಅವಕಾಶವಿದೆ. ಕರ್ನಾಟಕದಲ್ಲಿ 76 ಕಾಲೇಜುಗಳಲ್ಲಿ ಆಯುಷ್‌ ಕೋರ್ಸ್‌ಗಳನ್ನು ನೀಡಲಾಗುತ್ತಿದ್ದು, ಈ ಕೋರ್ಸ್‌ನ ಒಂದು ಭಾಗವಾಗಿ ಹೋಮಿಯೋಪಥಿಯನ್ನೂ ಬೋಧಿಸಲಾಗುತ್ತಿದೆ. ಈ ಪೈಕಿ 5 ಖಾಸಗಿ ಅನುದಾನಿತ ಕಾಲೇಜುಗಳಾಗಿವೆ.

ಕೆರಿಯರ್‌ ಹೇಗಿದೆ?
ಹೋಮಿಯೋಪಥಿಯಲ್ಲಿ ಮೂರು ವರ್ಷಗಳ ಸ್ನಾತಕೋತ್ತರ ಅಂದರೆ ಎಂಡಿ ಕೋರ್ಸ್‌ ಕೂಡಾ ಲಭ್ಯವಿದೆ. ವೈದ್ಯರಾಗಿ, ಹೋಮಿಯೋಪಥಿ ಬೋಧಕರಾಗಿ, ಸಂಶೋಧನ ಕ್ಷೇತ್ರದಲ್ಲಿಯೂ ಮುಂದುವರಿಯಬಹುದು. ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳಾಗಿ, ಹೋಮಿಯೋಪಥಿ ಔಷಧಾಲಯ, ಪೀಡಿಯಾಟ್ರಿಕ್ಸ್‌, ಡರ್ಮಟಾಲಜಿ ವಿಭಾಗಗಳಲ್ಲಿ ವಿಶೇಷ ತಜ್ಞರಾಗಿ ಕರ್ತವ್ಯ ನಿರ್ವಹಿಸಬಹುದು. ಕೆಲ ಕಾಲ ವೈದ್ಯರಾಗಿದ್ದು, ಬಳಿಕ ಪ್ರಾಧ್ಯಾಪಕ ವೃತ್ತಿಯಲ್ಲಿ ಮುಂದುವರಿಯಬಹುದು. ಸ್ವಂತ ಕ್ಲಿನಿಕ್‌ ತೆರೆದು ಜನಸೇವೆ ಮಾಡಬಹುದು. ಅಲ್ಲದೆ, ಬಿಎಚ್‌ಎಂಎಸ್‌ ಪದವೀಧರರು ಸ್ವಂತ ಫಾರ್ಮಸಿ ತೆರೆಯಲು ಅವಕಾಶವಿದೆ.

ಎಲ್ಲೆಲ್ಲಿ ಕಲಿಕೆ?
ಭಾರತೀಯ ಹೋಮಿಯೋಪಥಿಕ್‌ ಮೆಡಿಕಲ್‌ ಕಾಲೇಜು, ಸರಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ನ್ಯಾಶನಲ್‌ ಹೋಮಿಯೋಪಥಿ ಇನ್‌ಸ್ಟಿಟ್ಯೂಟ್‌ ಕೊಲ್ಕತ್ತಾ, ಭಾರತೀ ವಿದ್ಯಾಪೀಠ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪೂನಾ ಸೇರಿದಂತೆ ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಹೋಮಿಯೋಪಥಿ ಕಲಿಯುವುದಕ್ಕೆ ಅವಕಾಶವಿದೆ.

ಅವಕಾಶ ಹಲವು
ಅಲೋಪಥಿಯಂತೆಯೇ ಹೋಮಿಯೋಪಥಿ ಕೋರ್ಸ್‌ನಲ್ಲಿ ಅವಕಾಶಗಳು ಹಲವಿವೆ. ಇತರ ವೈದ್ಯರಂತೆ ಈ ರಂಗದಲ್ಲಿ ಭವಿಷ್ಯವಿಲ್ಲ ಎಂಬ ತಪ್ಪು ಕಲ್ಪನೆಯೊಂದಿದೆ. ಆದರೆ, ಅದೆಲ್ಲ ಮಿಥ್ಯ. ಪ್ರಸ್ತುತ ಇಂಗ್ಲಿಷ್‌ ವೈದ್ಯ ಪದ್ಧತಿ ಬದಲಾಗಿ ಭಾರತದ ಪ್ರಾಚೀನ ವೈದ್ಯ ಪದ್ಧತಿಯನ್ನೇ ಅನುಸರಿಸುವ ಕಾಲಘಟ್ಟಕ್ಕೆ ಬಂದು ನಿಂತಿರುವುದರಿಂದ ಹೋಮಿಯೋಪಥಿಯಲ್ಲಿ ವೃತ್ತಿ ಜೀವನಕ್ಕೆ ಅವಕಾಶ ಅನೇಕ.

ಜೀವಶಾಸ್ತ್ರ ಆಯ್ಕೆ ಕಡ್ಡಾಯ
ಹೋಮಿಯೋಪಥಿ ವೈದ್ಯರಾಗಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ. ದ್ವಿತೀಯ ಪಿಯುಸಿಯಿಂದಲೇ ಈ ವಿಷಯದತ್ತ ಹೆಚ್ಚು ಆಸ್ಥೆ ವಹಿಸಬೇಕು. ಬೋರ್ಡ್‌ ಪರೀಕ್ಷೆಗೆ ಜೀವಶಾಸ್ತ್ರ ಆಯ್ಕೆ ಕಡ್ಡಾಯವಾಗಿರುತ್ತದೆ. ಹೋಮಿಯೋಪಥಿಯಲ್ಲಿ ನಾಲ್ಕು ವರ್ಷ ಡಿಪ್ಲೊಮಾ ಕೋರ್ಸ್‌ ಮಾಡಲೂ ಅವಕಾಶವಿದೆ. ಬ್ಯಾಚುಲರ್‌ ಆಫ್‌ ಹೋಮಿಯೋಪಥಿ ಸೈನ್ಸ್‌ ಕೋರ್ಸ್‌ (ಬಿಎಚ್‌ಎಂಎಸ್‌) ಕಲಿಸುವ ವಿವಿಧ ಕಾಲೇಜುಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು. ಅಖೀಲ ಭಾರತ ವೈದ್ಯಕೀಯ ಪರೀಕ್ಷೆ ಬರೆದು ಸೀಟು ಗಿಟ್ಟಿಸಿಕೊಳ್ಳಬೇಕು.

- ಧನ್ಯಾ ಬಾಳೆಕಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ