ಗೋಡೆ, ಕುಂಬ್ಳೆಗೆ ಯಕ್ಷಮಂಗಳ ಪ್ರಶಸ್ತಿ 

Team Udayavani, Mar 15, 2019, 12:30 AM IST

x-37.jpg

ಮಂಗಳೂರು ವಿಶ್ವವಿದ್ಯಾನಿಲಯದ ಡಾ|ಪಿ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ನೀಡುವ ಯಕ್ಷಮಂಗಳ ಪ್ರಶಸ್ತಿಗೆ 2018ನೇ ಸಾಲಿನಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್‌ ಹಾಗೂ ಬಡಗುತಿಟ್ಟಿನ ಹಿರಿಯ ವೇಷಧಾರಿ ಗೋಡೆ ನಾರಾಯಣ ಹೆಗಡೆ ಆಯ್ಕೆಯಾಗಿದ್ದಾರೆ. ಪ್ರೊ|ಜಿ.ಎಸ್‌.ಭಟ್ಟ ಸಾಗರ ಅವರ “ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಯು ಯಕ್ಷಮಂಗಳ ಕೃತಿ ಪ್ರಶಸ್ತಿ ಲಭಿಸಿದೆ. 

ಕುಂಬ್ಳೆ ಸುಂದರರಾವ್‌: ತೆಂಕುತಿಟ್ಟು ಯಕ್ಷ ಗಾನ ಕ್ಷೇತ್ರದಲ್ಲಿ ಕುಂಬ್ಳೆ  ಸುಂದರ ರಾವ್‌ ಅಗ್ರ ಪಂಕ್ತಿಯ ಶ್ರೇಷ್ಠ ಕಲಾವಿದ ರಲ್ಲಿ ಒಬ್ಬರು. ಪ್ರಾಥ ಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಸುಂದರರಾಯರು ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾಗಿ ಪರಿಶ್ರಮದಿಂದ ಅರ್ಥಗಾರಿಕೆಯ ಸಾಧನೆಯನ್ನು ಮಾಡಿ ಶೇಣಿ, ಸಾಮಗ ಮೊದಲಾದ ಅರ್ಥಧಾರಿಗಳ ಕೂಟದಲ್ಲಿ ಮೆರೆದಿದ್ದಾರೆ. ಬಣ್ಣದ ಕುಟ್ಯಪ್ಪುರವರಲ್ಲಿ ಸ್ಥೂಲವಾದ ನಾಟ್ಯಾಭ್ಯಾಸವನ್ನು ಮಾಡಿ ರಂಗಪ್ರವೇಶ ಮಾಡಿರುವ ಇವರು ಕೂಡ್ಲು, ಇರಾ, ಸುರತ್ಕಲ್‌ ಮೇಳಗಳಲ್ಲಿ ಆರಂಭದ ತಿರುಗಾಟ ಹಾಗೂ ಅನಂತರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ‌ವಾದ ತಿರುಗಾಟವನ್ನು ನಡೆಸಿರುವರು. ಭರತ, ಕರ್ಣ, ಭೀಷ್ಮ, ದುಷ್ಯಂತ, ಅಕ್ರೂರ, ಸಂಜಯ, ಪರೀಕ್ಷಿತ ಮೊದಲಾದವು ಇವರ ಪಾತ್ರಗಳು. ಪ್ರಾಸಬದ್ಧವಾದ ಮಾತಿನ ಪಾಂಡಿತ್ಯಕ್ಕೆ ಹೆಸರಾದ ಇವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಗೋಡೆ ನಾರಾಯಣ ಹೆಗಡೆ: ಬಡಗು ತಿಟ್ಟು ಯಕ್ಷಗಾನದಲ್ಲಿ ತಮ್ಮ ಅಪ್ರತಿಮ ಕಲಾಸಾಧನೆ ಯ ಮೂಲಕ ಪ್ರಸಿದ್ಧ ರಾದ ವರು     ಗೋಡೆ ನಾರಾಯಣ ಹೆಗಡೆಯವರು. ರಸಾತ್ಮಕ ವಾಗ್ಮಿತೆ, ಪಾತ್ರಗಳ ನಾಡಿಮಿಡಿತವನ್ನರಿತ ಗರಿಷ್ಠ ಮಟ್ಟದ ಕಲಾಭಿವ್ಯಕ್ತಿ ಮೈಗೂಡಿಸಿಕೊಂಡ  ಹೆಗಡೆಯವರು ಆರಂಭಿಕ ವೃತ್ತಿ ಬದುಕಿನಲ್ಲಿ ಸ್ತ್ರೀವೇಷಧಾರಿಯಾಗಿ ಮೆರೆದವರು. ಇವರ ತಾರೆ, ದಮಯಂತಿ, ಸೈರೇಂಧ್ರಿ, ದಾûಾಯಿಣಿ, ಪ್ರಭಾವತಿ ಪಾತ್ರಗಳು ಜನಮನ ರಂಜಿಸಿವೆ. ಕೌರವನ ಪಾತ್ರದ ಮೂಲಕ ತಾರಾಮೌಲ್ಯದ ವರ್ಚಸ್ಸು ಪಡೆದರು. ಕೌರವ, ರಾವಣ, ಋತುಪರ್ಣ, ಬ್ರಹ್ಮ, ಲಕ್ಷ್ಮಣ, ಅರ್ಜುನ, ಸಾಲ್ವ, ಜಾಂಬವ, ಕಾರ್ತವೀರ್ಯ, ಕೀಚಕ, ಸುಧನ್ವ ಪಾತ್ರಗಳು ಯಕ್ಷ ಪ್ರೇಕ್ಷಕರ ಮನದಾಳದಲ್ಲಿ ಸ್ಥಾಯಿಯಾದವರು. ಇಡಗುಂಜಿ , ಅಮೃತೇಶ್ವರಿ , ಮುಲ್ಕಿ , ಪೆರ್ಡೂರು , ಪಂಚಲಿಂಗ , ಶಿರಸಿ ಮಾರಿಕಾಂಬ ತಿರುಗಾಟ ಮಾಡಿರುವ ಗೋಡೆಯವರ ಕಲಾಕೃಷಿಗೆ ಸುವರ್ಣ ಸಂಭ್ರಮ. ಪ್ರಸ್ತುತ ಗೋಡೆ ವಿಶ್ರಾಂತ ಜೀವನದಲ್ಲಿದ್ದಾರೆ. 

ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ “ಮೋಹಿನೀ ಏಕಾದಶೀ ಹಾಗೂ ತಂಡದ ಹಿರಿಯ ವಿದ್ಯಾರ್ಥಿಗಳಿಂದ “ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಡಾ| ಧನಂಜಯ ಕುಂಬ್ಳೆ 

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.