ರಾಗಧನದ ಶ್ರಾವಣದ ಸಂಗೀತ ಸಂಜೆ

Team Udayavani, Sep 6, 2019, 4:55 AM IST

ಉಡುಪಿಯ ರಾಗಧನ ಸಂಸ್ಥೆಯು ಆ.17ರಂದು ನೂತನ ರವೀಂದ್ರ ಮಂಟಪದಲ್ಲಿ ಒಂದು ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಶಾವ್ರಣ ಈ ಸಂಗೀತವನ್ನು ನಡೆಸಿಕೊಟ್ಟವರು ಗಿರಿಜಾ ಶಂಕರ್‌ ಚೆನ್ನೈ.

ಹದವಾದ ಧ್ವನಿ ಸೌಕರ್ಯವನ್ನು ಹೊಂದಿರುವ ಈ ಗಾಯಕರು ಆ ದಿನ ದೋಷರಹಿತವಾದ ಮತ್ತು ಸರಳವಾದ ಸೌಖ್ಯ ಸಂಗೀತವನ್ನು ನೀಡಿದರು.ಅಟತಾಳ ಭೈರವಿ ವರ್ಣದೊಂದಿಗೆ ಶುರುವಾದ ಹಾಡುಗಾರಿಕೆಯಲ್ಲಿ ಧೇನುಕ ( ತೆಲಿಯತೇರು) ಸೌರಾಷ್ಟ್ರ (ಶರಣು ಸಿದ್ಧಿ ವಿನಾಯಕ), ಧನ್ಯಾಸಿ (ಸಂಗೀತ ಜ್ಞಾನಮು) ರವಿಚಂದ್ರಿಕ (ಮಾಕೇಲರ ) ರಾಗಗಳ ಕೃತಿಗಳು ಸೊಗಸಾಗಿ ಮೂಡಿ ಬಂದವು. ಲಲಿತ ( ಹಿರಣ್ಮಯೀಂ) ಮತ್ತು ಪೂರ್ವಿ ಕಲ್ಯಾಣಿ ( ಸಾಟಿಲೇನಿ) ರಾಗಗಳು ಪ್ರಧಾನವಾಗಿದ್ದವು. ಈ ರಾಗಗಳನ್ನು ಅಚ್ಚುಕಟ್ಟಾಗಿ ವಿಸ್ತರಿಸಿದ ಗಾಯಕರು ಎರಡೂ ಕೃತಿಗಳನ್ನು ಸೂಕ್ತವಾದ ನೆರ್‌ವಲ್‌ ಮತ್ತು ಸ್ವರವಿನಿಕೆಗಳಿಂದ ಪೋಷಿಸಿದರು. ಮುಂದೆ ರಾಗಂ-ತಾನಂ- ಪಲ್ಲವಿಗಾಗಿ ಕೀರವಾಣಿಯನ್ನು ಆಯ್ದುಕೊಂಡು ಶ್ರೀ ರಾಮ ಪ್ರಿಯಂ ಶ್ರೀನಿವಾಸಂ ಭಜೇ/ ಹಂ… ಶ್ರೀ ವತ್ಸ ನಾಮ ಧೇಯಂ… ಎಂಬ ಪಲ್ಲವಿಯನ್ನು, ಖಂಡ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನಿರೂಪಿಸಿ, ಸ್ವರ ಕಲ್ಪನೆಗಳನ್ನು ರಾಗ ಮೂಲಿಕೆಯಲ್ಲಿ ನೀಡಿದರು.

ವಯಲಿನ್‌ ಕಲಾವಿದ ವೈಭವ್‌ ರಮಣಿ, ಲಲಿತ ರಾಗದ ಶರಣಾಗತ – ಶೋಕ ಭಾವಗಳನ್ನು , ಪೂರ್ವಿ ಕಲ್ಯಾಣಿಯ ಗಾಂಭೀರ್ಯವನ್ನು ಅಂತೆಯೇ ಕೀರವಾಣಿಯ ಘನ ಮತ್ತು ಮೃದು ಮಗ್ಗುಲುಗಳನ್ನು ತನ್ನದೇ ಆದ ವಿನ್ಯಾಸ ವೈವಿಧ್ಯಗಳಿಂದ ನುಡಿಸಿದರು.

ಹದವರಿತು ಮೃದಂಗ ನುಡಿಸಿದ ಸುನಾದ ಕೃಷ್ಣ ಅಮ್ಮೆ ತನಿ ಆವರ್ತಗಳಲ್ಲಿ ನಿರ್ಮಿಸಿದ ಭಿನ್ನ ಲಯಗಣಿತದ ಗೋಪುರಗಳು ಪ್ರಶಂಸೆಗೆ ಪಾತ್ರವಾದವು. ಒಂದು ಶ್ಲೋಕವನ್ನು ಅನುಸರಿಸಿದ ಹಂಸಾನಂದಿ (ಮಾಧವ ಮಾಯಾ) ಪ್ರಸ್ತುತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸರೋಜಾ ಆರ್‌. ಆಚಾರ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಧಾರವಾಡ: ಜಿಲ್ಲೆಯಲ್ಲಿ ಎ ಹಾಗೂ ಬಿ ದರ್ಜೆಯ ದೇವಸ್ಥಾನಗಳು ಇಲ್ಲದಿರುವ ಕಾರಣ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುವುದು...

  • ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದ ಹೊರವಲಯದಲ್ಲಿ ಪಂಚಾಯತ ವತಿಯಿಂದ ಮಾದರಿ ಚಿತಾಗಾರ ನಿರ್ಮಾಣ ಕಾರ್ಯ ನಡೆದಿದ್ದು, ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮದಲ್ಲಿ...

  • ಧಾರವಾಡ: ಅವರು ಕುಸ್ತಿ ಹಿಡಿದರೆ ಪ್ರೇಕ್ಷಕರ ಮೈಯಲ್ಲಿ ರೋಮಾಂಚನ.. ಅವರು ಹಾಕುವ ಪಟ್ಟುಗಳಿಗೆ ಎದುರಾಳಿಗೆ ಪೆಟ್ಟು ಖಾತರಿ.. ಮಿಂಚಿನ ವೇಗ..ಗೆಲ್ಲುವ ಉದ್ವೇಗ.. ಒಟ್ಟಿನಲ್ಲಿ...

  • ವಾಷಿಂಗ್ಟನ್: ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರ. ಈ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಭಾರತಕ್ಕೆ 2 ದಿನಗಳ ಕಾಲ ಭೇಟಿ ನೀಡಿ ತೆರಳಿದ ಬೆನ್ನಲ್ಲೇ...

  • ಜಗಳೂರು : ಮೃತರು ಮತ್ತು ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ನಕಲಿ ಜಾಬ್‌ ಕಾರ್ಡ್ಗಳನ್ನು ಸೃಷ್ಟಿಸಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡದೇ...