Udayavni Special

ಅಭಿನಯ, ಸಂಗೀತ  ಪ್ರೌಢಿಮೆ ತೆರೆದಿಟ್ಟ ನಳ ದಮಯಂತಿ ಬ್ಯಾಲೆ


Team Udayavani, Apr 6, 2018, 6:00 AM IST

9.jpg

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಾ. 18ರಂದು ಶ್ರೀನಿವಾಸ ಸಾಸ್ತಾನ ನೇತೃತ್ವದ ಕರ್ನಾಟಕ ಕಲಾ ದರ್ಶಿನಿ ಬೆಂಗಳೂರು ಇವರು ಸಾಲಿಗ್ರಾಮದ ಡಾ| ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪ್ರದರ್ಶಿಸಿದ ನಳ ದಮಯಂತಿ ಯಕ್ಷಗಾನ ಬ್ಯಾಲೆಯು ಅಭಿನಯ ಪ್ರೌಢಿಮೆಯೊಂದಿಗೆ ಇಂಪಾದ ಹಾಡುಗಾರಿಕೆ ಮತ್ತು ಪೂರಕ ಸಂಗೀತದೊಂದಿಗೆ ಮುದ ನೀಡಿತು. ಡಾ| ಶಿವರಾಮ ಕಾರಂತರು ನಿರ್ದೇಶಿಸಿದ್ದ ನಳ ದಮಯಂತಿ ಕಥಾಭಾಗದ ಯಕ್ಷಗಾನದ ಬ್ಯಾಲೆಯನ್ನು ಕಿಂಚಿತ್ತೂ ಬದಲಾವಣೆ ಮಾಡದೆ ಮರು ನಿರ್ದೇಶಿಸಿ ಪ್ರದರ್ಶನ ನೀಡಲಾಗಿದೆ.  ಪುರಾಣದಲ್ಲಿ  ಇರುವ ಕಥೆಗೂ ಇಲ್ಲಿ ತೋರಿಸಲಾದ ಕಥೆಗೂ  ತುಂಬಾ ವ್ಯತ್ಯಾಸ ಇದೆಯಾದರೂ, ಕಲಾವಿದರ ಕಲಾ ಪ್ರೌಢಿಮೆ ಶ್ಲಾಘನೀಯವಾದುದು.

ವಿ| ಸುಧೀರ್‌ ರಾಜ್‌ ಕೊಡವೂರು ಅವರು ಶಿವರಾಮ ಕಾರಂತರ ಜತೆಗಿದ್ದುಕೊಂಡೇ ಈ ಬ್ಯಾಲೆಯನ್ನು  ಆ ಕಾಲದಲ್ಲಿ ಸಾಕಷ್ಟು ಪ್ರದರ್ಶಿಸಿದ್ದು, ಈಗ  ಅವರೇ ಇದನ್ನು ಮರುನಿರ್ದೇಶಿಸಿದ್ದಾರೆ. ಶಿವರಾಮ ಕಾರಂತರ ತಂಡದಲ್ಲಿ ಮೃದಂಗವಾದಕರಾಗಿದ್ದ ವಿ| ಅನಂತ ಪದ್ಮನಾಭ ಪಾಠಕ್‌ ಅವರು ಈಗಿನ ಹೊಸ ತಂಡದಲ್ಲೂ  ಮೃದಂಗವಾನ ಮಾಡಿದ್ದಾರೆ. ಉಳಿದಂತೆ ಭಾಗವತರಾಗಿ ಸುಬ್ರಾಯ ಹೆಬ್ಟಾರ್‌, ಯು. ವಿಶ್ವನಾಥ ಶೆಟ್ಟಿ, ಚೆಂಡೆಯಲ್ಲಿ ಶ್ರೀರಾಮ ಬೈರಿ ಮತ್ತು ಅಜಿತ್‌ಕುಮಾರ್‌, ವಯೊಲಿನ್‌ನಲ್ಲಿ ರವಿಕುಮಾರ್‌ ಮೈಸೂರು, ಸ್ಯಾಕ್ಸೋಫೋನ್‌ನಲ್ಲಿ ಹರಿದಾಸ್‌ ಡೋಗ್ರಾ ಮತ್ತು ಕೃಷ್ಣರಾಜ್‌ ಉಳಿಯಾರು  ಅವರು ಈ ತಂಡದ ಹಿಮ್ಮೇಳದ ಮುಕುಟಮಣಿಗಳು. ಕಲಾವಿದರಾಗಿ  ಶ್ರೀನಿವಾಸ ಸಾಸ್ತಾನ, ಶ್ರೀಧರ ಕಾಂಚನ್‌, ಮನೋಜ್‌ ಪಿ.ಎಂ. ಭಟ್‌, ರಮೇಶ್‌ ಅಡುಕಟ್ಟೆ, ಉಮೇಶ್‌ ಪೂಜಾರಿ, ಪ್ರತೀಶ್‌ ಬ್ರಹ್ಮಾವರ, ಡಾ| ರಾಧಾಕೃಷ್ಣ ಉರಾಳ, ಮುಗÌ ಗಣೇಶ್‌ ನಾೖಕ್‌,  ಕೃಷ್ಣಮೂರ್ತಿ ಉರಾಳ, ಗೌತಮ್‌ ಸಾಸ್ತಾನ, ಬಸವ ಮರಕಾಲ,  ಸತೀಶ್‌ ಉಪಾಧ್ಯಾಯ ತಮ್ಮ ಅಭಿನಯ ಪ್ರೌಢಿಮೆಯನ್ನು ಪ್ರದರ್ಶಿಸಿದ್ದು, ತಾಂತ್ರಿಕ ಸಹಾಯಕರಾಗಿ ಗೌತಮ್‌ ಸಾಸ್ತಾನ ಸಹಕರಿಸಿದ್ದಾರೆ.

ಬ್ಯಾಲೆಯಲ್ಲಿ   ಅತ್ಯಂತ ಹೆಚ್ಚು ಗಮನ ಸೆಳೆದ ಪಾತ್ರವೆಂದರೆ ಶನಿಯದ್ದು, ಆತನ ವೇಷಭೂಷಣದಿಂದ ಹಿಡಿದು ಅಭಿನಯದ  ಪ್ರತಿಯೊಂದು  ಹೆಜ್ಜೆಯೂ, ಕ್ಷಣವೂ ಮನಗೆದ್ದಿತು. ಪ್ರೇಕ್ಷಕ  ವೃಂದದಿಂದ ಹೆಚ್ಚು ಶ್ಲಾಘನೆಗೆ ಒಳಗಾದ ಈ ಪಾತ್ರ ಮತ್ತೂ ಮತ್ತೂ ನೋಡಬೇಕೆನಿಸಿತು. ಯಕ್ಷಗಾನದಲ್ಲೂ ಇಂಥ ಶನಿಯನ್ನು ಕಂಡಿಲ್ಲ ಎಂದು ಹೇಳಿದ ಪ್ರೇಕ್ಷಕರೂ ಇದ್ದಾರೆ. ಉಳಿದಂತೆ ನಳ, ಬಾಹುಕ, ದಮಯಂತಿ  ಪಾತ್ರಗಳೂ ಗಮನ ಸೆಳೆದವು. ಒಟ್ಟಿನಲ್ಲಿ ಹೇಳುವುದಾದರೆ ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತ  ಅಭಿನಯ ನೀಡಿದ್ದಾರೆ.

ಕಥೆಯ ವಿಷಯಕ್ಕೆ ಬರುವುದಾದರೆ ಕೆಲವು ಕಡೆಗಳಲ್ಲಿ ಆಶ್ಚರ್ಯ ಉಂಟು ಮಾಡುವಂಥ ಬದಲಾವಣೆಯಿತ್ತು. ನಳ  ತನ್ನ ಪತ್ನಿ ದಮಯಂತಿಯನ್ನು ಕಾಡಿನಲ್ಲಿ ತೊರೆದು  ಹೋದ ಬಳಿಕ ಆಕೆಯ ಮಾನಭಂಗಕ್ಕೆ ಯತ್ನಿಸಿದ ಬೇಟೆಗಾರ ದಮಯಂತಿಯ ಪಾತಿವ್ರತ್ಯದ ಉರಿಗೆ ಸಿಲುಕಿ ಸಾಯುವುದು, ಹಾವಿನ ಕಡಿತಕ್ಕೆ ಸಿಲುಕಿ ಗತಿಸುವುದು… ಹೀಗೆ ಒಟ್ಟಿನಲ್ಲಿ ಆತ ಅವಳೆದುರೇ ಕೊನೆಯುಸಿರೆಳೆಯುವುದು ಇದುವರೆಗೆ  ತಿಳಿದುಕೊಳ್ಳಲಾಗಿದ್ದ ಕಥೆ. ಬಳಿಕ ದಮಯಂತಿ ಬ್ರಾಹ್ಮಣರೂ ಸೇರಿಕೊಂಡಿದ್ದ ಒಂದು ತಂಡದ ಸಹಾಯದಿಂದ ಊರಿಗೆ ಬಂದು ತನ್ನ  ಚಿಕ್ಕಮ್ಮನ ಮನೆಯಲ್ಲಿ ಕೆಲಸದಾಕೆಯ  ರೂಪದಲ್ಲಿ ದಿನದೂಡುವುದು ಹಿಂದಿನ ಕಥೆ. ಆದರೆ ಇಲ್ಲಿ ಬೇಟೆಗಾರ ಮೊದಲು ಆಕೆಯ ಮೇಲೆ ಕಣ್ಣು ಹಾಕಿದರೂ, ಬಳಿಕ ಮಾಂಗಲ್ಯ ತೋರಿಸಿದ ಕಾರಣ ಆತನೇ ಅವಳನ್ನು ಊರಿನ ರಾಜನ ಬಳಿಗೆ ಕರೆದೊಯ್ಯುವುದು, ಅಲ್ಲಿ ಆಕೆ ತನ್ನ ನಿಜಕಥೆಯನ್ನು ಹೇಳುವುದು ಕಂಡು ಬರುತ್ತದೆ. ಇಂಥ ಬದಲಾವಣೆಯನ್ನು ಹಿಂದೆ ಶಿವರಾಮ ಕಾರಂತರೇ ಮಾಡಿದ್ದು, ಅದನ್ನು ಬದಲಾಯಿಸಲಾಗದ ಕಾರಣ ಯಥಾಸ್ಥಿತಿ ಕಾಪಾಡಿಕೊಂಡಿರಬೇಕು.  ವೇಷಭೂಷಣಗಳ ಬಗ್ಗೆ  ನೋಡುವುದಾದರೆ ಕಾಡಿನಲ್ಲಿ ಪತ್ನಿಯ ಸೆರಗನ್ನು ಹರಿದು ಮಾನ ಮುಚ್ಚಿಕೊಂಡ ನಳ ಮುಂದೆ ಕಾರ್ಕೋಟಕ ಕಡಿತಕ್ಕೆ ಒಳಗಾಗುವಾಗಲೂ ಹಿಂದಿನ ರಾಜ ಉಡುಗೆಯಲ್ಲೇ ಇದ್ದ. ಬಾಹುಕನಿಗೂ ಕಿರೀಟ ಸಹಿತ ಅಗತ್ಯಕ್ಕಿಂತ  ಜಾಸ್ತಿಯಾದ   ಉಡುಗೆಯಿತ್ತು .ಕಾರ್ಕೋಟಕನನ್ನು ತೋರಿಸಿದ್ದರೆ ಮತ್ತಷ್ಟು ಸುಲಭವಾಗಿ ಕಥೆ ಪ್ರೇಕ್ಷಕನಿಗೆ ಅರ್ಥವಾಗುತ್ತಿತ್ತು.

ಯಕ್ಷಗಾನಕ್ಕೆ ಹೋಲಿಸಿದರೆ ಹಾಡುಗಾರಿಕೆ ತುಂಬಾ ಸಂಗೀತಮಯವಾಗಿತ್ತು ಮತ್ತು ಇಂಪಾಗಿತ್ತು. ಯಕ್ಷಗಾನ ಪ್ರೇಕ್ಷಕರಿಗೆ ಇದು ಇಷ್ಟವಾಗದೆ ಇದ್ದರೂ ಒಂದು ಶಾಂತ ಪರಿಸರದಲ್ಲಿ ಸುಂದರ ಕಥಾಭಾಗವನ್ನು ಸಂಗೀತ ಮತ್ತು ಅಭಿನಯ ಪ್ರೌಢಿಮೆಯೊಂದಿಗೆ ಆಸ್ವಾದಿಸಲು ತುಂಬಾ ಪೂರಕವಾಗಿತ್ತು. ವಯೊಲಿನ್‌ ಕೂಡ ಅದಕ್ಕೆ ತಕ್ಕಂತಿತ್ತು. ಹೀಗೆ ಒಂದು ಸುಂದರ   ಮುಸ್ಸಂಜೆಯಲ್ಲಿ ಅತಿಸುಂದರ ಕಲಾಪ್ರಕಾರವೊಂದನ್ನು ನೀಡಿದ ಕರ್ನಾಟಕ ಕಲಾ ದರ್ಶಿನಿ ತಂಡಕ್ಕೆ ಅಭಿನಂದನೆಗಳು. 

ಪುತ್ತಿಗೆ ಪದ್ಮನಾಭ ರೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಗ್ರೀನ್ ಜೋನ್ ಶೃಂಗೇರಿಗೂ ಕೋವಿಡ್-19 ಸೋಂಕಿನ ಕಾಟ

ಗ್ರೀನ್ ಜೋನ್ ಶೃಂಗೇರಿಗೂ ಕೋವಿಡ್-19 ಸೋಂಕಿನ ಕಾಟ

28-May-14

ಕೋವಿಡ್ ಸೋಂಕಿತರ ಹಾಸ್ಟೇಲ್‌ ಚಿಕಿತ್ಸೆಗೆ ವಿರೋಧ

28-May-13

ಅಭಿವೃದ್ಧಿ-ಕೃಷಿ ಚಟುವಟಿಕೆ ನಿರಂತರವಾಗಿರಲಿ

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.