ರಂಜಿಸಿದ ತಾಳಮದ್ದಲೆ ಸಪ್ತಾಹ


Team Udayavani, Sep 13, 2019, 5:00 AM IST

q-10

ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಎರಡನೇ ವರ್ಷದ ಮಹಿಳಾ ತಾಳಮದ್ದಲೆ ಸಪ್ತಾಹ ಸುರತ್ಕಲ್‌ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ ಎಸ್‌. ವಾಸುದೇವ ರಾವ್‌ ನೇತೃತ್ವದಲ್ಲಿ ನಡೆಯಿತು. ಮಂಡಳಿಯ ಸದಸ್ಯರು ಹಾಗೂ ಆಹ್ವಾನಿತ ಕಲಾವಿದೆಯರನ್ನೊಳಗೊಂಡ ಕೂಟ ಇದಾಗಿತ್ತು.

ಮೊದಲನೆ ದಿನ ಜಾಂಬವತಿ ಕಲ್ಯಾಣ ಪ್ರಸಂಗ. ಬಲರಾಮನಾಗಿ ಸುಲೋಚನಾ ವಿ.ರಾವ್‌ ನಾರದನೊಂದಿಗೆ ಸಹೋದರ ಕೃಷ್ಣನನ್ನು ಸಮರ್ಥಿಸುತ್ತಾ ಶ್ಯಮಂತಕ ಮಣಿ ಕದ್ದ ಅಪವಾದಕ್ಕೊಳಗಾಗಿದ್ದಾನೆ ಎಂದಾಗ ನ್ಯಾಯಾಧೀಶರಾಗಿ ಗಂಭೀರ ಗತ್ತುಗಾರಿಕೆಯ ನಿರ್ವಹಣೆ ತೋರಿದರು. ನಾರದನಾಗಿ ಕೆ. ಕಲಾವತಿ ಕೃಷ್ಣನ ಬಗ್ಗೆ ಬಲರಾಮನಲ್ಲಿ ಕ್ರೋಧ ಉಕ್ಕಿಸುವಲ್ಲಿ ಯಶಸ್ವಿಯಾದರು. ಆ ಭಾಗದ ಕೃಷ್ಣ ಲಲಿತಾ ಭಟ್‌ ವಿಧೇಯ ಸಹೋದರನಾಗಿ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತ ಅಣ್ಣನ ಕೋಪವನ್ನು ತಣಿಸುವ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದರು. ಜಾಂಬವಂತನಾಗಿ ಜ್ಯೋತಿ ಸುನಿಲ್‌ ಕುಮಾರ್‌ ಶೆಟ್ಟಿ ಮೆರೆದರೆ ಶ್ರೀ ರಾಮಾಯಣ ದರ್ಶನದ ಬಳಿಕ ಭಕ್ತಿಯ ಹೊನಲನ್ನೇ ಹರಿಸಿದರು. ಈ ಭಾಗದ ಕೃಷ್ಣನಾಗಿ ವನಿತಾ ಹೆಗಡೆ ಸಮರ್ಥ ಸಂವಾದದ ಮೂಲಕ ಮೆರಗು ಕೊಟ್ಟರು. ಮಂಗಳಾ ಜಾಂಬವತಿ ಪಾತ್ರ ಮಾಡಿದರು. ಬಲಿಪ ಪ್ರಸಾದ ಭಟ್‌ ಇವರ ಪರಂಪರೆಯ ಭಾಗವತಿಕೆ ಜನಮನ ಗೆದ್ದಿತು.

ಎರಡನೇ ದಿನ ಯಕ್ಷ ಮಂಜುಳ ಕದ್ರಿ ಇವರಿಂದ ಯಕ್ಷಮಣಿ ಪ್ರಸಂಗದ ಕೂಟವು ತುಳುವಿನಲ್ಲಿ ನಡೆಯಿತು. ಗುಣಸುಂದರಿಯಾಗಿ ಪೂರ್ಣಿಮಾ ಪೇಜಾವರ, ಚಂದ್ರಸೇನನಾಗಿ ಪೂರ್ಣಿಮಾ ಶಾಸ್ತ್ರಿ ಮೆರೆದರೆ, ಪೋಷಕ ಪಾತ್ರಗಳಲ್ಲಿ ಅರುಣಾ ಸೋಮಶೇಖರ್‌, ರೂಪಾ ರಾಧಾಕೃಷ್ಣ , ಅನುಪಮಾ ಅಡಿಗ, ಶೈಲಜಾ ರಾವ್‌, ನಿವೇದಿತಾ ಶೆಟ್ಟಿ ಕಥಾಭಾಗದ ಬೆಳವಣಿಗೆಯಲ್ಲಿ ಸಹಕರಿಸಿದರು. ಯುವ ಮಹಿಳಾ ಭಾಗವತೆ ಅಮೃತಾ ಅಡಿಗ, ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ ಹಾಗೂ ಚಂಡೆಯಲ್ಲಿ ಕುಮಾರಿ ಪೂರ್ವಾ ಸೊಗಸಾದ ನಿರ್ವಹಣೆ ತೋರಿದರು.

ಮೂರನೇ ದಿನದ ಪ್ರಸಂಗ ರುಕ್ಮಿಣಿ ಕಲ್ಯಾಣ. ಪಿ. ವೆಂಕಟರಮಣ ಐತಾಳರ ಭಾಗವತಿಕೆಗೆ ಶಿವಪ್ರಸಾದ ಪುನರೂರು ಹಾಗೂ ಎಸ್‌. ಎನ್‌. ಭಟ್‌ ಹಿಮ್ಮೇಳ ಒದಗಿಸಿದರು. ಭೀಷ್ಮಕನ ಪಾತ್ರದಲ್ಲಿ ಸುಲೋಚನಾ ರಾವ್‌ ಮಗನ ಉದ್ಧಟತನದ ಮಾತುಗಳಿಗೆ ಮೃದುವಾಗಿ ಉತ್ತರವನ್ನೀಯುತ್ತಾ, ತಾಳ್ಮೆಯಿಂದ ತನ್ನ ನಿಲುವನ್ನು ವಿವರಿಸಿದರು. ಜ್ಯೇಷ್ಠನಾದ ತಾನೇ ಮುಂದೆ ನಿಂತು ತಂಗಿಯ ಮದುವೆ ಮಾಡಬೇಕೆಂಬ ದರ್ಪದ ನಿರ್ಧಾರದಿಂದ ತಂದೆಯ ಬಾಯಿ ಮುಚ್ಚಿಸುವ ರುಕ್ಮನಾಗಿ ದೀಪ್ತಿ ಬಾಲಕೃಷ್ಣ ಭಟ್‌ ಗಮನ ಸೆಳೆದರು.

ರುಕ್ಮಿಣಿಯ ಪಾತ್ರದಲ್ಲಿ ಜಯಂತಿ ಹೊಳ್ಳ ಮನೋಜ್ಞವಾಗಿ ಪಾತ್ರ ಚಿತ್ರಣ ಮಾಡಿದರೆ, ಕೃಷ್ಣನಾಗಿ ಗಂಭೀರ ಪಾತ್ರ ಪ್ರಸ್ತುತಿಯೊಂದಿಗೆ ಕಲಾವತಿ, ಅಬ್ಬರದ ಶಿಶುಪಾಲನಾಗಿ ವೃಂದಾ ಕೊನ್ನಾರ್‌, ಅಗ್ನಿದ್ಯೋತ ಹಾಗೂ ಬಲರಾಮನಾಗಿ ಲಲಿತಾ ಭಟ್‌, ಮಾಗಧನಾಗಿ ಮಂಗಳಾ, ಚಾರಕನಾಗಿ ರೇವತಿ ನವೀನ್‌ ಉತ್ತಮ ಅಭಿನಯ ನೀಡಿದರು .

ನಾಲ್ಕನೇ ದಿನ ದಾನಶೂರ ಕರ್ಣ ಪ್ರಸಂಗ. ಪುರುಷ ಪ್ರಧಾನವಾದ ಈ ಕಥಾ ಭಾಗದ ಪ್ರಸ್ತುತಿಯಲ್ಲಿ ಮೊದಲ ಭಾಗದ ಕರ್ಣನಾಗಿ ಪುತ್ತೂರಿನ ಶುಭಾ ಅಡಿಗ ನಿರರ್ಗಳ ವಾಗjರಿಯಿಂದ ಅಬ್ಬರಿಸಿದರೆ, ಅರ್ಜುನನಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು ಅಷ್ಟೇ ಭರ್ಜರಿಯಾಗಿ ಪಾತ್ರ ಚಿತ್ರಣಗೈದರು. ಹರಿಣಾಕ್ಷಿ ಶೆಟ್ಟಿ ಶಲ್ಯನಾಗಿ ನಿಲುವನ್ನು ಸಮರ್ಥವಾಗಿ ಮಂಡಿಸಿದರು. ಎರಡನೇ ಭಾಗದ ಕರ್ಣಾರ್ಜುನರಾಗಿ ದೀಪ್ತಿ ಭಟ್‌ ಹಾಗೂ ಸುಲೋಚನಾ ರಾವ್‌ ಪ್ರೌಢವಾದ ಭಾವಪೂರ್ಣ ಚಿತ್ರಣ ಕೊಟ್ಟರೆ ಶ್ರೀಕೃಷ್ಣನಾಗಿ ಜಯಂತಿ ಹೊಳ್ಳ ಅರ್ಜುನನನ್ನು ಯುದ್ಧಕ್ಕೆ ಉತ್ತೇಜಿಸುವಲ್ಲಿ ವ್ಯಂಗ್ಯ, ಸಮಾಧಾನ ನುಡಿಗಳ ಮೂಲಕ ರಂಜಿಸಿದರು. ಮಂಗಳಾ ಸರ್ಪಾಸ್ತ್ರ ಹಾಗೂ ವೃದ್ಧ ಬ್ರಾಹ್ಮಣನಾಗಿ ಕಾಣಿಸಿಕೊಂಡರು. ಭವ್ಯಶ್ರೀ ಹರೀಶ್‌ ಭಾಗವತಿಕೆಗೆ ಪೆರ್ಲ ಗಣೇಶ ಭಟ್‌ ಹಾಗೂ ಗಣೇಶ ಭಟ್‌ ಬೆಳಾಲು ಹಿಮ್ಮೇಳ ಒದಗಿಸಿದರು.

ಐದನೇ ದಿನ ವಾಲಿಮೋಕ್ಷ.ಸದಾನಂದ ಕುಲಾಲ್‌ ಸಂಪ್ರದಾಯ ಶೈಲಿಯ ಭಾವಪೂರ್ಣ ಹಾಡುಗಾರಿಕೆ ನಡೆಸಿದರು. ಮಂಗಳಪಾಡಿ ಮಂಡಳಿಯ ಜಯಲಕ್ಷ್ಮೀ ಕಾರಂತ, ಸರಸ್ವತಿ ಹೊಳ್ಳ ಮೊದಲ ಭಾಗದ ಸುಗ್ರೀವ – ವಾಲಿಯಾಗಿ ವಾಕ್‌ ಚಾತುರ್ಯದಿಂದ ಜನಮನಗೆದ್ದರೆ ರಾಮನಾಗಿ ಮಲ್ಲಿಕಾ ಅಜಿತ್‌ ಸಿದ್ಧಕಟ್ಟೆ ಗಂಭೀರ ಪಾತ್ರ ನಿರ್ವಹಣೆ ಮಾಡಿದರು. ಎರಡನೇ ಭಾಗದಲ್ಲಿ ದುರ್ಗಾಂಬ ಮಂಡಳಿಯ ಲಲಿತಾ ಭಟ್‌ ಸುಗ್ರೀವನಾಗಿ, ರಾಮ – ವಾಲಿಯಾಗಿ ಸುಲೋಚನಾ ರಾವ್‌ ಹಾಗೂ ದೀಪ್ತಿ ಭಟ್‌ ರಾಮವಾಲಿ ಸಂವಾದವನ್ನು ಅರ್ಥಗರ್ಭಿತವಾಗಿಸಿದರು. ಸುಮಿತ್ರಾ ಕಲ್ಲೂರಾಯ ಲಕ್ಷ್ಮಣನಾಗಿ ಕಾಣಿಸಿಕೊಂಡರು.

ಆರನೇ ದಿನ ನಾಸಚ್ಛೇದ ಪ್ರಸಂಗ. ಅಶೋಕ ನಗರದ ಭಾÅಮರಿ ಮಹಿಳಾ ಕಲಾವೃಂದದ ಸದಸ್ಯೆಯರಾದ ಆಕೃತಿ ಭಟ್‌, ಮಂಜುಳಾ ಪ್ರಭಾಕರ್‌, ಉಮಾ ದಿವಾಕರ್‌, ಸುಮತಿ ಕೆ.ಎನ್‌., ಪೂರ್ಣಿಮಾ ರಾವ್‌, ಪ್ರೇಮಾ ಕುಮಾರಿ ಪಾತ್ರ ನಿರ್ವಹಿಸಿದರು. ಹರೀಶ್‌ ಶೆಟ್ಟಿ ಸೂಡ, ರವಿರಾಜ ಜೈನ್‌, ರಾಮ ಹೊಳ್ಳ ಹಿಮ್ಮೆಳ ಒದಗಿಸಿದರು.

ಕೊನೆಯ ದಿನ ಪಾಂಚಜನ್ಯೋತ್ಪತ್ತಿ. ಶ್ರೀಕೃಷ್ಣನಾಗಿ ವೃಂದಾ ಕೊನ್ನಾರ್‌, ಸಾಂದೀಪನಿಯಾಗಿ ಲಲಿತಾ ಭಟ್‌, ಬಲರಾಮನಾಗಿ ಕಲಾವತಿ , ಯಮನಾಗಿ ಜಯಂತಿ ಹೊಳ್ಳ ಪ್ರೌಢ ಅಭಿನಯದಿಂದ ಮೆರೆದರೆ ಸುಮತಿ ಕೆ.ಎನ್‌. ಸದೊ½àದಿನಿಯಾಗಿ , ವೀಣಾ ಕೃಷ್ಣ ಮೂರ್ತಿ ವರುಣನಾಗಿ, ನಳಿನಿ ಮೋಹನ್‌ ಪಂಚಜನನಾಗಿ ಪಾತ್ರ ನಿರ್ವಹಣೆ ಮಾಡಿದರು. ಶಾಲಿನಿ ಹೆಬ್ಟಾರ್‌ ಭಾಗವತಿಕೆಯಲ್ಲಿ, ರಾಮ ಹೊಳ್ಳ, ಮಾ| ವರುಣ ಹೆಬ್ಟಾರ್‌ ಹಿಮ್ಮೇಳದಲ್ಲಿ ಸಹಕರಿಸಿದರು.

ಯಕ್ಷಪ್ರಿಯ

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.