ಇದೇ(ಮೊಬೈಲ್‌ನ) ಬಹಿರಂಗ ಶುದ್ಧಿ!
Team Udayavani, Nov 30, 2020, 6:00 PM IST
ಕೆಲವು ಗೆಳೆಯರು, ನನ್ನ ಮೊಬೈಲ್ನಲ್ಲಿ ಈ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತಲೋ, ಇನ್ನಾವುದೋ ಸೆಟಿಂಗ್ ಬದಲಾಗಿದೆ ಸರಿಮಾಡಿಕೊಡಿ ಎಂತಲೋ ತಮ್ಮ ಮೊಬೈಲ್ ಕೊಡುತ್ತಾರೆ. ಅದರಕವರ್ ತೆಗೆದರೆ ಮೊಬೈಲ್ ಮೇಲೆ, ಚಾರ್ಚಿಂಗ್ ಪೋರ್ಟ್ ಸೇರಿದಂತೆ ಮೊಬೈಲ್ ನಲ್ಲಿರುವ ತೂತುಗಳಲ್ಲಿ ವರ್ಷಾನುಗಟ್ಟಲೆಯ ಧೂಳು, ಕಸ, ಕಡ್ಡಿ ಸೇರಿಕೊಂಡಿರುತ್ತದೆ.
ಅದರ ಮೇಲಿರುವಕವರ್ ಬಣ್ಣಗೆಟ್ಟು ಕುರೂಪವಾಗಿರುತ್ತದೆ! ನಮಗೆ ಹೇಗೆ ಸ್ನಾನ, ಹಲ್ಲುಜ್ಜುವುದು, ಸ್ವತ್ಛತೆ ಮುಖ್ಯವೋ ಹಾಗೆಯೇ ನಾವು ಬಳಸುವ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಕಂಪ್ಯೂಟರ್ ಇತ್ಯಾದಿ ಗ್ಯಾಜೆಟ್‌ಗಳ ಸ್ವತ್ಛತೆಯೂ ಬಹಳ ಮುಖ್ಯವಲ್ಲವೇ?! ನಮ್ಮ ಗ್ಯಾಜೆಟ್‌ಗಳನ್ನು ಕಾಲಕಾಲಕ್ಕೆ ಒರೆಸಿ, ಧೂಳು ತೆಗೆದು ನಿರ್ವಹಣೆ ಮಾಡಿದರೆ ಅವುಗಳ ಆಯುಷ್ಯವೂ ಹೆಚ್ಚಾಗುತ್ತದೆ.
ಧೂಳು, ಕಸ ಇದ್ದಾಗ…
ಎರಡು ಮೂರು ದಿನಕ್ಕೊಮ್ಮೆ ನಿಮ್ಮ ಮೊಬೈಲ್ ಫೋನ್‌ನ ಬ್ಯಾಕ್‌ಕವರ್, ಪೌಚ್ ತೆಗೆದು ಒಣಗಿದ ಶುಭ್ರವಾದ ಹತ್ತಿ ಬಟ್ಟೆಯಲ್ಲಿ ಒರೆಸಿಟ್ಟುಕೊಳ್ಳಿ. ಚಾರ್ಜ್ ಮಾಡುವ ಪೋರ್ಟ್, ಆಡಿಯೋ ಜಾಕ್ ಪೋರ್ಟ್‌ಗಳ ಒಳಗೆ ಧೂಳು ಇದ್ದರೆ ಮೃದುವಾದ ಮಲ್ ಬಟ್ಟೆಯನ್ನು ಸುರಳಿ ಮಾಡಿಕೊಂಡು ಅಥವಾ ಹೊಸ ಇಯರ್ ಬಡ್ ಹಾಕಿ ಸ್ವತ್ಛಗೊಳಿಸಿ.
ಒಂದು ವಿಷಯವನ್ನು ಅನೇಕರು ಗಮನಿಸಿರಬಹುದು, ನಿಮ್ಮ ಫೋನ್‌ನ ಸ್ಪೀಕರ್ ಆನ್ ಮಾಡಿಕೊಂಡರೆ, ಇಲ್ಲವೇ ಇಯರ್‌ಫೋನ್ ಹಾಕಿಕೊಂಡರೆ ಆ ಕಡೆಯವರು ಮಾತನಾಡುವುದುಕೇಳುತ್ತದೆ! ಇದಕ್ಕೆ ಇಯರ್ ಫೋನಿನ ಜಾಕ್ ಹಾಕುವ ಕಿಂಡಿಯೊಳಗೆ ಧೂಳು ಸೇರಿಕೊಳ್ಳುವುದೇ ಕಾರಣ! ಧೂಳು ಅಥವಾಕಸ ಇದ್ದಾಗ, ನೀವು ಆಡಿಯೋ ಜಾಕ್ ತೆಗೆದ ಮೇಲೂ, ಅದು ಇದೆ ಎಂತಲೇ ಫೋನ್ ಭಾವಿಸುತ್ತದೆ! ಅಂತಹ ಸಂದರ್ಭಗಳಲ್ಲಿ ಇಂಥ ಸಮಸ್ಯೆ ತಲೆದೋರುತ್ತದೆ!
ನಿಮ್ಮ ಫೋನ್‌ಕೆಳಗೆ ಬಿದ್ದಾಗ ಒಡೆಯದಂತೆ ರಕ್ಷಿಸಲು ಬ್ಯಾಕ್ ಕವರ್, ಫ್ಲಿಪ್ ಕವರ್ ಹಾಕಿಕೊಂಡಿರುತ್ತೀರಿ. ಕನಿಷ್ಠ ತಿಂಗಳಿಗೊಮ್ಮೆಕವರ್‌ಗಳನ್ನು ತೆಗೆದು ಅವನ್ನು, ವಾಶಿಂಗ್ ಪೌಡರ್ ಅಥವಾ ಬಟ್ಟೆ ಸೋಪಿನ ನೀರಿನಲ್ಲಿ ಒಂದರ್ಧ ಗಂಟೆ ನೆನೆಸಿ, ನಂತರ ತಿಕ್ಕಿ ತೊಳೆಯಿರಿ. ಬಟ್ಟೆಯಲ್ಲಿ ಒರೆಸಿ, ತೇವ ಆರಿಸಿ ನಂತರ ಫೋನ್‌ಗೆ ಹಾಕಿಕೊಳ್ಳಿ.
ಕ್ರಿಮಿಗಳಿಂದ ರಕ್ಷಿಸಿ
ಮೊಬೈಲ್ ಫೋನ್‌ಗಳು ಸುಲಭವಾಗಿ ಕ್ರಿಮಿಗಳು ಸೇರುವಂಥ ವಸ್ತುಗಳು. ನಾವೆಲ್ಲಾ ಎಲ್ಲೇ ಹೋದರೂ ಕೈಯಲ್ಲಿ ಮೊಬೈಲ್ ಹಿಡಿದಿರುತ್ತೇವೆ. ಇಲ್ಲವೇ ಟೇಬಲ್ ,ಕುರ್ಚಿ, ನೆಲ. ಹೀಗೆಎಲ್ಲೆಂದರಲ್ಲಿ ಮೊಬೈಲ್ ಇಡುತ್ತೇವೆ. ನಾವು ಯಾವುದಾದರೂ ವಸ್ತು ಮುಟ್ಟಿ ತಕ್ಷಣ ಮೊಬೈಲ್ ಮುಟ್ಟುತ್ತೇವೆ. ಈ ಕಾರಣ ಗಳಿಂದಾಗಿ ಮೊಬೈಲ್ ಫೋನುಗಳ ಮೇಲೆ ಬ್ಯಾಕ್ಟೀರಿಯಾ, ವೈರಸ್‌ಗಳು ಶೇಖರವಾಗುತ್ತಿರುತ್ತವೆ.
ಆ ವೈರಸ್‌ಗಳು ಮೊಬೈಲ್ ಬಳಸಿದಾಗ ನಮ್ಮಕೈಗೆ ಹರಡುತ್ತವೆ. ಈಗಂತೂ ಕೋವಿಡ್-19 ಕಾಟ ಬೇರೆ. ಹಾಗಾಗಿ ನೀವು ಹೊರ ಹೋಗಿ ಮನೆಗೆ ಬಂದ ನಂತರ, ಮೊಬೈಲ್ ಫೋನನ್ನೂ ತಪ್ಪದೇ ಸ್ಯಾನಿಟೈಸ್ ಮಾಡಿ. ಇದಕ್ಕೆ ಬೇರೇನೂ ಮಾಡಬೇಕಾಗಿಲ್ಲ. ನಿಮ್ಮ ಸ್ಯಾನಿಟೈಸರ್‌ನಲ್ಲಿ ಶೇ.70ರಷ್ಟು ಆಲ್ಕೋಹಾಲ್ ಇರುವುದರಿಂದ, ಅದನ್ನೇ ಶುಭ್ರವಾದ ಬಟ್ಟೆ ಮೇಲೆ ಒಂದೆರಡು ತೊಟ್ಟು ಚಿಮುಕಿಸಿ ಅದರಿಂದ ಫೋನನ್ನು ಒರೆಸಿ.
ಸ್ಯಾನಿಟೈಸರ್ ಬೇಗನೆ ಡ್ರೈ ಆಗುವುದರಿಂದ ಮೊಬೈಲ್ ಫೋನ್‌ಗೂ ಸುರಕ್ಷಿತ. ಫೋನಿನ ಮೇಲೆ ನೇರ ಸ್ಯಾನಿಟೈಸರ್ ಹಾಕಬೇಡಿ. ಆನ್ ಲೈನ್ ಸ್ಟೋರ್‌ಗಳಲ್ಲಿ ಬ್ಯಾಕ್ಟೋ ವಿ ಗ್ಯಾಜೆಟ್ ಇತ್ಯಾದಿ ಕ್ರಿಮಿನಾಶಕ ವೈಪ್ಸ್ ಸಿಗುತ್ತವೆ. ಅವನ್ನೂ ಬಳಸಬಹುದು.
ಉತ್ತಮ ಕ್ವಾಲಿಟಿಯ ಗ್ಲಾಸ್ ಇರಲಿ
ಮೊಬೈಲ್ ಫೋನ್‌ಗಳಿಗೆ ಸೂಕ್ತವಾದ ಕವರ್‌ಗಳನ್ನು ಹಾಕಿಕೊಳ್ಳಿ. ಅದರಷ್ಟೇ ಮುಖ್ಯವಾಗಿ ಉತ್ತಮ ಬ್ರಾಂಡಿನ ಟೆಂಪರ್ಡ್ ಗ್ಲಾಸ್ ಹಾಕಿಕೊಳ್ಳಿ.ಕೈಜಾರಿ ಮೊಬೈಲ್ ಬಿದ್ದಾಗ ಪರದೆ ಒಡೆಯುವುದನ್ನು ಟೆಂಪರ್ಡ್ ಗಾಜು ತಪ್ಪಿಸುತ್ತದೆ.100-200 ರೂ.ಗಳಿಗೆ ಸಿಗುವ ಕಳಪೆ ಗಾರ್ಡ್‌ಗಳಿಂದ ಪ್ರಯೋಜನವಿಲ್ಲ.500-600 ರೂ. ಆದರೂ ಪರವಾಗಿಲ್ಲ; ಉತ್ತಮ ಬ್ರಾಂಡಿನ (ಉದಾ: ನಿಲ್ಕಿನ್) ಟೆಂಪರ್ಡ್ ಗಾಜು ಹಾಕಿ. ಮೊಬೈಲ್ ಬಿದ್ದು ಪರದೆ ಒಡೆದರೆ, ಒರಿಜಿನಲ್ ಪರದೆ ಹಾಕಿಸಲು 4 ರಿಂದ10 ಸಾವಿರದವರೆಗೂ ಪೀಕಬೇಕಾಗುತ್ತದೆ!
ಕೆ.ಎಸ್. ಬನಶಂಕರ ಆರಾಧ್ಯ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ
ಯುವಕನಿಗೆ ಚೂರಿ ಇರಿದು ಹಲ್ಲೆಗೈದ ದುಷ್ಕರ್ಮಿಗಳು: ಸುರತ್ಕಲ್ ಪರಿಸರದಲ್ಲಿ ಬಿಗಿ ಭದ್ರತೆ
ಸಚಿವರುಗಳ ಸಹಾನುಭೂತಿ ಬೇಕಿಲ್ಲ: ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿ ವಚನ ಪಾಲಿಸಿದ್ದ ಸಿಂದಗಿಯ ಮನಗೂಳಿ ಮುತ್ಯಾ!