ಸೋಲಿನಿಂದ ಪಾರಾಗಲು ಮೈದಾನದಿಂದ ಪೇರಿ ಕಿತ್ತೆವು!

Team Udayavani, Apr 2, 2019, 6:00 AM IST

ಫೀಲ್ಡಿಂಗ್‌ಗೆ ನಿಂತಿದ್ದ ನಾವೆಲ್ಲ, ಅಲ್ಲಿದ್ದ ಬ್ಯಾಟು ಬಾಲು ಹಾಗೂ ಇತರೆ ವಸ್ತುಗಳನ್ನು ನಿಧಾನವಾಗಿ ಕೈಗೆತ್ತಿಕೊಂಡು ಮೈದಾನದಿಂದ ಓಡಲು ಶುರು ಮಾಡಿದೆವು. ಪಾಪ, ಬೌಲಿಂಗ್‌ಗೆಂದು ನಿಂತಿದ್ದ ಗೆಳೆಯನಿಗೆ ಓಡಿ ಹೋಗುವ ನಮ್ಮ ಪ್ಲಾನ್‌ ಗೊತ್ತಾಗುವಷ್ಟರಲ್ಲಿ, ಆತ ಎದುರಾಳಿ ತಂಡದವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟ!

ಇದು ನನ್ನ ಬಾಲ್ಯದಲ್ಲಿ ನಡೆದ ಘಟನೆ. ನಮ್ಮ ಬಾಲ್ಯ ಈಗಿನ ಹಾಗಿರಲಿಲ್ಲ. ಈಗಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್‌ ಒಂದೇ. ಆದರೆ ನಾವು ಕ್ರಿಕೆಟ್‌, ಮರಕೋತಿ, ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ ಆಡುತ್ತಾ ಬೆಳೆದೆವು. ಆಗ ನಾನು ಪ್ರಾಥಮಿಕ ಶಾಲೆಯಲ್ಲಿ¨ªೆ. ನಮ್ಮ ಗೆಳೆಯರ ಗುಂಪಿನಲ್ಲಿ ಎಲ್ಲರಿಗೂ ಕ್ರಿಕೆಟ್‌ ಅಚ್ಚುಮೆಚ್ಚಿನ ಆಟವಾಗಿತ್ತು. ರವಿವಾರ ಬಂತೆಂದರೆ ಸಾಕು; ಬ್ಯಾಟು ಬಾಲು ಹಿಡಿದು ಮೈದಾನಕ್ಕೆ ಇಳಿಯುತಿದ್ದೆವು. ಬೆಳಗ್ಗೆಯಿಂದ ಸಂಜೆವರೆಗೂ ಆಟ ಸಾಗುತ್ತಿತ್ತು. ಇನ್ನೇನು ರಾತ್ರಿಯೇ ಆಯ್ತು ಅನ್ನುವಾಗ ನಿಧಾನ ಮನೆ ಕಡೆಗೆ ಹೋಗುತ್ತಿದ್ದೆವು. ಲೇಟಾಗಿ ಮನೆ ಸೇರಿ ಅಪ್ಪ-ಅಮ್ಮನಿಂದ ಬೈಯಿಸಿಕೊಂಡಿದ್ದೂ ಇದೆ. ಏನೋ ಆಡುವ ಹುಡುಗರಲ್ವಾ ಅಂತ ಅವರೂ ಜಾಸ್ತಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನನ್ನಜ್ಜ ಮಾತ್ರ ಕ್ರಿಕೆಟ್‌ನ ಕಟ್ಟಾ ವಿರೋಧಿ. ಆಡುವುದಾದರೆ ಬೇರೆ ಯಾವುದಾದರೂ ಆಟ ಆಡಿ. ಚೆಂಡು- ಬ್ಯಾಟಿನ ಆಟ ಮಾತ್ರ ಬೇಡ ಅನ್ನುತ್ತಿದ್ದ. ತಲೆ, ಕಣ್ಣಿಗೇನಾದರೂ ಚೆಂಡು ಬಡಿದು ಪೆಟ್ಟಾದರೆ ಏನು ಗತಿ ಎಂಬುದು ಅಜ್ಜನ ಆತಂಕವಾಗಿತ್ತು.

ನಾವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ನಮ್ಮ ತರಗತಿಯವರೆಲ್ಲ ಸೇರಿ, ಆಂಗ್ಲ ಶಾಲೆಯೊಡನೆ ಪಂದ್ಯ ಕಟ್ಟುತಿ¨ªೆವು. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ನಾವು ದುಡ್ಡು ಕಟ್ಟಿ ಆಟ ಆಡುತಿದ್ದೆವು. ಹಾಗಂತ ನಮ್ಮದು ನೂರು-ಸಾವಿರ ರೂ. ಬೆಟ್‌ ಕಟ್ಟಿಕೊಂಡು ಆಡುವ ಆಟ ಆಗಿರಲಿಲ್ಲ. ಎಲ್ಲರೂ ದುಡ್ಡು ಸೇರಿಸಿದರೂ ಹತ್ತು ರೂಪಾಯಿ ಜಮಾವಣೆಯಾಗುವುದೇ ಕಷ್ಟವಿತ್ತು. ಕೇವಲ ಹತ್ತು ರೂಪಾಯಿಯ ಬೆಟ್‌ ಕಟ್ಟಿ, ವಿಶ್ವಕಪ್‌ ಆಡುವವರಂತೆ ಕಣಕ್ಕಿಳಿಯುತ್ತಿದ್ದೆವು. ಆ ಮೊತ್ತವೇ ಆಗ ನಮಗೆ ದೊಡ್ಡದಾಗಿ ಕಾಣುತ್ತಿತ್ತು. ಒಂದು ರೂಪಾಯಿ ಹಾಕಿ ಎರಡು ರೂಪಾಯಿ ಗೆದ್ದರೆ ಸಾವಿರ ರೂಪಾಯಿ ಗೆದ್ದಷ್ಟು ಸಂಭ್ರಮ. ಅದೇ ದುಡ್ಡಿನಿಂದ ತಂಡದವರೆಲ್ಲರೂ ಸೇರಿ ಅಂದು ಚಾಕೊಲೇಟ್‌- ಬಿಸ್ಕತ್‌ ಪಾರ್ಟಿ ಮಾಡುತ್ತಿದ್ದೆವು.

ಆದರೆ ಒಮ್ಮೆ ಹೀಗಾಯಿತು… ನಾವು ಬೇರೆ ಶಾಲೆಯ ತಂಡದೊಂದಿಗೆ ಕ್ರಿಕೆಟ್‌ ಆಡುತಿದ್ದೆವು. ಇಪ್ಪತ್ತು ರೂಪಾಯಿಯ ಬೆಟ್ಟಿಂಗ್‌ ಕಟ್ಟಿದ್ದೆವು. ಮೊದಲು ಬ್ಯಾಟ್‌ ಮಾಡಿದ ನಾವು ಕಡಿಮೆ ಮೊತ್ತ ಪೇರಿಸಿ, ಕೈ ಚೆಲ್ಲಿದೆವು. ಎದುರಾಳಿಗಳು ಬ್ಯಾಟಿಂಗ್‌ಗೆ ಇಳಿದರು. ಅವರು ನೀರು ಕುಡಿದಷ್ಟೇ ಸುಲಭವಾಗಿ ಫೋರ್‌-ಸಿಕ್ಸ್‌ ಬಾರಿಸತೊಡಗಿದರು. ಸೋಲು ಕಟ್ಟಿಟ್ಟ ಬುತ್ತಿಯೆಂದು ಆಗ ನಮಗೆ ಖಚಿತವಾಯಿತು. ಪಂದ್ಯದಲ್ಲಿ ಹಾಕಿದ ಇಪ್ಪತ್ತು ರೂಪಾಯಿ ಕೈ ಬಿಟ್ಟು ಹೋಗುತ್ತಲ್ಲಾ ಅಂತ ಭಯ, ಸಂಕಟ ಶುರುವಾಯಿತು. ಮೋಸ ಮಾಡಿಯಾದರೂ ದುಡ್ಡು ಉಳಿಸಿಕೊಳ್ಳಬೇಕು ಅಂತ ನಿರ್ಧರಿಸಿ, ಒಂದು ಉಪಾಯ ಹೂಡಿದೆವು. ಫೀಲ್ಡಿಂಗ್‌ಗೆ ನಿಂತಿದ್ದ ನಾವೆಲ್ಲ, ಅಲ್ಲಿದ್ದ ಬ್ಯಾಟು ಬಾಲು ಹಾಗೂ ಇತರೆ ವಸ್ತುಗಳನ್ನು ನಿಧಾನವಾಗಿ ಕೈಗೆತ್ತಿಕೊಂಡು ಮೈದಾನದಿಂದ ಓಡಲು ಶುರು ಮಾಡಿದೆವು. ಪಾಪ, ಬೌಲಿಂಗ್‌ಗೆಂದು ನಿಂತಿದ್ದ ಗೆಳೆಯನಿಗೆ ಓಡಿ ಹೋಗುವ ನಮ್ಮ ಪ್ಲಾನ್‌ ಗೊತ್ತಾಗುವಷ್ಟರಲ್ಲಿ, ಆತ ಎದುರಾಳಿ ತಂಡದವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟ! ಆ ಕಡೆಯ ಹನ್ನೊಂದು ಆಟಗಾರರೂ ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಹೊಡೆತ ತಿಂದಿದ್ದ ಆ ಆಸಾಮಿ ಒಂದು ವಾರದವರೆಗೂ ಶಾಲೆಯ ಕಡೆ ಮುಖ ಹಾಕಲಿಲ್ಲ. ಅವನಿಗೆಷ್ಟು ಸಿಟ್ಟು ಬಂದಿತ್ತೆಂದರೆ, ಕೊನೆಗೆ ಆತ ನಮ್ಮೊಂದಿಗೆ ಕ್ರಿಕೆಟ್‌ ಆಡುವುದಕ್ಕೆ ಸ್ವಯಂ ವಿದಾಯ ಘೋಷಿಸಿದ. ಆ ದಿನಗಳನ್ನು ನೆನೆದರೆ ಈಗಲೂ ಮೊಗದ ಮೇಲೆ ನಗು ಅರಳುತ್ತದೆ.

ಅಂಬಿ ಎಸ್‌ ಹೈಯ್ನಾಳ್‌, ಮುದನೂರ ಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ