ತಪ್ಪು ನನ್ನ ಕಣ್ಣುಗಳದ್ದಾ?

Team Udayavani, Apr 16, 2019, 6:00 AM IST

ನನ್ನ ಕಣ್ಣುಗಳೇ ನನಗೆ ಮೋಸ ಮಾಡಿದ್ದು; ನೀನಲ್ಲ. ನನ್ನ ಕಣ್ಣುಗಳಿಗೆ ನೀನು ಮೊದಲ ಬಾರಿ ಸಿಕ್ಕಾಗಲೇ ಅವು ಕುಣಿದಾಡಿದ್ದವು. ನಿನ್ನನ್ನು ಮತ್ತೆ-ಮತ್ತೆ ನೋಡಲು ಪರದಾಡುತ್ತಿದ್ದವು. ಮರೆಯಾದರೆ ಸಾಕು, ಹುಡುಕು ಅಂತ ನನಗೆ ದುಂಬಾಲು ಬೀಳುತ್ತಿದ್ದವು.

ಹುಡುಗಿ,
ನಿನ್ನ ತಪ್ಪಿಲ್ಲ ಬಿಡು. ಆಗಿದ್ದು ಆಗಿಹೋಯಿತು. ಹೃದಯಕ್ಕೆ ಬಿದ್ದಿರುವುದು ಒಂದು ಸಣ್ಣ ಗೀರು ತಾನೆ? ಕಾಲದ ಬಳಿ ಮುಲಾಮು ಇದೆ, ಅದೇ ಸವರುತ್ತದೆ. ಛತ್ರದ ಮುಂದೆ ಹೂವಲ್ಲಿ, ನಿನ್ನ ಮತ್ತು ನಿನ್ನ ಭಾವಿ ಗಂಡನ ಜೋಡಿ ಹೆಸರು ಬರೆದಿದೆಯಲ್ಲ; ಅದು ನಮ್ಮ ಪ್ರೀತಿಗೆ ಕೊನೆಯ ನೋಟಿಸ್‌. ಕೊಟ್ಟ ನೋಟೀಸಿಗೆ ಕನಿಷ್ಠ ಉತ್ತರವನ್ನೂ ಪಡೆದುಕೊಳ್ಳದಂತೆ ಹೊರಟುಬಿಡುವ ಹುಡುಗಿಯರು ಹೊರಡಿಸುವ ನೋಟೀಸು ಅದು. ಅಬ್ಬೇಪಾರಿ ಹುಡುಗ ಕೊಡುವ ಉತ್ತರ ಈ ಜಗತ್ತಿಗೆ ಬೇಕಿಲ್ಲ. ಅದಿರಲಿ ಬಿಡು.

ನೀನು ಅವತ್ತು “ಕ್ಷಮಿಸು’ ಅಂದೆ. ನಾನು ತುಸು ಹೆಚ್ಚೇ ರೇಗಾಡಿದೆ. ಪ್ರೀತಿ ಮುರಿದು ಹೋಗುವಾಗಲೂ ಹೀಗೆ ಮಾತಾಡಿಕೊಂಡೆವಲ್ಲ, ನಮ್ಮ ಪ್ರೀತಿಗೆ ಸೊಗಸಾದ ಕ್ಲೈಮ್ಯಾಕ್ಸ್ ದಕ್ಕಿದ್ದಕ್ಕೆ ಖುಷಿಯಿದೆ. “ಪ್ರೀತಿಯನ್ನೇ ನುಂಗಿದ್ದೀನಿ, ಧರಿಸಿದ್ದೀನಿ, ಅದು ಚರ್ಮದಲ್ಲಿ ಹೂತು ಹೋಗಿದೆ. ಆದರೆ, ಅದನ್ನು ಕಾರಣವಾಗಿಟ್ಟುಕೊಂಡು ಮನೆಮಂದಿ ಜಗತ್ತನ್ನು ಎದುರಿಸುವ ಧೈರ್ಯವಿಲ್ಲ’ ಅಂದಿದ್ದೆ ನೀನು. ನಾನು ಕೂಡ ಅವತ್ತು ಕಡ್ಡಿ ಮುರಿದಂತೆ ಬೇರೆಯಾಗಿಬಿಟ್ಟೆ. ನಿನ್ನನ್ನು ಮತ್ತೆ ಮತ್ತೆ ಕಾಡುವ, ಮನೆಗೆ ಬಂದು ಗಲಾಟೆ ಮಾಡುವ, ಬ್ಲಾಕ್‌ ಮೇಲ್‌ನಂಥ ಹಾಳು ಮೂಳುಗಳ ತಂಟೆಗೆ ಹೋಗಲಿಲ್ಲ. ನನಗೆ ನಿಜಕ್ಕೂ ಕೋಪ ಇದ್ದದ್ದು ನನ್ನ ಕಣ್ಣುಗಳ ಮೇಲೆ.

ನೈನೋ ಕಿ ಮತ್‌ ಮಾನಿಯೋರೆ,
ನೈನೋ ಕಿ ಮತ್‌ ಸುನಿಯೋ ರೆ, ನೈನಾ ಠಣ್‌ ಲೇಂಗೆ..
ಎಲ್ಲಕ್ಕೂ ಕಾರಣ ಈ ನನ್ನ ಕಣ್ಣುಗಳೇ! ನನ್ನ ಕಣ್ಣುಗಳೇ ನನಗೆ ಮೋಸ ಮಾಡಿದ್ದು; ನೀನಲ್ಲ. ನನ್ನ ಕಣ್ಣುಗಳಿಗೆ ನೀನು ಮೊದಲ ಬಾರಿ ಸಿಕ್ಕಾಗಲೇ ಅವು ಕುಣಿದಾಡಿದ್ದವು. ನಿನ್ನನ್ನು ಮತ್ತೆ-ಮತ್ತೆ ನೋಡಲು ಪರದಾಡುತ್ತಿದ್ದವು. ಮರೆಯಾದರೆ ಸಾಕು, ಹುಡುಕು ಅಂತ ನನಗೆ ದುಂಬಾಲು ಬೀಳುತ್ತಿದ್ದವು. ಅವುಗಳ ಕರೆಗೆ, ಆಗುವುದಿಲ್ಲ ಅನ್ನಲಾಗಲಿಲ್ಲ ನನಗೆ. ಅವುಗಳು ಹೇಳಿದಂತೆ ಕೇಳಿದೆ. ಅವುಗಳ ಹಸಿವಿಗೆ ನಿನ್ನ ಸೌಂದರ್ಯವನ್ನು ಉಣಿಸುತ್ತಾ ಹೋದೆ, ಅವು ತಿಂದು ತೇಗಿ ಹೃದಯಕ್ಕೆ ಇಳಿಸಿಬಿಟ್ಟವು.

ಹೃದಯಕ್ಕೂ ಹುಚ್ಚು ಹಿಡಿಸಿದ್ದವು. ಹೃದಯ ಎದ್ದು ಬಿದ್ದು ನಿನ್ನ ಹಿಂದೆ ಓಡತೊಡಗಿತು. ಕಣ್ಣು ಮತ್ತು ಹೃದಯಗಳು ಮುಷ್ಕರ ಹೂಡಿದಂತೆ ಒಂದೇ ಸಮನೆ ನೀನೇ ಬೇಕು ಅಂತ ಹಠ ಹಿಡಿದರೆ ನಾನಾದ್ರೂ ಏನು ಮಾಡಲಾದೀತು? ಅವತ್ತು ನಿನ್ನ ಮುಂದೆ ನಿಂತು, “ನನ್ನ ಕಣ್ಮುಂದೆ ನೀ ಸದಾ ಇರ್ಬೇಕು ಅದಕ್ಕೆ ನಿನ್ನ ಅನುಮತಿ ಬೇಕು’ ಅಂತ ಕೇಳಿದ್ದೇ, ಕೋಪಿಸಿಕೊಂಡು ಎದೆ ಮೇಲಿದ್ದ ಜಡೆಯನ್ನು ಹಿಂದಕ್ಕೆ ಬಿರುಸಾಗಿ ಎಸೆದು ಕೊಂಡು ಹೋಗಿದ್ದೆ! ಮುಖದಲ್ಲಿ ಒಂದು ಪಾವು ನಗು ಕೂಡ ಇಲ್ಲದ ಕೋಪ. ನನ್ನ ಕಣ್ಣುಗಳು ಮತ್ತು ಹೃದಯ ಸುಮ್ನೆ ಬಿಟ್ಟವಾ? ಅವು ಅದ್ಭುತ ಹಟಮಾರಿಗಳು. ಕೊನೆಗೂ ನಿನ್ನನ್ನು ಗೆಲ್ಲಿಸಿಕೊಂಡವು. ಅವತ್ತು ನೀನು ನಾಚಿ ಕೆ.ಜಿ.ಗಟ್ಟಲೆ ನಕ್ಕಿದ್ದೆ; ಒಲವಿನ ಕಡತಕ್ಕೆ ಸಹಿ ಬಿದ್ದಿತ್ತು.

ಈಗ ಕಣ್ಣುಗಳಿಗೆ ಬರೀ ಮೌನ. ಹೃದಯ ಸ್ಮಶಾನದ ಬಾಗಿಲು. ಕಣ್ಣುಗಳು ಅವಳನ್ನು ಬಯಸಿ ಬಯಸಿ ಸಂಕಟವನ್ನು ಉಣ್ಣುತ್ತಿವೆ. ಅದರ ಬುಡದಿಂದ ನೀರು ಒಸರುತ್ತದೆ. ಕಣ್ಣುಗಳು ನನಗೆ ಸಾರಿ ಕೇಳುತ್ತಿವೆ. ನಿಜಕ್ಕೂ ನನ್ನ ಕಣ್ಣುಗಳು ತಪ್ಪಿದೆಯೇ? ಉತ್ತರಿಸುವವರ್ಯಾರು?

ಸದಾಶಿವ್‌ ಸೊರಟೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಕಳೆದುಹೋದ ಭರ್ತಿಹಣವಿರುವ ಪರ್ಸ್‌ ಒಮ್ಮೆ ಸಿಕ್ಕರು ಅಷ್ಟು ಖುಷಿ ಆಗೋದಿಲ್ಲ. ಅದೇ ಹಾರಿಹೋದ ಪ್ರೀತಿ ಎಂಬ ಪಾರಿವಾಳ ಮರಳಿ ಗೂಡಿಗೆ ಬಂದಾಗ ಆಗುವ ಖುಷಿಗೆ ಪಾರವೇ...

 • ಮೂರು ದಿನದಿಂದ ನೀನು ಕಾಲೇಜಿಗೆ ಗೈರಾಗಿದ್ದೆ. ಇವತ್ತು ಬಂದರೂ ನನ್ನ ಕಡೆ ನೋಡಲಿಲ್ಲ. ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ...

 • ನೆನಪುಗಳ ಒಂಥರ ನೆರಳು ಇದ್ದಾಗೆ. ಆಗಾಗ ನಮ್ಮ ಹಿಂದೆ ತಿರುಗ್ತಾನೇ ಇರುತ್ತವೆ. ನೆನಪುಗಳ ಒಲೆ ಮುಂದೆ ಕೂತು ಕೆದಕಿದರೆ, ಕೆಲವು ಸಲ ಭೂತಕಾಲ ಬೆಚ್ಚಗಿರುತ್ತದೆ. ಇನ್ನೂ...

 • ಜೆ.ಬಿ.ಎಸ್‌. ಹಾಲ್ಡೇನ್ ಬ್ರಿಟಿಷ್‌ ಜೀವವಿಜ್ಞಾನಿ. ಹಾಲ್ಡೇನ್ ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲಿ, ಬಂಗಾಳದಲ್ಲಿ, ಅಪ್ಪಟ ಬಂಗಾಳಿಯಂತೆ ಕಳೆದರು. ಹಾಲ್ಡೇನ್...

 • ತರಬೇತಿಯ ಅವಧಿಯಲ್ಲಿ ನಮಗೆ ಸಿಗುತ್ತಿದ್ದ ಸಂಬಳ ಕಡಿಮೆಯಿತ್ತು. ಹಾಗಿದ್ದೂ ನಮ್ಮ ಜೊತೆಗಿದ್ದ ಹಲವರು ದಿನವೂ ಹೋಟೆಲ್‌ನಲ್ಲಿ ಊಟ ಮಾಡಿ ಬರುತ್ತಿದ್ದರು. ಲೆಕ್ಕ...

ಹೊಸ ಸೇರ್ಪಡೆ

 • ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದ ಅಗ್ನಿಪರೀಕ್ಷೆಯಾದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯ ನಿಗದಿಪಡಿಸಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ತಾರ್ಕಿಕ...

 • ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ...

 • ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ. 2015ನೇ...

 • ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ...

 • ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು...

 • ಸಿದ್ದಾಪುರ: ಹಾಲಾಡಿ ಪೇಟೆಯಲ್ಲಿ ಸರ್ಕಲ್‌ ನಿರ್ಮಾಣ ಮಾಡುವ ಬಗ್ಗೆ ಗ್ರಾಮ ಪಂಚಾಯತ್‌ ಸಂಪೂರ್ಣ ಬದ್ಧವಾಗಿದೆ ಎಂದು ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ...