ಮುಂದಿನ ಬಾರಿ ಜೊತೆಯಾಗಿ ಬೆಟ್ಟ ಹತ್ತೋಣ…


Team Udayavani, Jul 16, 2019, 5:35 AM IST

betta-hattona

ಮೂರು ದಿನದಿಂದ ನೀನು ಕಾಲೇಜಿಗೆ ಗೈರಾಗಿದ್ದೆ. ಇವತ್ತು ಬಂದರೂ ನನ್ನ ಕಡೆ ನೋಡಲಿಲ್ಲ. ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ ನಮ್ಮ ಸ್ನೇಹಕ್ಕೆ.

ಕ್ಷಮಿಸಿ ಬಿಡು ಹುಡುಗೀ,
ನಾನು ನಿನ್ನ ನೋವನ್ನು ಸಂಭ್ರಮಿಸಬಾರದಿತ್ತು,
ಉಳಿದವರು ವರ್ತಿಸಿದಂತೆ ನಾನೂ ನಡೆದುಕೊಂಡು ಅನರ್ಥ ಮಾಡಿಕೊಂಡೆ..
ನಡೆವವ ಎಡವುದು ಎಷ್ಟು ಸಹಜವೋ, ಅಷ್ಟೇ ಸಹಜ, ಓಡುವವ ಬೀಳುವುದು.

ಆ ಕ್ಷಣಕ್ಕೆ ನನಗೇನು ಮಂಕು ಬಡಿದಿತ್ತು? ಚಾರಣಕ್ಕೆಂದು ಹೋಗಿದ್ದೇ ತಪ್ಪಾಯಿತೆ ? ಮೊದಲು ನೀನು ಬರುವುದಿಲ್ಲ ಅಂದಿದ್ದೆ. ಆದರೂ ನಂತರ ನನ್ನ ಒತ್ತಾಯಕ್ಕೆ ಮಣಿದು ಬಂದಿ¨ªೆ. ಎಲ್ಲರೂ ಸರಸರನೆ ಬೆಟ್ಟ ಹತ್ತುವಾಗ ನೀನು ಕೊಂಚ ಹಿಂದೆ ಬಿ¨ªೆ. ಆಗಲಾದರೂ ನಿನಗಾಗಿ ನಾನು ಕಾಯಬೇಕಿತ್ತು.ಛೆ, ನನಗದು ಹೊಳೆಯಲಿಲ್ಲ. ಗುಂಪನ್ನು ಸೇರುವ ಆತುರದಲ್ಲಿ ನೀನು ಮುಗ್ಗರಿಸಿ¨ªೆ. ಸಹಪಾಠಿಗಳು ಗೇಲಿಮಾಡಿದಾಗ ಅವರೊಂದಿಗೆ ಸೇರಿ, ನಾನೂ ನಗಾಡಿಬಿಟ್ಟೆ.

ನಿನ್ನ ಸೋಲನ್ನು ಕಂಡು ಮರುಗಲಿಲ್ಲ. ಅದರಿಂದ ಮನರಂಜನೆ ಪಡೆದಿ¨ªೆ. ನಿನ್ನ ನೆರವಿಗೆ ಧಾವಿಸಿ ನಮ್ಮ ಸ್ನೇಹವನ್ನು ಮೆರೆಸುವ ಬದಲು ತೀರಾ ಸಣ್ಣತನ ತೋರಿಬಿಟ್ಟೆ. ಈಗ ನನ್ನ ತಪ್ಪಿನ ಅರಿವಾಗಿದೆ, ಇನ್ಮೆàಲೆ ಅವಿವೇಕಿ ಹಾಗೆ, ನಿನ್ನನ್ನು ನೋಯಿಸೋಲ್ಲ, ನಿನ್ನ ಮೌನ ಭರಿಸುವ ಶಕ್ತಿ ನನಗಿಲ್ಲ. ಪ್ಲೀಸ್‌, ಮೌನ ಮುರಿದು ಒಲವ ತೋರು, ಮುನಿಸು ಬೇಡ, ಮೂರು ದಿನದಿಂದ ನೀನು ಕಾಲೇಜಿಗೆ ಗೈರಾಗಿದ್ದೆ. ಇವತ್ತು ಬಂದರೂ ನನ್ನ ಕಡೆ ನೋಡಲಿಲ್ಲ.
ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ ನಮ್ಮ ಸ್ನೇಹಕ್ಕೆ, ನನ್ನ ಅಲ್ಪಬುದ್ಧಿಯಿಂದ…
ಜೀವ ನೋವ ತಾಳದಲ್ಲ, ಸುಖಶಾಂತಿ ಇನ್ನಿಲ್ಲ ಅಂತ ರಾಗ ಎಳೆದರೆ ಏನೂ ಪ್ರಯೋಜನ ಇಲ್ಲ, ಅನ್ನೋದೂ ಗೊತ್ತು, ಅದಕ್ಕೇ, ನನಗೆ ನಾನೇ ಹಾಕಿಕೊಂಡ ಶಿಕ್ಷೆ, ಮುಂದಿನ ತಿಂಗಳ ಚಾರಣದಲ್ಲಿ ನಾವಿಬ್ಬರೂ ಜೋಡಿಯಾಗಿ ಬೆಟ್ಟ ಹತ್ತುವ, ಪ್ರಾಮಿಸ್‌,
ನಾಳೆ ಜಾಗಿಂಗ್‌ ಗೆ ಬರುವೆಯಾ? ನೇರವಾಗಿ ‘ಸಾರಿ’ ಕೇಳ್ತೀನಿ, ಪ್ಲೀಸ್‌’ ಹೀಗೊಂದು ಸಂದೇಶ ಕಳಿಸಿ ಸಪ್ಪಗೆ ಕುಳಿತ.

ಹತ್ತು ನಿಮಿಷದ ನಂತರ ಮೊಬೈಲ್‌ ಬೀಪ್‌ ಬೀಪ್‌ ಸದ್ದು ಮಾಡಿತು. ಇವನು ಕುತೂಹಲದಿಂದ ಕಣ್ಣು ಹಾಯಿಸಿದ.

‘ಹಾಗಾದರೆ, ಕಾಲೇಜ್‌ ಮುಗಿಯುತ್ತಲೇ, ಚಾಟ್‌ ಸೆಂಟರ್‌ನಲ್ಲಿ ಒಂದಷ್ಟು ಹೊಟ್ಟೆಗೆ ಹಾಕ್ಕೊಂಡು, ಆಮೇಲೆ ಮಾಲ್‌ಗೆ ಹೋಗಿ ಇಬ್ಬರಿಗೂ ಒಂದೇ ಬಣ್ಣದ ಟ್ರಾಕ್‌ ಸೂಟ್‌ ತೊಗೊಳ್ಳೋಣ. ಆಯ್ಕೆ ನನ್ನದು, ಬಿಲ್‌ ಚುಕ್ತಾ ನಿನ್ನದು, ಓಕೆ ನಾ ?’

ತುಂಟ ಇಮೋಜಿಯೊಂದಿಗೆ ಬಂದ ಅವಳ ಸಂದೇಶ ಓದುತ್ತಲೇ, ಹೊಸ ಹುರುಪಿಂದ ತುಟಿಯರಳಿಸಿದ.

  • ರಾಜಿ, ಬೆಂಗಳೂರು

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.