Udayavni Special

ಆಫ್ ಬೀಟ್ ಕೋರ್ಸ್


Team Udayavani, Mar 31, 2020, 3:24 PM IST

ಆಫ್ ಬೀಟ್ ಕೋರ್ಸ್

ಓದಬೇಕು. ಅದಕ್ಕೆ ತಕ್ಕಂತ ಉದ್ಯೋಗ ಹುಡುಕಿಕೊಳ್ಳಬೇಕು. ಇದೇ ನಮ್ಮ ಈಗಿನ ತಲೆಮಾರಿನ ಗುರಿ. ಹೇಗೋ ಒಂದಷ್ಟು ಸಂಬಳ ಬಂದರೆ ಸಾಕು. ಆ ಮೂಲಕ ಬದುಕನ್ನು ಭದ್ರ ಮಾಡಿಕೊಂಡರೆ ಸಾಕು ಅನ್ನುವುದು ಅಂತರಾಳದ ಉದ್ದೇಶ. ಉದ್ಯೋಗದ ವಿಚಾರದಲ್ಲಿ ಈಗಿನ ಟ್ರೆಂಡ್‌ ಸ್ವಲ್ಪ ಬದಲಾಗಿದೆ. ಮಾಡಿದ ಕೆಲಸವನ್ನೇ ಮಾಡಬೇಕಾ? ಇನ್ನೂ ಎಷ್ಟು ದಿನ, ಎಷ್ಟು ವರ್ಷ ಅಂತ ಇದೇ ಕೆಲಸ ಮಾಡಬೇಕು ಅಂತ ಬಹಳ ಜನ ಯೋಚನೆ ಮಾಡುತ್ತಾರೆ.

ಬೇರೆ ಏನು ಮಾಡಬೇಕು ಅಂತ ತಿಳಿಯದವರು, ವೃತ್ತಿಯಿಂದ ಬಲು ಬೇಗ ನಿವೃತ್ತರಾಗುವುದೂ ಉಂಟು. ತಾವು ಮಾಡುತ್ತಿರುವ ಕೆಲಸ ತೀರಾ ಬೋರ್‌ ಹೊಡೆಸುತ್ತಿದೆ ಅನ್ನಿಸಿದಾಗ ಕೆಲವರು ಆ ಕೆಲಸ ಬಿಟ್ಟು ಇನ್ನೊಂದು ಕೆಲಸ ಹುಡುಕುತ್ತಾರೆ. ಎಷ್ಟೋ ಸಲ, ಪದವಿ ಇಲ್ಲಿ ಅಡ್ಡ ಬರೋಲ್ಲ. ಎಷ್ಟೋ ಜನ ಹವ್ಯಾಸವನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತಾರೆ.

ಹೀಗಾಗಿ, ನಮ್ಮ ದೇಶದ ಹಲವು ವಿ.ವಿ. ಗಳು ಇಂಥ ಆಫ್ಬೀಟ್‌ ಪ್ರವೃತ್ತಿಯನ್ನೇ ವೃತ್ತಿಗಳನ್ನಾಗಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವಂಥ ಕೋರ್ಸ್‌ಗಳನ್ನು ತೆರೆದಿವೆ. ಸರ್ಕಾರದಿಂದ ಮಾನ್ಯತೆ ಪಡೆದ ಎಷ್ಟೋ ಖಾಸಗಿ ಸಂಸ್ಥೆಗಳಲ್ಲೂ, ಕೋರ್ಸ್‌ ಕಂ ತರಬೇತಿಗಳು ಲಭ್ಯ. ಇಷ್ಟೂ ದಿನ ವೃತ್ತಿಪರವಾಗಿ ಕೋರ್ಸ್ ಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ನಾವು, ಈ ಸಲ ದಿ ಬೆಸ್ಟ್‌, ಆಫ್ ಬೀಟ್‌ ಕೋರ್ಸ್  ಗಳ ಬಗ್ಗೆ ನೋಡೋಣ…

ಟೀ ಟೇಸ್ಟಿಂಗ್‌ :  ಇದು ಬಹಳ ಆಸಕ್ತಿದಾಯಕ ವೃತ್ತಿ. ನಮ್ಮಲ್ಲಿ ಫೈವ್‌ಸ್ಟಾರ್‌, ತ್ರೀ ಸ್ಟಾರ್‌ ಹೋಟೆಲ್‌ಗ‌ಳು ಸಿಕ್ಕಾಪಟ್ಟೆ ಇವೆ. ಇಲ್ಲೆಲ್ಲಾ ಕುಡಿಯಲು ವೈವಿಧ್ಯಮಯ ಟೀಗಳು ಸಿಗುತ್ತವೆ. ಆದರೆ, ರುಚಿಯಲ್ಲಿ ವೈವಿಧ್ಯತೆ ಹುಟ್ಟುವುದಾದರೂ ಹೇಗೆ? ಅದು ಗೊತ್ತಾಗುವುದೇ ಟೀ ಟೇಸ್ಟರ್‌ಗಳಿಂದ. ಚಹಾದ ರುಚಿ ನೋಡಿ, ಏನು ಸಾಕು, ಏನು ಸಾಲದು ಅಂತ ಹೇಳುವುದೇ ಈ ವೃತ್ತಿ. ಇದಕ್ಕಾಗಿ ನೀವು ನಿಮ್ಮ ಮೂಗಿಗೆ ರುಚಿ ಕುಡಿಯುವ ತಾಕತ್ತು ಕಲಿಸಿರಬೇಕು. ಸಿಗರೇಟ್‌, ಆಲ್ಕೋಹಾಲ್‌ನಂಥ ಸೇವನೆಯಿಂದ ದೂರ ಇದ್ದವರು ಈ ವೃತ್ತಿಗೆ ಫಿಟ್‌. ಮುಖ್ಯವಾಗಿ, ಟೀ ಬೆಳೆಯ ಬಗ್ಗೆ ಅರಿವಿರಬೇಕು.

ಬೆಟ್ಟದ ಬುಡಗಳಲ್ಲಿ (ಉದಾಹರಣೆಗೆ- ನಮ್ಮ ಬಾಬಾ ಬುಡನ್‌ಗಿರಿ) ಬೆಳೆಯುವ ಟೀಗೆ ವಿಶಿಷ್ಟವಾದ ಘಮಲು ಇರುತ್ತದೆ. ಹಾಗೆಯೇ ಡಾರ್ಜಿಲಿಂಗ್‌ ಟೀ ಕೂಡ. ಇದಕ್ಕೆ ಕಾರಣ ಏನು, ಯಾವ್ಯಾವ ಕಾರಣಗಳಿಂದ ಚಹಾದ ಸ್ವಾದ ಇರುತ್ತದೆ ಎಂಬುದರ ಬಗ್ಗೆ ಜ್ಞಾನ ಇರಬೇಕು. ಅಂದರೆ, ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಎಲ್ಲದರ ತಿಳಿವಳಿಕೆ ಇರುತ್ತದೆ. ಇದರ ಜೊತೆಗೆ ಒಂದು ಪದವಿ ಇದ್ದರೆ, ಅದರಲ್ಲೂ ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ್ದಾದರೆ, ಈ ಹುದ್ದೆ ಪಡೆದವರಿಗೆ ಸಂಬಳ ಹೆಚ್ಚು.

ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್ ಪ್ಲಾಂಟ್‌ ಮ್ಯಾನೇಜ್‌ಮೆಂಟ್‌, ನಾರ್ತ್‌ ಬೆಂಗಾಲ್‌, ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಮೂರು ತಿಂಗಳಿಂದ ಒಂದು ವರ್ಷದ ಅವಧಿಯವರೆಗಿನ ಟೀ. ಟೇಸ್ಟಿಂಗ್‌ ಬಗ್ಗೆ ಕೋರ್ಸ್‌ಗಳು ಇವೆ.

ನಾಯಿ ಬೆಕ್ಕುಗಳ ಶೃಂಗಾರ : ಮನೆಯಲ್ಲಿರುವ ನಾಯಿ, ಬೆಕ್ಕುಗಳು ಕೇವಲ ಪ್ರೀತಿಯ ಪ್ರಾಣಿಗಳು ಮಾತ್ರವಲ್ಲ. ಅವುಗಳು ಕೂಡ ನಮ್ಮ ನಿಮ್ಮಂತೆ ಬಲು ಸುಂದರವಾಗಿ ಕಾಣಬೇಕು ಅನ್ನೋದು ಕೆಲವು ಮಾಲೀಕರ ಆಸೆ. ಇದೇನು ಪ್ರಾಣಿಗಳ ಬೇಡಿಕೆಅಲ್ಲದೇ ಇದ್ದರೂ ಪರರ ನೋಟದ ಬಲೆಗೆ ಈ ಪೆಟ್‌ ಅನಿಮಲ್‌ಗ‌ಳೂ ಬಿದ್ದಿವೆ. ಹೀಗಾಗಿ, ಪೆಟ್‌ ಅನಿಮಲ್‌ಗ‌ಳಿಗೆ ಅಲಂಕಾರ ಮಾಡುವುದು ಕೂಡ ಉದ್ಯೋಗವಾಗಿದೆ. ಮನುಷ್ಯರೆಲ್ಲ ಹೇಗೆ ತಲೆಯ ಕೂದಲು ಕಟ್‌ ಮಾಡಿಕೊಳ್ಳುತ್ತಾರೋ, ಮಹಿಳೆಯರು ಹೇಗೆ ಐಬ್ರೋ ತೀಡಿಕೊಳ್ಳುತ್ತಾರೋ, ಅದೆಲ್ಲವನ್ನೂ ತಾವು ಸಾಕಿದ ಮುದ್ದು ಪ್ರಾಣಿಗಳಿಗೂ ಮಾಡಿ ಅವುಗಳ ಚೆಂದ ನೋಡಬೇಕು ಎಂದುಆಸೆಪಡುವ ಮಾಲೀಕರೂ ಇದ್ದಾರೆ.

ಹಾಗಾಗಿ, ಪೆಟ್‌ಗಳಿಗೆ ಶೃಂಗಾರ ಮಾಡುವುದನ್ನು ಕಲಿಸುವ ಕೋರ್ಸ್  ಗಳೂ ಇವೆ. ಈ ಕೋರ್ಸ್‌ಗಳಲ್ಲಿ, ಮುದ್ದು ಪ್ರಾಣಿಗಳ ವರ್ತನೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹಾಗೆಯೇ, ಹೈಜನಿಕ್‌ ಆಗಿ ಈ ಕೆಲಸ ಮಾಡುವ ಬಗ್ಗೆಯೂ ಕೋರ್ಸ್‌ನ ಸಿಲಬಸ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ.

ಪ್ರಾಣಿಗಳ ಉಗುರು ಕತ್ತರಿಸುವುದು, ಕಣ್ಣುಗಳನ್ನು ತೀಡುವುದು ಮತ್ತು ಬಹಳ ಮುಖ್ಯವಾಗಿ, ನಾಯಿಗಳಿಗೆ ಕಟಿಂಗ್‌ ಮಾಡುವ ಮೂಲಕ ಅವುಗಳ ಒಟ್ಟಂದ ಬದಲಿಸುವುದು ಹೇಗೆ, ಅಂತೆಲ್ಲಾ ಇಲ್ಲಿ ಹೇಳಿಕೊಡುವುದುಂಟು. ಶ್ರೀ ಶಿರಡಿ ಸಾಯಿ ಇನ್‌ಸ್ಟಿಟ್ಯೂಟ್‌ನಂಥ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು, ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಚೆಂದಗೊಳಿ ಸುವುದಕ್ಕೆ ಪದವಿ ನೀಡುತ್ತಿವೆ. ಇದರಲ್ಲಿ 30 ದಿನ ದಿಂದ 180 ದಿನಗಳು ಹಾಗೂ ಒಂದು ವರ್ಷದ ಅವಧಿಯವರೆಗಿನ ಕೋರ್ಸ್‌ಗಳು ಇವೆ. ಸಾವಿರಾರು ರೂ. ಕೊಟ್ಟು ಖರೀದಿಸುವ ನಾಯಿ, ಬೆಕ್ಕು, ಪಕ್ಷಿಗಳ ನಿರ್ವಹಣೆಗೆ ಅವುಗಳ ಆರೈಕೆಯ ಕುರಿತು ಚೆನ್ನಾಗಿ ಬಲ್ಲ ಇವರುಗಳ ಸಹಾಯ ಬೇಕು. ಸಾಕು ಪ್ರಾಣಿಗಳ ಮೆಡಿಕಲ್‌ ಸ್ಟೋರನ್ನು ಕೂಡ ಇವರು ತೆರೆಯಬಹುದು. ವೆಟರ್ನಿಟಿ ಸಹಾಯಕರೂ ಆಗಬಹುದು.

ಜೆರೊಂಥಾಲಜಿ : ಇದೇನಪ್ಪಾ ಈ ಕೋರ್ಸ್‌ನ ಹೆಸರು ಹೀಗಿದೆ ಅಂತೀರಾ? ಹೌದು, ಇದೊಂದು ವಿಚಿತ್ರವಾದ ಕೋರ್ಸ್‌. ಶ್ರೀಮಂತರಿಗೆ ಹಾಗೂ ಸೇವಾ ಮನೋಭಾವದವರಿಗೆ ಮಾತ್ರ. ಹಣ ಮಾಡಲು ಇಲ್ಲಿ ಸಾಧ್ಯವಾಗದು. ಏಕೆಂದರೆ, ವಯಸ್ಸಾದಂತೆ ವೃದ್ಧರಲ್ಲಿ ಆಗುವ ಮಾನಸಿಕ, ದೈಹಿಕ ಬದಲಾವಣೆಯ ಬಗ್ಗೆ ಅಧ್ಯಯನ ಮಾಡುವುದು. ಅವರಿಗೆ ನೆರವಾಗುವುದು ಈ ಕೋರ್ಸ್‌ನ ಮೂಲ ಉದ್ದೇಶ. ಹಾಗಾಗಿ, ಆರ್ಥಿಕವಾಗಿ ಸದೃಢರಾಗಿರುವವರು, ಸೇವೆ ಮಾಡಬೇಕು ಅಂತ ಅನಿಸಿದವರು ಮಾತ್ರ ಈ ಕೋರ್ಸ್‌ ಮಾಡಬಹುದು.

ನಮ್ಮಲ್ಲಿರುವ ವೃದ್ಧಾಶ್ರಮ, ಆಸ್ಪತ್ರೆ, ಹೆಲ್ತ್‌ಕೇರ್‌ಗಳಲ್ಲಿ ವಯಸ್ಸಾದವರನ್ನು ಮುತುವರ್ಜಿಯಿಂದ ನೋಡಿಕೊಳ್ಳಲುತರಬೇತಿ ಪಡೆದವರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಾರೆ. ಟಾಟಾ ಇನ್‌ ಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಸೈನ್ಸ್‌, ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌, ಹೋಮ್‌ ಎಕನಾಮಿಕ್ಸ್‌ನಲ್ಲಿ ಈ ಕೋರ್ಸ್‌ ಉಂಟು.

ಥೆರಪಿಸ್ಟ್‌ :  ಥೆರಪಿಸ್ಟ್‌ ಅಂದರೆ ವೈದ್ಯರಲ್ಲ. ಬದಲಾಗಿ, ನಮ್ಮಲ್ಲಿ ನರ್ಸ್‌ಗಳು ಅಂತೀವಲ್ಲ. ಅದೇ ರೀತಿಯಲ್ಲಿ ಕೆಲಸಮಾಡುವ ಆಯುರ್ವೇದ ಪದ್ಧತಿಯ ನರ್ಸ್‌ಗಳು ಅಂತಲೇ ಹೇಳಬೇಕು. ಹೌದು, ಇವರಿಗೆ ಆಯುರ್ವೇದ, ಸಿದ್ಧ ಔಷಧಗಳ ಬೇಸಿಕ್‌ ಜ್ಞಾನ ಇರಬೇಕು. ಇವರನ್ನು ಸ್ಪಾ ಥೆರಪಿಸ್ಟ್‌ಗಳು ಅಂತಲೂ ಕರೆಯುತ್ತಾರೆ. ಇದೀಗ ಸ್ಪಾ ಕ್ಷೇತ್ರ ಆಯುರ್ವೇದದ ವಿಸ್ತರಣಾ ರೂಪದಂತೆ ಆಗಿದೆ. ಆಲಸ್ಯ ದೇಹಕ್ಕೆ ಚಿಕಿತ್ಸೆ ಕೊಡುವ ನಮ್ಮ ಪ್ರಾಚೀನ ವಿಧಾನವೇ ಸ್ಪಾ.  ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಸ್ಪಾ ಥೆರಪಿಸ್ಟ್‌ಗಳು ಆಗಬಹುದು. ಥೆರಪಿಸ್ಟ್‌ ಗಳು ಸ್ಪಾ ಬಗ್ಗೆ ಮಾಹಿತಿ ಕೊಡುವುದು, ಪ್ರಾಡಕ್ಟ್ಗಳು ಏತಕ್ಕೆ ಬಳಕೆಯಾಗುತ್ತವೆ? ಅದರ ಪರಿಣಾಮ ಏನಾಗುತ್ತದೆ ಎಂದು ವಿವರಿಸಿ, ಗ್ರಾಹಕರನ್ನು ಸೆಳೆಯುವ ಮಾರ್ಕೆಟಿಂಗ್‌ ಕೆಲಸ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಕ್ಮೆ ಅಕಾಡೆಮಿಯಲ್ಲಿ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳು ಇವೆ.

 

-ಗುರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಭಕ್ತರಿಗೆ ಅವಕಾಶ: ಕೋಟ

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಒತ್ತಡದಲ್ಲಿವೆ ಚಿಲಿ ಆಸ್ಪತ್ರೆಗಳು : 70 ಸಾವಿರ ಮಂದಿ ಸೋಂಕು ಪೀಡಿತರು

ಒತ್ತಡದಲ್ಲಿವೆ ಚಿಲಿ ಆಸ್ಪತ್ರೆಗಳು : 70 ಸಾವಿರ ಮಂದಿ ಸೋಂಕು ಪೀಡಿತರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

duty episode

ಮೊದಲ ದಿನದ ಡ್ಯೂಟಿ ಪ್ರಸಂಗ

kot taraha

ಕೈ ಬರಹ ಕೋಟಿ ತರಹ…

lov adjust

ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್‌ ಮಾಡ್ಕೋ…

lati-hidi

ಲಾಠಿ ಹಿಡಿವ ಬದಲು ಬೆತ್ತ ಹಿಡಿದೆ..!

shale-jail

ಶಾಲೆಯೆಂದರೆ ಅದೊಂದು ಜೈಲು ಅನಿಸುತ್ತಿತ್ತು!

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

Dead-730

ಹಿಂಡಲಗಾ ಕಾರಾಗೃಹದಲ್ಲಿ ಖೈದಿ ಸಾವು

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.