ಇಲ್ಲವ್ನೇ ಹರಿಶ್ಚಂದ್ರ

ಸೇವೆಯೆ ನನ್ನ ತಾಯಿ ತಂದೆ

Team Udayavani, Sep 24, 2019, 5:00 AM IST

ಸ್ಮಶಾನ ಅಂದ ಕೂಡಲೇ ಆ ಕಡಗೆ ತಿರುಗಿ ನೋಡುವುದಕ್ಕೂ ಹಿಂದೇಟು ಹಾಕುವ ಜನರಿದ್ದಾರೆ. ಹೀಗಿರುವಾಗ, ಎಲ್ಲಾ ಸಮುದಾಯದ ಸ್ಮಶಾನಗಳನ್ನೂ ಸ್ವಂತ ಖರ್ಚಿನಲ್ಲಿ ಸ್ವತ್ಛಗೊಳಿಸುವ ಕಾಯಕ ಜೀವಿಯೊಬ್ಬರ ಈ ಕಥನ ಎಲ್ಲರೂ ಓದಬೇಕಾದದ್ದು…

ಸ್ಮಶಾನ ಎಂದರೆ ಎಲ್ಲರೂ ಒಂದು ಮಾರು ದೂರ ನಿಲ್ಲುತ್ತಾರೆ. ಅಲ್ಲಿಗೆ ಹೋದರೆ ಏನಾಗುತ್ತದೋ ಅನ್ನೋ ಭಾವ. ಸಾವು ಎದುರಾದಾಗ ಮಾತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅಲ್ಲಿಗೆ ಹೋಗಿ ಬರುತ್ತಾರೆ. ಯಾರಿಗೂ ಕೂಡ ಸ್ಮಶಾನ ಅಂದರೆ, ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲದ ಮನಃಸ್ಥಿತಿ. ಎಲ್ಲರೂ ಹೀಗೆ ಇದ್ದು ಬಿಟ್ಟರೆ, ಸ್ಮಶಾನದ ಸ್ವತ್ಛತೆ ಕಾಪಾಡುವುದಾದರೂ ಹೇಗೆ?

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಅಡಿವೆಪ್ಪ ಕುರಿಯವರ ಈ ರೀತಿ ಯೋಚಿಸಲಿಲ್ಲ. ಬದಲಾಗಿ ಪೊರಕೆ ಹಿಡಿದು ಸ್ಮಶಾನಕ್ಕೆ ನುಗ್ಗಿದರು. ಸ್ಮಶಾನ ಸ್ವತ್ಛ ಗೊಳಿಸುವುದು ಇವರ ಸಮಾಜ ಸೇವೆಯ ಒಂದು ಭಾಗ. ಇದಕ್ಕಾಗಿ ಕವಿರತ್ನ ಕಾಳಿದಾಸ ಸಂಘ ಸ್ಥಾಪನೆ ಮಾಡಿದ್ದಾರೆ. ಒಂದಷ್ಟು ಜನರನ್ನು ಗುಡ್ಡೆ ಹಾಕಿಕೊಂಡು, ಸ್ಮಶಾನ ಸ್ವತ್ಛತೆಯ ಕೆಲಸ ಮಾಡುತ್ತಿದ್ದಾರೆ. ಸುಮಾರು 3 ವರ್ಷಗಳಿಂದ, ಹೆಚ್ಚು ಕಮ್ಮಿ ಆರೇಳು ಸ್ಮಶಾನಗಳನ್ನು ಶುಚಿ ಗೊಳಿಸಿದ ಸಾರ್ಥಕತೆ ಇವರಿಗಿದೆ.

ಶುರುವಾದದ್ದು
ಯಾವುದೇ ಸಮುದಾಯದವರೇ ಆದರೂ ಅವರ ಅಂತ್ಯ ಸಂಸ್ಕಾರಕ್ಕೆ ಹೋಗುವುದು ಅಡಿವೆಪ್ಪ ಅವರಿಗೆ ರೂಢಿ. ಮೂರು ವರ್ಷಗಳ ಹಿಂದೆ ಕ್ರಿಶ್ಚಿಯನ್‌ ಸ್ನೇಹಿತರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿ ಶವವನ್ನು ಹೂಳಲು ಒಂದಿಷ್ಟು ಜಾಗವಿರಲಿಲ್ಲ. ಎಲ್ಲಾ ಕಡೆ ಕಲ್ಲು-ಮುಳ್ಳು-ಕಸ ಬೆಳೆದಿತ್ತು. ಶವ ಹೂಳಲು ಜಾಗಕ್ಕಾಗಿ ಪರದಾಡುವುದನ್ನು ನೋಡಿ ಅಡಿವೆಪ್ಪನವರ ಮನಸ್ಸು ಹಿಂಡಿದಂತಾಯಿತು. ಅಂತಿಮವಾಗಿ ಒಂದು ಮೂಲೆಯಲ್ಲಿ ಶವವನ್ನು ಹೂತು ಸಮಾಧಿ ಮಾಡಿದರೂ, ಅವರ ಒದ್ದಾಟ ಇವರ ಮನಸ್ಸಲ್ಲಿ ನೆಲೆಯಾಯಿತು. ಈ ಘಟನೆ ಅಡಿವೆಪ್ಪರನ್ನು ಇನ್ನಿಲ್ಲದಂತೆ ಕಾಡಿತು. ಮನೆಗೆ ಬಂದವರೇ, ಸಮಾನ ಮನಸ್ಕರರೊಂದಿಗೆ ಸ್ಮಶಾನದ ವಿಚಾರ ಕುರಿತು ಚರ್ಚಿಸಿದರು. ಮರುದಿನ ಹತ್ತರಿಂದ-ಹದಿನೈದು ಜನರನ್ನು ಕಟ್ಟಿಕೊಂಡು ಆ ಕ್ರಿಶ್ಚಿಯನ್‌ ಸ್ಮಶಾನವನ್ನು ಸ್ವತ್ಛಗೊಳಿಸಿದರು. ಆ ಜಾಗದಲ್ಲಿ ತುಂಬು ಹುಲುಸಾಗಿ ಬೆಳೆದಿದ್ದ ಬಳ್ಳಾರಿ ಜಾಲಿ, ನಾಯಿಗಿಡ, ಪಾಥೆìನಿಯಂ ಗಿಡಗಳನ್ನು ಕಿತ್ತು ಹಾಕಿ ಸ್ವತ್ಛ ಮಾಡಿದರು. ಈ ಕೆಲಸದ ನಂತರ ಇವರ ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಈ ಕೆಲಸದಲ್ಲಿ ಭಾಗಿಯಾದ ಸಮಾನ ಮನಸ್ಕರಿಗೆ, ಒಂದಿಷ್ಟು ಹಣವನ್ನು ತಮ್ಮ ಜೇಬಿನಿಂದ ಎತ್ತಿಟ್ಟರು. ಆನಂತರ ಶುರುವಾದದ್ದೇ ಕವಿರತ್ನ ಕಾಳಿದಾಸ ಸಂಘ. ಅದರಲ್ಲಿ ಗ್ರಾಮದ ನಾಗರಾಜ ಆನ್ವೇರಿ,ಮಾಲತೇಶ ಕುರಿಯವರ,ಮಂಜಪ್ಪ ಎಲಿ,ತಿಪ್ಪಣ್ಣ ಕುರಿಯವರ, ಶೇಖರಪ್ಪ ಹರಮಗಟ್ಟಿ,ಶೇಖಪ್ಪ ಕಾಟೇನಹಳ್ಳಿ,ಚಂದ್ರು ಬೇವಿನಮರದ, ನೀಲಕಂಠಪ್ಪ ಆಡೂರು ಮುಂತಾದವರು ಇದ್ದಾರೆ. ಇವರೆಲ್ಲ ಸೇರಿಕೊಂಡು, ವರ್ಷಕ್ಕೆ ಒಂದರಂತೆ ಸ್ಮಶಾನಗಳನ್ನು ಹುಡುಕಿ ಶುಚಿ ಮಾಡುತ್ತಾ ಬರುತ್ತಿದ್ದಾರೆ.

ಸಹೋದರತ್ವ-ಭಾತೃತ್ವ-ಸಮನ್ವಯತೆ ಮರೆಯಾಗಿರುವ ಈ ಕಾಲಘಟ್ಟದಲ್ಲಿ, ಮುಸ್ಲಿಂ ಸಮುದಾಯಯದ ಖಬರಸ್ಥಾನವನ್ನು ಸ್ವತ್ಛಗೊಳಿಸುವ ಕಾರ್ಯವನ್ನೂ ಈ ತಂಡ ಮಾಡಿದೆ. ಗೋರಿಯ ಸುತ್ತ-ಮುತ್ತ ಬೆಳೆದಿರುವ ಜಾಲಿಮುಳ್ಳು,ಪಾರ್ಥೇನಿಯಂ ಇನ್ನಿತರ ಕಸವನ್ನು ಸ್ವತ್ಛಗೊಳಿಸಿ,ಆ ಸ್ಥಳವನ್ನು ಹಸನ ಮಾಡಿ ಬಂದಿದ್ದಾರೆ. ಇವರ ಸೇವೆ ಪರಿಸರಕ್ಕೂ ವ್ಯಾಪಿಸಿದೆ. ಮೋಟೆ ಬೆನ್ನೂರಿನಲ್ಲಿ ಹಾದು ಹೋಗಿರುವ ಗಜೇಂದ್ರಗಡ ಮತ್ತು ಸೊರಬ ರಸ್ತೆಯ ರಸ್ತೆ ವಿಭಜಕದಲ್ಲಿ ಬೆಳೆದು ನಿಂತಿದ್ದ ಹುಲ್ಲು ಕಸಕಡ್ಡಿಗಳನ್ನು ತಮ್ಮ ಸ್ವಂತ ಹಣದಲ್ಲಿ ಸ್ವತ್ಛಗೊಳಿಸಿದ್ದಾರೆ. ಅಲ್ಲದೆ, ಸರಕಾರಿ ಶಾಲೆಗಳ ಬಗೆಗೆ ಬಹಳಷ್ಟು ಅಭಿಮಾನ ಹೊಂದಿರುವ ಇವರು, ಮೋಟೆಬೆನ್ನೂರಿನ ಸರಕಾರಿ ಹೆಣ್ಣುಮಕ್ಕಳ ಶಾಲೆ, ಕನ್ನಡ ಗಂಡು ಮಕ್ಕಳ ಶಾಲೆ,ಮೈಲಾರ ಮಹದೇವಪ್ಪ ಪ್ರೌಢಶಾಲೆ ಮತ್ತು ಹುತಾತ್ಮ ಮೈಲಾರ ಮಹದೇವಪ್ಪ ಮತ್ತು ಖ್ಯಾತ ಸಾಹಿತಿ ಮಹದೇವರವರ ಸ್ಮಾರಕ ನಿರ್ಮಾಣಕ್ಕೆಲ್ಲಾ ತಮ್ಮ ಸಂಘದಿಂದ ಹಣ ನೀಡಿ, ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ರೀತಿ ಇದ್ದಾರೆ.

ಮಲ್ಲಪ್ಪ . ಫ‌ ಕರೇಣ್ಣನವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ

  • ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಕೆ ತೋಟಗಳಲ್ಲಿ ಫ‌ಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ,...

  • ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗಬಹುದು. "ಮುಂಜಾಗ್ರತೆ ವಹಿಸಿದ್ದೆವು. ಆದರೂ...

  • ಕೃಷಿ ಮೇಲಿನ ಪ್ರೀತಿಯಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿದ ಪರಮೇಶ್ವರನ್‌ ಇಂದು ಪೂರ್ಣ ಪ್ರಮಾಣದ ಕೃಷಿಕ. ಅಷ್ಟೇ ಅಲ್ಲ, ಅವರು ಸೀಡ್‌ ಬ್ಯಾಂಕ್‌ ಸ್ಥಾಪನೆ ಮಾಡಿರುವುದಲ್ಲದೆ,...

  • ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡುವವರು ವಿರಳ. ಕಲ್ಲುಮಣ್ಣುಗಳಿಂದ ಕೂಡಿದ ಜಾಗದಲ್ಲಿ ಬೆಳೆ ತೆಗೆಯುತ್ತೇನೆಂದು ಹೊರಟಾಗ ಅನೇಕರು ಆಡಿಕೊಂಡಿದ್ದರು. ಆದರೆ...

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...