ಮಧ್ಯರಾತ್ರಿ ಮೂರು ಗಂಟೇಲಿ ಸ್ನಾನಕ್ಕೆ ಓಡಿದ


Team Udayavani, Jan 1, 2019, 12:30 AM IST

6.jpg

ಗಡಿಬಿಡಿಯಿಂದಲೇ ಎದ್ದ ಸಚಿನ್‌, ಆಗಲೇ ಆರು ಗಂಟೆ ಆಗೋಯೆನೋ? ಎಂದು ಪ್ರಶ್ನೆ ಹಾಕಿದ. ನಾನು ಉತ್ತರಿಸುವ ಮೊದಲೇ, ಸೋಪು, ಬಟ್ಟೆ, ಬ್ರಷ್‌ ತಗೊಂಡು ಸ್ನಾನದ ಮನೆಗೆ ಹೋಗೇಬಿಟ್ಟೆ

ನಾನು ಬಹುಪಾಲು ಶಿಕ್ಷಣ ಪೂರೈಸಿದ್ದು ಹಾಸ್ಟೆಲ್‌ನಲ್ಲಿದ್ದುಕೊಂಡೇ. ತಂದೆ-ತಾಯಿಯನ್ನು ಯಾವತ್ತೂ ಬಿಟ್ಟಿರದಿದ್ದ ನನಗೆ ಹೊಸತರಲ್ಲಿ ಹಾಸ್ಟೆಲ್‌ ವಾಸ ಬಹಳ ಕಷ್ಟವೆನಿಸಿತ್ತು. ದಿನಗಳು ಕಳೆದಂತೆ ಅದೇ ನನ್ನ ತವರುಮನೆಯಾಗಿಬಿಟ್ಟಿತು. ಹಾಸ್ಟೆಲ್‌ನಲ್ಲಿದ್ದರೆ ಚೆನ್ನಾಗಿ ಓದುತ್ತಾನೆ ಎನ್ನುವುದಕ್ಕಿಂತ, ಮನೆಯಲ್ಲಿ ನಾನು ಮಾಡುತ್ತಿದ್ದ ಕೀಟಲೆಗಳನ್ನು ತಾಳಲಾರದೇ ಹಾಸ್ಟೆಲ್‌ಗೆ ಸೇರಿಸಿದ್ದರು. ವಿಪರ್ಯಾಸ ನೋಡಿ, ನನ್ನ ತರಲೆ ತುಂಟಾಟಗಳಿಗೆ ಹೆಚ್ಚು ಅವಕಾಶ, ಪ್ರೋತ್ಸಾಹ ಸಿಕ್ಕಿದ್ದು ಹಾಸ್ಟೆಲ್‌ನಲ್ಲಿಯೇ.  ಹಾಸ್ಟೆಲ್‌ ಎಂದ ಮೇಲೆ ಅಲ್ಲಿ ಬೇರೆ ಬೇರೆ ಊರಿನಿಂದ ಬಂದ, ವಿವಿಧ ಸ್ವಭಾವದ ವಿದ್ಯಾರ್ಥಿಗಳೊಡನೆ ಏಗಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಎಲ್ಲರೂ ಒಟ್ಟಿಗೇ ಇರಬೇಕಾಗುತ್ತದೆ. ವಸತಿ ನಿಲಯದ ಇನ್ನೊಂದು ಪಡಿಪಾಟಲೆಂದರೆ ಅಲ್ಲಿ ಎಲ್ಲದ್ದಕ್ಕೂ ಕ್ಯೂ ನಿಲ್ಲಬೇಕಾಗುತ್ತದೆ. ಊಟ-ತಿಂಡಿಗೆ, ಶೌಚಕ್ಕೆ, ಸ್ನಾನಕ್ಕೆ ಎಲ್ಲದಕ್ಕೂ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಸ್ನಾನಕ್ಕೆ ಬಿಸಿ ಬಿಸಿ ನೀರು ಬೇಕಾದರೆ ಬೆಳಗ್ಗೆ ಬೇಗ ಏಳಬೇಕಿತ್ತು. ಇಲ್ಲದಿದ್ದರೆ ಬಿಸಿನೀರು ಸಿಗುತ್ತಿರಲಿಲ್ಲ. ಹಾಗಾಗಿ, ಎದ್ದ ತಕ್ಷಣ ಸೊಂಟಕ್ಕೆ ಟವಲ್‌ ಸುತ್ತಿಕೊಂಡು, ಬಕೆಟ್‌ ಹಿಡಿದು ಬಾತ್‌ರೂಮ್‌ಗೆ ಓಡುವುದೇ ನಮ್ಮ ದಿನಚರಿಯಾಗಿತ್ತು. ರೂಮಿನಲ್ಲಿ ಯಾರು ಬೇಗ ಏಳುತ್ತಾರೋ, ಅವರು ಉಳಿದವರನ್ನೂ ಸ್ನಾನಕ್ಕೆ ಎಬ್ಬಿಸುತ್ತಿದ್ದರು. 

 ನನ್ನ ಗೆಳೆಯ ಸಚಿನ್‌ಗೆ ದಿನವೂ ಲೇಟಾಗಿ ಎದ್ದು ಅಭ್ಯಾಸ. ನಮ್ಮಲ್ಲೇ ಯಾರಾದರೊಬ್ಬರು ದಿನವೂ ಅವನನ್ನು ಎಬ್ಬಿಸುತ್ತಿದ್ದೆವು. ಹಾಗಾಗಿ ಅವನಿಗೆ ತಮಾಷೆ ಮಾಡಬೇಕೆಂದು ನಾನೊಂದು ಉಪಾಯ ಹೂಡಿದೆ. ಒಂದು ದಿನ ರಾತ್ರಿ ಎರಡು ಗಂಟೆಗೇ ಎದ್ದು, ಸೊಂಟಕ್ಕೆ ಟವಲ… ಸುತ್ತಿಕೊಂಡು, ಕೈಯಲ್ಲಿ ಬಕೆಟ್‌ ಹಿಡಿದು, ಮಲಗಿದ್ದ ಸಚಿನನ್ನು ಎಬ್ಬಿಸಿದೆ. “ಏಳ್ಳೋ ಟೈಮಾಯ್ತು. ಸ್ನಾನಕ್ಕೆ ಹೋಗು’ ಎಂದು ದುಂಬಾಲು ಬಿದ್ದೆ. ಅವನು -ಬೆಳಗ್ಗೆ ಆರು ಗಂಟೆ ಆಯೆ¤àನೋ ಎನ್ನುತ್ತಾ ಗಡಿಬಿಡಿಯಲ್ಲಿ ಎದ್ದು, ಸ್ನಾನಕ್ಕೆ ಹೊರಟ. ಸ್ನಾನದ ಕೋಣೆಗೆ ಹೋದವನೇ ನಿದ್ದೆಗಣ್ಣಲ್ಲೇ ಹಲ್ಲುಜ್ಜಲು ಶುರು ಮಾಡಿದ. ನಾನು ಕೂಡ ಬಾತ್‌ರೂಮ್‌ಗೆ ಹೋದವನಂತೆ ನಟಿಸಿ, ಹೊರಗಡೆ ನಿಂತು ಮಜಾ ತೆಗೆದುಕೊಳ್ಳುತ್ತಿದ್ದೆ. ಈ ನಾಟಕ ನೋಡಲೆಂದೇ ಎದ್ದಿದ್ದ ಹುಡುಗರು ಅವನನ್ನು ನೋಡಿ ಮುಸಿಮುಸಿ ನಗತೊಡಗಿದರು. ಆದರೆ, ಪಾಪ ಅವನಿಗೆ ಇದ್ಯಾವುದರ ಪರಿವೆಯೇ ಇಲ್ಲದೆ, ಸ್ನಾನ ಮಾಡಲು ಅಣಿಯಾಗಿದ್ದ. ಅಷ್ಟರಲ್ಲಿ,  ಹಾಸ್ಟೆಲ್‌ ಒಳಗೆ ಸದ್ದುಗದ್ದಲ ನಡೆಯುತ್ತಿರುವುದನ್ನು ಕೇಳಿಸಿಕೊಂಡ ವಾಚಮನ್‌ ಏನೆಂದು ನೋಡಲು ಒಳಗೆ ಬಂದರು. ಆಗಲೇ ಸಚಿನ್‌ಗೆ ತಾನು ಬೇಸ್ತು ಬಿದ್ದ ವಿಚಾರ ಗೊತ್ತಾಗಿದ್ದು. ವಾಚ್‌ಮನ್‌ ನಮಗೆಲ್ಲ ಬೈದು, ಅಲ್ಲಿಂದ ಕಳಿಸಿದರು. ಸಚಿನ್‌ ಕೂಡ ನನ್ನ ಮೇಲೆ ರೇಗಿದನಾದರೂ, ನಂತರ ತನ್ನ ದಡ್ಡತನಕ್ಕೆ ತಾನೇ ಶಪಿಸಿಕೊಳ್ಳುತ್ತಾ, ಪೆಚ್ಚುಮೋರೆ ಹಾಕಿಕೊಂಡೇ ಸವಿನಿದ್ದೆಗೆ ಜಾರಿದ. 

ಅಂಬಿ ಎಸ್‌.ಹೈಯ್ನಾಳ್‌, ಮುದನೂರ ಕೆ

ಟಾಪ್ ನ್ಯೂಸ್

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.