ಕಾರ್ಡ್‌ ಎಸ್ಕೇಪ್‌

Team Udayavani, Jun 20, 2019, 5:00 AM IST

ಜಾದೂಗಾರ, ಪ್ರೇಕ್ಷಕರಿಂದ ಒಂದು ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ಪಂಚಿಂಗ್‌ ಮೆಶಿನ್‌ ಸಹಾಯದಿಂದ ಒಂದು ತೂತನ್ನು ಮಾಡುತ್ತಾನೆ. ಹಾಗೆಯೇ ತನ್ನಲ್ಲಿರುವ ಒಂದು ಚಿಕ್ಕ ಕವರಿಗೂ ಕೂಡ ಮಧ್ಯಭಾಗದಲ್ಲಿ ಒಂದು ತೂತನ್ನು ಮಾಡುತ್ತಾನೆ. ವಿಸಿಟಿಂಗ್‌ ಕಾರ್ಡನ್ನು ಕವರಿನಲ್ಲಿಟ್ಟು ಕವರನ್ನು ಅಂಟಿಸುತ್ತಾನೆ. ನಂತರ ಒಂದು ದಾರವನ್ನು ಕವರ್‌ ಮತ್ತು ಕಾರ್ಡಿನ ತೂತಿನಿಂದ ಪೋಣಿಸುತ್ತಾನೆ. ನಂತರ ದಾರದ ತುದಿಗಳನ್ನು ಇಬ್ಬರು ಸಹಾಯಕರಿಗೆ ಕೊಟ್ಟು ಎಳೆದಾಗ ವಿಸಿಟಿಂಗ್‌ ಕಾರ್ಡ್‌ ಹರಿಯದೆ ದಾರದಿಂದ ಹೊರ ಬರುತ್ತದೆ.

ತಂತ್ರ:
ಚಿತ್ರವನ್ನು ಸರಿಯಾಗಿ ಗಮನಿಸಿ. ಕವರಿನ ಇನ್ನೊಂದು ತುದಿಯನ್ನು ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಕವರಿನಲ್ಲಿ ಕಾರ್ಡನ್ನು ಹಾಕುವಾಗ ಅದರ ಅರ್ಧದಷ್ಟು ಭಾಗ ಹೊರಬಂದಿರಬೇಕು. ಈ ಭಾಗವನ್ನು ಪ್ರೇಕ್ಷಕರಿಗೆ ಕಾಣಿಸದಂತೆ ನಿಮ್ಮ ಕೈನಿಂದ ಮುಚ್ಚಿಕೊಳ್ಳಿ. ಕವರಿನ ಬಾಯಿಯನ್ನು ಅಂಟಿಸಿ. ಈಗ ಒಂದು ದಾರವನ್ನು ಕವರಿನ ಮೇಲೆ ಮಾಡಿದ ತೂತುಗಳ ಮುಖಾಂತರ ಪೋಣಿಸಿ. ದಾರವು ಕಾರ್ಡಿನ ತೂತಿನ ಮೂಲಕ ಹೋಗದೆ ಬರೀ ಕವರಿನ ತೂತಿನ ಮುಖಾಂತರ ಹೊರಬರುತ್ತದೆ. ಕಾರ್ಡನ್ನು ಯಾರಿಗೂ ತಿಳಿಯದಂತೆ ಒಳಗೆ ತಳ್ಳಿ. ಇಬ್ಬರು ಸಹಾಯಕರನ್ನು ಕರೆದು ದಾರದ ಒಂದೊಂದು ತುದಿಯನ್ನು ಸಡಿಲವಾಗಿ ಹಿಡಿಯಲು ಹೇಳಿ. ಕವರಿನ ಮೊದಲೇ ಕತ್ತರಿಸಿದ್ದ ತುದಿಯನ್ನು ಹರಿದು ಕಾರ್ಡನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಡಿದುಕೊಂಡು ದಾರವನ್ನು ಎಳೆಯಲು ಹೇಳಿ. ಅವರು ಎಳೆಯುತ್ತಿದ್ದಂತೆ ಕಾರ್ಡನ್ನು ಒಮ್ಮೆಲೆ ಹೊರಗೆ ಎಳೆಯಿರಿ. ಕಾರ್ಡು ಹರಿಯದೆ ದಾರದ ಮೂಲಕ ಹೊರಬಂದಿದ್ದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಪಡುತ್ತಾರೆ.

ಉದಯ್‌ ಜಾದೂಗಾರ್‌


ಈ ವಿಭಾಗದಿಂದ ಇನ್ನಷ್ಟು

  • ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...

  • ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...

  • ತಿಂಗಳುಗಳಿಂದ ಬಲಿಜ ಪಕ್ಷಿ ಶೇಖರಿಸಿದ್ದ ಆಹಾರ ಮಳೆ- ಗಾಳಿಗೆ ಮಣ್ಣು ಸೇರಿತು. ಅದರಿಂದ ಒಳ್ಳೆಯದೇ ಆಗಿತ್ತು! ಆನಂದವನ ಎಂಬ ಕಾನನವು ಹಸಿರು ಮರಗಳಿಂದ ಕೂಡಿತ್ತು....

  • ಒಂದಾನೊಂದು ಊರಿನಲ್ಲಿ ಬಸವಯ್ಯ ಎಂಬ ಯುವಕ ವಾಸಿಸುತ್ತಿದ್ದನು. ಅವನು ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ....

  • ಸೀಯಾಳಿಗೆ ತನ್ನ ಮನೆಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಬರುತ್ತಿದ್ದ ಸಾಕವ್ವನನ್ನು ಕಂಡರೆ ತುಂಬಾ ಅಕ್ಕರೆ. ಒಂದು ದಿನ ಸೀಯಾಳಿಗೆ ಸಾಕವ್ವ ಓದಲು ಬರೆಯಲು ಕಲಿತರೆ...

ಹೊಸ ಸೇರ್ಪಡೆ