ಎಂಥ ಛಾನ್ಸ್‌ ಮಾರ್ರೇ…

Team Udayavani, Jan 15, 2020, 5:15 AM IST

ಈ ಬಾರಿಯ ಕ್ರಿಸ್‌ಮಸ್‌ನಲ್ಲಿ ನೀವು ಸೀಕ್ರೆಟ್‌ ಸಾಂತಾ ಆಡಿದ್ರಾ? ಅದೇ, ರಹಸ್ಯವಾಗಿ ಇನ್ನೊಬ್ಬರಿಗೆ ಗಿಫ್ಟ್ ಕೊಡುತ್ತಾರಲ್ಲ; ಆ ಆಟ. ಅನಾಮಿಕವಾಗಿ ಯಾರಿಗೋ ಗಿಫ್ಟ್ ಕೊಡುವುದು, ಪಡೆಯುವುದು ಎಷ್ಟೊಂದು ಸುಂದರ ಪರಿಕಲ್ಪನೆ ಅಲ್ವಾ? ಆನ್‌ಲೈನ್‌ನಲ್ಲಿಯೂ (ರೆಡ್‌ಇಟ್‌ಗಿಫ್ಟ್$Õ ಸೀಕ್ರೆಟ್‌ ಸಾಂತ ಎಕ್ಸ್‌ಚೇಂಜ್‌) ಈ ಆಟ ಆಡುತ್ತಾರೆ. ವಿಶೇಷ ಅಂದ್ರೆ, ಇದರಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ಕೂಡಾ ಭಾಗವಹಿಸುತ್ತಾರೆ.

ಜಗತ್ತಿನ ಶ್ರೀಮಂತ ವ್ಯಕ್ತಿಯಿಂದ ಉಡುಗೊರೆ ಪಡೆಯಬೇಕು ಅನ್ನೋ ಆಸೆ ಯಾರಿಗಿಲ್ಲ ಹೇಳಿ? ಅದೇ ಆಸೆಯಿಂದ ಪ್ರತಿ ವರ್ಷವೂ, ಅದೆಷ್ಟೋ ಜನ ಗಿಫ್ಟ್ ಎಕ್ಸ್‌ಚೇಂಜ್‌ನಲ್ಲಿ ಭಾಗವಹಿಸುತ್ತಾರೆ. ಆದ್ರೆ, ವರ್ಷಕ್ಕೊಬ್ಬರಿಗೆ ಮಾತ್ರ ಆ ಅದೃಷ್ಟ ಒಲಿಯೋದು. ಈ ವರ್ಷದ ಅದೃಷ್ಟಶಾಲಿ ಹೆಸರು, ಶೆಲ್ಬಿ. ಅಮೆರಿಕದ 37 ವರ್ಷದ ಈ ಮಹಿಳೆಗೆ, ಬಿಲ್‌ ಗೇಟ್ಸ್‌ನಿಂದ 37 ಕೆ.ಜಿ. ತೂಕದ ಉಡುಗೊರೆಗಳು ಸಿಕ್ಕಿವೆ. ತನ್ನ “ಸೀಕ್ರೆಟ್‌ ಸಾಂತ’ ಬಿಲ್‌ ಗೇಟ್ಸ್‌ ಅಂತ ಗೊತ್ತಾದಾಗ, ಖುಷಿಯಲ್ಲಿ ಹೃದಯ ಬಡಿತವೇ ನಿಂತ ಹಾಗಾಗಿತ್ತು ಅಂತಾಳೆ ಶೆಲ್ಬಿ. ಅಷ್ಟೇ ಅಲ್ಲ, ಶೆಲ್ಬಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದು, ಆಕೆಯ ಇಷ್ಟ, ಆಸಕ್ತಿಗಳನ್ನು ಅರಿತುಕೊಂಡೇ ಬಿಲ್‌, ಉಡುಗೊರೆ ಕಳಿಸಿದ್ದಾರಂತೆ.

ಆ ಉಡುಗೊರೆಗಳಲ್ಲಿ ಪುಸ್ತಕಗಳು, ಹ್ಯಾರಿ ಪಾಟರ್‌ ಸಾಂತ ಟೋಪಿ, ಪಝಲ್‌ ಆಟಿಕೆಗಳಷ್ಟೇ ಅಲ್ಲ, ಮತ್ತೂಂದು ಅಮೂಲ್ಯ ಗಿಫ್ಟ್ ಕೂಡಾ ಇತ್ತು. ಬಿಲ್‌ ಗೇಟ್ಸ್‌, ಶೆಲ್ಬಿಯ ತಾಯಿಯ ಸ್ಮರಣಾರ್ಥ “ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌’ಗೆ ಒಂದಷ್ಟು ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ, ಮದುವೆಗೂ ಹತ್ತು ದಿನ ಮೊದಲು ಶೆಲ್ಬಿ, ತಾಯಿಯನ್ನು ಕಳೆದುಕೊಂಡಿದ್ದರು. ಜೊತೆಗೊಂದು ಪತ್ರ ಬರೆದಿರುವ ಬಿಲ್‌ ಗೇಟ್ಸ್‌- “ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು, ಯಾವ ಉಡುಗೊರೆಯೂ ಮರೆಸಲಾರದು. ನಿಮ್ಮ ತಾಯಿಯ ಬಗ್ಗೆ ತಿಳಿದು ವಿಷಾದವಾಗುತ್ತಿದೆ. ಅವರ ಸ್ಮರಣಾರ್ಥ ನಾನು ಹಾರ್ಟ್‌ ಅಸೋಸಿಯೇಷನ್‌ಗೆ ದೇಣಿಗೆ ನೀಡಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬ, ಆದಷ್ಟು ಬೇಗ ನೋವನ್ನು ಮರೆಯುತ್ತೀರೆಂದು ಆಶಿಸುತ್ತೇನೆ’ ಎಂದಿದ್ದಾರೆ. ಹೌ ಸ್ವೀಟ್‌, ಅಲ್ವಾ?

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...

  • ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ...

  • ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ...

ಹೊಸ ಸೇರ್ಪಡೆ

  • ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರೋಮಾಂಚನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಲ್ಲಿ ಜರುಗುವುದು ನಮ್ಮ ಸೇನಾಶಕ್ತಿಯ ವಿಶ್ವರೂಪ ದರ್ಶನ....

  • ನಾಳೆ ಬೆಳಗಾದರೆ ಗಣತಂತ್ರದ ಹಬ್ಬದ ಸಂಭ್ರಮ, ರಾಜಧಾನಿ ದೆಹಲಿಯನ್ನು ರಂಗೇರಿಸಲಿದೆ. ರಾಜಪಥದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ...

  • ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ...

  • ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌. ಅಂದರೆ, ಅಂಡಮಾನ್‌...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...