ಅಧರಂ ಮಧುರಂ


Team Udayavani, Feb 9, 2018, 8:15 AM IST

20.jpg

ಹುಡುಗಿಯ ಸೌಂದರ್ಯದ ವ್ಯಾಖ್ಯಾನದಲ್ಲಿ ತುಟಿಯ ರಂಗಿಗೆ ಮಹತ್ವದ ಪಾತ್ರವಿದೆ. ಪ್ರತಿ ಕವಿಯೂ ಹೆಣ್ಣನ್ನು ಹೊಗಳುವಾಗ ಗುಲಾಬಿ ಬಣ್ಣದ, ಜೇನು ಸೂಸುವ ತುಟಿ ಎಂದು ಬರೆಯದೇ ಇರಲಾರ. ಆ ಮಾತುಗಳನ್ನೇ ಬಂಡವಾಳವಾಗಿಟ್ಟುಕೊಂಡು ನಾನಾ ಬಣ್ಣದ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಮೊದಲೆಲ್ಲ ತುಟಿಯ ನೈಜ ಬಣ್ಣಕ್ಕೆ ಹೋಲಿಕೆಯಾಗುವ ಗುಲಾಬಿ, ಕೆಂಪು ಬಣ್ಣಗಳು ಮಾತ್ರ ಲಭ್ಯವಿದ್ದವು. ಆನಂತರ ಬಣ್ಣಗಳ ಆಯ್ಕೆಯ ವ್ಯಾಪ್ತಿ ಹೆಚ್ಚಿತು. ಈಗಂತೂ ಡ್ಯುಯಲ್‌ ಕಲರ್ಡ್‌ ಲಿಪ್‌ಸ್ಟಿಕ್‌ಗಳದ್ದೇ ಪಾರುಪತ್ಯ.

ಡ್ಯುಯಲ್‌ ಕಲರ್ಡ್‌ ಲಿಪ್‌ಸ್ಟಿಕ್‌
ಹೆಸರೇ ಹೇಳುವಂತೆ ಇದು ಎರಡು ಬಣ್ಣಗಳುಳ್ಳ ಲಿಪ್‌ಸ್ಟಿಕ್‌. ಲಿಪ್‌ಸ್ಟಿಕ್‌ನ ಎರಡೂ ಬದಿಗಳಲ್ಲಿ ಎರಡು ಬೇರೆ ಬೇರೆ ಬಣ್ಣಗಳಿರುತ್ತವೆ. ಮೇಕ್‌ಅಪ್‌ ಆರ್ಟಿಸ್ಟ್‌ಗಳು ಬಣ್ಣಗಳ ಜೊತೆ ಪ್ರಯೋಗ ಮಾಡಿದ ಫ‌ಲವಾಗಿ ಈ ಟ್ರೆಂಡ್‌ ಸೃಷ್ಟಿಯಾಯಿತು. ಈ ಟ್ರೆಂಡ್‌ ಫಾಲೋ ಮಾಡಲು ಬಹಳಷ್ಟು ಲಿಪ್‌ಸ್ಟಿಕ್‌ಗಳು ಬೇಕಾಗಿಲ್ಲ, ಗುಲಾಬಿ ಮತ್ತು ಕಿತ್ತಳೆ ಬಣ್ಣದ ಲಿಪ್‌ಸ್ಟಿಕ್‌ಗಳಿದ್ದರೆ ಸಾಕು.

ಬಣ್ಣ ಹಚ್ಚೋದು ಹೇಗೆ?
ತುಟಿಯ ಮೇಲೆ ಎರಡೆರಡು ಬಣ್ಣಗಳನ್ನು ಹಚ್ಚುವುದು ಹೇಗೆ ಅಂದಿರಾ? ತುಂಬಾ ಸುಲಭ! ಮೇಲಿನ ತುಟಿಗೆ ಒಂದು ಬಣ್ಣ ಮತ್ತು ಕೆಳಗಿನ ತುಟಿಗೆ ಇನ್ನೊಂದು ಬಣ್ಣ ಹಚ್ಚಿದರಾಯಿತು. ಸಾಮಾನ್ಯವಾಗಿ, ಕೆಂಪು ಬಣ್ಣದ ಜೊತೆ ಗುಲಾಬಿ, ನೀಲಿ ಜೊತೆ ಹಸಿರು ಬಣ್ಣಗಳನ್ನು ಹಚ್ಚುತ್ತಾರೆ. ಹಸಿರಿನ ಜೊತೆ ಕೆಂಪು, ನೀಲಿ ಜೊತೆ ಗುಲಾಬಿ ಬಣ್ಣಗಳನ್ನು ಬಳಸುವುದಿಲ್ಲ. ಒಂದಕ್ಕೊಂದು ಹತ್ತಿರವಿರುವ ಬಣ್ಣಗಳನ್ನು ಹಚ್ಚಬಹುದು. ಶೇಡಿಂಗ್‌ ಟೆಕ್ನಿಕ್‌ ತಿಳಿದಿದ್ದರೆ ಬಣ್ಣಗಳ ಜೊತೆ ಆಟ ಆಡಬಹುದು.

ನೋಡಿ ಕಲಿ, ಮಾಡಿ ನಲಿ
ಇದು ಬ್ರಹ್ಮವಿದ್ಯೆಯೇನಲ್ಲ. ರಾಕೆಟ್‌ ಸೈನ್ಸೂ ಅಲ್ಲ. ಬಣ್ಣಗಳ ಚಮತ್ಕಾರವನ್ನು ಯೂಟ್ಯೂಬ್‌, ಇನ್‌ಸ್ಟಗ್ರಾಂನಲ್ಲಿ ನೋಡಿ ಕಲಿಯಬಹುದು. ಪ್ರೊಫೆಷನಲ್‌ ಮೇಕ್‌ಅಪ್‌ ಆರ್ಟಿಸ್ಟ್‌ ಗಳು ಇದನ್ನು ಸರಳವಾಗಿ ಹೇಳಿಕೊಡುತ್ತಾರೆ. ಒಂದೆರಡು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ, ಚೆನ್ನಾಗಿ ಕಾಣಿಸುತ್ತೋ ಇಲ್ಲವೋ ಅಂತ ನೋಡಿಕೊಂಡು ನಂತರ ಮನೆಯಿಂದಾಚೆ ಹೋಗುವಾಗ ಧೈರ್ಯವಾಗಿ ಹಚ್ಚಿ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.