ಸಿಹಿಕುಂಬಳ ವೈವಿಧ್ಯ

Team Udayavani, Dec 8, 2017, 3:49 PM IST

ಸಿಹಿಕುಂಬಳ, ಚೀನಿಕಾಯಿ, ಕೆಂಬುಡೆ ಇತ್ಯಾದಿ ಹೆಸರುಗಳಿಂದ ಕರೆಯುವ ಈ ತರಕಾರಿಯು ಉತ್ತಮ ತೇವಾಂಶ, ನಾರಿನಂಶ, ಕಾಬೋìಹೈಡ್ರೆಟ್ಸ್‌ , ಖನಿಜಾಂಶ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದ್ದು ತಂಪುಕಾರಕ ಮತ್ತು ರಕ್ತ ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಆಹಾರವಾಗಿ ಅಡುಗೆಯಲ್ಲಿ ಹಲವಾರು ರೀತಿಯಲ್ಲಿ ಬಳಸಬಹುದಾಗಿದೆ.

ಚೀನೀಕಾಯಿ ರಾಯತ 
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಚೀನೀಕಾಯಿ- ಎರಡು ಕಪ್‌, ತೆಂಗಿನ ತುರಿ- ಒಂದು ಕಪ್‌, ಹುಣಸೆಹುಳಿ- ಕಾಲು ಚಮಚ, ಕೆಂಪು ಮೆಣಸಿನಹುಡಿ- ಅರ್ಧ ಚಮಚ, ಬೆಲ್ಲದ ಪುಡಿ- ಎರಡು ಚಮಚ, ಹಸಿಮೆಣಸು- ಒಂದು, ಜೀರಿಗೆ- ಒಂದು ಚಮಚ ಬೇಕಿದ್ದರೆ, ಹೆಚ್ಚಿದ ಕೊತ್ತಂಬರಿ ಸೊಪ್ಪು – ಆರು ಚಮಚ, ಮೊಸರ‌ು- ಒಂದು ಕಪ್‌, ಹಸಿಮೆಣಸು- ಒಂದು, ಅರಸಿನ- ಕಾಲು ಚಮಚ, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ:  ಚೀನಿಕಾಯಿ ಹೋಳುಗಳಿಗೆ ಮೆಣಸಿನಪುಡಿ, ಉಪ್ಪು, ಹುಳಿ, ಬೆಲ್ಲ ಸೇರಿಸಿ, ಬೇಯಿಸಿ, ಆರಲು ಬಿಡಿ. ತೆಂಗಿನತುರಿಗೆ ಅರಸಿನ, ಹಸಿಮೆಣಸು ಮತ್ತು ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ ಮೊದಲೇ ಬೇಯಿಸಿಟ್ಟ ಚೀನಿಕಾಯಿಗೆ ಸೇರಿಸಿ. ನಂತರ, ಇದಕ್ಕೆ ಮೊಸರು ಮತ್ತು ಕೊತ್ತಂಬರಿಸೊಪ್ಪು ಸೇರಿಸಿ ಬೇಕಷ್ಟು ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಈಗ ತಯಾರಾದ ರಾಯತಕ್ಕೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನಜೊತೆ ನೀಡಿ. ಚೀನಿಕಾಯಿಯನ್ನು ತುರಿದು ಬೇಯಿಸದೆಯೂ ಮೇಲೆ ತಿಳಿಸಿದ ರೀತಿಯಲ್ಲಿ ರಾಯತ ತಯಾರಿಸಬಹುದು.

ಚೀನಿಕಾಯಿ ಹಲ್ವ 
ಬೇಕಾಗುವ ಸಾಮಗ್ರಿ: ತುರಿದ ಚೀನಿಕಾಯಿ- ನಾಲ್ಕು ಕಪ್‌, ಸಕ್ಕರೆ- ಎರಡು ಕಪ್‌, ಹಾಲು- ಎರಡು ಕಪ್‌, ತುಪ್ಪ- ಅರ್ಧ ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳು- ಎಂಟು ಚಮಚ, ಏಲಕ್ಕಿ ಸುವಾಸನೆಗಾಗಿ.

ತಯಾರಿಸುವ ವಿಧಾನ: ತುರಿದ ಚೀನಿಕಾಯಿಗೆ ಹಾಲು ಮತ್ತು ಸ್ವಲ್ಪ ನೀರು ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಬೇಯಲು ಇಡಿ. ಚೆನ್ನಾಗಿ ಬೆಂದ ಮೇಲೆ, ಇದಕ್ಕೆ ಸಕ್ಕರೆ ಸೇರಿಸಿ ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತಾ ಇದ್ದು ನಂತರ, ತುಪ್ಪ ಸೇರಿಸಿ ತಳ ಬಿಡುವವರೆಗೂ ಮಗುಚುತ್ತಾ ಇರಬೇಕು. ತಳ ಬಿಡುತ್ತಿದ್ದಂತೆ ಗೋಡಂಬಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಗುಚಿ ಇಳಿಸಿ.

ಚೀನೀಕಾಯಿ ತಿರುಳಿನ ಗೊಜ್ಜು
ಬೇಕಾಗುವ ಸಾಮಗ್ರಿ:
ಚೀನೀಕಾಯಿ ತಿರುಳು- ಒಂದು ಕಪ್‌, ತೆಂಗಿನ ತುರಿ- ಒಂದು ಕಪ್‌, ಕೆಂಪುಮೆಣಸು-  ಮೂರು, ಹುಣಸೆಹುಳಿ- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಚೀನೀಕಾಯಿ ತಿರುಳಿಗೆ ಉಪ್ಪು$, ಹುಳಿ ಮತ್ತು ಕೆಂಪುಮೆಣಸು ಸೇರಿಸಿ ಬೇಯಲು ಇಡಿ. ಚೆನ್ನಾಗಿ ಬೆಂದು ಇದು ಆರಿದ ಮೇಲೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ ಸರ್ವಿಂಗ್‌ ಬೌಲ್‌ನಲ್ಲಿ ಹಾಕಿ. ಈಗ ಇದಕ್ಕೆ ತುಪ್ಪದಲ್ಲಿ ಇಂಗು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ಚೀನೀಕಾಯಿ ಪಾಯಸ 
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಚೀನಿಕಾಯಿ- ಮೂರು ಕಪ್‌, ಬೆಲ್ಲದ ಪುಡಿ- ಒಂದೂವರೆ ಕಪ್‌, ಅಕ್ಕಿಹಿಟ್ಟು – ಅರ್ಧ ಕಪ್‌, ತೆಂಗಿನಹಾಲು- ಎರಡು ಕಪ್‌, ಏಲಕ್ಕಿ ಪು- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಚೀನೀಕಾಯಿ ಹೋಳುಗಳನ್ನು ಸ್ವಲ್ಪ ತೆಂಗಿನಹಾಲು ಮತ್ತು ನೀರು ಸೇರಿಸಿ ಬೇಯಲು ಇಡಿ. ಬೆಂದ ತರಕಾರಿಗೆ ಬೆಲ್ಲ ಮತ್ತು ಉಪ್ಪು ಸೇರಿಸಿ ಕುದಿಸಿ. ಇದು ಕುದಿಯುತ್ತಿರುವಾಗ ಅರ್ಧ ಕಪ್‌ ತೆಂಗಿನ ಹಾಲು ಮತ್ತು ನುಣ್ಣಗೆ ರುಬ್ಬಿದ ಅಕ್ಕಿಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ ಸೇರಿಸಿ, ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತಾ ಕುದಿಸಿ. ನಂತರ, ಇದಕ್ಕೆ ಉಳಿದ ತೆಂಗಿನಹಾಲು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿಳಿಸಿ.

ಗೀತಸದಾ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • "ಪದ' ಎಂಬ ಪದವೇ ಎಷ್ಟೊಂದು ಸುಂದರ ! ಪದವಿಡುವುದು ಎಂದರೆ ಮಾತಿಗೆ ಶುರುವಿಡುವುದು ಎಂದಾಗುತ್ತದೆ, ನಡಿಗೆ ಆರಂಭಿಸುವುದು ಎಂದೂ ಆಗುತ್ತದೆ. ಎರಡನ್ನೂ ಕಲಿಸುವವಳು...

  • ಕ್ಯಾಲೆಂಡರುಗಳು ಬಂದವು, ಹೋದವು. ವರ್ಷಗಳು, ದಶಕಗಳೇ ಉರುಳಿದವು. ಸಮಯ ಮತ್ತು ತಾರೀಕು ತಿಳಿಯಲು ವಾಚು-ಗಡಿಯಾರದ ಆವಶ್ಯಕತೆ ಇಲ್ಲದ ಮೊಬೈಲ್‌ ಮನೆಗೆ ಬಂತು. ಮೊಮ್ಮಗ...

  • ಎಂಥ ಅಪರೂಪದ ದೃಶ್ಯವಿದು! ಎರಡೂ ಪಾದಗಳನ್ನು ಒತ್ತಾಗಿ ಇರಿಸಿಕೊಂಡು, ಅಂಗಳದ ಅಂಚಿನಲ್ಲಿ ನಿಂತಿರುವ ಮನೆಯ ಯಜಮಾನ. ತಾಮ್ರದ ತಂಬಿಗೆಯಲ್ಲಿ ನೀರು ತಂದುಕೊಡುತ್ತಿರುವ...

  • ವಿರಾಟ್‌ ಕೋಹ್ಲಿ ಕ್ರಿಕೆಟ್‌ ಆಟಗಾರನಾಗಿ ಕ್ರೀಡಾಂಗಣದಲ್ಲಿ ಮಿಂಚುವುದನ್ನು ನೋಡಿರುತ್ತೀರಿ. ಈಗ ವಿರಾಟ್‌ ಕೋಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮ ಕೂಡ ಬ್ಯಾಟ್‌...

  • ತೆಳುವಾದ ಸೆಣಬಿನಬಳ್ಳಿ ಸುತ್ತಿದ್ದ ಪೇಪರಿನ ಕಟ್ಟು,ಚಿಕ್ಕಪ್ಪನ ಕೈಯಿಂದ ನೇರ ಅಜ್ಜಿಯ ಕೈಗೆ ವರ್ಗಾಯಿಸಲ್ಪಟ್ಟಿತು. ಅದರಲ್ಲೇನಿರಬಹುದು ಎಂಬ ಕುತೂಹಲ ಅಜ್ಜನ...

ಹೊಸ ಸೇರ್ಪಡೆ