ಮುಗುಳ್ನಗೆಯನ್ನು ಮರೆಸುವ ಗಡ್ಡ

Team Udayavani, Aug 11, 2017, 6:40 AM IST

malar_730x419.jpg

ಹೌದು, ಇದು ಗಡ್ಡದ ವಿಷ್ಯ, ಹರೆಯಕ್ಕೆ ಬಂದಾಗ ಸಹಜವಾಗಿ ಫ‌ಲವತ್ತಾದ ಮೊಗದಲ್ಲಿ ಹುಲುಸಾಗಿ ಬೆಳೆಯುವ ಹುಲ್ಲುಗಳೆಂಬ ಈ ಕೂದಲಿಗೆ ಅದೇನೋ ಪ್ರಚಾರಪ್ರಿಯತೆ ಗೊತ್ತಿಲ್ಲ, ಪ್ರತಿದಿನ ಗಡ್ಡ ತೆಗೆದರೆ ರಸಿಕನಾದೆ, ತೆಗೆಯದೆ ಇದ್ದರೆ ಸನ್ಯಾಸಿ. ಹಲವರು ಇದರ ಬಗೆಗೆ ನಯವಾಗಿ ಪ್ರತಿಭಟಿಸುವವರೇ. ಇಲ್ಲಿ ಇದು ನನ್ನ ದೇಹಕ್ಕೆ ಕಂತುವುದಲ್ಲ ಹಲವರ ಕಣ್ಣುಗಳಿಗೆ ಚುಚ್ಚುವುದು, ಸಾಮಾಜಿಕ ನೆಲೆಯಲ್ಲಿ ಪ್ರಮುಖವಾದ ಈ ಗಡ್ಡ, ಸಭ್ಯ, ಸಂಸ್ಕಾರವೆನ್ನುವ ಸಮಾಜದಲ್ಲಿ ಸಹಜವಾಗಿ ಕುಹಕವಾಗಿಯೇ ಆಡಿಕೊಳ್ಳುತ್ತಾರೆ. 

ತನ್ನಷ್ಟಕ್ಕೆ ಬೆಳೆದ ಈ ಗಡ್ಡದ ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತಿಗೆ, ಯಾರದೋ ಸಮ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು ಕೇಳುವುದು, “ಯಾರಾತ ಆ ಗಡ್ಡದ ಹುಡುಗ?’ ಎಂದು. ಅದೆಷ್ಟೋ ಸಲ ಮಾತಾನಾಡಿಸಿದ್ದೂ ಇದೆ. “ಮನೆ ಎಲ್ಲಿ , ಯಾರ ಮಗ, ಏನು ಓದುವುದು, ಏನು ಉದ್ಯೋಗ?’ ಎಂದು ಜನಗಣತಿಯ ಟೀಚರ್‌ ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯ ಅನುಭವವಾದದ್ದಿದೆ, ಸಹಜವಾಗಿ ಬೆಳೆದ ಗಡ್ಡದ ಬಗೆಗೆ, ಗಡ್ಡದಲ್ಲೇ ಪ್ರಶ್ನಿಸಬೇಕೆ ಹೊರತು ನನ್ನನ್ನೇಕೆ ಅಪರಾಧಿ ಮಾಡುತ್ತಾರೆ ಎಂದು ಆಗಾಗ ಮನಸಲ್ಲೇ ಪ್ರಶ್ನಿಸಿದ್ದೂ ಇದೆ. ಮತ್ತೂಂದು ವ್ಯತಿರಿಕ್ತ ಅಂದರೆ, ನಮ್ಮ ಮನೆಯಲ್ಲಿ ಗಡ್ಡ ಬಿಡುವುದಕ್ಕೆ, ತೆಗೆಯುವುದಕ್ಕೆ  ಚಕಾರವಿಲ್ಲದಿದ್ದರೂ, ಊರಿನವರಿಗೆ, ಅತ್ತಿಗೆಯಂದಿರಿಗೆ, ಸಂಬಂಧಿಗಳಿಗೆ, ಸೋದರ ಅತ್ತೆಯಂದಿರಿಗೆ, ಶಾಲಾ ಟೀಚರಿಗೆ, ಕಾಲೇಜು ಪ್ರಾಂಶುಪಾಲರಿಗೆ,  ಕಡೆಗೆ ದಾರಿಹೋಕರಿಗೂ ಗಡ್ಡ ಚರ್ಚೆಯ ವಿಷ್ಯವೇ. “ನಿನಗೆ ಗಡ್ಡ ಚಂದ ಕಾಣೋದಿಲ್ಲ, ನಿನ್ನದು ಕೋಲು ಮುಖ, ಹಾಗಾಗಿ ಗಡ್ಡ ಇಲ್ಲದಿದ್ರೆ ಚಂದ, ಮೊಘಲರ ವಂಶದವನ‌ ಹಾಗೆ ಕಾಣಿ¤àಯಾ’. ವಿಶೇಷ ಕಾರ್ಯಕ್ರಮಕ್ಕೆ ಹೋದರೆ ಕುಹಕವಾಡಿದ್ದೂ ಇದೆ. ಮಗಳಿರುವ ದೂರದಿಂದ ಮಾವ ಆಗುವವರೊಬ್ಬರು, “ಗಡ್ಡ ಇಡುವುದು ನಮ್ಮ ಸಂಸ್ಕಾರ ಅಲ್ಲ ಆಲ್ವಾ?’ ಎಂದು  ತನ್ನ ಮಗಳಿಗೆ ಈತ ವರನಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮುನ್ಸೂಚನೆ ನೀಡಿದ್ದೂ ಇದೆ. 

ಈ ಗಡ್ಡದಲ್ಲೂ ಹಲವು ವಿಧವಿದೆ. ಕೈಯಾಡಿಸಿದರೆ ಕಂತಿದರೆ ಅದು ಪೊಕ್ರಿ ಗಡ್ಡ, ಅದೆಲ್ಲೋ ಮೂಲೆಯಲ್ಲಿ ಒಂದು ನಾಕು ಕೂದಲು ಬೆಳೆದರೆ ಹೋತ ಗಡ್ಡ, ಸಾಧಾರಣ ಉದ್ದವಿದ್ದರೆ ಹೆಂಡತಿ ಗರ್ಭಿಣಿಯೋ ಎಂಬುದನ್ನು ಸೂಚಿಸುವ ಗಡ್ಡ, ಮತ್ತಷ್ಟು ಮುಖ ತುಂಬಾ ದಪ್ಪವಾಗಿದ್ದರೆ, ಏನು ಹುಡುಗನಿಗೆ ಹುಷಾರಿಲ್ವಾ ‘ ಎಂಬಂಥ ಗಡ್ಡ. ಒಟ್ಟಾರೆ ಅಪರಾಧಿಯಂತೂ ಸತ್ಯ. ಹಲವು ಬಾರಿ ಅತ್ತಿಗೆಯಂದಿರ ಬಾಯಿ ಮುಚ್ಚಿಸಿದ್ದೂ ಇದೆ. ತಮಗೆ ಗಡ್ಡ ಬರುವುದಿಲ್ಲವೆಂದು ನಂಜಿ ಕಾರುವುದು ಅಲ್ವೇ? ಎಂದು ಕೇಳಿ ಮತ್ತೆಂದೂ ನನ್ನ ಗಡ್ಡದ ಬಗೆಗೆ ಪ್ರಶ್ನಿಸದ ಹಾಗೆ ಮಾಡಿದ್ದಿದೆ. ಅವರಿಗೆ ವಿಷಯ ಗೊತ್ತಿಲ್ಲ, ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆಯೆಂದು, ಮೊಗದ ಸೌಂದರ್ಯ ಕಾಪಾಡುತ್ತದೆಯೆಂದು, ಮುಖವೂ ತೇವವಾಗಿಡುತ್ತದೆಯೆಂದು, ಜೊತೆಗೆ ಮೊಡವೆಗಳು ಕಾಣಿಸುವುದಿಲ್ಲವೆಂಬ ಸತ್ಯಗಳು. ಗಡ್ಡ ತೆಗೆದ ಆ ಗದ್ದ ಅದೇನು ಸುಂದರ ಗೊತ್ತಿಲ್ಲ, ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು ಗಡ್ಡದ ಮಾಸಿದ ಚುಕ್ಕಿಗಳ ಸಶೇಷವಲ್ಲದ ಬಿಂಬ ಎಂಬ ಸತ್ಯ ಮಾತ್ರ ಹೌದು.

ತಮಗೂ ಗೊತ್ತಿರಬಹುದು, ಕರಿಯ ಜನಾಂಗದ ಪ್ರಥಮ ಮತ್ತು ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ ಗಡ್ಡ  ಇಡುತ್ತಿದ್ದರು. ಅವರದೆಲ್ಲ ಭಾವಚಿತ್ರಗಳಲ್ಲಿ ನಾವು ಗಡ್ಡವನ್ನು ನೋಡಬಹುದು. ನೀವೇನಾದ್ರು ಅದು ಪ್ರೀತಿ – ಪ್ರೇಮ ವೈಫ‌ಲ್ಯ ಇದ್ದಿರಬೇಕು ಎಂದುಕೊಂಡರೆ ಅದು ಸುಳ್ಳು . ಅಚ್ಚರಿ ಎಂದರೆ, ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು  11ರ ಹರೆಯದ ಪೋರಿಯೊಬ್ಬಳ ಪತ್ರವಂತೆ. 1860ರ ಅಕ್ಟೋಬರ್‌, ಆಗಷ್ಟೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದರಲ್ಲಿತ್ತು. ರಿಪಬ್ಲಿಕನ್‌ ಪಕ್ಷದಿಂದ ಲಿಂಕನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ  ನ್ಯೂಯಾರ್ಕ್‌ನ ವೆಸ್ಟ್‌  ಫೀಲ್ಡ್‌ನಿಂದ ಗ್ರೇಸ್‌ ಬೆಡೆಲ್ಸ… ಎಂಬ 11 ವರ್ಷದ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ  ಅಬ್ರಹಾಂ ಲಿಂಕನ್‌ರ ಕೈ ಸೇರಿತ್ತು. ಅದರಲ್ಲಿ “ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರೂ ಹುಡುಗನಾಗಿದ್ದರೆ ನಿಮಗೆ ಓಟ್‌ ಮಾಡಬಹುದಿತ್ತೇನೋ, ಆದಾಗ್ಯೂ  ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ಓಟ್‌ ಮಾಡುವಂತೆ ಕೇಳುತ್ತೇನೆ. ಆದರೆ ಇದಕ್ಕೊಂದು ಷರತ್ತು: ನಿಮ್ಮ ಮುಖ ತುಂಬಾನೆ ಸಣಕಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ಓಟು ಹಾಕುವಂತೆ ಒತ್ತಾಯಿಸುತ್ತಾರೆ ಹಾಗೂ ತಾವು ನಮ್ಮ ಅಧ್ಯಕ್ಷರಾಗುತ್ತೀರಿ’ ಎಂದು ಬರೆದಿತ್ತು. ಈ  ಪುಟಾಣಿಯ ಬಯಕೆಯಂತೇ ಗಡ್ಡ ಬಿಡುತ್ತೇನೆ ಎಂದು ಲಿಂಕನ್‌ ಹೇಳಿಕೊಂಡಿದ್ದರಂತೆ ಹಾಗೂ ಜೀವನಪೂರ್ತಿ ಗಡ್ಡಧಾರಿಯೇ ಆಗಿದ್ದರು. 

ಹೌದು, ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನು, ನಸುನಗುವ ತುಟಿಗಳನ್ನು ಅಡಗಿಸಲುಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನ್ನಲ್ಲ, ಅವನು ಅವನೇ… ಬದಲಾದ್ದು ನಮ್ಮ ನೋಟ ಅಷ್ಟೇ! ಬಿಳಿ ತೊಗಲು ಚಂದ, ತಲೆಕೂದಲು ಇಲ್ಲದವನು ಅಂದವಿಲ್ಲ, ಗಡ್ಡಬಿಟ್ಟವರೆಲ್ಲ ಸುಖವಿಲ್ಲ ಎಂಬ ನಮ್ಮ ಚಿಂತನೆ ಬದಲಾಯಿಸಬೇಕಾಗಿದೆ ಅಲ್ವೇ?

– ಭರತೇಶ ಅಲಸಂಡೆಮಜಲು

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.