ಸ್ಫೋಟಕ ವಿಂಡೀಸ್‌ಗೆ ಪಾಕ್‌ ಸವಾಲು

ಸ್ಫೋಟಕ ಬ್ಯಾಟಿಂಗ್‌ ಪಡೆ ಹೊಂದಿದ ವಿಂಡೀಸ್‌; ಪಾಕಿಸ್ಥಾನ ಆಟಗಾರರಲ್ಲಿ ಸ್ಥಿರತೆಯ ಕೊರತೆ

Team Udayavani, May 31, 2019, 6:00 AM IST

pak-2

ಲಂಡನ್‌: ಬ್ರಿಸ್ಟಲ್ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 421 ರನ್ನುಗಳ ಬೃಹತ್‌ ಮೊತ್ತ ಗಳಿಸಿದ ವೆಸ್ಟ್‌ ಇಂಡೀಸ್‌ ತಂಡವು ವಿಶ್ವಕಪ್‌ ಕೂಟದ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ಪಾಕಿಸ್ಥಾನ ವಿರುದ್ಧ ನಾಟಿಂಗಂನಲ್ಲಿ ಹೋರಾಡಲಿದೆ. ಇತ್ತಂಡಗಳು ಬಲಿಷ್ಠವಾಗಿದ್ದು ಬೃಹತ್‌ ಮೊತ್ತ ಪೇರಿಸುವಲ್ಲಿ ಅನುಮಾನವಿಲ್ಲ.

ವಿಂಡೀಸ್‌ ಇತಿಹಾಸ
ಇಂಗ್ಲೆಂಡ್‌ನ‌ಲ್ಲಿ ನಡೆದ 1975ರ ಆರಂಭಿಕ ವಿಶ್ವಕಪ್‌ ಮತ್ತು 1979ರ ವಿಶ್ವಕಪ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ ವಿಂಡೀಸ್‌ 1983ರಲ್ಲಿ ಮೂರನೇ ಬಾರಿ ಫೈನಲ್ ತಲುಪಿ ಭಾರತದ ವಿರುದ್ಧ ಸೋಲನುಭವಿಸಿತ್ತು. ಆಬಳಿಕ ವಿಂಡೀಸ್‌ ವಿಶ್ವಕಪ್‌ ಸಹಿತ ಉಭಯ ರಾಷ್ಟ್ರಗಳ ಸರಣಿಯಲ್ಲಿ ನೀರಸವಾಗಿ ಆಡತೊಡಗಿತು. ಇದು 2015ರ ವಿಶ್ವಕಪ್‌ ತನಕವೂ ಮುಂದುವರಿದಿದ್ದು ದುರದೃಷ್ಟಕರ ಸಂಗತಿಯಾಗಿದೆ.

ಗೇಲ್‌ಗಾಗಿ ಹೋರಾಟ
ಆದರೆ ಈ ಬಾರಿ ಹೇಗಾದರೂ ಮಾಡಿ ಕಪ್‌ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ವಿಂಡೀಸ್‌ ತಮ್ಮ ಸ್ಫೋಟಕ ಬ್ಯಾಟ್ಸ್‌ಮೆನ್‌ಗಳ ನೆರವಿನಿಂದ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ, ವಿಶ್ವಾಸ ಹೊಂದಿದೆ. ವಿಶ್ವಕಪ್‌ ಗೆಲ್ಲುವ ಮೂಲಕ ‘ಯುನಿವರ್ಸ್‌ ಬಾಸ್‌’ ಗೇಲ್ಗೆ ಗೆಲುವಿನ ವಿದಾಯ ಹೇಳಲು ತಂಡದ ಆಟಗಾರರು ಪಣತೊಟ್ಟಿರುವುದೂ ವಿಶೇಷವಾಗಿದೆ. ವೆಸ್ಟ್‌ ಇಂಡೀಸ್‌ ತಂಡ ಬಲಿಷ್ಠವಾಗಿದ್ದು ಆರಂಭಿಕರಿಂದ ಹಿಡಿದು 9ನೇ ಕ್ರಮಾಂಕದವರೆಗೂ ಪ್ರತಿಯೊಬ್ಬ ಆಟಗಾರರೂ ಆಕ್ರಮಣಕಾರಿ ಆಟವಾಡುವಲ್ಲಿ ಸಮರ್ಥರಾಗಿದ್ದಾರೆ. ಇದಕ್ಕೆ ನ್ಯೂಜಿಲ್ಯಾಂಡ್‌ ವಿರುದ್ಧದ ಅಭ್ಯಾಸ ಪಂದ್ಯವೇ ಸಾಕ್ಷಿ. ಪಾಕ್‌ ವಿರುದ್ಧವೂ ಮತ್ತೂಮ್ಮೆ ಬೃಹತ್‌ ರನ್‌ ಪೇರಿಸುವರೇ ಎಂದು ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ.

ಟಿ20 ಸ್ಪೆಶಲಿಸ್ಟ್‌
ತಂಡದಲ್ಲಿ ಟಿ20 ಸ್ಪೆಶಲಿಸ್ಟ್‌ಗಳೇ ಹೆಚ್ಚಾಗಿದ್ದಾರೆ. ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಕ್ರೀಸ್‌ ಗೇಲ್, ಆಂಡ್ರ್ಯೂ ರಸೆಲ್, ಬ್ರಾತ್‌ವೇಟ್, ನಿಕೋಲಾಸ್‌ ಪೂರನ್‌, ಹೆಟ್ ಮೈಯರ್‌ ಸ್ಫೋಟಕ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವರನ್ನು ನಂಬಿ ಮುನ್ನಡೆದರೆ ಕೆಡುವ ಅಪಾಯವೂ ವಿಂಡೀಸ್‌ ತಂಡಕ್ಕಿದೆ. ಬ್ಯಾಟಿಂಗ್‌ ಕುಸಿತ ಕಂಡರೆ ತೀರ ಕಳಪೆ ಪ್ರದರ್ಶನ ತೋರುವ ಮೂಲಕ 100 ರನ್‌ ಒಳಗಡೆ ಆಲೌಟ್ ಆದ ಎಷ್ಟೋ ದೃಷ್ಟಾಂತಗಳಿವೆ. ಆದ್ದರಿಂದ ವಿಂಡೀಸ್‌ ಆಟಗಾರರ ಮೇಲೆ ಹೆಚ್ಚಿನ ಭರವಸೆಯನ್ನು ಇಡುವಂತಿಲ್ಲ.

ಪಾಕ್‌ಗೆ ಕೈ ಹಿಡಿದೀತೇ ಲಕ್‌!

1992ರಲ್ಲಿ ಮೊದಲ ಬಾರಿಗೆ ಪಾಕಿಸ್ಥಾನಕ್ಕೆ ವಿಶ್ವಕಪ್‌ ಗೆದ್ದು ಕೊಟ್ಟ ಇಮ್ರಾನ್‌ ಖಾನ್‌ ಇದೀಗ ಪಾಕ್‌ ಪ್ರಧಾನಿಯಾಗಿದ್ದಾರೆ. ಮತ್ತೂಮ್ಮೆ ವಿಶ್ವಕಪ್‌ ಗೆದ್ದು ಪ್ರಧಾನಿ ಇಮ್ರಾನ್‌ ಖಾನ್‌ಗೆ ಪ್ರಶಸ್ತಿ ಒಪ್ಪಿಸುವ ಪಣ ತೊಟ್ಟಿದೆ ಪಾಕಿಸ್ಥಾನ ಪಡೆ. ಪಾಕ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಶಕ್ತ ತಂಡವಾದರೂ ಲಕ್‌ ಎನ್ನುವುದು ಪಾಕ್‌ ಕೈಹಿಡಿಯುತ್ತಿಲ್ಲ. ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ವಿರುದ್ಧ ದೊಡ್ಡ ಮೊತ್ತವನ್ನೇ ಪೇರಿಸಿದರೂ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗದಿರುವುದು ಪಾಕ್‌ಗೆ ಅದೃಷ್ಟ ಕೈ ಹಿಡಿಯದಿರುವುದು ಇಲ್ಲಿ ಕಾಣುತ್ತಿದೆ. ಆದರೆ ಇದುವರೆಗೂ ಸೋಲಿನ ರುಚಿ ಕಂಡ ಪಾಕ್‌ ವಿಂಡೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ತನ್ನ ಅದೃಷ್ಟ ಮುಂದುವರಿಸಿದರೆ ಪಾಕ್‌ ಕಪ್‌ ಗೆಲ್ಲುವಲ್ಲಿ ಅನುಮಾನವಿಲ್ಲ. ಪಾಕ್‌ನ ಆರಂಭಿಕ ಮತ್ತು ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಆದರೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ವಿಭಾಗದಲ್ಲಿ ಯಾರೊಬ್ಬರೂ ಸ್ಥಿರ ಪ್ರದರ್ಶನ ತೋರದೇ ಇರುವುದೂ ಪಾಕ್‌ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಲಿದೆ.

ಮೊಹಮ್ಮದ್‌ ಆಮಿರ್‌ ಆಡುವುದು ಅನುಮಾನ

ಲಂಡನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಶುಕ್ರವಾರದ ಪಂದ್ಯದಲ್ಲಿ ಆಡುವ ಮೂಲಕ ಪಾಕಿಸ್ಥಾನ ತನ್ನ ವಿಶ್ವಕಪ್‌ ಅಭಿಯಾನಕ್ಕೆ ಚಾಲನೆ ನೀಡಲಿದೆ. ಸ್ಫೋಟಕ ಖ್ಯಾತಿಯ ವಿಂಡೀಸ್‌ ವಿರುದ್ಧದ ಈ ಪಂದ್ಯದಲ್ಲಿ ಪಾಕಿಸ್ಥಾನದ ಯಶಸ್ವಿ ಬೌಲರ್‌ ಮೊಹಮ್ಮದ್‌ ಆಮಿರ್‌ ಆಡುವುದು ಅನುಮಾನ ಎನ್ನಲಾಗಿದೆ. ಆಮಿರ್‌ ಪೂರ್ಣವಾಗಿ ಫಿಟ್ ಆಗಿಲ್ಲವೆಂದು ವರದಿಯೊಂದು ಹೇಳಿದೆ. ಇದೇ ವಿಷಯವನ್ನು ಅವರು ಕೋಚ್ ಮಿಕಿ ಆರ್ಥರ್‌ ಅವರಿಗೂ ತಿಳಿಸಿದ್ದಾರೆ. ಕೂಟದ ಇನ್ನುಳಿದ ಪಂದ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲು ಕೆಲ ಸಮಯ ಬೇಕಾಗಿದೆ ಎಂದು ಅವರು ಕೇಳಿಕೊಂಡಿದ್ದಾರೆ. ಆಮಿರ್‌ ಅವರ ಕೋರಿಕೆ ಮೇರೆಗೆ ತಂಡ ವ್ಯವಸ್ಥಾಪಕರು ಶುಕ್ರವಾರದ ಪಂದ್ಯಕ್ಕೆ ಅವರನ್ನು ಆಡಿಸದಿರುವ ಸಾಧ್ಯತೆಯಿದೆ. ಪಾಕಿಸ್ಥಾನವು 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಆಮಿರ್‌ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್ನಲ್ಲಿ ತನ್ನ ಅಮೋಘ ಸ್ವಿಂಗ್‌ ಬೌಲಿಂಗ್‌ನಿಂದಾಗಿ ಭಾರತಕ್ಕೆ ಪ್ರಬಲ ಹೊಡೆತ ನೀಡಿದ್ದರು.

ಸಂಭಾವ್ಯ ತಂಡ
ವೆಸ್ಟ್‌ ಇಂಡೀಸ್‌: ಜಾಸನ್‌ ಹೋಲ್ಡರ್‌ (ನಾಯಕ), ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶೈ ಹೋಪ್‌, ಡ್ಯಾರನ್‌ ಬ್ರಾವೊ, ಆಂಡ್ರೆ ರಸೆಲ್‌, ನಿಕೋಲಸ್‌ ಪೂರನ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಕೆಮರ್‌ ರೋಶ್‌, ಆಶೆÉ ನರ್ಸ್‌, ಫ್ಯಾಬಿಯನ್‌ ಅಲೆನ್‌.
ಪಾಕಿಸ್ಥಾನ: ಸಫ‌ìರಾಜ್‌ ಖಾನ್‌ (ನಾಯಕ), ಫ‌ಕಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಅಜಮ್‌, ಶೋಯಿಬ್‌ ಮಲ್ಲಿಕ್‌, ಮೊಹಮ್ಮದ್‌ ಹಫೀಜ್‌, ಇಮಮ್‌ ವಾಸಿಮ್‌, ಹಸನ್‌ ಅಲಿ, ಮೊಹಮ್ಮದ್‌ ಹಸ್ನೇನ್‌, ಆಸಿಫ್ ಅಲಿ, ಮೊಹಮ್ಮದ್‌ ಆಮಿರ್‌.

ಸ್ಥಳ: ನಾಟಿಂಗಂ
ಆರಂಭ: 3.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.