ಕಲರ್‌ ಕಲರ್‌ ಮ್ಯಾಜಿಕ್‌, ನಿಮ್ಮಿಷ್ಟದ ಬಣ್ಣ ಯಾವುದು?


Team Udayavani, Feb 15, 2018, 12:10 PM IST

magic.jpg

ಮನೆಗೆ ಅತಿಥಿಗಳು ಬಂದಾಗ ಸಾಧಾರಾಣವಾಗಿ ಅಪ್ಪ-ಅಮ್ಮ ನಿಮ್ಮ ಬಗ್ಗೆ ಹೊಗಳುತ್ತಾರೆ. ನನ್ನ ಮಗ ಹಾಡುತ್ತಾನೆ, ಮಗಳು ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾಳೆ ಅಂತೆಲ್ಲಾ. ಆಗ ನಿಮಗೆ ಖುಷಿಯಾಗುತ್ತೆ ಅಲ್ವಾ? ಹಾಗೇ ಬಂದ ಅತಿಥಿಗಳ ಮುಂದೆ ಜಾದೂ ಮಾಡಿ ಅವರಿಂದ ಮತ್ತಷ್ಟು ಪ್ರಶಂಸೆ ಗಿಟ್ಟಿಸಿಕೊಳ್ಳೋಕೆ ಇಲ್ಲೊಂದು ಜಾದೂ ಇದೆ. ಮಾಡಿ ನೋಡ್ತೀರ ತಾನೇ? 

ಬೇಕಾಗುವ ವಸ್ತುಗಳು: ಪ್ಲಾಸ್ಟಿಕ್‌ ಕಪ್‌ಗ್ಳು, ಐಸ್‌ಕ್ಯೂಬ್‌, ಫ‌ುಡ್‌ ಕಲರ್‌ ಲಿಕ್ವಿಡ್‌ಗಳು, ಸ್ಪ್ರೆ„ಟ್‌, ಸೋಡಾ ಅಥವಾ ನೀರಿನ ಬಣ್ಣದ ಯಾವುದೇ ಜ್ಯೂಸ್‌. 

ಪ್ರದರ್ಶನ: ಪ್ರೇಕ್ಷಕರ ಮುಂದೆ ಜಾದೂಗಾರ ಪ್ಲಾಸ್ಟಿಕ್‌ ಲೋಟಗಳನ್ನು ತಂದಿಡುತ್ತಾನೆ. ಅದರಲ್ಲಿ ಐಸ್‌ ಕ್ಯೂಬ್‌ಗಳಿರುತ್ತವೆ. ಬಾಯಲ್ಲಿ ಮಂತ್ರ ಜಪಿಸುತ್ತಾ ಸೋಡಾವನ್ನು ಲೋಟಕ್ಕೆ ಸುರಿಯುತ್ತಾನೆ. ನಿಧಾನಕ್ಕೆ ಒಂದೊಂದು ಲೋಟದ ಬಣ್ಣವೂ ಬದಲಾಗುತ್ತದೆ!

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್‌ ಲೋಟದ ತಳದಲ್ಲಿ. ಅಂದರೆ, ಲೋಟಗಳಿಗೆ ಐಸ್‌ ಕ್ಯೂಬ್‌ ಹಾಕುವ ಮುಂಚೆ ಫ‌ುಡ್‌ ಕಲರ್‌ ಲಿಕ್ವಿಡ್‌ನ್ನು ಹಾಕಿ, ಒಣಗಲು ಬಿಡಿ. ಒಣಗಿದ ನಂತರ ಐಸ್‌ ಕ್ಯೂಬ್‌ಗಳನ್ನು ಹಾಕಿ. ಅತಿಥಿಗಳ ಮುಂದೆ ಆ ಲೋಟಗಳನ್ನಿಟ್ಟು, ಅವರವರ ಭವಿಷ್ಯ ಹೇಗಿರುತ್ತದೋ ಹಾಗೆ ಲೋಟದ ಬಣ್ಣ ಬದಲಾಗುತ್ತದೆ ಎಂದು ಹೇಳಿ. ಬಣ್ಣ  ಹಸಿರಾದರೆ ಅವರ ಆರೋಗ್ಯ ಚೆನ್ನಾಗಿರುತ್ತದೆಂದೂ, ಹಳದಿಯಾದರೆ ಒಬ್ಬ ಒಳ್ಳೆಯ ಸ್ನೇಹಿತ ಸಿಗುತ್ತಾನೆಂದೂ, ನೀಲಿಯಾದರೆ ಧನಲಾಭ…ಹೀಗೆ ಅವರಲ್ಲಿ ಕುತೂಹಲ ಮೂಡಿಸಿ. ಅವರ ಎದುರಿಗೇ ಲೋಟಕ್ಕೆ ಸ್ಪ್ರೆ„ಟ್‌ ಸುರಿಯಿರಿ. ನಿಧಾನಕ್ಕೆ ಐಸ್‌ ಕರಗಿ, ಅದರಡಿಯ ಬಣ್ಣ ಎಲ್ಲೆಡೆ ಹರಡಿ ಜ್ಯೂಸ್‌ನ ಬಣ್ಣ ಬದಲಾಗುತ್ತದೆ.

ಅತಿಥಿಗಳಿಗೆ ಜ್ಯೂಸ್‌ ಕೊಡುವ ಒಂದೆರಡು ನಿಮಿಷಗಳ ಮುಂಚೆ ಐಸ್‌ ಕ್ಯೂಬ್‌ ಹಾಕಬೇಕು. ಇಲ್ಲದಿದ್ದರೆ ಐಸ್‌ ಕರಗಿ ಜಾದೂವಿನ ರಹಸ್ಯ ಬಯಲಾಗುವ ಸಂಭವವಿರುತ್ತದೆ. ಪ್ರದರ್ಶನಕ್ಕೂ ಮುನ್ನ ಒಂದೆರಡು ಬಾರಿ ಪ್ರಯೋಗ ಮಾಡಿ ನೋಡಿ. ಆರೋಗ್ಯಕರ ಬಣ್ಣಗಳನ್ನಷ್ಟೇ ಬಳಸಿ.

ಟಾಪ್ ನ್ಯೂಸ್

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.