ರಘು ಶೆಟ್ಟರಿಗೆ ಮಂಡೆಚ್ಚ ಪ್ರಶಸ್ತಿ

Team Udayavani, Dec 14, 2018, 6:00 AM IST

7.jpg

ದಿ| ದಾಮೋದರ ಮಂಡೆಚ್ಚರು ಯಕ್ಷಗಾನದ ದಂತಕಥೆ. ಅನೇಕ ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಭಾಗವತರಾಗಿ, ಭಾಗವತಿಕೆಯಲ್ಲಿ ಸಂಗೀತ ಶೈಲಿಯ ಹರಿಕಾರರಾಗಿ, ಯಕ್ಷಗಾನವೆಂಬ ಆಗಸದಲ್ಲಿ ಧ್ರುವ ನಕ್ಷತ್ರವಾಗಿ ಕೀರ್ತಿಶಾಲಿಗಳಾದವರು. ಇಂತಹ ಮಹೋನ್ನತ ಸಾಧಕನ ನೆನಪು ಜನಮಾನಸದಲ್ಲಿ ಸದಾ ಹಸಿರಾಗಿರಬೇಕೆಂಬ ಉದ್ದೇಶದಿಂದ ದಿ| ಕುಬಣೂರು ಶ್ರೀಧರರಾಯರು ಉಜಿರೆಯಲ್ಲಿ “ಮಂಡೆಚ್ಚ ಪ್ರಶಸ್ತಿ’ಯನ್ನು ಸ್ಥಾಪಿಸಿ ಮಂಡೆಚ್ಚರ ಒಡನಾಡಿಗಳಾಗಿದ್ದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿಕೊಂಡು ಬರುತ್ತಿದ್ದರು. ಮಿಜಾರು ಅಣ್ಣಪ್ಪ, ಕೋಳ್ಯೂರು ರಾಮಚಂದ್ರ ರಾವ್‌, ಮಂಕುಡೆ ಸಂಜೀವ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ, ಜೆಪ್ಪು ದಯಾನಂದ ಶೆಟ್ಟಿ ಮೊದಲಾದವರಿಗೆ ಈ ಪ್ರಶಸ್ತಿ ಸಂದಿದೆ. ಇದೀಗ ಕುಬಣೂರು ದಿವಂಗತರಾದ ಮೇಲೆ ಅವರ ಒಡನಾಡಿಗಳು ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, 2018ನೇ ಸಾಲಿನ ಮಂಡೆಚ್ಚ ಪ್ರಶಸ್ತಿಯನ್ನು ಅರವತ್ತೆಂಟರ ಕಲಾಯೋಗಿ, ಮಂಡೆಚ್ಚರೊಂದಿಗೆ ಸುಮಾರು ಮೂರು ದಶಕಗಳ ಒಡನಾಡಿ ಬಾಯಾರು ರಘು ಶೆಟ್ಟರಿಗೆ ಪ್ರದಾನಿಸಲಾಗುತ್ತಿದೆ. 

 ರಘು ಶೆಟ್ಟರು ಕಾಸರಗೋಡು ಜಿಲ್ಲೆಯವರು.ಅವರ ತಂದೆ ದಿ| ಪೈವಳಿಕೆ ಐತಪ್ಪ ಶೆಟ್ಟರು ಖ್ಯಾತ ಸ್ತ್ರೀವೇಷಧಾರಿಗಳಾಗಿದ್ದರು. ಕರ್ನಾಟಕ ಮೇಳದ ಸೀನು-ಸೀನರಿಗಳನ್ನೊಳಗೊಂಡ ಯಕ್ಷಗಾನಗಳನ್ನು ನೋಡುತ್ತಿದ್ದುದರಿಂದ ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ತಂದೆಯವರಲ್ಲಿ ಆಸೆಯನ್ನು ನಿವೇದಿಸಿಕೊಂಡಾಗ, ಅವರೇ ನಾಟ್ಯವನ್ನು ಕಲಿಸಿ, ದಿ| ಕಲ್ಲಾಡಿ ವಿಠಲ ಶೆಟ್ಟಿಯವರಲ್ಲಿ ಮಾತಾಡಿ 1964ರಲ್ಲಿ ಕರ್ನಾಟಕ ಮೇಳಕ್ಕೆ ಸೇರಿಸಿದರು. ಅನಂತರದ್ದು ಈಗ ಚರಿತ್ರೆ. ಕರ್ನಾಟಕ ಮೇಳ ನಿಲ್ಲುವವರೆಗೂ ಆ ಮೇಳದಲ್ಲಿ 34 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಬೋಳಾರ್‌, ರಾಮದಾಸ ಸಾಮಗ, ಕೋಳ್ಯೂರು, ಅಳಕೆ, ಮಿಜಾರು ಮೊದಲಾದ ಅತಿರಥರ ಗರಡಿಯಲ್ಲಿ ಪಳಗಿದರು.

ಮೇಳದಲ್ಲಿ ಯಾರೇ ರಜೆ ಮಾಡಿದರೂ ಆ ಪಾತ್ರವನ್ನು ನಿರ್ವಹಿಸುತ್ತಿದ್ದವರು ರಘು ಶೆಟ್ಟರು. ಮಂಡೆಚ್ಚರ ಮೊದಲ ಆಯ್ಕೆ ರಘು ಶೆಟ್ಟರಾಗಿದ್ದರು. ನಾಯಕ, ಪ್ರತಿ ನಾಯಕ, ಸ್ತ್ರೀ, ಹಾಸ್ಯ ಎಲ್ಲ ಪಾತ್ರಗಳಲ್ಲೂ ಸೈ ಅನಿಸಿಕೊಂಡಿದ್ದರು. ಕರ್ನಾಟಕ ಮೇಳ ನಿಂತ ಮೇಲೆ ಸುಂಕದಕಟ್ಟೆ ಮೇಳದಲ್ಲಿ 14 ವರ್ಷ ವ್ಯವಸಾಯ ಮಾಡಿ, 6 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವಿದನಾಗಿ ದುಡಿಯುವುದರೊಂದಿಗೆ 1ನೇ ಮೇಳದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ. 15ರಂದು ಕಟೀಲಿನ ಯಕ್ಷಗಾನ ಕೇಂದ್ರದ ಸಹಯೊಗದಲ್ಲಿ ಕಟೀಲಿನಲ್ಲಿ ನಡೆಯಲಿದೆ. 

 ಡಾ| ಶ್ರುತಕೀರ್ತಿ ರಾಜ್‌ 

ಟಾಪ್ ನ್ಯೂಸ್

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.