ನಾವು ನೋಡಿದ ಸಿನಿಮಾ

Team Udayavani, May 12, 2020, 7:06 AM IST

ನಾವು ನೋಡಿದ ಸಿನಿಮಾ

– ಚಿತ್ರ- ಉಯರೇ
– ಭಾಷೆ- ಮಲಯಾಳಂ
– ಸಮಯ- 125 ನಿಮಿಷ
– ಎಲ್ಲಿ ಸಿಗುತ್ತದೆ?- ನೆಟ್‌ಫಿಕ್ಸ್

2019ರಲ್ಲಿ ಬಿಡುಗಡೆಯಾಗಿ, ಅಪಾರ ಜನಮೆಚ್ಚುಗೆ ಪಡೆದ ಚಿತ್ರ ಉಯರೇ. ಮೇಲ್ನೋಟಕ್ಕೆ ಇದು ಆ್ಯಸಿಡ್‌ ಸಂತ್ರಸ್ತೆಯೊಬ್ಬಳ ಯಶೋಗಾಥೆ. ಆದರೆ, ಈ ಸಿನಿಮಾ ಅಷ್ಟನ್ನು ಮಾತ್ರ ಹೇಳುವುದಿಲ್ಲ. ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಪುರುಷ ಪ್ರಧಾನ ಸಂಸ್ಕೃತಿಯ ದರ್ಪ, ಹೆಣ್ಣು ಸದಾ ತನ್ನ ಅಧೀನದಲ್ಲಿ ಇರಬೇಕು ಎಂದು ಬಯಸುವ ಗಂಡು, ಅದನ್ನು ಸಮರ್ಥಿಸಿಕೊಳ್ಳುವ ಬಗೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ದೌರ್ಬಲ್ಯ, ಒಂದು ಯಶಸ್ಸಿನ ಹಿಂದೆ ಹೊರಟಾಗ ಎದುರಾಗುವ ಅಡ್ಡಿ- ಆತಂಕಗಳು… ಇದನ್ನೆಲ್ಲಾ ಈ ಚಿತ್ರ ವಿವರವಾಗಿ ತೆರೆದಿಡುತ್ತದೆ. ಪೈಲಟ್‌ ಆಗಬೇಕು ಎಂಬ ಸದಾಶಯದ ನಾಯಕಿ ಇರುತ್ತಾಳೆ. ಅವಳಿಗೆ ಒಬ್ಬ ಬಾಯ್‌ಫ್ರೆಂಡ್‌. ಇವಳು ಪೈಲಟ್‌ ತರಬೇತಿಗೆ ಸೇರುತ್ತಾಳೆ.

ದಿನಗಳು ಕಳೆದಂತೆ, ನೀನು ಹೀಗೇ ಇರಬೇಕು, ನಾನು ಹೇಳಿದಂತೆಯೇ ಕೇಳಬೇಕು- ಬಾಳಬೇಕು ಎಂದೆಲ್ಲಾ ಬಾಯ್‌ಫ್ರೆಂಡ್‌ ಒತ್ತಡ ಹಾಕಲು ತೊಡಗುತ್ತಾನೆ. ತರಗತಿಗಳನ್ನು ಬಂಕ್‌ ಮಾಡಿ ನನ್ನೊಂದಿಗೆ ಸುತ್ತಾಡಲು ಬಾ ಅನ್ನುತ್ತಾನೆ. ಇಂಥ ಕಿರಿಕಿರಿಗಳಿಂದ ಬೇಸತ್ತು, ನಿನ್ನ ಸಹವಾಸ ಸಾಕು ಎಂದು ಅವನಿಗೆ ಗುಡ್‌ ಬೈ ಹೇಳುತ್ತಾಳೆ ನಾಯಕಿ. ಅಷ್ಟೇ ಅಲ್ಲ, ಆ ಕ್ಷಣದಿಂದಲೇ ಅವನನ್ನು ಅವಾಯ್ಡ್ ಮಾಡುತ್ತಾಳೆ. ಇದರಿಂದ ರೊಚ್ಚಿಗೆದ್ದ ಅವನು, ಒಂದು ದಿನ ಇವಳಿಗೆ ಆ್ಯಸಿಡ್‌ ಎರಚಿಬಿಡುತ್ತಾನೆ! ಪರಿಣಾಮ, ಮುದ್ದು ಮುಖದ ನಾಯಕಿ, ವಿಕಾರ ರೂಪಿನ ಆ್ಯಸಿಡ್‌
ಸಂತ್ರಸ್ತೆಯಾಗಿ ಬದಲಾಗುತ್ತಾಳೆ.

ತನ್ನ ಭವಿಷ್ಯವನ್ನೇ ಹಾಳು ಮಾಡಿದವನಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ, ನಾಯಕಿ ಕೋರ್ಟ್‌ ಮೊರೆ ಹೋಗುತ್ತಾಳೆ. ಆದರೆ, ಸಾಕ್ಷ್ಯಾಧಾರದ ಕೊರತೆಯಿಂದ ಅಲ್ಲಿ ಕೇಸ್‌ ಬಿದ್ದು ಹೋಗುತ್ತದೆ. ಆನಂತರ ಏನಾಗುತ್ತದೆ? ನಾಯಕಿ ಪೈಲಟ್‌ ಆಗುತ್ತಾಳಾ? ಆ್ಯಸಿಡ್‌ ಎರಚಿದವನಿಗೆ ಶಿಕ್ಷೆ ಆಗುತ್ತದಾ?- ಈ ಪ್ರಶ್ನೆಗಳಿಗೆ ಉತ್ತರಬೇಕೆಂದರೆ, ಉಯರೇ ಚಿತ್ರವನ್ನು ತಪ್ಪದೇ ನೋಡಬೇಕು. ಸಂಶಯವೇ ಬೇಡ. ಇದು ಕುಟುಂಬದವರೆಲ್ಲಾ ಕೂತು ನೋಡಬಹುದಾದ ಅತ್ಯುತ್ತಮ ಚಿತ್ರ. ಮನೆಯೊಳಗೆ ತಂದೆ- ಮಗಳ ಸಂಬಂಧ ಹೇಗಿರಬೇಕು? ಮಕ್ಕಳ ವಿಷಯದಲ್ಲಿ ಪೋಷಕರು ಏನೆಲ್ಲಾ ಎಚ್ಚರ ವಹಿಸಬೇಕು? ಎಲ್ಲಾ ವಿಚಾರಗಳನ್ನೂ ತಂದೆಯೊಂದಿಗೆ ಹೇಳಲು ಆಗದೇ ಹೋದಾಗ ಹೆಣ್ಣು ಮಕ್ಕಳು ಹೇಗೆ ಒದ್ದಾಡುತ್ತಾರೆ? ತಮ್ಮ ಸಮಸ್ಯೆಯನ್ನು
ಯಾರೊಂದಿಗೆ ಹೇಳಿಕೊಳ್ಳುತ್ತಾರೆ? ಒಂದು ಸಾಧನೆಯ ಹಿಂದೆ ಹೊರಟಾಗ, ಅಡೆತಡೆಗಳು ಹೇಗೆಲ್ಲಾ ನಮ್ಮನ್ನು ಬೇಟೆಯಾಡುತ್ತವೆ? ನಮ್ಮ ನ್ಯಾಯಾಂಗ ವ್ಯವಸ್ಥೆ ದುರ್ಬಲ ಅನಿಸುವುದು ಯಾವಾಗ?- ಇಂಥವೇ ಹಲವು ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಪಾರ್ವತೀ ಮೆನನ್‌ ಅವರ ಸಂಯಮದ ಅಭಿನಯ ಇಡೀ ಚಿತ್ರದ ಹೈಲೈಟ್‌.

ಬಾಲು ವಿ.ಎಲ್‌. ಮಲ್ಲೇಶ್ವರಂ, ಬೆಂಗಳೂರು

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.