Udayavni Special

ರಾಧೆಯ ಸ್ವಗತ


Team Udayavani, Jun 2, 2020, 5:06 AM IST

krish radha

ರಾಧೆಯ ಮುಪ್ಪಿನಲ್ಲಿ ಕೃಷ್ಣ ತನ್ನ ಮನದರಿಸಿಯನ್ನು ಭೇಟಿಯಾಗಲು ಬಂದಿದ್ದಾನೆ. ಆವತ್ತು ರಾಧೆ ಭೋರ್ಗರೆಯುವ ನದಿಯಾಗಿದ್ದರೆ, ಮುರಾರಿ ನೀರ  ಮಧ್ಯದ ಕಲ್ಲು ಬಂಡೆಯಾಗಿದ್ದ.

ಗೋಪಾಲ, ಹೇಗಿದ್ದಿ..? ನಾನು… ಗುರ್ತು ಸಿಗಲಿಲ್ಲವಾ..? ಮರದ ಮರೆಯಲ್ಲಿ ನಿನ್ನ ಅಪ್ಪಿದವಳು, ಕೊಳಲ ನಾದಕ್ಕೆ ತಲೆದೂಗಿದವಳು, ಕಡೆದಿಟ್ಟ ಮಜ್ಜಿಗೆಯ ಮೇಲೆ ನಿನ್ನೆಸರ ತಿದ್ದಿದವಳು, ಕೈಮೇಲೆ ಮದರಂಗಿ, ತಲೆಗೆ ಜಡೆ ಹಾಕಿಸಿಕೊಂಡವಳು, ನೀ ಹೋಗುವಾಗ, ಕಿಟಕಿಯ ಸರಳುಗಳನ್ನಿಡಿದು ದೂರದಿಗಂತ ದಿಟ್ಟಿಸುತ್ತಾ ನಿಂತವಳು… ರಾಧೆ ಅಂತ ನನ್ನ ಹೆಸರು. ಹೇಗಿದ್ದಿಯೋ ಗೋಪಾಲ..? ಕೊಳಲೇನಾಯಿತು? ಅಯ್ಯೋ… ನಾನೆಷ್ಟು ದಡ್ಡಿ ನೋಡು.. ನನ್ನನ್ನು ನೋಡಲು ಬಂದ ನವನೀತನನ್ನು, ದಾರಿಯಲ್ಲೇ ನಿಲ್ಲಿಸಿ ಮಾತನಾಡುತ್ತಿದ್ದೇನೆ.

ಬನ್ನಿ ದೊರೆ.. ಈಗಷ್ಟೇ ತೆಗೆದಿಟ್ಟ ಬೆಣ್ಣೆ ಇದೆ. ನಾವಿಬ್ಬರೂ ನೆಟ್ಟ ಸಸಿಗಳೀಗ ಹೆಮ್ಮರವಾಗಿವೆ. ಅಗೋ ನೋಡಿ… ಇವು ನಿಮ್ಮ ಕೊಳಲ ನಾದಕ್ಕೆ  ಕಾಯುತ್ತಿದ್ದ ಗೋವುಗಳ ಎಷ್ಟನೇ ತಳಿಗಳ್ಳೋ.. ಇದೇ ಮರದ ಹಿಂದಲ್ಲವಾ ನಾನು, ನೀನು ಮರೆಯಾಗುತ್ತಿದ್ದದ್ದು… ಎಷ್ಟು ಬದಲಾಗಿದೆಯಲ್ಲವಾ ವೃಂದಾವನ? ಬದಲಾಗದಿರೋದು ಈ ರಾಧೆಯ ಪ್ರೀತಿಯೊಂದೇ. ನೀನು ಹೋದ ಮೇಲೆ,  ಊಟಕ್ಕೆ ಪರ್ಯಾಯವಾಗಿ ಎಷ್ಟೋ ಸಾರಿ ನೆನಪುಗಳನ್ನು ಬಳಸಿದ್ದೀನಿ. ಇದೇ ಮರದ ನೆರಳಿಗೆ ಮೈ ಚಾಚಿ ಮಲಗಿದೀನಿ. ಎಷ್ಟು ಚಂದವಿತ್ತು ಆ ಬಾಲ್ಯ… ಕೊಳಲ ಸದ್ದಾದರೆ ಸಾಕು, ನಿನ್ನಲ್ಲಿಗೆ ಓಡಿಬರುತ್ತಿದ್ದೆ.

ಅಷ್ಟು ಗೋಪಿಕೆಯರ  ಮಧ್ಯೆ, ನಿನ್ನ ಕಣ್ಣು ನನ್ನೊಬ್ಬಳನ್ನೇ ದಿಟ್ಟಿಸುವಾಗ ಅದೆಂಥ ಪುಳಕ ಅಂತೀಯಾ..! ಬೆಣ್ಣೆ ಕದ್ದಾಗ ಬೈಸಿಕೊಂಡು ನಮ್ಮನೆಗೆ ಓಡಿ ಬಂದು, ನನ್ನ ಬೆನ್ನ ಹಿಂದೆ ಅಡಿಗಿಕೊಳ್ಳುತ್ತಿದ್ದೆಯಲ್ಲ, ನೆನಪಿದೆಯಾ..? ಹೋ… ಯುದ್ಧ ಮುಗಿಸಿ  ಬಂದೆಯಾ..!? ಧರ್ಮ ಗೆದ್ದಿತಾ..!? ಅದಿರಲಿ ಕೃಷ್ಣಾ, ಜಗದ ಉದ್ಧಾರ ಮಾಡುವ ಆಶಯದಿಂದ ನೀನೇನೋ ಇಲ್ಲಿಂದ ಹೊರಟುಹೋದೆ. ಕೊಳಲೂದಿ, ಎದೆಯೊಳಗಿನ ದುಃಖವನ್ನೆಲ್ಲಾ ಹೊರಹಾಕಿದೆ.

ಆದರೆ ನನ್ನ ಕಥೆ?  ಆವತ್ತು  ಆಗಷ್ಟೇ ಇರುಳಿಳಿದು ಕಾರ್ಗತ್ತಲು ಕವಿದಿತ್ತು. ಮಿನುಗುತ್ತಿದ್ದ ಚುಕ್ಕೆಗಳನ್ನು ಬಿಟ್ಟರೆ ಮತ್ತೂಂದು ಬೆಳಕೇ ಇರಲಿಲ್ಲ. ನೀನು ಹಿಂತಿರುಗಿ ನೋಡದೇ ಹೋಗಿಬಿಟ್ಟೆ. ನಂತರ ಇಲ್ಲೇನಾಯ್ತು ಗೊತ್ತಾ? ಗೋಪಾಲನ ನೆನಪಿನಲ್ಲೇ ಈ ರಾಧೆ ಹುಚ್ಚಿಯಂತಾದಳು. ಗೋಕುಲದ ಯಾವ ಮೂಲೆಗೆ  ಹೋದರೂ, ಕೊಳಲನಾದ ಕೈ ಬೀಸಿ ಕರೆದಂತಾಗುತ್ತಿತ್ತು. ನಿನ್ನ ಅಗಲಿಕೆ ನನ್ನ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿತು. ಅದರ ಹಿಂದೆಯೇ ಈ ಜನರ ಚುಚ್ಚುಮಾತು  ಬೇರೆ… ಸಾವಿಗಿಂತ ಲೋಕಾಪವಾದವೇ ತುಂಬಾ ಹೆದರಿಸುತ್ತೆ ಮುರಾರಿ. ತುಂಬಾ ಹೆದರಿಸಿಬಿಡುತ್ತೆ.

ಕೃಷ್ಣ ಏಕೆ ನನ್ನ ಬಿಟ್ಟು ಹೋದ..? ಅಂತ ಪ್ರಶ್ನಿಸಿಕೊಂಡರೆ ಉತ್ತರವಾಗಿ ಕಣ್ಣ ಮುಂದೆ ಬಂದು ನಿಲ್ಲುವುದು ಕತ್ತಲೆ. ಘನವಾದ ಕತ್ತಲೆ. ಈಗ ಮತ್ತೆ ಬೆಳಕು  ಬಂದಿದೆ. ಕೊಟ್ಟ ಮಾತಿನಂತೆ, ರಾಧೆಯ ಇಳಿ ವಯಸ್ಸಿನಲ್ಲೂ ಗೋಪಾಲ ಮತ್ತೆ ಬಂದಿದ್ದಾನೆ! ನನಗೆ ಪರಮಾತ್ಮ ಕೃಷ್ಣ ಬೇಡ, ನನ್ನ ಗೊಲ್ಲ ಕೃಷ್ಣ ಬೇಕು, ತುಂಟ ಕೃಷ್ಣ ಬೇಕು. ಈ ರಾಧೆಯ ಕೊನೆ ಕೋರಿಕೆಯೊಂದೇ ಮಾಧವ. ಇನ್ನೊಮ್ಮೆ ಕೊಳಲೂದಿ  ಬಿಡು. ಈ ರಾಧೆಯ ಬಡಜೀವ, ತನ್ನ ಪ್ರೇಮ ಮೂರ್ತಿಯ ಪದತಲದಲ್ಲಿ ಲೀನವಾಗಿ  ಬಿಡುತ್ತದೆ.

* ಕಿರಣ ನಾಯ್ಕನೂರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

ಡಾ|ಟಿಎಂಎ ಪೈ ಆಸ್ಪತ್ರೆ; 3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

vikas-dube

ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ

Bridge-Singh

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಸಂದರ್ಶನ: ದೇಶವನ್ನು ಮೊಬೈಲ್‌ ಹ್ಯಾಂಡ್‌ಸೆಟ್‌ ಹಬ್‌ ಆಗಿಸುವ ಗುರಿ

ಸಂದರ್ಶನ: ದೇಶವನ್ನು ಮೊಬೈಲ್‌ ಹ್ಯಾಂಡ್‌ಸೆಟ್‌ ಹಬ್‌ ಆಗಿಸುವ ಗುರಿ

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nanyake

ನಾನ್ಯಾಕೆ ಫೇಲಾದೆ?

farmer

ಐಎಎಸ್‌ ಮಾಡಬೇಕಿದ್ದವನು ಕೃಷಿಕನಾದೆ…

lokamanya

ಕರ್ತವ್ಯ ಪ್ರಜ್ಞೆಯ ಪಾಠ

anna-muchchale

ಕಣ್ಣಾ ಮುಚ್ಚೇ ಕಾಡೇ ಗೂಡೆ…

kopa-maatu

ಕೋಪವೇ ಹೇಳಿದ ಮಾತಿದು…

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

Kasargod: 11 people positive

ಕಾಸರಗೋಡು: 11 ಮಂದಿಗೆ ಪಾಸಿಟಿವ್‌

3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

ಡಾ|ಟಿಎಂಎ ಪೈ ಆಸ್ಪತ್ರೆ; 3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

ಕೊಡಗು ಜಿಲ್ಲೆ 26 ಹೊಸ ಪ್ರಕರಣ

ಕೊಡಗು ಜಿಲ್ಲೆ 26 ಹೊಸ ಪ್ರಕರಣ

ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧ

ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧ

vikas-dube

ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.