CONNECT WITH US  
echo "sudina logo";

ಭವಿಷ್ಯ

ಮೇಷ
ಆಯ್ಕೆ, ಅವಕಾಶಗಳು ಒದಗಿ ಬಂದಾವು. ನಿಮ್ಮ ಸುತ್ತಲಿನ ಪರಿಸ್ಥಿತಿಯು ಸುಧಾರಿಸಲಿದೆ. ಹೊಸ ಅವಕಾಶಕ್ಕಾಗಿ ಎದುರು ನೋಡುತ್ತ ಮುಂದೆ ಸಾಗಲಿದ್ದೀರಿ. ನೈತಿಕವಾಗಿ ನಿಭಾಯಿಸುವ ಅಗತ್ಯ ನಿಮಗೆ ಬೇಕಾದೀತು. ವೃತ್ತಿರಂಗದಲ್ಲಿ ಗಾಸಿಪ್‌ಗ್ಳೇ ದೊಡ್ಡ ಅಡ್ಡಿಯಾದಾವು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತೋರಿಬಂದು ಧನಭಾಗ್ಯ ವೃದ್ಧಿಯಿದೆ. ಕೌಟುಂಬಿಕವಾಗಿ ಕೆಲವೊಂದು ವಿಷಯಗಳನ್ನು ನಿಭಾಯಿಸಲು ನೀವು ಹೆಣಗಾಡಬೇಕಾದೀತು. ಹತಾಶರಾಗಬೇಡಿ. ನಿಮ್ಮ ಕೌಶಲವನ್ನು ಒರೆಗೆ ಹಚ್ಚಿ, ಯಶಸ್ಸು ಅನುಭವಕ್ಕೆ ಬರಲಿದೆ. ಶುಭ ವಾರ: ಸೋಮ, ಮಂಗಳ, ಬುಧವಾರ.
ವೃಷಭ
ಕಾರ್ಯಕ್ಷಮತೆಯ ದುಡಿಮೆಯ ಮೌಲ್ಯಕ್ಕೆ ಪ್ರತಿಫ‌ಲ ಇದ್ದೇ ಇರುತ್ತದೆ. ಅಧ್ಯಾತ್ಮದೆಡೆಗೆ ನಿಮ್ಮ ಚಿಂತನೆ ಸಾಗಲಿದೆ. ಸಂಸಾರ ಪ್ರೀತಿಯ ಗುಟ್ಟನ್ನು ತಿಳಿಸಲಿದೆ. ಕರ್ತವ್ಯಪ್ರಜ್ಞೆ ನಿಮ್ಮನ್ನು ಜಾಗ್ರತಗೊಳಿಸಲಿದೆ. ಸರಿಯಾದ ಮಾರ್ಗದರ್ಶನ ನಿಮಗೆ ದಾರಿದೀಪವಾದೀತು. ರಾಜಕೀಯದವರಿಗೆ ವಿವಾದದಲ್ಲಿ ಸಿಕ್ಕಿಕೊಳ್ಳದಂತೆ ದೂರವಿದ್ದಷ್ಟೂ ಉತ್ತಮ. ಅವಿವಾಹಿತರ ಮನಸ್ಸು ವೈವಾಹಿಕ ಸಂಬಂಧ ಗಳಿಗೆ ಸ್ಪಂದಿಸಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಒಪ್ಪಂದ ಬದಲಾವಣೆ, ವಿಸ್ತರಣೆಗಳಿಗೆ ಅವಕಾಶಗಳಿವೆ. ಶುಭವಾರ: ಮಂಗಳ, ಬುಧ, ಶುಕ್ರವಾರ.
ಮಿಥುನ
ಕಾರ್ಯಕ್ಷೇತ್ರದಲ್ಲಿ ಗೌರವಕ್ಕೆ ಸಂಬಂಧಿಸಿದಂತೆ ರಾಜಿ ಆಗ ಬಾರದು. ಸ್ವಾಭಿಮಾನ ನಿಮಗೆ ಪೂರಕವಾದೀತು. ಪೌರೋಹಿತ್ಯ, ಯಾಗ, ಯಜ್ಞ ಪೂಜೆ, ಪ್ರತಿಷ್ಠಾಪನೆ ಇತ್ಯಾದಿ ದೇವತಾ ಆರಾಧನೆಯ ವೃತ್ತಿಯವರಿಗೆ ಸಾಮಾಜಿಕವಾಗಿ ಗೌರವ ಹಾಗೂ ಧನಾಗಮನವಿದೆ. ಉದ್ದಿಮೆದಾರರ ಕುಂಠಿತಗೊಂಡ ಉತ್ಪಾದನೆ ಲಾಭದಾಯಕವಾದೀತು. ಹಳೆಯ ಸಂಬಂಧಗಳೆಲ್ಲ ಪುನಃ ನಿಮ್ಮನ್ನು ಸುತ್ತಿ ಕೊಳ್ಳಲಿವೆ. ಸಾಂಸಾರಿಕವಾಗಿ ನಿಮ್ಮ ಬಳಗವನ್ನು ವಿಸ್ತರಿಸಿಕೊಳ್ಳುವಾಗ ಸ್ವಲ್ಪ ಜಾಣ್ಮೆ ತೋರಿಸಿರಿ. ಶುಭವಾರ: ಬುಧ, ಗುರು, ಶನಿವಾರ.
ಕಟಕ
ಕಾರ್ಯರಂಗದಲ್ಲಿ ಅರ್ಥಪೂರ್ಣ ಸಂಬಂಧಗಳಿಗೆ ಹುಡುಕಾಟ ನಡೆಯಲಿವೆ. ಹಾಗೆ ನಿಮ್ಮೆಲ್ಲ ಸಂಬಂಧಗಳು ಜಾರುಹಾದಿಯಲ್ಲಿವೆ. ಯಾವುದೇ ವಿವಾದಕ್ಕೆ ಸಿಲುಕದಿರಿ. ಆರ್ಥಿಕವಾಗಿ ಒಳ್ಳೆಯ ಸಲಹೆ, ಉತ್ತಮ ಹೂಡಿಕೆ ಹಣದ ವಿಚಾರದಲ್ಲಿ ಮುಖ್ಯವಾದೀತು. ಕೌಟುಂಬಿಕವಾಗಿ ಸಂಬಂಧಗಳಲ್ಲಿ ಅಂತರ ಕಾಣಿಸಿಕೊಂಡೀತು. ಅಭಿಪ್ರಾಯ ವ್ಯತ್ಯಾಸದಿಂದಾಗಿ ಗೆಳೆಯರು ದೂರವಾದಾರು. ನಾಲ್ಕು ಗೋಡೆಯ ಮಧ್ಯೆ ಕೂರುವುದಕ್ಕಿಂತ ಹೊರ ಪ್ರಪಂಚಕ್ಕೆ ಕಾಲಿಡಲು ಸದ್ಯದಲ್ಲೇ ಸಾಧ್ಯವಾದೀತು. ಶುಭವಾರ: ಗುರು, ಶುಕ್ರ, ಶನಿವಾರ.
ಸಿಂಹ
ವ್ಯರ್ಥ ದುರಭಿಮಾನಕ್ಕೆ ಒಳಗಾಗಿ ಉನ್ನತಿಯನ್ನು ಕಳೆದುಕೊಂಡೀರಿ, ಜೋಕೆ. ಕುಜನ ಅನುಗ್ರಹ ಬಲ ವೈವಾಹಿಕ ಭಾಗ್ಯಕ್ಕಾಗಿ ಕಾದು ಕುಳಿತವರಿಗೆ ಸಂತಸದ ನೋಟ ಮೂಡಲಿದೆ. ರಾಹುವಿನ ಪ್ರತಿಕೂಲತೆಯಿಂದ ಆಲಸ್ಯ ಮನೋಭಾವ, ನಿರಾಸಕ್ತಿ, ಕುತ್ಸಿತ ಬುದ್ಧಿಗೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಕರ್ತವ್ಯ ಪ್ರಜ್ಞೆ ಉತ್ತಮವಾದ ಫ‌ಲಿತಾಂಶವನ್ನು ತಂದುಕೊಟ್ಟಿàತು. ವ್ಯಾಪಾರ, ವ್ಯವಹಾರವು ಕೊಡು-ಕೊಳ್ಳುವುದರಲ್ಲಿ ಘಟಿಸುವುದಾದರೂ ಬಹುತೇಕವಾಗಿ ಹಣದ ಲೆಕ್ಕಾಚಾರದಲ್ಲಿ ಮುಕ್ತಾಯಗೊಳ್ಳಲಿದೆ. ಶುಭವಾರ: ಗುರು, ಶನಿ, ಭಾನುವಾರ.
ಕನ್ಯಾ
ಆರ್ಥಿಕವಾಗಿ ಲಾಭ-ನಷ್ಟದ ಲೆಕ್ಕಾಚಾರವನ್ನು ಗಟ್ಟಿಯಾಗಿ ಚಿಂತಿಸಬೇಕಾದ ಕಾಲವಿದು. ಜೀರ್ಣಶಕ್ತಿಯು ಪ್ರತಿನಿತ್ಯ ಏರುಪೇರಾಗಿ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ಅನುಷ್ಠಾನಗೊಳಿಸುವ ಶಿಸ್ತಿನ, ದಿಟ್ಟ ಜೀವನವನ್ನು ಕಲಿತುಕೊಳ್ಳಬೇಕಾಗುತ್ತದೆ. ವೃತ್ತಿರಂಗದ ಬದುಕಿನಲ್ಲಿ ಶ್ರೇಯಸ್ಸು, ಸುಖ, ಶಾಂತಿ ಲಭಿಸುವುದು. ಹಾಗೇ ಧಾರ್ಮಿಕವಾಗಿ ಧರ್ಮ ಜಿಜ್ಞಾಸುಗಳ ಸಂಪರ್ಕ, ಸಚ್ಚಾರಿತ್ರ್ಯವುಳ್ಳ ಸಹೃದಯರ ಸಹಕಾರವಿದೆ. ಶುಭವಾರ: ಗುರು, ಶನಿ, ಭಾನುವಾರ.
ತುಲಾ
ಸ್ವಯಂ ಜವಾಬ್ದಾರಿ ಇರುವ ನಿಮಗೆ ತಡವಾಗಿಯಾದರೂ ಸೈ ಪ್ರತಿಫ‌ಲ ಲಭಿಸುತ್ತದೆ ಎಂಬ ಅನುಭವ ಹಂತಹಂತವಾಗಿ ಗೋಚರಕ್ಕೆ ಬರಲಿದೆ. ನಿರ್ವಹಿಸುವ ಯಾವುದೇ ಕೆಲಸಕಾರ್ಯಗಳು ಬಾಳಿಗೆ ಭದ್ರತೆ ಒದಗಿಸಲಿದೆ. ಹಾಗೇ ಆರ್ಥಿಕವಾಗಿ ದುಡ್ಡನ್ನು ಹೊಳೆಗೆ ಬಿಸಾಡುವುದಾದರೂ ಅದಕ್ಕೊಂದು ಲೆಕ್ಕಾಚಾರ ಬೇಕು ಎಂಬ ವಿಚಾರ ನೆನಪಿರಬೇಕು. ಅನಾವಶ್ಯಕವಾಗಿ ಮಾನಸಿಕ ಚಿಂತನೆಯ ಚಕ್ರದಲ್ಲಿ ಸಿಲುಕದಿರಿ. ಸುಖಾಪೇಕ್ಷೆಯ ಅವಸರದಲ್ಲಿ ಯಾವುದೇ ನಿರ್ಧಾರ ಮಾಡಿಕೊಳ್ಳದಿರಿ. ಶುಭವಾರ; ಬುಧ, ಶುಕ್ರ, ಶನಿವಾರ.
ವೃಶ್ಚಿಕ
ಕಾರ್ಯಕ್ಷೇತ್ರದಲ್ಲಿ ಮನಸ್ಸಿನಾಳದ ಸುತ್ತ ಬಯಕೆಗಳು ಸದ್ಯದಲ್ಲೇ ಈಡೇರಲಿವೆ. ಸಾರ್ವಜನಿಕವಾಗಿ ನಾಗರಿಕ ಸೌಲಭ್ಯಗಳು ಒದಗಿ ಬರಲಿವೆ. ವೃತ್ತಿರಂಗದಲ್ಲಿ ನಿರ್ಭಯ ವಾತಾವರಣ ಉತ್ಸಾಹಕ್ಕೆ ಕಾರಣವಾಗಲಿದೆ. ಆರ್ಥಿಕವಾಗಿ ನಾನಾ ರೀತಿಯ ಧನಾಗಮನದಿಂದ ತಳಪಾಯ ಭದ್ರವಾಗಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಟುತ್ತಾ ನಡೆಯಲಿದೆ. ರಾಜಕೀಯ ವರ್ಗದವರಿಗೆ ಸಾಮರ್ಥ್ಯ ಮೆರೆಸಲು ಸಕಾಲವಾದೀತು. ಆರೋಗ್ಯಾಭ್ಯಾಸಕ್ಕಾಗಿ ಆಸ್ಪತ್ರೆಯ ಅಲೆದಾಟ ಅನಿವಾರ್ಯವಾದೀತು. ಕಾಳಜಿ ಮಾಡಿರಿ. ಶುಭವಾರ: ಶುಕ್ರ, ಶನಿ, ಭಾನುವಾರ.
ಧನು
ನಿರೀಕ್ಷಿತ ಆರ್ಥಿಕ ಸ್ಥಿತಿಯು ಉತ್ತಮಗೊಂಡು ಸಂಸಾರರಥ ಸರಿದೂಗಿಸಲು ಸಾಧಕವಾದೀತು. ರಾಹುವಿನ ಪ್ರತಿಕೂಲತೆಯಿಂದ ಆಗಾಗ ಮನಸ್ಸು ಬಹುತೇಕ ದಿಕ್ಕೆಟ್ಟ ಚಿಗರೆಯಂತೆ ಓಡುವುದಿದೆ. ಸಂಯಮವಿರಲಿ. ಕಾರ್ಯರಂಗದಲ್ಲಿ ಭೂತಕಾಲದ ಘಟನೆಯನ್ನು ಮರೆತುಬಿಟ್ಟು ತನ್ನ ಬದುಕಿನ ಸಮಸ್ತ ವರ್ತಮಾನ, ಭವಿಷ್ಯತ್ತಿನ ಬಗೆಗೆ ತೀರ್ಮಾನಿಸಿಕೊಂಡು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ಪ್ರಯತ್ನ ಬಲವೇ ಪೂರಕವಾಗಲಿದೆ. ಶುಭವಾರ: ಸೋಮ, ಗುರು, ಶನಿವಾರ.
ಮಕರ
ಅಪಾರ ನೀರಿಕ್ಷೆ ಇಟ್ಟುಕೊಂಡ ನಿಮಗೆ ಆಶಾಭಂಗವಾದೀತು.ಶೈಕ್ಷಣಿಕ ಕ್ಷೇತ್ರದಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗಿರಿ. ಮುಂದಡಿ ಇಡಿ. ಸಾಂಸಾರಿಕವಾಗಿ ಇತರರ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯ ವಾಗದು. ಹೊಂದಾಣಿಕೆಯೇ ಸರಿಯಾದ ನಿರ್ಧಾರವೆನಿಸಲಿದೆ. ಒಣಜಗಳ ಮುಜುಗರ ಸನ್ನಿವೇಶವನ್ನು ಅನುಭವಿಸಿರುವ ನೀವೀಗ ವಿಪರೀತ ಪ್ರಬುದ್ಧರಾಗಿದ್ದೀರಿ ಎಂಬುದನ್ನು ಮರೆಯದಿರಿ. ಕೊಂಚ ತಾಳ್ಮೆ ಬೆಳೆಸಿಕೊಳ್ಳಿರಿ. ಎಲ್ಲವೂ ನಿಧಾನವಾಗಿ ಒಂದು ಹಂತ ತಲುಪಲಿದೆ. ಶುಭವಾರ: ಮಂಗಳ, ಗುರು, ಶುಕ್ರವಾರ.
ಕುಂಭ
ಕಾರ್ಯಕ್ಷೇತ್ರದಲ್ಲಿ ಆತ್ಮವಿಮರ್ಶೆಗೆ ಸಕಾಲವು. ಕೆಲವೊಂದು ಸಮಸ್ಯೆಗಳನ್ನು ನೀವೇ ನಿಭಾಯಿಸಬೇಕಾದೀತು. ಹಂತಹಂತವಾಗಿ ಸಮಸ್ಯೆಗಳು,ವಿವಾದಗಳು ತನ್ನಿಂತಾನೇ ಮರೆಯಾಗಲಿವೆ. ಪ್ರಗತಿ ಇಲ್ಲದೆ ಯಾಂತ್ರಿಕ ಕ್ರಿಯೆಗಳಿಂದಾಗಿ ವೃತ್ತಿರಂಗದಲ್ಲಿ ನಿರಾಶೆ ಮೂಡಲಿದೆ. ಆರೋಗ್ಯಭಾಗ್ಯವು ನಷ್ಟವನ್ನು ಕೊಟ್ಟು, ಕ್ಲೇಶ ಉಂಟುಮಾಡಲಿದೆ. ಕಾಳಜಿ ವಹಿಸಿರಿ. ಕೌಟುಂಬಿಕವಾಗಿ ಹೆಚ್ಚಿನ ಉತ್ಸಾಹದ ಪ್ರತಿಕ್ರಿಯೆ ಸಿಗಲಾರದು. ಅನಿರೀಕ್ಷಿತ ರೂಪದಲ್ಲಿ ಕನ್ಯೆಯರಿಗೆ ವಿವಾಹಾದಿ ಮಂಗಲ ಕಾರ್ಯಗಳಿಗೆ ನಾಂದಿ ಹಾಡಲಿದೆ. ಶುಭವಾರ: ಬುಧ, ಶುಕ್ರ, ಭಾನುವಾರ.
ಮೀನ
ಏರುತ್ತಿರುವ ಜೀವನ ವೆಚ್ಚ ಆರ್ಥಿಕವಾಗಿ ಆತಂಕಕ್ಕೆ ಕಾರಣವಾದೀತು.ಶಿಕ್ಷಣ ವೃತ್ತಿಯವರು ತಮ್ಮ ಬದುಕಿಗೊಂದು ಗಟ್ಟಿ ನೆಲೆಯನ್ನು ಕಂಡುಕೊಂಡಾರು. ಹಿರಿಯ ಕಲಾವಿದರು ಸಾರ್ವಜನಿಕ ಮನ್ನಣೆಗಳಿಂದ ಗೌರವಿ ಸಲ್ಪಟ್ಟಾರು. ವಿದ್ಯಾರ್ಥಿಗಳಿಗೆ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ಉತ್ತಮ ಫ‌ಲಿತಾಂಶ ಸಿಗಲಿದೆ. ದೇಹ ಪ್ರಕೃತಿಯು ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಲಿದೆ. ಧಾರ್ಮಿಕ ಪ್ರವೃತ್ತಿಯವರಿಗೆ ಗೊಡ್ಡು ಸಂಪ್ರದಾಯಗಳದ್ದೇ ಗೋರಿ ಆಗಬಾರದು. ವಿವೇಚನಾ ಶಕ್ತಿ ಅಸ್ತವ್ಯಸ್ತವಾಗಲಿದೆ. ಶುಭವಾರ: ಗುರು, ಶನಿ, ಸೋಮವಾರ
Back to Top