ತ್ರಿವರ್ಣ ಕಲಾಕೇಂದ್ರಪ್ರಸ್ತುತಿ: ನೆರೆನಿಧಿಗೆ ನೆರವಾದ ಗೋನಿಧಿ

Team Udayavani, Nov 23, 2018, 6:00 AM IST

4.jpg

ಕೊಡಗು ಮತ್ತು ಕೇರಳದ ಮಹಾ ಪ್ರವಾಹದ ಹಾನಿಗೆ ಪರಿಹಾರವಾಗಿ ಹಲವರು ದಾನ ನೀಡಿದಾಗ ಮಣಿಪಾಲ ತ್ರಿವರ್ಣ ಕಲಾಕೇಂದ್ರದ ಹರೀಶ್‌ ಸಾಗಾರ ಈ ದುರಂತಕ್ಕೆ ಕಲಾತ್ಮಕವಾಗಿ ಹೇಗೆ ಪರಿಹಾರ ನೀಡಬಹುದು ಎಂದು ಆಲೋಚಿಸಿ ಪ್ರವೃತ್ತರಾಗುತ್ತಾರೆ. ತನ್ನ ಬಳಗದ ಕಲಾವಿದ್ಯಾರ್ಥಿಗಳೊಡನೆ ಸಮಾಲೋಚನೆ ನಡೆಸಿ ಕಲಾಕೃತಿ ರಚಿಸಿ-ಪ್ರದರ್ಶಿಸಿ-ಮಾರಾಟಮಾಡಿ ಬಂದ ಹಣವನ್ನೆಲ್ಲಾ ನೆರೆ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆಯುತ್ತಾರೆ. 

 ಕಲಾಕೃತಿ ರಚನೆಗೆ ಯಾವ ವಿಷಯ ಪ್ರಸ್ತುತ ಎನ್ನುವಾಗ ಅವರಿಗೆ ಎದುರಾದದ್ದು ಗೋಮಾತೆ. ನಡೆದಾಡುವ ದೇವತೆ, ಸನಾತನ ಸಂಸ್ಕೃತಿಯ ಪ್ರತೀಕ, ಕಾಮಧೇನು. ಹೀಗೆ ಭಾವನಾತ್ಮಕವಾದ ನಿಲುವಿನೊಂದಿಗೆ ಮುಗ್ಧತೆಗೆ ಸಾಕ್ಷಿಯಾದ ಗೋವು-ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಅದ್ಭುತ ಸ್ಥಾನ ಹೊಂದಿರುವ ದೈವೀ ಶಕ್ತಿ. ಇಂತಹ ಶಕ್ತಿಯ ಸಾರವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿ ಅವರಿಂದ ಸೃಜನಾತ್ಮಕ ಚಿತ್ರಕಲಾಕೃತಿಗಳು ಮೂಡಿಬರುವಂತೆ ಮಾಡಿ, ಅವುಗಳನ್ನು ಸೂಕ್ತ ವೇದಿಕೆಯಲ್ಲಿ ಪ್ರದರ್ಶಿಸಿ, ಜನಸಾಮಾನ್ಯರಿಗೆ ಸಂದೇಶವನ್ನು ಸಾರಿ, ಕಡಿಮೆ ಬೆಲೆಗೆ ಕಲಾಕೃತಿಗಳನ್ನು ಮಾರಾಟಮಾಡಿ ಸುಮಾರು ಐವತ್ತು ಸಾವಿರದಷ್ಟು ನಿಧಿ ಸಂಗ್ರಹಿಸಿ ಕೊಡಗಿನ ಪರಿಹಾರಕ್ಕೆ ನೀಡಿದ್ದಾರೆ. 

ಪುಟಾಣಿ ಕಲಾವಿದರಾದ ಆಸ್ತಿಕ್‌ ಭಾಗವತ್‌, ವೈಷ್ಣವಿ ಅಡಿಗ, ಆದಿತ್ಯ ಕಾಮತ್‌, ಅಮೃದಾ ಎಸ್‌., ಅಮೂಲ್ಯ ಶೇಟ್‌, ಅನ್ನಪೂರ್ಣ ಶೆಣೈ, ಅನುಷ ಎ. ಎಸ್‌., ಅಶ್ವಿ‌ನ್‌ ಕುಮಾರ್‌ ಜಿ. ರಾವ್‌, ಅಶ್ವಿ‌ನ್‌ ವಿ, ಭುವನ್‌ ಆರ್‌., ಬಿ. ವಿನೀತ್‌ ಶೇರೆಗಾರ್‌, ಚೈತಾಲಿ ಎ. ಯು. ಚಿರಾಗ್‌, ಧ್ರುವ ಶೆಟ್ಟಿ, ಗಗನ್‌ ಎಂ. ಶೆಟ್ಟಿ, ಹರಿತಾ ಅಲಪಾಟಿ, ಕೌಸಲ್ಯ ಎಂ. ಕೆ, ಕೆ. ದೀಕ್ಷಾ ಶೇಟ್‌, ಕೆ. ತುಷಾರ್‌, ಲಾವಣ್ಯ ಪ್ರಭು, ಮನೀಷ್‌ ಎಸ್‌. ಶೆಟ್ಟಿ, ಎಂ. ಗಾಯತ್ರಿ, ಮಿಥಾಲಿ ಜಿ., ನಿಶ್ಮಿತ್‌ ಎ.ಎಸ್‌., ಪೂಜಾ ಶೇಟ್‌, ಪೂರವ್‌ ಆರ್‌. ಶೆಟ್ಟಿ, ಪೂರ್ವಿ ಎಸ್‌., ಪ್ರಭು ಸುಷ್ಮಾ ಎಸ್‌, ಪ್ರಣವ್‌ ಆಚಾರ್ಯ, ಪ್ರತೀಕ್‌ ಜಿ. ರಚನಾ ಎಂ, ರೋಶ್ನಿ ಆರ್‌. ಭಕ್ತ, ಸಂಪ್ರದಾ, ಶ್ರೀಯಾ, ಸೃಜಿತ್‌, ಸ್ಟೆನಿಲಾ ಡಿಸೋಜಾ, ಸುನಿಧಿ ಹೆಬ್ಟಾರ್‌, ಉಜ್ವಲಾ ಶೇಟ್‌, ವಿಶಾಕ್‌…ಹೀಗೆ ಒಟ್ಟು 39 ವಿದ್ಯಾರ್ಥಿಗಳು ತಮ್ಮದೇ ಅಭಿವ್ಯಕ್ತಿಯಲ್ಲಿ ಗೋವುಗಳ ನಾನಾ ಸ್ವರೂಪಗಳನ್ನು, ಮಮತೆ-ಮಾಧುರ್ಯಗಳನ್ನು ಚಿತ್ರಿಸಿದರು. ಇವರಿಗೆ ಮಾರ್ಗದರ್ಶಕರಾಗಿ ಹರೀಶ್‌ ಸಾಗಾ, ಪವಿತ್ರಾ ಸಿ. ಮತ್ತು ನಯನಾ ಮಕ್ಕಳಿಗೆ ಚಿತ್ರಸಂಯೋಜನೆ, ವರ್ಣಸಂಯೋಜನೆಗಳನ್ನು ಹೇಳಿಕೊಟ್ಟರು.ಗೋನಿಧಿ ಶೀರ್ಷಿಕೆಯಡಿ ಕುಂದಾಪುರ ಮತ್ತು ಮಣಿಪಾಲದ ಆರ್‌. ಎಸ್‌. ಬಿ. ಭವನದಲ್ಲಿ ಪ್ರದರ್ಶಿಸಿ ಮನಗೆದ್ದರು. 

 ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.