ಮನಸೂರೆಗೊಂಡ ನೃತ್ಯ ದರ್ಪಣ 

Team Udayavani, Jan 11, 2019, 12:30 AM IST

q-4.jpg

ವಿ| ಪ್ರೇಮನಾಥ ಮಾಸ್ಟ್ರೆ 58 ವರ್ಷದ ಹಿಂದೆ ಸ್ಥಾಪಿಸಿದ ಮಂಗಳೂರಿನ ಲಲಿತ ಕಲಾ ಸದನದ ಈಗಿನ ರೂವಾರಿ ವಿ| ಸುದರ್ಶನ್‌ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನೃತ್ಯ ದರ್ಪಣ 2018 ಕಾರ್ಯಕ್ರಮ ಪುರಭವನದಲ್ಲಿ ಜರಗಿತು. 38 ಹಿರಿಯ -ಕಿರಿಯ ವಿದ್ಯಾರ್ಥಿನಿಯರು ಭರತನಾಟ್ಯದ ನೃತ್ಯ ಬಂಧಗಳಿಗೆ, ಭಾವ ಗೀತೆ ಹಾಗೂ ಜನಪದ ಗೀತೆಗಳಿಗೆ ಲವಲವಿಕೆಯಿಂದ ಹೆಜ್ಜೆ ಹಾಕಿದರು. 

ಪ್ರಾರಂಭದ ಪುಷ್ಪಾಂಜಲಿಯಲ್ಲಿ ಸಕಲ ದೈವೀ ಶಕ್ತಿಗಳನ್ನು ಸ್ಮರಿಸಲಾಯಿತು. ಸಾವೇರಿ ರಾಗದ ಜತಿಸ್ವರದಲ್ಲಿ ಹಳೆಯ ನೃತ್ಯ ಶೈಲಿಯೊಂದಿಗೆ ಹೊಸ ರೀತಿಯ ಹೆಜ್ಜೆಗಾರಿಕೆಗಳು ಹಳತು-ಹೊಸತುಗಳ ಹದ ಮಿಶ್ರಣವಾಗಿ ಕಂಡವು. ಮುಂದೆ ಪ್ರದರ್ಶನಗೊಂಡ ನಟನಂ ಆಡಿನಾರ್‌ ಪದಂ, ಜಗನ್ಮೋಹನ ನಟನಂ ಪದಂ, ಬಾಗಿಲನು ತೆರೆದು ಪದಂ, ಗೋವರ್ಧನ ಗಿರಿಧಾರಿ ಪದಂಗಳು ಪೂರ್ವಾಂಗವನ್ನು ಅಲಂಕರಿಸಿದವು. 

ರಾಗಮಾಲಿಕೆಯಲ್ಲಿ ಸಂಯೋಜಿಸಲಾದ ಜಗನ್ಮೋಹನ ನಟನ ರಾಜಸಭಾ ಪತಿಯೇ ಎಂಬ ರಚನೆಯನ್ನು ಕಾರ್ಯಕ್ರಮದ ಪ್ರಧಾನ ನೃತ್ಯ ಬಂಧವಾಗಿ ಪ್ರದರ್ಶಿಸಲಾಗಿತ್ತು. ಶಿವನ ಮಹಿಮೆಗಳಲ್ಲಿ ನವರಸಗಳು ಹುಟ್ಟುವ ವಿವಿಧ ಸಂದರ್ಭಗಳ ಕಥಾವಿಸ್ತರಣ ಇಲ್ಲಿ ನಡೆದಿತ್ತು. ಪೂರಕ ಸಂದರ್ಭಗಳಲ್ಲಿ ಜತಿಗಳ ಅಳವಡಿಕೆ ಸೂಕ್ತವಾಗಿತ್ತು. ಉತ್ತರಾರ್ಧದಲ್ಲಿ ಊತ್ತುಕ್ಕಾಡು ವೆಂಕಟಸುಬ್ಬ ಅಯ್ಯì ಅವರ ಪ್ರಸಿದ್ಧ ಕೃತಿ -ಸ್ವಾಗತಂ ಕೃಷ್ಣ ರಚನೆಯನ್ನು ನರ್ತಿಸುವಾಗ ವಿದ್ಯಾರ್ಥಿನಿಯರು ಪಟ್ಟ ಸಂಭ್ರಮ ಸಭಿಕರನ್ನೂ ಸೆಳೆಯಿತು. ರಾಷ್ಟ್ರಕವಿ ಕುವೆಂಪು ಅವರ ಷೋಡಷಿ ಕವನ ಸಂಕಲನದ ಒಂದು ಹೃದ್ಯ ಕವನ – ನೋಡೆ ಸಖೀ, ಬಾರೆ ಸಖೀ ನೋಡೆ ಶಶಿಮುಖೀ| ಕುಣಿಯುವಂತೆ ಮತ್ತ ಶಿಖೀ ಕುಣಿಯುತಿಹನು ನೋಡೆ ಶಿಖೀ || ಎಂಬ ಕವನದ ಸಾಲುಗಳಿಗೆ ವಿದ್ಯಾರ್ಥಿನಿಯರು ಕೃಷ್ಣ-ಗೋಪಿಕೆಯರಾಗಿ ಕವಿಯ ಸಾಲುಗಳಿಗೆ ಜೀವ ತುಂಬಿದರು. ಪಂಚಮ ವೇದಗಳೆಂದು ಕರೆಸಿಕೊಳ್ಳುವ ಗಾಯನ ಕಲೆ ಹಾಗೂ ನೃತ್ಯಕಲೆಗಳೆರಡನ್ನೂ ತನ್ನೊಳಗೇ ಹುದುಗಿಸಿಕೊಂಡು ಸಕಲ ಚರಾಚರಗಳಿಗೆ ಬ್ರಹ್ಮಾನಂದವನ್ನು ನೀಡುವ ಕೃಷ್ಣನ ನರ್ತನದ ಹೃದ್ಯ ಅಭಿವ್ಯಕ್ತಿ ಇಲ್ಲಿತ್ತು. ವಿ|ಶೀಲಾ ದಿವಾಕರ್‌ ಅವರ ಸಿರಿಕಂಠದಲ್ಲಿ ಹಾಡು ಮನಸೂರೆಗೊಂಡಿತು. 

ತಾಯಿ ಪರಾಶಕ್ತಿಯ ವಿವಿಧ ರೂಪಗಳನ್ನು ಶಾಸ್ತ್ರೀಯ ಮತ್ತು ಜನಪದೀಯ ಮಟ್ಟಿನಲ್ಲಿ ಸ್ತುತಿಸಿದ ಕೀರ್ತನೆ ದುರ್ಗೆ ದುರ್ಗೆ ಹಾಗೂ ಕೊನೆಯಲ್ಲಿ ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ನೃತ್ಯ ದರ್ಪಣ 2018 ಮಂಗಳ ಕಂಡಿತು. ಹಿಮ್ಮೇಳದಲ್ಲಿ ವಿ| ಸುದರ್ಶನ್‌ ನಟ್ಟುವಾಂಗವನ್ನು ನೆರವೇರಿಸಿದರು. ವಿ| ಮನೋಹರ ರಾವ್‌ ಅವರ ಪೂರಕ ಮೃದಂಗ ಸಾಥಿ, ವಿ| ಮುರಳೀಧರ ಕೆ. ಅವರ ಕೀಬೋರ್ಡ್‌-ಕೊಳಲು ಸಾಥಿ ಹಾಗೂ ವಿ| ಶ್ರೀಧರ ಆಚಾರ್ಯ ಪಾಡಿಗಾರು ಅವರ ವಯೊಲಿನ್‌ ಸಾಥಿ ಒಟ್ಟಂದಕ್ಕೆ ಸಹಕರಿಸಿದವು. 

ಭ್ರಮರಿ ಶಿವಪ್ರಕಾಶ್‌ 

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.