CONNECT WITH US  

ಕಪ್ಪು ಗಿಡುಗ -ಕಪ್ಪು ಜುಟ್ಟಿನ ಗಿಡುಗ 

ಇದು ಪಾರಿವಾಳದಷ್ಟು ದೊಡ್ಡದಾದ ಕಪ್ಪು ,ಬಿಳಿ, ಕಂದು ಬಣ್ಣ ಇರುವ ಗಿಡುಗ.Black Baza (Aviceda leuphotes)  (Dumont) R M  Pigeon + ಕಪ್ಪು ಮತ್ತು ಬಿಳಿ ಬಣ್ಣ ಎದ್ದು ಕಾಣುವುದು. ಇದನ್ನು ಇಂಗ್ಲೀಷಿನಲ್ಲಿ ಬ್ಲೇಕ್‌ ಬಾಝಾÕ ಎಂದು ಕರೆಯುತ್ತಾರೆ.  ಕುತ್ತಿಗೆ ಕೆಳಗೆ ಎದೆಯ ಮೇಲೆ ಎದೆಹಾರದಂತೆ ಭಾಸವಾಗುವ -ಬಿಳಿ ಬಣ್ಣ ಇದನ್ನು ಗುರುತಿಸುವ ಚಿನ್ಹೆಯಾಗಿದೆ. ಇದರ ಕೆಳಗೆ ಹೊಟ್ಟೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಸಮಾನಾಂತರವಾಗಿ ಇರುವ ಕಂದುಗಪ್ಪು ಗೆರೆ , ಬಾಲದ ಪುಕ್ಕದ ಅಡಿಯಲ್ಲಿರುವ ಬೂದು ಬಣ್ಣ -ಇದನ್ನು ಇತರ ಗಿಡುಗಕ್ಕಿಂತ ಬೇರೆ ಎಂದು ತಿಳಿಯಲು ಸಹಾಯಕವಾಗಿದೆ. ಇದು 'ಎಸಿಪಿಟ್ರಿಡಿಯಾ' ಕುಟುಂಬಕ್ಕೆ ಸೇರಿದ ಗಿಡುಗ. ಈ ಗುಂಪಿನ ಎಲ್ಲಾ ಹಕ್ಕಿಗಳೂ ಮಾಂಸಾಹಾರಿಗಳು. ಇದು ದೊಡ್ಡ ಮರಗಳಿರುವ ದಟ್ಟ ಕಾಡಿನಲ್ಲಿ ಇರುವುದು. ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ -ದೊಡ್ಡ ಗುಡ್ಡದಲ್ಲಿರುವ ಮರಗಳ ತುಟ್ಟ ತುದಿ ಟೊಂಗೆಯಲ್ಲಿ ಕುಳಿತು -ತನ್ನ ಸೂಕ್ಷ ನೋಟ ಬೀರಿ, ಸುಳಿವು ನೀಡದೇ, ಎರಗಿ ಹೆಗ್ಗಣ, ಮೃದ್ವಂಗಿಗಳು, ಇಲಿ, ಸರಿ ಸೃಪಗಳಾದ -ಓತಿಕ್ಯಾತ, ಹರಣೆ, ಚಿಕ್ಕ ಹಾವುಗಳನ್ನು -ತನ್ನ ಚಿಕ್ಕ ಕಾಲಿನಲ್ಲಿರುವ ಬೆರಳಲ್ಲಿರುವ ಹರಿತ ಉಗುರಿನ ಸಹಾಯದಿಂದ ಡಿದು ತಿನ್ನುವುದು. ಕರಾರುವಕ್ಕಾಗಿ, ಲೆಕ್ಕಾಚಾರ ಮಾಡಿ , ಕಾದು ಕುಳತು -ಎರಗಿ ಬೇಟೆಯಾಡುವುದರಲ್ಲಿ ಇದು ನಿಪುಣ. 

ಆಕಾಶದಲ್ಲಿ ಹಾರುತ್ತಾ, ಕೆಲವೊಮ್ಮೆ ತಟಸ್ಥವಾಗಿ ಗಾಳಿಯಲ್ಲಿ ತೇಲಿ- ಮೇಲಿನಿಂದ ಎರಗಿ,  ತನ್ನ ಆಹಾರ ದೊರಕಿಸಿಕೊಳ್ಳುವುದು. ಅವು ಸಿಗದಿದ್ದಾಗ, ಎರಹುಳು, ಚಿಕ್ಕ ಪ್ರಾಣಿಗಳನ್ನು ಸಹ ತಿನ್ನುತ್ತದೆ. ಮೊಲಗಳನ್ನು ಸಹ ತನ್ನ ಕಾಲಲ್ಲಿ ಡಿದು ಎತ್ತಿಕೊಂಡು ಹೋಗುವುದಿದೆ. ಚಿಕ್ಕದಾದ ಬಲಿಷ್ಟ ಕಾಲು, ಅದರ ತುದಿಯಲ್ಲಿ ಹರಿತವಾದ ಉಗುರು ಇದಕ್ಕೆ ಬೇಟೆಯಾಡಲು ಅನುಕೂಲಕರವಾಗಿದೆ. ಅಲ್ಲದೇ ಇದರ ಅತಿ ಸೂಕ್ಷ್ಮ ನೋಟ, ಎಷ್ಟು ಎತ್ತರದಲ್ಲಿದ್ದರೂ ಕೆಲವು ಭೂಮಿಯಮೇಲೆ ,ಅಥವಾ ಮರಗಳ ಟೊಂಗೆಗಳ ಮೇಲಿರುವ ತನ್ನ ಆಹಾರ ಕಾಣವುದು. ಇದು ಪ್ರಾದೇಶಿಕವಾಗಿ ವಲಸೆ ಹೋಗುವುದು. ಛಳಿಗಾಲದಲ್ಲಿ ಉತ್ತರದಿಂದ ದಕ್ಷಿಣದ ಫೆನ್ಸಿಲ್ವೇನಿಯಾ, ಶ್ರೀಲಂಕಾ, ಪಶ್ಚಿಮ ಗಟ್ಟದ ಪ್ರದೇಶಗಳಾದ, ಕರ್ನಾಟಕ, ಕೇರಳ, ತುಳುನಾಡು,ಆಂದ್ರದ- ಬೆಟ್ಟ ಪ್ರದೇಶದಲ್ಲಿ ಕಾಣುವವು. ಕಪ್ಪು ಜುಟ್ಟಿನ ಗಿಡುಗ -ಚಿಕ್ಕ ಗಾತ್ರ ಇದ್ದರೂ, ವೇಗವಾಗಿ, ತನ್ನ ವೈರಿಗೆ ತಿಳಿಯದಂತೆ ಮೋಸಗೊಳಿಸಿ, ಬೇಟೆಯಾಡುತ್ತದೆ. 

ಇದು ರೆಕ್ಕೆ ಅಗಲಿಸಿದಾಗ -ಹಾರುತ್ತಿರುವಾಗ -ಇದರ ರೆಕ್ಕೆ ಅಡಿಯಲ್ಲಿರುವ ಕಪ್ಪು ಬಿಳಿ ರೇಖೆ- ಸ್ಪಷ್ಟವಾಗಿ ಕಾಣುವುದು. ತನ್ನ ರೆಕ್ಕೆ ಮೇಲ್ಮುಖವಾಗಿ ಇಟ್ಟು ಎರಗುವುದು. ಸಮಾನಾಂತರವಾಗಿ ಗಾಳಿಯಲ್ಲಿ ತೇಲುವುದು. ರೆಕ್ಕೆ ಅಗಲಿಸಿದಾಗ ರೆಕ್ಕೆಯ ಉದ್ದ 80-85 ಸೆಂ.ಮೀ. ಇರುತ್ತದೆ.  168 ರಿಂದ 224 ಗ್ರಾಂ. ಭಾರ ಇರುವುದು. ಕುತ್ತಿಗೆ, ಎದೆಯಲ್ಲಿರುವ ಬಿಳಿ ಬಣ್ಣದ ಕೆಳಗಡೆ ಗಿಡುಗದ ಪಾಶ್ವದ ಕಪ್ಪು ಬಣ್ಣ ಸೇರಿದೆ. ಮುಂದೆಲೆ ಕಪ್ಪು ಬಣ್ಣ ಇದೆ. 

 ಇದರ ಕೂಗು- ಕಪ್ಪು ಹದ್ದು ಅಂದರೆ ಕೈಟ್‌ ಪಕ್ಷಿ$ಯ ಕೂಗನ್ನು ತುಂಬಾ ಹೋಲುವುದು ಕ್ಯೇ,ಕ್ಯೇ, ಕೆØàಯ್‌- ಮಿಃಯೋ ಎಂದುಕೂಗುವುದು.  ಇದರ ಕೂಗು ಗಲ್‌ ಹಕ್ಕಿ ುಲನದ ಸಂದರ್ಬದ ಕೂಗನ್ನೂ ಹೋಲುವುದು. ಇದು ಉತ್ತರದ ಪೂರ್ವ ಬೆಟ್ಟ ಭಾಗದಲ್ಲಿ ಏಪ್ರಿಲ್‌ ನಿಂದ ಜೂನ್‌ ಅವಧಿಯಲ್ಲಿ ಗೂಡು ಮಾಡುವುದು. ಫೆಬ್ರವರಿಯಿಂದ ಜುಲೈ ಅವಧಿಯಲ್ಲಿ ದಕ್ಷಿಣ ಭಾರತದ ಭಾಗದಲ್ಲೂ ಗೂಡು ಮಾಡುವ ಸಮಯ ಅದರಲ್ಲೂ ಮಾರ್ಚ್‌- ಏಪ್ರಿಲ್‌ನಲ್ಲೇ( ಇದು ಫಿಕ್‌ ಪಿರಿಯಡ್‌ ) ಹೆಚ್ಚಾಗಿ ಗೂಡು ಕಟ್ಟಿ ಮರಿಮಾಡುವುದು ಎಂದು ತಿಳಿದಿದೆ. ಅಡಿಯಲ್ಲಿ ಸುತ್ತಲೂ ಮರದ ಕೋಲುಗಳನ್ನು ಇಟ್ಟು ಮಧ್ಯದಲ್ಲಿ ಬಟ್ಟಲಾಕಾರದಲ್ಲಿ ಗೂಡನ್ನು ನಿರ್ಮಿಸುವುದು. ಮಧ್ಯ ಬಟ್ಟಲಾಕಾರದ ಗೂಡನ್ನು ಹುಲ್ಲು ನಾರು ಸೇರಿಸಿ,ಬಟ್ಟಲಾರ ನಿರ್ಮಿಸಿ, ಅದರಮೇಲೆ ಹಸಿರೆಲೆಗಳ ಹಾಸನ್ನು ಹಾಕುವುದು. 2ರಿಂದ 3 ಬೂದು ಛಾಯೆಯ- ಬಿಳಿ ಮೊಟ್ಟೆ ಇಡುವುದು. ಗಂಡು- ಹೆಣ್ಣು ಸೇರಿ ಕಾವುಕೊಡುವುದು, ಮರಿಗಳಿಗೆ ಆರೈಕೆ, ಗುಟುಕು ನೀಡುವುದು ಇತ್ತಯಾದಿ ಕೆಲಸವನ್ನು ನಿರ್ವಹಿಸುವುದು.  ಕಾಡಿನ ಮರಗಳ ಎಲೆಗಳಲ್ಲಿರುವ ಹುಳು, ಮಿಡತೆ, ಕೆಲವೊಮೆ ಚಿಕ್ಕ ಹಕ್ಕಿ ಢೇಗ್‌ ಟೆಲ್‌ ಅಂದರೆ ಕುಂಡೆ ಕುಸ್ಕ ಹಕ್ಕಿಯನ್ನು ಇದು ಬೇಟೆಯಾಡಿರುವುದಿದೆ. ಪಾಮ್‌ ಮರದ ಎಣ್ಣೆಯನ್ನು ಸಹ ಇದು ತಿನ್ನುವುದಿದೆ. ಕೆಲವೊಮ್ಮ ಕು-ಕೂ ಶೈಕ್‌ ಹಕ್ಕಿಯದನಿಯಂತೆ ಸಿಳೆ, ಚೀ.....ಚೀ.... ಪ್‌ ಎಂದು ಕೂಗುವುದು ಇದರ ಭಿನ್ನ ಕೂಗನ್ನು ಕುರಿತು ಹೆಚ್ಚಿನ ಸಂಗತಿ ತಿಳಿಯಬೇಕಿದೆ. 

ಪಿ.ವಿ.ಭಟ್‌ ಮೂರೂರು 


Trending videos

Back to Top