ಯುವ ಜನತೆಯನ್ನು ಸೆಳೆಯುವ ಟ್ಯಾಟೂ ಕೋರ್ಸ್‌


Team Udayavani, Aug 21, 2019, 5:00 AM IST

13

ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು ತಮ್ಮ ಬೆಲೆಯನ್ನು ಕಳೆದುಕೊಂಡು ವಿದ್ಯಾರ್ಥಿಗಳು ಬಗೆ ಬಗೆಯ ಕೋರ್ಸ್‌ಗಳತ್ತ ಮುಖ ಮಾಡುತ್ತಿರುವ ಕಾಲ. ಅಂತಹ ಕೋಸ್‌ಗಳಲ್ಲಿ ಟ್ಯಾಟೂ ಕೋರ್ಸ್‌ ಕೂಡ ಒಂದು.

ಟ್ಯಾಟೂ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತಮಗೆ ಇಷ್ಟವಿರುವ ಒಂದು ವಸ್ತು ಅಥವಾ ವಾಕ್ಯ ಅಥವಾ ಸುಂದರವಾರ ಚಿತ್ರಗಳನ್ನು ತಮ್ಮ ಮೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಿಂದೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಹಚ್ಚೆ ಹಾಕುವಿಕೆಯೇ ಇಂದು ಆಧುನಿಕತೆಯಲ್ಲಿ ಟ್ಯಾಟೂ ಎಂದು ಮಾರ್ಪಟ್ಟಿದೆ. ಮೈಗೆಲ್ಲ ಟ್ಯಾಟೂ ಹಾಕಿಸಿಕೊಂಡವರು ನಮ್ಮ ಕಣ್ಣಿಗೆ ಕಾಣಸಿಗುತ್ತಾರೆ. ಟ್ಯಾಟೂ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಟ್ಯಾಟೂ ಕೋರ್ಸ್‌ ಒಂದು ಉತ್ತಮ ಶಿಕ್ಷಣವಾಗಿದೆ.

ಈ ಟ್ಯಾಟೂ ಕೋರ್ಸ್‌ ಅನ್ನುವುದು ಎಲ್ಲರಿಗೂ ಅಷ್ಟು ಸುಲಭದಲ್ಲಿ ಒಲಿದು ಬರುವುದಿಲ್ಲ. ಇದಕ್ಕೆ ಉತ್ತಮ ಚಿತ್ರ ಕಲಾಕಾರನಾಗಿದ್ದರೆ ಮಾತ್ರ ಸಾಧ್ಯವಿರುತ್ತದೆ. ಮುಂದುವರಿದ ಎಲ್ಲ ದೇಶಗಳಲ್ಲೂ ಈ ಟ್ಯಾಟೂಗೆ ಅತೀವ ಬೇಡಿಕೆ ಇದೆ. ಅಂದ ಹಾಗೆ ಈ ಟ್ಯಾಟೂ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅದರ ಬಗ್ಗೆ ಇನಷ್ಟು ಕಲಿಯಬೇಕೆನ್ನುವವರಿಗೆ ಟ್ಯಾಟೂ ಕೋರ್ಸ್‌ಗಳ ಮಾಹಿತಿ ಇಲ್ಲಿದೆ.

ಟ್ಯಾಟೂ ಕೋರ್ಸ್‌ಗಳಲ್ಲಿ ಏನನ್ನು ಕಲಿಸುತ್ತಾರೆ?
ಇದರಲ್ಲಿ ಪ್ರಮುಖವಾಗಿ ಡ್ರಾಯಿಂಗ್‌ನ ಮೂಲಭೂತ ಅಂಶಗಳು, ಟ್ಯಾಟೂ ಆರ್ಟ್‌ ಪರಿಚಯ, ಹಚ್ಚೆ ಪ್ರಕ್ರಿಯೆಯ ತಿಳವಳಿಕೆ, ಹಚ್ಚೆ ಉಪಕರಣಗಳ ಪರಿಚಯ, ವಿವಿಧ ರೀತಿಯ ಸೂಜಿಗಳನ್ನು ಅರ್ಥೈಸಿಕೊಳ್ಳುವುದು, ವಿವಿಧ ರೀತಿಯ ಹಚ್ಚೆ ಯಂತ್ರಗಳ ಪರಿಚಯ. ಸುರಕ್ಷತೆ, ನೈರ್ಮಲ್ಯ ಮಾನದಂಡಗಳು, ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನಿರ್ವಹಿಸುವುದು, ಚರ್ಮದ ಪ್ರಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆಗಳು ಹಚ್ಚೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ.

ಈ ಟ್ಯಾಟೂ ಕೋರ್ಸ್‌ 18 ವರ್ಷ ಮೇಲ್ಪಟ್ಟವರಿಗೆ ಲಭ್ಯವಿದ್ದು. ಇದು 2 ತಿಂಗಳು, ನಾಲ್ಕು ತಿಂಗಳು ಮತ್ತು ಕೆಲವು ಕಡೆ ಒಂದು ವರ್ಷದವರೆಗೆ ಲಭ್ಯವಿದೆ. ಈ ಕೋರ್ಸ್‌ ಗುಣಮಟ್ಟದ ಆಧಾರದ ಮೇಲೆ ಫೀಸ್‌ಗಳು ಅಂದಾಜು 60,000 ರೂ.ಗಳಿಂದ ಆರಂಭಗೊಂಡು, 1. ಲಕ್ಷ ರೂ.ಗಳವರೆಗೆ ಇದೆ.

ಈ ಟ್ಯಾಟೂ ತರಬೇತಿ ಯಶಸ್ವಿಯಾಗಿ ಮುಗಿದ ಅನಂತರ ಹಚ್ಚೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸ್ವತಃ ಟ್ಯಾಟೂ ಶಾಪ್‌ ಹಾಕಿಕೊಳ್ಳುವುದಾದರೆ ಈ ಪ್ರಮಾಣ ಪತ್ರ ಅತೀ ಮುಖ್ಯವಾಗಿದೆ.

•ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.