ಮಹಿಕಾ ಯಶಸ್ವಿ ರಂಗ ಪ್ರವೇಶ

Team Udayavani, Mar 15, 2019, 12:30 AM IST

x-42.jpg

ಮಂಗಳೂರಿನ “ಕದ್ರಿ ನೃತ್ಯ ವಿದ್ಯಾನಿಲಯ’ದ ವಿದ್ವಾನ್‌ ಯು.ಕೆ. ಪ್ರವೀಣ್‌ ಅವರ ಶಿಷ್ಯೆ ಕುಮಾರಿ ಮಾಹಿಕಾ ಅವರ ಭರತ ನಾಟ್ಯ ರಂಗ ಪ್ರವೇಶ ಮಂಗಳೂರಿನಲ್ಲಿ ಇತ್ತೀಚೆಗೆ ಜರಗಿತು. ರಂಗಾರೋಹಣ ಮಾಡಿದ ಮಾಹಿಕಾ 13 ವರ್ಷದ ಬಾಲ ಪ್ರತಿಭೆ. 

ಆಕರ್ಷಕ ಭಾವಭಂಗಿಗಳು, ನಿರ್ದಿಷ್ಟ ಹಸ್ತಮುದ್ರೆಗಳು, ಉತ್ತಮ ಅಂಗಶುದ್ಧಿ ಹಾಗೂ ಭಾವ ತೀವ್ರತೆಯ ಅಭಿನಯಗಳ ಸಾಮರ್ಥ್ಯದೊಂದಿಗೆ ಸುಮಾರು ಎರಡು ಗಂಟೆಗಳ ಅವಧಿಯ ಸುಂದರ ಪ್ರದರ್ಶನ ನೀಡಿದ‌ರು. ನೃತ್ತಭಾಗಗಳು, ಕಲಾ ಪ್ರದರ್ಶನದ ವರ್ಚಸ್ಸು ವೃದ್ಧಿಗೆ ಬೇಕಾದ ಅಮಿತ ಉತ್ಸಾಹ ಹಾಗೂ ಆತ್ಮಸ್ಥೈರ್ಯದೊಂದಿಗೆ ಲವಲವಿಕೆಯಿಂದ ನರ್ತಿಸಿ ಮನಸೆಳೆದರು. 

ಮೊದಲಿಗೆ ಷಣ್ಮುಖಪ್ರಿಯ ರಾಗದ ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶ ಮಾಡಿ ಕಲ್ಯಾಣಿ ರಾಗದ ಸರಸ್ವತಿ ಸ್ತುತಿಯನ್ನು ಭಕ್ತಿಭಾವ ಪೂರ್ಣವಾಗಿ ಸಾದರ ಪಡಿಸಿ ಪ್ರದರ್ಶನಕ್ಕೆ ಒಳ್ಳೆಯ ಆರಂಭ ನೀಡಿದರು. ಅನಂತರ ರಾಗಮಾಲಿಕೆಯ ಜತಿಸ್ವರದಲ್ಲಿ ಕಲಾವಿದೆಗೆ ತಾಳಲಯದ ಮೇಲಿರುವ ಹಿಡಿತ, ಅಂಗಶುದ್ಧಿಯ ಸಮರ್ಪಕತೆಯ ಕಡೆಗೆ ಇರುವ ಪ್ರಯತ್ನಗಳು ಮೆಚ್ಚುವಂತಿತ್ತು. ವಸಂತ, ಕಮಾಚ ಹಾಗೂ ಸ್ವರಬೇಧಗಳಿಗೆ ತಕ್ಕಂತೆ ಮೇಳನಗೊಳಿಸಿದ್ದ ಅಡವುಗಳ ಸಂಯೋಜನೆ ಗಮನ ಸೆಳೆಯುವಂತಿತ್ತು. 

ಸಾಮಾನ್ಯವಾಗಿ ಒಂದು ಭರತನಾಟ್ಯ ರಂಗಪ್ರವೇಶದ ಪ್ರಧಾನ ಭಾಗವೆಂದರೆ “ಪದವರ್ಣ’, ಕಲಾವಿದೆಯ ನೃತ್ತ ಹಾಗೂ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಬಲ್ಲ ಪದವರ್ಣ ಒಂದು ಸುದೀರ್ಘ‌ ಅವಧಿಯ ನೃತ್ಯಬಂಧ. ಲಾಗಾಯ್ತಿನಿಂದಲೂ ತಮಿಳು ಹಾಗೂ ತೆಲುಗು ಭಾಷೆಯ ಸಾಹಿತ್ಯದ ಪದವರ್ಣಗಳೇ ಹೆಚ್ಚು ಪ್ರಚಲಿತ. ಆದರೆ ಇತ್ತೀಚಿನ ದಿನಗಳಲ್ಲಿ ಕಲಾವಿದರು ಕನ್ನಡದ ಪದವರ್ಣಗಳನ್ನು ಪ್ರಯೋಗಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಮಹಿಕಾ ಆಯ್ದುಕೊಂಡಿದ್ದು ಸುಬ್ಬುಡು ಅವರ ಪದವರ್ಣ. ತೆಲುಗು ರಚನೆಯ ಈ ಪದವರ್ಣವನ್ನು ಅದರ ಮೂಲ ಸಾಹಿತ್ಯಕ್ಕೆ ಕುಂದಾಗದಂತೆ ವಿದುಷಿ ಉಷಾ ಪ್ರವೀಣ್‌ ಅವರೇ ಕನ್ನಡಕ್ಕೆ ಅನುವಾದಿಸಿದ ರೀತಿ ಮೆಚ್ಚುವಂತಿತ್ತು.

“ಶಂಕರ ಶ್ರೀ ಗಿರಿನಾಥ ಪ್ರಭು’ ಕೃತಿ, ಅಡಪೋದಲ್ಲಿ ಮಕ್ಕಳು’ ಎಂಬ ದೇವರ ನಾಮ ಹಾಗೂ ಚಕ್ರವಾಕ ರಾಗದ ತಿಲ್ಲಾನ ಎಲ್ಲದರಲ್ಲೂ ಕಲಾವಿದೆಯ ಉತ್ಸಾಹ ಪೂರ್ಣ ಚಲನವಲನಗಳು ಎದ್ದುಕಂಡಿತು. ಕೊನೆಯಲ್ಲಿ ಪ್ರಕೃತಿಯ ಕುರಿತಾಗಿ ಸ್ಮಿತಾಪ್ರಭು ಅವರು ರಚಿಸಿದ ಕೊಂಕಣಿ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಕಾರ್ಯಕ್ರಮದ ವರ್ಚಸ್ಸನ್ನು ಹೆಚ್ಚಿಸಿದ ಎರಡು ಪ್ರಮುಖ ಅಂಶಗಳೆಂದರೆ, ವಿದ್ವಾನ್‌ ಯು.ಕೆ. ಪ್ರವೀಣ್‌ ಅವರ ನಟುವಾಂಗ ಮತ್ತು ಉಷಾ ಪ್ರವೀಣ್‌ ಅವರ ಗಾಯನ. ಅದಕ್ಕೆ ಪೂರಕವಾಗಿ ಶ್ರೀಧರ ಆಚಾರ್‌ ಅವರ ವೈಲಿನ್‌, ರಾಜಗೋಪಾಲ್‌ ಅವರ ಕೊಳಲು ಹಾಗೂ ಕಣ್ಣನ್‌ ಅವರ ಹದವರಿತ ಮೃದಂಗ ವಾದನ.

ಕೆ. ರಾಮಮೂರ್ತಿ ರಾವ್‌ 

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.