ಗೆಟ್‌ ಔಟ್‌ ಫ್ರಂ ದಿ ಕ್ಲಾಸ್‌! ಲಾಸ್ಟ್‌ ಬೆಂಚ್‌ ಸ್ಟೂಡೆಂಟ್ಸ್‌


Team Udayavani, Sep 12, 2017, 7:05 AM IST

get-iut.jpg

ಮುಂದೆ ಕುಳಿತವರು ಜಾಗ್ರತೆಯಿಂದ ಬಾಗಿಲಿನ ಕಡೆಗೆ ನೋಡುತ್ತ ಮೇಷ್ಟ್ರು ಬಂದರೆ ಸೂಚನೆ ಕೊಡಬೇಕಿತ್ತು. ಆದರೆ ಅವತ್ತು ಅವರೂ ಮೈಮರೆತು ಹರಟೆಗೆ ಕುಳಿತಿದ್ದರು. ಹೀಗಿದ್ದಾಗಲೇ ದೂರ್ವಾಸ ಮುನಿ ಎಂದೇ ಹೆಸರಾಗಿದ್ದ ಎಚ್‌.ಓ.ಡಿ ತರಗತಿಗೆ ಬಂದುಬಿಟ್ಟರು!

ಈ ಘಟನೆ ನಡೆದು, ಇಲ್ಲಿಗೆ ಸುಮಾರು ಒಂದು ತಿಂಗಳು ಕಳೆಯಿತೋ ಏನೋ: ಅಂದೂ ಎಂದಿನಂತೆ ತರಗತಿಗಳು ಪ್ರಾರಂಭವಾದವು. ತರಗತಿ ಅಂದ ಮೇಲೆ ಗಲಾಟೆಯಾಗುವುದು ಸಹಜ. ಆದರೆ ನಾವು ಒಂದು ಮಿತಿಯನ್ನು ಮೀರಿ ತುಸು ಜೋರಾಗಿಯೇ ಗಲಾಟೆ ಮಾಡುತ್ತಿದ್ದೆವು. ಯಾರಾದರೂ ಶಿಕ್ಷಕರು ಬಂದರೆ ಥಟ್ಟನೆ ಒಬ್ಬರಿಂದೊಬ್ಬರಿಗೆ ಸಿಗ್ನಲ್‌ಗ‌ಳು ತಲುಪಿ ಗಲಾಟೆಯು ಏಕ್‌ದಂ ನಿಂತು ಹೋಗುತ್ತಿತ್ತು. ಎಲ್ಲಾ ಶಿಕ್ಷಕರಂತೆ ನಮ್ಮ ಶಿಕ್ಷಕರೂ ಕೂಡ ವೇಳಾಪಟ್ಟಿಯ ಪ್ರಕಾರವೇ ತರ‌ಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಅಂದು ಒಬ್ಬ ಶಿಕ್ಷಕರು ಗೈರು ಹಾಜರಿದ್ದರಿಂದ ನಮ್ಮ ಹೆಚ್‌.ಒ.ಡಿ ಸರ್‌ ಕ್ಲಾಸ್‌ ಮಾಡಲು ಬಂದರು. 

ಹೆಚ್‌.ಓ.ಡಿ ಸರ್‌ ಎಂದರೆ ನಮಗೆ ತುಂಬಾನೆ ಭಯ, ಭಯ ಎನ್ನುವುದಕ್ಕಿಂತ ಇವರ ಮೇಲಿರುವ ಅತಿಯಾದ ಗೌರವ ಎಂದರೆ ತಪ್ಪಾಗಲಾರದು. ಇವರ ಕೆಲವು ಪಾಲಿಸಿಗಳಿವೆ, ತರಗತಿಗೆ ಐದು ಸೆಕೆಂಡ್‌ ತಡವಾಗಿ ಬಂದರೂ ಕ್ಲಾಸಿಗೆ ಸೇರಿಸುವುದಿಲ್ಲ, ತರಗತಿಯಲ್ಲಿ ಗುಸುಗುಸು ಪಿಸುಪಿಸು ಮಾಡಿದರೆ ಸಹಿಸುವುದಿಲ್ಲ. ಇನ್ನೊಂದು ಪಾಲಿಸಿ ಎಂದರೆ ತರಗತಿಯ ಮೊದಲನೆ ಡೆಸ್ಕ್ ಖಾಲಿ ಬಿಟ್ಟು ಕೂರುವಂತಿಲ್ಲ. ಬಹುಶಃ ಅಂದು ನಮ್ಮ ಗ್ರಹಚಾರ ಸರಿ ಇರಲಿಲ್ಲ ಎನಿಸುತ್ತದೆ. ಏಕೆಂದರೆ, ಅಧ್ಯಾಪಕರು ರಜೆ ಇರುವುದರಿಂದ ತರಗತಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದು ಮೊದಲನೆ ಬೆಂಚ್‌ ಖಾಲಿ ಬಿಟ್ಟು ನಮ್ಮ ಲೋಕದಲ್ಲಿ ನಾವು ತೇಲುತ್ತ ಜೋರಾಗಿ ಕಿರುಚುತ್ತಿದ್ದೆವು. ಯಾವುದೇ ಮುನ್ಸೂಚನೆಯನ್ನು ಕೊಡದೆ ಬರುವ ಸುನಾಮಿ, ಭೂಕಂಪಗಳಂತೆ ನಮ್ಮ ಹೆಚ್‌.ಓ.ಡಿ ಸರ್‌ ಬಂದರು. ಮುನ್ಸೂಚನೆ ಕೊಡುತ್ತಿದ್ದ ನಮ್ಮ ಎಲ್ಲಾ ಗೆಳೆಯರು ಮೈಮರೆತು ಹರಟೆಯ ಕಾರ್ಯದಲ್ಲಿ ನಿರತರಾಗಿದ್ದರಿಂದ ನಮಗೆ ಸರ್‌ ಬಂದರೆಂಬ ಸಿಗ್ನಲ್‌ ಸಿಗಲೇ ಇಲ್ಲ. 

ತರಗತಿಗೆ ಬಂದ ಗುರುಗಳು ಮುಖದಲ್ಲಿ ಬೆಟ್ಟದಷ್ಟು ಜಾÌಲಾಮುಖೀಯೆಂಬ ಕೋಪವನ್ನು ತುಂಬಿಕೊಂಡು, “ಆಲ್‌ ಲಾಸ್ಟ್‌ ಬೆಂಚ್‌ ಸ್ಟೂಡೆಂಟ್ಸ್‌ ಗೆಟ್‌ ಔಟ್‌ ಫ‌Åಮ್‌ ಮೈ ಕ್ಲಾಸ್‌’ ಎಂದರು. ಕೊನೆ ಬೆಂಚಿನಲ್ಲಿದ್ದ ನಾನು ಮತ್ತು ನನ್ನಿಬ್ಬರು ಸ್ನೇಹಿತರು ಮರು ಮಾತನಾಡದೆ ಇಂಗು ತಿಂದ ಮಂಗನಂತೆ ಪೆಚ್ಚು ಮೋರೆಯನ್ನು ಹೊತ್ತು ತರಗತಿಯಿಂದ ಹೊರ ನಡೆದೆವು. ನಮಗೆ ಹೊರಗೆ ಹೋಗಿದ್ದಕ್ಕಾಗಲಿ, ಗೆಟ್‌ಔಟ್‌ ಅನ್ನಿಸಿಕೊಂಡದ್ದಕ್ಕಾಗಲಿ ಅಷ್ಟೇನೂ ದುಃಖವಾಗಲಿಲ್ಲ. ಆದರೆ ಅಂದು ನಮ್ಮಿಬ್ಬರು ಗೆಳೆಯರು ಕಲ್ಚರಲ್‌ ಡೇ ಎಂದು ಹೊಸದಾದ ಪಂಚೆ ಮತ್ತು ಅಂಗಿಯನ್ನು ಧರಿಸಿ ವಿಶೇಷವಾಗಿ ಅಲಂಕಾರ ಮಾಡಿಕೊಂಡು ಬಂದಿದ್ದರು. ಅವರೂ ಕೂಡ ನನ್ನ ಜೊತೆ ತರಗತಿಯಿಂದ ಹೊರ ನಡೆಯುವಾಗ ಅವರ ಮುಖ ಪಾಪ ಜೋತು ಬಿದ್ದದ್ದನ್ನು ನೆನೆದರೆ ಈಗಲೂ ನಗು ಬರುತ್ತದೆ. ನನ್ನ ತರ್ಲೆ ಗೆಳೆಯರು ಒಟ್ಟಾಗಿ ಸೇರಿಕೊಂಡಾಗ ಈ ಘಟನೆಯನ್ನು ನೆನೆದು ಪಂಚೆ ಗೆಳೆಯರನ್ನು ಅಣಕಿಸುತ್ತ ನಗುವುದುಂಟು.
 
– ಗಿರೀಶ ಜಿ. ಆರ್‌., ಶಿವಮೊಗ್ಗ

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.