ಮಿಸ್ಟರ್‌ ಫೈನಾನ್ಷಿಯರ್

ಬೇರೆಯವರ ಹಣಕ್ಕೆ ಮ್ಯಾನೇಜರ್

Team Udayavani, Feb 18, 2020, 5:53 AM IST

BEN-7

ಹಣವನ್ನು ಎಲ್ಲೆಲ್ಲಿ ಹೂಡಿದರೆ, ಹೇಗೇಗೆ ಲಾಭ ಮಾಡಬಹುದು. ಕಂಪೆನಿಗೆ ನಷ್ಟವಾಗದ ರಹದಾರಿಗಳು ಯಾವುವು? ಹೀಗೆ, ಉದ್ಯಮ ಆರಂಭಿಸಲು ನಿಂತವರಿಗೆ ನಾನಾ ಮಾರ್ಗಗಳನ್ನು ತೋರಿಸುವುದೇ ಫೈನಾನ್ಷಿಯರ್‌ಗಳ ಕೆಲಸ. ಇವತ್ತು ಆರ್ಥಿಕ ಕ್ಷೇತ್ರದ ಎಲ್ಲಾ ಕಡೆಯೂ ಇವರ ಇದ್ದಾರೆ. ಹಾಗಾಗಿಯೇ, ಈ ಕೋರ್ಸ್‌ಗೆ, ಅದನ್ನು ಮಾಡಿದವರಿಗೆ ಡಿಮ್ಯಾಂಡ್‌ ಹೆಚ್ಚಿರುವುದು.

ನಿಮ್ಮ ಬಳಿ ಸಾಕಷ್ಟು ಹಣವಿದೆ ಅಂತಿಟ್ಟುಕೊಳ್ಳಿ. ಇದನ್ನು ಬಳಸಿಕೊಂಡು ನೀವೊಂದು ಬ್ಯಾಂಕ್‌ ಅಥವಾ ಹಣಕಾಸಿಗೆ ಸಂಬಂಧಿಸಿದ ಉದ್ಯಮ ಪ್ರಾರಂಭಿಸಲು ಬಯಸುತ್ತೀರಿ. ಆದರೆ, ಅದನ್ನು ಸರಿಯಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು ಆಗ ನೀವು ಯಾರ ಬಳಿ ಹೋಗಬೇಕು? ಯಾರು ನಿಮಗೆ ಸಲಹೆ ನೀಡುತ್ತಾರೆ? ಹೊಸದೊಂದು ಉದ್ಯಮ ಆರಂಭಿಸಲು ಇರುವ ಮಾನದಂಡ, ಕಾನೂನುಗಳೇನು? ಎಂಬುದನ್ನು ನಿಮಗೆ ತಿಳಿಸಿಕೊಡುವವರು ಯಾರು ಗೊತ್ತಾ? ಅವರ ಹೆಸರೇ ಫೈನಾನ್ಷಿಯಲ್‌ ಮ್ಯಾಜ್‌ಮೆಂಟ್‌ ಎಕ್ಸ್‌ಪರ್ಟ್‌.

ಇವರು ಪಕ್ಕಾ ಪ್ರೊಫೆಷನಲಿಸ್ಟ್‌ಗಳು.
ಹಣ, ಮಾರುಕಟ್ಟೆಯ ಕುರಿತು ಸಮಗ್ರ ತಿಳುವಳಿಕೆ ಹೊಂದಿರುವ ಇವರು, ನೀವು ಹೂಡಿದ ಬಂಡವಾಳಕ್ಕೆ ಅಪಾಯವಾಗದಂತೆ ವ್ಯವಹಾರದಲ್ಲಿ ಯಾವೆಲ್ಲ ಕ್ರಮ-ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಅಲ್ಲದೆ, ನಿಮ್ಮ ಹಣದ ಪ್ರಮಾಣ ಬೆಳೆಯುವಂತೆಯೂ ನೋಡಿಕೊಳ್ಳುತ್ತಾರೆ. ಸ್ವಲ್ಪ ನಿಲ್ಲಿ. ಇವರು ಚಾರ್ಟಡ್‌ ಅಕೌಂಟೆಂಟ್‌ಗಳಲ್ಲ. ಇವರು ಸ್ಟಾರ್‌-ಶೇರ್‌ ಮಾರ್ಕೆಟ್‌ ಬ್ರೋಕರ್‌ಗಳೂ ಅಲ್ಲ. ನಿಮ್ಮ ಬಳಿ ತೊಡಗಿಸಿರುವ ಹಣಕ್ಕೆ ಭದ್ರತೆ ನೀಡುತ್ತಾ ಅದು ಲಾಭದಾಯಕವಾಗುವಂತೆ ಮಾಡುವ ಈ ಕಾಲದ ಫೈನಾನ್ಷಿಯರ್‌ಗಳು. ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್‌ ಹಾಗೂ ಇತರ ಹಣಕಾಸು ಸಂಸ್ಥೆಗಳು ಅಲ್ಲದೇ, ನಾನ್‌ ಬ್ಯಾಂಕಿಂಗ್‌ ಫೈನಾನ್ಷಿಯಲ್‌ ಕಂಪನಿಗಳಲ್ಲೂ ಇವರು ಕೆಲಸ ಮಾಡುತ್ತಾರೆ. ಶೇರ್, ಸ್ಟಾಕ್‌, ಬಾಂಡ್‌, ಡಿಬೆಂಚ‌ರ್‌, ಸೆಕ್ಯೂರಿಟೀಸ್‌, ಲೀಸಿಂಗ್‌, ವಿಮೆ ಹೀಗೆ ಅನೇಕ ಕೆಲಸಗಳೂ ಇವರ ಕಾರ್ಯವ್ಯಾಪ್ತಿಗೆ ಬರುತ್ತವೆ.

ಏನು ಓದಿರಬೇಕು?
ಬೇರೆಯವರ ಹಣವನ್ನು ಎಲ್ಲೆಲ್ಲಿ, ಹೇಗೇಗೆ? ತೊಡಗಿಸಬೇಕು ಅನ್ನೋದನ್ನು ತಿಳಿಸುವ ಇವರಿಗೆ ಬಹಳ ಡಿಮ್ಯಾಂಡ್‌ ಇದೆ. ಈ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರಕ್ಕೆ ಪ್ರವೇಶ ಬಯಸುವವರಿಗಾಗಿಯೇ, ಪದವಿಪೂರ್ವ ಶಿಕ್ಷಣದ ನಂತರ ಒಂದು ವರ್ಷದ ಡಿಪ್ಲೊಮಾ, ಮೂರು ವರ್ಷದ ಪದವಿ, 3 ವರ್ಷದ ಸ್ನಾತಕೋತ್ತರ ಪದವಿ ಮತ್ತು 3-4 ವರ್ಷಗಳ ಪಿಎಚ್‌.ಡಿಗೆ ಅವಕಾಶವಿದೆ. ಪದವಿ ಕೈಯಲ್ಲಿ ಇದ್ದರೆ ಹಣಕಾಸು ನಿರ್ವಹಣೆ ಕ್ಷೇತ್ರಕ್ಕೆ ಸುಲಭವಾಗಿ ಎಂಟ್ರಿ ಕೊಡಬಹುದು.

ಪ್ರತಿ ಕೋರ್ಸ್‌ ಪೂರೈಸಲು, ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಪೋರ್ಟ್‌ಫೋಲಿಯೋ ಅನಾಲಿಸಿಸ್‌, ಹಣ ಮತ್ತು ಬಂಡವಾಳ ಮಾರುಕಟ್ಟೆ, ಠೇವಣಿ ಭದ್ರತೆ ಮತ್ತು ಪೋರ್ಟ್‌ಫೋಲಿಯೋ ನಿರ್ವಹಣೆ, ಗ್ರಾಮೀಣ ಮತ್ತು ಸಹಾಕಾರಿ ಬ್ಯಾಂಕ್‌ ಸ್ಥಾಪನೆ, ನಿರ್ವಹಣೆ, ರಿಸ್ಕ್ ಮ್ಯಾನೇಜ್‌ಮೆಂಟ್‌ ನಂಥ ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಬಹುದು.

ಎಲ್ಲೆಲ್ಲಿ ಕೋರ್ಸ್‌?
ಭಾರತದ ಬಹುತೇಕ ಬಿ-ಸ್ಕೂಲ್‌ಗ‌ಳಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ. ಬೆಂಗಳೂರು, ಅಹಮದಾಬಾದ್‌, ಕೊಲ್ಕತ್ತಾ, ಲಕ್ನೋದ ಐಐಎಂಗಳು, ಬಾಂಬೆ, ಖರಗ್‌ಪುರ್‌, ದೆಹಲಿ, ಐಐಟಿಗಳಲ್ಲಿ ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ವಿವಿಧ ಪಠ್ಯದೊಂದಿಗೆ ಕಲಿಸಲಾಗುತ್ತದೆ. ಜೆಮ್‌ಶೆಡ್‌ಪುರದ ಕ್ಸೇವಿಯರ್‌ ಲೇಬರ್‌ ರಿಲೇಶನ್ಸ್‌ ಇನ್ಸ್ಟಿಟ್ಯೂಟ್‌, ಪುಣೆಯ ಸಿಂಯೋಸಿಸ್‌, ಬೆಂಗಳೂರು ಜೈನ್‌, ಕ್ರೆçಸ್ಟ್‌ ವಿವಿಗಳು ಸಹ ತನ್ನದೇ ಆದ ಪಠ್ಯಕ್ರಮವನ್ನಾಧರಿಸಿ ಶಿಕ್ಷಣ ನೀಡುತ್ತಿವೆ.

ಯಾವ ಯಾವ ಕೆಲಸ?
ಅಗತ್ಯವಿರುವ ವಿದ್ಯಾಭಾಸ ಮುಗಿಸಿದ ಅಭ್ಯರ್ಥಿಗಳು, ತಾವು ಕೆಲಸಕ್ಕೆ ಸೇರುವ ಹಣಕಾಸು ಸಂಸ್ಥೆಯ ವಿವಿಧ ವಿಭಾಗಗಳ ಬಗೆಗೆ ಸರಿಯಾದ ಮತ್ತು ಆಳವಾದ ತಿಳುವಳಿಕೆ ಗಳಿಸಿಕೊಳ್ಳಬೇಕು. ಸಂಸ್ಥೆಯ ಬಂಡವಾಳ, ಲಾಭ, ನಷ್ಟ, ಯೋಜನೆ, ಕೆಲಸಗಾರರ ನಿಯೋಜನೆ, ಸರ್ಕಾರದ ಜೊತೆಗಿನ ವ್ಯವಹಾರ, ಒಪ್ಪಂದ, ಗ್ರಾಹಕರ ಬೇಡಿಕೆಗಳ ಕುರಿತು ಅತ್ಯಂತ ವ್ಯವಸ್ಥಿತವಾಗಿ ಕ್ಷೇತ್ರ ಕಾರ್ಯಮಾಡಿಕೊಂಡು ಕೆಲಸಮಾಡಬೇಕಾಗುತ್ತದೆ. ಫೈನಾನ್ಸ್‌ ಮ್ಯಾನೇಜರ್‌, ಫೈನಾನ್ಷಿಯಲ್‌ ಪ್ಲಾನರ್‌, ಫೈನಾನ್ಸ್‌ ಅನಾಲಿಸ್ಟ್‌, ಫೈನಾನ್ಸ್‌ ಆಡಿಟರ್‌, ಇನೆrಸ್ಟ್‌ಮೆಂಟ್‌, ಬ್ಯಾಂಕಿಂಗ್‌ ಅನಾಲಿಸ್ಟ್‌, ಇನ್ವೆಸ್ಟರ್‌ ರಿಲೇಶನ್ಸ್‌ ಅಸೋಸಿಯೇಟ್‌, ಆಕುcವರಿ ಹುದ್ದೆಗಳು ಇವರಿಗೆ ಸಿಗುತ್ತವೆ.

ಎಲ್ಲೆಲ್ಲಿ ಕೆಲಸ?
ಎನ್‌ಜಿಒ, ಬ್ಯಾಂಕ್‌, ಆಮದು-ರಫ್ತು ವಿಭಾಗ, ಶಿಕ್ಷಣ, ಬಂಡವಾಳ ಹೂಡಿಕೆ, ಸಾಲ ಸೌಲಭ್ಯ, ಸರ್ಕಾರಿ ಯೋಜನೆಗಳ ಪಾಲುದಾರಿಕೆಯ ಕ್ಷೇತ್ರಗಳಲ್ಲೆಲ್ಲಾ ಕೆಲಸಗಳಿವೆ. ಮುಖ್ಯವಾಗಿ ಎಲ್‌ಐಸಿ, ಎಲ್‌ ಅಂಡ್‌ ಟಿ ಫೈನಾನ್ಸ್‌ ಲಿಮಿಟೆಡ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯ, ಐಡಿಬಿಐ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಬಜಾಜ್‌ ಕ್ಯಾಪಿಟಲ್‌ ಲಿಮಿಟೆಡ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಲಿಮಿಟೆಡ್‌, ಡಿಎಸ್‌ ಮೆರಿಲ್‌ಲಿಂಚ್‌ ಲಿಮಿಟೆಡ್‌, ಕಾರ್ವಿಗ್ರೂಪ್‌, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯ, ಕೋಟಕ್‌ ಮಹೀಂದ್ರಾ ಸಮೂಹಗಳಲ್ಲಿ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ ಉದ್ಯೋಗ ದೊರೆಯಲಿದೆ. ತಾವು ಕೆಲಸ ಮಾಡುವ ಕ್ಷೇತ್ರದಲ್ಲಿನ ಪೈಪೋಟಿ, ಗುಣಮಟ್ಟದ ನಿರ್ವಹಣೆ, ಗ್ರಾಹಕ ಸಂತೃಪ್ತಿ, ನಿಶ್ಚಿತ ಲಾಭಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಕೆಲಸ ಮಾಡುವವರಿಗೆ ಸಮಯಕ್ಕೆ ಸರಿಯಾದ ಪದೋನ್ನತಿಯ ಭಾಗ್ಯವೂ ಸಿಗುತ್ತದೆ. ಬಹುತೇಕ ಹಣಕಾಸು ಸಂಸ್ಥೆಗಳು ಮನಿರನ್ಸ್‌ ಮಾರ್ಕೆಟ್‌, ಮಾರ್ಕೆಟ್‌ರನ್ಸ್‌ಮನಿ ಎಂಬ ಸಿದ್ಧಾಂತದ ಮೇಲೆ ಕೆಲಸ ನಿರ್ವಹಿಸುತ್ತವೆ. ಹಣದ ಜವಾಬ್ದಾರಿಯುತ ಬಳಕೆ ಮತ್ತು ಮಾರುಕಟ್ಟೆಯ ಆಗು-ಹೋಗುಗಳ ಕಡೆ ತೀವ್ರ ನಿಗಾ ಇಟ್ಟು ಕೆಲಸ ಮಾಡುವ ಉದ್ಯೋಗಿಗಳು ಅದೇ ಕಂಪನಿಗಳ ACL ಪದವಿಗೇರಿದ ಉದಾಹರಣೆಗಳೂ ಇವೆ.

ಗುರುರಾಜ್‌ ಎಸ್‌. ದಾವಣಗೆರೆ

ಟಾಪ್ ನ್ಯೂಸ್

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.