ಆವತ್ತು ನಾನೇ ಯಕ್ಷಗಾನ ಮಾಡಿದ್ದು..

Team Udayavani, Mar 31, 2020, 3:41 PM IST

josh-tdy-7

ಯಕ್ಷಗಾನದ ಮೇಲೆ ಹುಚ್ಚುಪ್ರೀತಿ ನನಗೆ ಯಾವಾಗ ಹುಟ್ಟಿತ್ತೋ ನೆನಪಿಲ್ಲ. ಈ ಹುಚ್ಚಿನಿಂದಾದ ಅನುಭವಗಳು ಮತ್ತು ನೆನಪುಗಳು ಹಾಗೇ ಉಳಿದಿವೆ. ಯಕ್ಷಗಾನದ ಚಂಡೆಯ ಸದ್ದೊಂದು ಸಾಕು ಯಕ್ಷಪ್ರೇಮಿಯಾಗಲು. ಅಂಥದ್ದರಲ್ಲಿ, ಆಗೆಲ್ಲ ನನ್ನೂರು ಗುಂಡೀಬೈಲು ಯಕ್ಷಗಾನ ನಾಟಕಗಳಿಂದ ಶೃಂಗಾರಗೊಳ್ಳುತ್ತಿದ್ದ ಕಾಲ. ಅಲ್ಲದೇ, ಪಕ್ಕದ ಗುಂಡಬಾಳದಲ್ಲಿ ಆರು ತಿಂಗಳುಗಳ ಕಾಲ ಒಂದೇ ರಂಗಸ್ಥಳದಲ್ಲಿ ಸೇವೆಯಾಟ ನಡೆಯುತ್ತಿತ್ತು. ಜೊತೆಗೆ ಊರಿನ ಸುತ್ತಮುತ್ತ ಯಕ್ಷಗಾನ ಸಂಘಗಳು, ಯಕ್ಷಗಾನ ಪ್ರದರ್ಶನ ಇಟ್ಟುಕೊಳ್ಳುತ್ತಿದ್ದವು.

ನನಗಾಗ ಏಳು ವರುಷ. ಅವತ್ತು ರಾತ್ರಿ ಪಕ್ಕದ ಕೆಂಚಗಾರಿನಲ್ಲಿ ಸಂಘದ ಯಕ್ಷಗಾನವಿತ್ತು. ಮನೆಯವರೆಲ್ಲ ಹೋಗಿ, ರಂಗಸ್ಥಳದ ಎದುರುಗೋಣಿಚೀಲವನ್ನು ಹಾಸಿ ಕುಳಿತುಕೊಳ್ಳುವ ಹೊತ್ತಿಗೆ, “ದಕ್ಷಿಣಾಮೂರ್ತಿ ದೇವಾ..’ ಎನ್ನುತ್ತಾ ಭಾಗವತರು ಶುರುಮಾಡಿದ್ದೇ ತಡ, ವೇಷ ಯಾವಾಗ ರಂಗಕ್ಕೆ ಬರುತ್ತದೆಂಬಕಾತರದಲ್ಲಿ ಕಾಯುತ್ತಿದ್ದೆ. ಹರೇ ರಮಣ ಗೋವಿಂದ ಎಂಬ ಪದ್ಯಕ್ಕೆ ಕುಣಿಯುತ್ತ ಬಂದ ಎರಡು ವೇಷಗಳನ್ನು ಕಂಡು ಪುಳಕಿತನಾದೆ. ಅವರ ಕುಣಿತದೆಡೆಗೆ ನೆಟ್ಟ ದೃಷ್ಟಿಯನ್ನುತೆಗೆಯಲಿಲ್ಲ. ಮನದೊಳಗೆ ನಾನೂ ಕುಣಿಯುತ್ತಿದ್ದೆ. ನನ್ನ ಕೈ ಕಾಲುಗಳು ಚಂಡೆಗೆ ತಕ್ಕಂತೆ ಆಡಲು ಶುರುವಿಟ್ಟುಕೊಂಡಾಗ ಎದ್ದು ನೇರವಾಗಿ ರಂಗಸ್ಥಳದತ್ತ ಓಡಿದೆ. ಆ ಎರಡು ಬಾಲಗೋಪಾಲರ ನಡುವೆ ನಿಂತು, ಪದ್ಯ ಮುಗಿಯುವ ತನಕವೂ ಆನಂದದಿಂದ ಕುಣಿದೆ. ಅವತ್ತು ನಾನು ಧರಿಸಿದ್ದ ಕಡುನೀಲಿ ಮತ್ತು ಕೆಂಪುಗೆರೆಯ ಸ್ವೆಟರ್‌ ಮತ್ತು ಅಲ್ಲಿ ಕುಣಿದ ಕ್ಷಣ ಮನದಲ್ಲಿ ಅಚ್ಚೊತ್ತಿಕೊಂಡಿವೆ. ಏನು ಕುಣಿದೆನೋ- ಬಿಟ್ಟೆನೋ? ನೆನಪಿಲ್ಲ, ಆದರೆ ಅವತ್ತಿನ ಈ ಪರಮಾನಂದಕ್ಕೆ ಸಮನಾದದು ಯಾವುದೂ ಇಲ್ಲ. ಈತನಕ ಮತ್ತೂಂದು ಮರುಕಳಿಸಲಿಲ್ಲ.

ಯಕ್ಷಗಾನದ ಇನ್ನೊಂದು ಹಸಿಹಸಿ ನೆನಪು ಜೊತೆಯಲ್ಲಿದೆ. ಎಂಟನೇ ತರಗತಿಯಲ್ಲಿದ್ದಾಗ ಕೆರೆಮನೆ ಶಂಭು ಹೆಗಡೆಯವರ ತಂಡದೊಂದಿಗೆ ಬಾಳೆಹೊನ್ನೂರಿಗೆ ಹೋಗಿದ್ದೆ. ಸತ್ಯಹರಿಶ್ಚಂದ್ರ ಪ್ರಸಂಗದಲ್ಲಿ ಲೋಹಿತಾಶ್ವನ ಪಾತ್ರ ಮಾಡಿದ್ದೆ. ಲೋಹಿತಾಶ್ವನಿಗೆ ಹಾವು ಕಚ್ಚಿ ಶವವಾದಾಗ, ತಾಯಿ ಚಂದ್ರಮತಿ ಅದನ್ನು ಸುಡುವುದಕ್ಕೆ ರುದ್ರಭೂಮಿಗೆ ತಂದು, ಕಾವಲುಗಾರನಾಗಿದ್ದ ಹರಿಶ್ಚಂದ್ರನ ಜೊತೆಗಿನ ಸಂಭಾಷಣೆಯ ಸನ್ನಿವೇಶದಲ್ಲಿ ನಾನು ಮಲಗಿದ್ದು, ಈ ಸನ್ನಿವೇಶ ಮುಗಿದ ಕೂಡಲೇ ತೆರೆಹಿಡಿಯವವರು ಬಂದಾಗ ಎದ್ದು ಚೌಕಿಗೆ ಹೋಗಬೇಕಿತ್ತು.

ಸರಿ ಸುಮಾರು ಅರ್ಧಗಂಟೆಗೂ ಮಿಕ್ಕಿದ ಆ ಸನ್ನಿವೇಶ ಮುಗಿಯುವ ಮೊದಲೇ, ನನಗೆ ಜೋರಾದ ನಿದ್ದೆ ಬಂದಿತ್ತು. ತೆರೆ ಹಿಡಿಯುವವರು, ನಾನು ಏಳದೇ ಇದ್ದದ್ದನ್ನು ನೋಡಿ, ನಿಧಾನವಾಗಿ ಅವರ ಕಾಲನ್ನು ನನ್ನ ಕಾಲಿಗೆ ತಾಗಿಸಿ ಎಬ್ಬಿಸಿದರು. ಒಂದರೆಕ್ಷಣ ನಾನೆಲ್ಲಿದ್ದೇನೆಂದು ತಿಳಿಯದೆ ಪರದಾಡಿದೆ. ಆ ಕೂಡಲೇ ಸಾವರಿಸಿಕೊಂಡು ಚೌಕಿಯತ್ತ ಓಡಿದೆ. ಇಂಥ ಘಟನೆಗಳು ಯಕ್ಷಗಾನ ಅನ್ನುತ್ತಲೇ ನೆನಪಾಗಿ ಪಾತ್ರಧಾರಿಗಳಂತೆ ಎದುರಿಗೆ ಬಂದು ಕುಣಿಯುತ್ತವೆ.

-ವಿಷ್ಣು ಭಟ್‌ ಹೊಸ್ಮನೆ

ಟಾಪ್ ನ್ಯೂಸ್

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.