ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ…


Team Udayavani, Feb 14, 2017, 3:45 AM IST

lead.jpg

ಇವತ್ತು ಪ್ರೇಮಿಗಳ ದಿನ. ಅದನ್ನೇ ನೆಪ ಮಾಡಿಕೊಂಡು ಯುವ ಮನಸ್ಸುಗಳು ತಮ್ಮ ಎದೆಯೊಳಗಿನ ತಳಮಳವನ್ನೆಲ್ಲ ಅಕ್ಷರಗಳಲ್ಲಿ ತುಂಬಿ, ಅದಕ್ಕೆ ಪ್ರೇಮಪತ್ರದ ರೂಪ ಕೊಟ್ಟಿದ್ದಾರೆ. ಆ ಅಕ್ಷರಗಳ ರಂಗವಲ್ಲಿ ನಿಮ್ಮ ಕಣ್ತುಂಬಲಿ, ಮನ ಗೆಲ್ಲಲಿ!

ಮರೆಯಲಾಗದ ಚಿತ್ರವಾಗಿ ಕಾಡುತಿದೆ, ಕೆಣಕುತಿದೆಮೊದಲ ಪ್ರೀತಿ

ನಿಮ್ಮ ಪ್ರೀತೀನ ಒಪ್ಪಿದೀವಿ. ನಾವೇ ಮದುವೆ ಮಾಡಿಕೊಡ್ತೀವಿ ಎಂದ ಮನೆಮಂದಿ, 15 ದಿನಗಳಲ್ಲೇ ಮದುವೆ ಮಾಡಿದರು ಬೇರೆಯವನೊಂದಿಗೆ!

ಅವಳು ಅವನದೇ ಕ್ಲಾಸಿನ ಹುಡುಗಿ. ಮೊದಲ ಬೆಂಚಿನ ಹುಡುಗಿ. ಅವಳನ್ನು ಎಲ್ಲರೂ ಗೌರಮ್ಮ ಎಂದು ಕಾಲೆಳೆಯುತ್ತಿದ್ದರು. ಇವನು ಆ ಸೌಮ್ಯ ಮುಖದ ಚೆಲುವೆಗೆ ಮಾರು ಹೋಗಿದ್ದ. ಎಲ್ಲವನ್ನೂ ಹೇಳಲೇಬೇಕೆಂದು ಎಷ್ಟೋ ದಿನ ಅವಳ ಹಿಂದೆಯೇ ಹೋಗಿದ್ದ. ಆದರೆ ಧೈರ್ಯ ಸಾಲದೆ ವಾಪಸ್ಸಾಗುತ್ತಿದ್ದ. 

ಅವತ್ತು ಫೆಬ್ರವರಿ 14. ಕಾಮನಬಿಲ್ಲು ಸಹ ಕಣ್ಣರಳಿಸಿ ನೋಡುತ್ತಿತ್ತು. ಅವಳು ಒಪ್ಪುತ್ತಾಳ್ಳೋ? ಇಲ್ಲವೋ? ಎಂಬ ಭಯವಿದ್ದರೂ ಅದೇನೋ ಧೈರ್ಯ ಮಾಡಿ ಅವಳನ್ನು ಕಾಲೇಜ್‌ ಹಿಂದುಗಡೆಯ ಕಲ್ಲುಬೆಂಚಿನ ಬಳಿ ಬರಲು ಹೇಳಿದ. ಬೆನ್ನ ಹಿಂದೆ ಹೆದರಿಕೆ ಬೆಟ್ಟದಷ್ಟಿದ್ದರೂ ಅವನ ಮಾತಿಗೆ ತಪ್ಪದೇ ಅವಳು ಬಂದಳು. ತಡ ಮಾಡದೆ ಮಂಡಿಯೂರಿ ತನ್ನ ಪ್ರೀತಿಯನ್ನು ಹೇಳಿದ. ಅವಳು ನಿರುತ್ತರಳಾಗಿ ಸ್ವಲ್ಪ ಸಮಯದ ನಂತರ ತನ್ನ ಮುಂದಿನ ಭವಿಷ್ಯದ ಕಿರಣವನ್ನು ಅವನ ಕಣ್ಣುಗಳಲ್ಲಿ ನೋಡುತ್ತಾ. ಒಪ್ಪಿಗೆ ಎನ್ನುವಂತೆ ಒಂದು ಕಿರುನಗೆ ಬೀರಿದಳು. ನಾಲ್ಕಾರು ಜನ ಒಪ್ಪಿ ಮಾತನಾಡುವ ಅವನ ಅದ್ಭುತ ವ್ಯಕ್ತಿತ್ವವೇ ಅವಳನ್ನು ಪ್ರೀತಿಗೆ ಸಮ್ಮತಿಸುವಂತೆ ಮಾಡಿತ್ತು. ಅದೇ ಕಲ್ಲು ಬೆಂಚಿನಲ್ಲಿ ತಮ್ಮಿಬ್ಬರ ಪ್ರೀತಿಯ ಕುರುಹುವಾಗಿ ಹೆಸರಿನೊಂದಿಗೆ ಹೆಸರು ಸೇರಿಸಿ ಬರೆದು ಸಂಭ್ರಮಿಸಿದರು.

ಫೋನ್‌, ಮೆಸೇಜ್‌, ಪಾರ್ಕ್‌, ಸಿನೆಮಾ ಜೊತೆ ಸ್ವಲ್ಪ ಓದುವುದರೊಂದಿಗೆ ಕಾಲೇಜ್‌ ಮುಗಿಸಿಯೇ ಬಿಟ್ಟರು. ಅವನು ಇವಳಿಗಾಗಿಯೇ ಓದು ಮುಂದುವರೆಸಲು ಕಣ್ತುಂಬ ಇವಳ ಕನಸು ಹೊತ್ತು ಬೇರೆಡೆಗೆ ಹೋದ. ಆದರೂ ಆಗಾಗ ಭೇಟಿ ದಿನವೂ ಗಂಟೆಗಟ್ಟಲೇ ಮಾತು ಮಾತ್ರ ನಿಲ್ಲಲಿಲ್ಲ. ಹೇಗೋ ಮನೆಮಂದಿಗೆಲ್ಲ ಇವಳ ಪ್ರೀತಿಯು ತಿಳಿದು ಹೋಯಿತು.

ಸಂಪ್ರದಾಯಸ್ಥ ಕುಟುಂಬದ ಅವಳ ತಂದೆ ಇವರ ಪ್ರೀತಿಗೆ ಖಳನಾಯಕನಾದ. ಇವನಿಗಿಂತ ಅವಳು 6 ತಿಂಗಳು ದೊಡ್ಡವಳಾಗಿದ್ದು ತಂದೆಯ ನಿರಾಕರಣೆಗೆ ಕಾರಣವಾಗಿತ್ತು. ಒಪ್ಪಿ$ದಂತೆ ನಟಿಸಿ ಕೇವಲ 15 ದಿನಗಳಲ್ಲೇ ಮಗಳಿಗೆ ಬೇರೆ ವರನೊಂದಿಗೆ ವಾಹ ಮಾಡಿಯೇ ಬಿಟ್ಟ. ಅವನೆದುರೇ ಅವನ ಪ್ರೀತಿ ಇನ್ನೊಬ್ಬನ ಕೈ ಡಿದು ಏಳು ಹೆಜ್ಜೆ ದಾಟ್ಟಿತ್ತು.
      ಇವನು ದೀಪದಲ್ಲಿ ರೆಕ್ಕೆ ಸುಟ್ಟುಕೊಂಡ ಪತಂಗದಂತೆ ಚಡಪಡಿಸಿದ. ಇಂದಿಗೂ ಪ್ರೇಮಿಗಳ ದಿನದಂದು ತನ್ನ ಪ್ರೀತಿಯ ನೆನಪಿನಲ್ಲಿ ಅದೇ ಕಲ್ಲುಬೆಂಚಿನಲ್ಲಿ ಅಳಿಸಿಹೋದ ತಮ್ಮಿಬ್ಬರ ಹೆಸರು ಹುಡುಕುತ್ತಾನೆ. ಕಣ್ಣೀರಿನ ಮುತ್ತುಗಳನ್ನು ಸುರಿಸುತ್ತಾ ಅಕ್ಷರಶಃ ಕಣ್ಣೀರಾಗಿ ಬರುತ್ತಾನೆ. ಮರೆಯಲಾಗದೆ ಕಾಡುತಿದೆ, ಕೆಣಕುತಿದೆ ಅವನ ಮೊದಲ ಪ್ರೀತಿ.
– ಕಾವ್ಯಾ ಭಟ್ಟ ಜಕ್ಕೊಳ್ಳಿ
**
ಮರಳಿ ಬಾ ನೀನೊಮ್ಮೆ…

ಅವಳು ನನ್ನಿಂದ ದೂರಾಗಿದ್ದಾಳೆ ನಿಜ.
ಆದರೂ ನಾನು ಕಾಯುತ್ತಲೇ ಇದ್ದೇನೆ,
ಅವಳು ಸಿಗುವುದಿಲ್ಲವೆಂದು ಗೊತ್ತಿದ್ದರೂ…

ಅವಳು ನನ್ನ ಬದುಕಿನಿಂದ ದೂರವಾದಾಗ ಮತ್ತೆ ಮರಳುವಳೇನೋ ಅಂತ ನನ್ನ ಮನ ಕಾಯುತ್ತಾ ಇತ್ತು. ಯಾಕೆಂದರೆ ನನ್ನ ಹೃದಯಕ್ಕೆ ಅವಳು ಮೊದಲ ಬಾರಿ ಬಂದಾಗ ಅವಳ ಮುಖದಲ್ಲಿ ಇದ್ದ ಆ ಮುಗ್ಧತೆ ಅವಳು ದೂರಾದಾಗಲೂ ಹಾಗೆಯೇ ಉಳಿದಿತ್ತು. ಅವಳ ಪ್ರತಿಯೊಂದು ಹೆಜ್ಜೆ ಗುರುತು ಹಾಗೆಯೇ ಮೂಡಿತ್ತು. ನೀನು ನನ್ನನ್ನು ಇಷ್ಟ ಪಡುವಷ್ಟು ಯಾರು ನನ್ನ ಇಷ್ಟಪಟ್ಟಿಲ್ಲ, ಪಡೋದೂ ಇಲ್ಲ. ನನ್ನಿಂದ ಯಾವತ್ತೂ ದೂರವಾಗ್ಬೇಡ ಅನ್ನೋ ಮಾತನ್ನು ಆಗಾಗ ಹೇಳುತ್ತಾ ಇದ್ದಳು. ಅವಳು ಎಲ್ಲರ ಹಾಗಲ್ಲ, ಸಣ್ಣ ಸಣ್ಣ ವಿಷಯ ಸಾಕು ಅವಳಿಗೆ ಖುಷಿ ಕೊಡಲು. ನನಗೆ ಇಂಥದ್ದೇ ಬೇಕು ಅನ್ನೋ ಹಟ ಯಾವತ್ತೂ ಮಾಡಿದವಳಲ್ಲ. ನನಗೆಲ್ಲಿ ಕಷ್ಟವಾಗುತ್ತೋ ಅಂತ ಅವಳಿಗೆ ಇಷ್ಟವಿದ್ದರೂ ತನಗೆ ಬೇಕಾದುದನ್ನು ಕೇಳುತ್ತಿರಲಿಲ್ಲ, ಮಾಡುತ್ತಿರಲಿಲ್ಲ. ಅಂತಹವು ನನ್ನ ಗಮನಕ್ಕೆ ಬಂದವು ಹಲವು, ಗಮನಕ್ಕೆ ಬಾರದ್ದು ಅದೆಷ್ಟೋ..? ಅವಳು ಕನ್ನಡಿಯ ಮುಂದೆ ತುಂಬಾ ಹೊತ್ತು ನಿಲ್ಲುತ್ತಿದ್ದಾಗ ನಾನು ಸ್ವಲ್ಪ ಸಿಡುಕಿದರೂನು ಅವಳಿಗೆ ಅಳುವೇ ಬಂದು ಬಿಡುತ್ತಿತ್ತು. ಇನ್ನೇನು ಅತ್ತೇ ಬಿಡುತ್ತಾಳೆ ಅನ್ನೋವಷ್ಟರಲ್ಲಿ ಏನೋ ಒಂದು ಹೇಳಿ ಅವಳು ನಗೋ ಹಾಗೆ ಮಾಡುತ್ತಿದ್ದೆ.

ಹೀಗಿದ್ದಾಗ ಅವಳು ಇದ್ದಕ್ಕಿದ್ದ ಹಾಗೆ ನನ್ನ ಬದುಕಿಂದ ದೂರ ಹೋದಾಗ ನನ್ನ ಕಣ್ಣಿಂದ ಒಂದು ಹನಿ ಕಣ್ಣೀರೂ ಜಿನುಗಿರಲಿಲ್ಲ. ಎಲ್ಲರೂ ಹೇಳುತ್ತಿದ್ದರು “ಅವಳು ದೇವರ ಬಳಿ ಹೋಗಿದ್ದಾಳೆ ಇನ್ನೆಂದೂ ಬಾರಳು’ ಎಂದು. ಆದರೆ ನಾನು ಅವರಿವರ ಮಾತನ್ನು ನಂಬುತ್ತಿಲ್ಲ. ಅವಳು ಖಂಡಿತಾ ಮತ್ತೆ ಬರುತ್ತಾಳೆ, ನನ್ನ ಜೊತೆ ಅವಳಿದ್ದ ಒಂದೊಂದು ಕ್ಷಣಗಳು ಸಾಕು ಅವಳನ್ನು ಜೀವಮಾನವಿಡೀ ಕಾಯಲು… ಅಲ್ವಾ?
– ಅಭಿಷೇಕ್‌ ಎಂ. ತೀರ್ಥಹಳ್ಳಿ
**
ನೀನಂದ್ರೆ ನಂಗಿಷ್ಟ ನಾನಂದ್ರೆ ನಿಂಗಿಷ್ಟನಾ?

ನನ್ನ ಮನದರಸ,            
ಹೇಗಿದಿಯೋ ಕಳ್ಳ? ಚೆನ್ನಾಗಿದಿಯಾ? ಕಳ್ಳ ಅಂತ ಯಾಕ್‌ ಕರೆª ಅಂತಾ ಆಶ್ಚರ್ಯ ಆಗಿರ್ಬೇಕಲ್ವ. ಹಾ! ನಿಜವಾಗ್ಲೂ ನನ್‌ ಮನಸ್‌ ಕದ್ದ ಚೋರ ನೀನು. ಸತ್ತು ಹೋಗಿದ್ದ ಮನಸ್ಸಿಗೆ ಪುನರ್‌ಜನ್ಮ ನೀಡಿದವ ನೀನು. ಹೂ ಬಿಡದ ಗಿಡದಂತಿದ್ದ ಈ ಜೀವನದಲ್ಲಿ ಪ್ರೀತಿಯ ಸುಗಂಧಭರಿತ ಹೂ ಅರಳಿಸಿದವ ನೀನು. ನಿನಂದ್ರೆ ನಂಗಿಷ್ಟ ನಾನಂದ್ರೆ ನಿಂಗಿಷ್ಟನಾ? ನೀನಂದ್ರೆ ನಂಗೆ ಪ್ರಾಣ. ನಾನಂದ್ರೆ? ಇಷ್ಟೆಲ್ಲಾ ವಿಷಯಗಳನ್ನು ನಿನ್ನ ಹತ್ರ ಹೇಳೊಕೆ ಆಗದೇ ಐದು ವರ್ಷದಿಂದ ಒದ್ದಾಡ್ತಿದ್ದೇನೆ… ಒಂದು ದಿನಾನೂ ನಿನ್ನ ಮುಖ ನೋಡದೇ ಇರ್ಲಿಕ್ಕೆ ಅಗ್ತಾ ಇರ್ಲಿಲ್ಲ. ನಿನ್ನ ಮುಖಾರವಿಂದ ಕಾಣದ ಆ ದಿನ ತಲೆ ಮೇಲೆ ಆಕಾಶ ಬಿದ್ದವರ ಹಾಗೆ ಆಡ್ತಿದ್ದೆ. ಸಮುದ್ರದ ಆಳದಲ್ಲಿರೋ ಚಿಪ್ಪಿನೊಳಗಿನ ಮುತ್ತು ನೀನು…

ಸಮುದ್ರದಂಡೆಯಲ್ಲಿರೋ ಕಲ್ಲು ನಾನು… ನನಗೆ ನಿನ್ನ ಒಲವ ಬಯಸೋ ಅರ್ಹತೆ ಇಲ್ಲ. ನಿನ್ನ ಬಯಸೋದು ತಪ್ಪು. ಆದ್ರೂ ನೀನೇ ಬೇಕೆಂಬ ಹುಚ್ಚು… ಮನದಲ್ಲಿರೋ ಭಾವನೆಗಳಿಗೆ ಕಡಿವಾಣ ಹಾಕಿ ಇಷ್ಟರ ತನಕ ಕಾದೆ ನಿನಗಾಗಿ… ಇನ್ನೇನು ಸ್ವಲ್ಪ ದಿನದಲ್ಲೇ ನೀ ನನ್ನ ಕಣ್ಣಿಂದ ಮರೆಯಾಗೋ ಕಾಲ ಹತ್ರ ಬರ್ತಾ ಇದೆ. ಐದು ವರ್ಷದ ಕೋರ್ಸ್‌ ಮುಗೀತಾ ಬಂತು. ಮುಂದೆ ನೀನೆಲ್ಲೋ, ನಾನೆಲ್ಲೋ…

ಎಲ್ಲವನ್ನೂ ಹೇಳಿಬಿಡುವ ಅಂದ್ರೆ ತುಂಬಾ ಭಯ ಕಣೋ… ನೀ ಎಲ್ಲಿ ತಪ್ಪು ತಿಳ್ಕೊಳ್ತೀಯಂತಾ. ನಿನ್ನೊಂದಿಗೆ ಎರ್ರಾಬಿರ್ರಿ ಜಗಳ ಮಾಡಿ ಮಾತ್ರ ಅಭ್ಯಾಸ ಕಣೋ.. ಹೀಗೆಲ್ಲಾ ತಾಳ್ಮೆಯಲ್ಲಿ ಮಾತಾಡಿದ್ದೇ ಕಡಿಮೆ. ಈ ಸರ್ತಿ ಗಟ್ಟಿ ಮನಸು ಮಾಡಿ ಹೇಳೆ ಬಿಡ್ತೇನೆ ಕೇಳು… ಬಂಗಾರ ಬಾಳಿನ ಕೊನೆಯವರೆಗೆ ಮಾತ್ರವಲ್ಲ, ಪ್ರತಿ ಜನ್ಮದಲ್ಲೂ ನಿನ್ನೊಂದಿಗಿರುವೆ ಎಂಬ ಆಶ್ವಾಸನೆಯ ಸಪ್ತಪದಿ ತುಳಿಯುವೆಯಾ? ಈ ಖಾಲಿ ಕೊರಳಿಗೆ ಪ್ರೀತಿಯ ಕರಿಮಣಿ ಸರ ಹಾಕಿ ಕಾವಲಿರುವೆಯಾ? ಎಂಬ ಈ ಕೋರಿಕೆಯೊಂದಿಗೆ ನಿನ್ನೊಂದಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದೇನೆ… ಹೊಸ ಬಾಳಿನ ಹೊಸ್ತಿಲಲ್ಲಿ ನಿಂತು ಸೇರು ಒದ್ದು, ನಿನ್ನ ಬಾಳು ಮತ್ತು ಮನೆ ಬೆಳಗಿಸುವ ಅವಕಾಶ ಕೊಡ್ತೀಯಾ? ನನ್ನ ಮನದ ಮಾತಿಗೆ ನಿನ್ನ ಸ್ಪಂದನೆ ಏನು? ತಿಳಿಸುವೆಯಾ ಶೀಘ್ರದಲ್ಲಿ… ನಿನ್ನ ಪ್ರತ್ಯುತ್ತರಕ್ಕಾಗಿ ಕಾದಿರುವ… ಇಂತಿ ನಿನ್ನವಳು ನಿನ್ನ ಮನದರಸಿ… 
– ವಿನಿಷ ಉಜಿರೆ
**
ನೀನು ಜಾಸ್ತಿ ಒಳ್ಳೆಯವನು ಸ್ವಲ್ಪ ಕೆಟ್ಟವನು!
ನೀನು ನನಗೆ ಸಾಕಷ್ಟು ನೋವು ಕೊಟ್ಟಿರುವಂತೆ, ನಾನೂ ನಿನಗೆ ಅತಿಯಾದ ಯಾತನೆಯನ್ನು ಕೊಟ್ಟಿದ್ದೇನೆ.
ಅದಕ್ಕಾಗಿ sory, sory, sory…

ನನ್ನ ಹೆಸರು ನಿನಗೆ ಚೆನ್ನಾಗಿ ಗೊತ್ತು. ನಾನು ನಿನ್ನ ಕಲ್ಪನೆಯ ಮೋನಾ. ನನಗಾಗಿ ನೀನು ಹಂಬಲಿಸುತ್ತಾ ಪಡುವ ಪಾಡು ಬಲ್ಲೆ. ಹೇಗೋ ಹತ್ತಿರವಾದೆವು. ಒಮ್ಮೆ ನೀನು ನನಗೆ “ಮೋನಾ’ ಎಂದು ಕರೆದೆ. ಯಾಕೀ ಹೆಸರೆಂದು ಕೇಳಿದಾಗ, ನಿನ್ನ ಒಂದು ಸೆಲ್ಫಿಯಲ್ಲಿ ಮೋನಾಲಿಸಾಳ ಕಿರುನಗೆ ಕಂಡೆ ಎಂದೆ. ನನ್ನ ನಿನ್ನ ನಡುವೆ ಸಾಕಷ್ಟು ಜಗಳ, ಮುನಿಸು, ಮಾತು ಎಲ್ಲಾ ಆಗಿ ಹೋಗಿವೆ. ಜಾಸ್ತಿ ಮಾತನಾಡಿದರೂ ಕಷ್ಟ, ಸುಮ್ಮನಿದ್ದರೂ ಯಾತನೆಯ ಬದುಕು ನಮ್ಮದು.  

ಒಮ್ಮೊಮ್ಮೆ ಅನಿಸುವುದು: ನೀನು ತುಂಬಾ ಒಳ್ಳೆಯವ; ಕೆಲವೊಮ್ಮೆ ನಿನ್ನಷ್ಟು ವಿಚಿತ್ರ ಇನ್ಯಾರು ಇಲ್ಲ. ನನ್ನ ಜೀವನದಲ್ಲಿ ಸಾಕಷ್ಟು ಕನಸಿನ ರಾಜರು ಬಂದಿದ್ದಾರೆ. ಪ್ರಪೋಸ್‌ ಮಾಡಿದ್ದಾರೆ, ಆದರೆ ನಿನ್ನಷ್ಟು ಮುಕ್ತ ಮನಸ್ಸಿನ ವ್ಯಕ್ತಿಯ ನಾನು ಕಂಡಿಲ್ಲ. ಈ ನಿನ್ನ ಮುಕ್ತತೆಯೇ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಾಮಾನ್ಯಳಂತೆ ಕನಸು ಕಾಣುವ ನನಗೆ ನೀನು ಭಾರವೆನಿಸುವೆ. ನಿನ್ನಂತರಾಳದ ತಲ್ಲಣಗಳು ಮನಕ್ಕೆ ತಲುಪುತ್ತಿದ್ದರೂ ನಾನು ಅಸಹಾಯಕಳಾಗಿರುವೆ.  

ಗೆಳೆಯಾ, ನನಗಾಗಿ ನೀನು ಏನೇನೋ ಮಾಡಿದ್ದೀಯ. ನೀನು ನನ್ನ ಮನಸ್ಸಲ್ಲಿ ಉಳಿಯುವಂತೆ ಮಾಡಿದ್ದು “ಮೋನಾಕಾವ್ಯ’ ಎಂಬ ಕಾವ್ಯ ಸರಣಿ. ನಿನ್ನೊಳಗೆ ಮೋನಾಳನ್ನು ಆವಾಹಿಸಿಕೊಂಡು, ನನ್ನೆಲ್ಲಾ ಭಾವನೆಗಳನ್ನು ನಿತ್ಯ ದಾಖಲಿಸುವೆ. ಒಮ್ಮೊಮ್ಮೆ ನನ್ನ ಮನಸ್ಸಿನ ಆಳವೆಲ್ಲಾ ನಿನಗೆ ಹೇಗೆ ಅರ್ಥವಾಗುತ್ತದೋ ಎಂದು ಆಶ್ಚರ್ಯವಾಗುತ್ತದೆ. “ನಿನ್ನನ್ನು ಆಕೆ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾಳೆ’ ಎಂದು ಬಹಳ ಜನ ನಿನ್ನ ಕಿವಿಯೂದಿದರು. ಅದು ಸತ್ಯವೆಂದು ನಿನಗೆ ಗೊತ್ತು. ಅವಳು ದೊಡ್ಡ ಫ್ಲರ್ಟ್‌ ಎಂದೆಲ್ಲಾ ನಿನ್ನ ಮನಸ್ಸು ಕೆಡಿಸಲು ನೋಡಿದರು. ನನ್ನ ವಿಚಾರದಲ್ಲಿ ನೀನು ಮಗುವಾಗಿರುವೆ ಕಣೋ. ಎಲ್ಲರನ್ನು ಎದುರು ಹಾಕಿಕೊಂಡು, ಮೋನಾ, ಫ್ಲರ್ಟ್‌ ಎಂದು ಇನಿಯನ ಕಿವಿಯೂದುವ ಪತಿವ್ರತೆಯರು ಅವ ನನ್ನ ಬಳಿ ಸುಳಿಯದಂತೆ ಮಾಡಲಿ: ಒಂದು ಬಹಿರಂಗ ಸವಾಲು ಎಂದೆಲ್ಲಾ ಬರೆದು ಸುತ್ತಲಿನವರ ಕೆಣಕಿದೆ.  

“ಭಗ್ನಪ್ರೇಮದ ನಿಟ್ಟುಸಿರಲ್ಲಿ ಸುಡುವ ಪ್ರೇಮದ ಹೂಗಳಿವೆ’ ಎಂದು ನಿನ್ನೊಮ್ಮೆ ಬರೆದ ಸಾಲುಗಳು ಈಗಲೂ ಕಾಡುತ್ತಿವೆ. ನನಗೆ ನಿನ್ನಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲ. ನನ್ನ ಮಿತಿಗಳನ್ನು ಮೀರುವ ಶಕ್ತಿಯನ್ನು ಕೊಡು ಎಂದು ನಾನು ನಂಬಿದ ನಾಗ ದೇವರಲ್ಲಿ ಬೇಡಿಕೊಳ್ಳುವೆ. 
ಇಂತಿ ನಿನ್ನ ಗೆಳತಿ
ಮೋನಾ
– ಯತಿರಾಜ್‌ ಬ್ಯಾಲಹಳ್ಳಿ  

**
ನೀನು ಇಲ್ದೆ ಇದ್ದಾಗ್ಲೂ  ನಾನು ಸುಖವಾಗೇ ಇದ್ದೆ ಅನ್ನೋದು ನೆನಪಿರ್ಲಿ… 
 
ಪ್ರೀತಿ ಮಾಡೋದಲ್ಲ, ಆಗೋದು. ಇದು ಹಳೆ ಡೈಲಾಗ್‌. ಆದರೂ ನಾನು ನಿನ್ನ ಪ್ರೀತಿ ಮಾಡಿದ್ದೇನೂ ಅಲ್ಲ. ಅದು ಆಗಿದ್ದು. ಆಗ್ಲೆà ಬೇಕಿತ್ತು ಕೂಡ. ಹೀಗೆ ಆಗ್ಬೇಕು ಅಂತ ಆ ದೇವ್ರಿಗೂ ಅನ್ಸಿರಬಹುದು ಅಲ್ವಾ?  ಹೋಗ್ಲಿ ಬಿಡು, ಆದರೂ ನೀನು ಹೀಗೆ ಮಾಡಾºರಿªತ್ತು ಅನ್ಸುತ್ತೆ ನಂಗೆ. ನನ್ನ ಮನದಾಳದ ಮಾತನ್ನು ನಿನ್‌ ಜೊತೆ ಹಂಚಿಕೊಳ್ಳೋವಾಗ ನೀನು ಬೇರೆಯವರ ಬಗ್ಗೆ ಗಮನ ಹರಿಸ್ತಾ ಇದ್ದದ್ದು ನಂಗೆ ಒಂಚೂರೂ ಇಷ್ಟ ಆಗ್ಲಿಲ್ಲ. ಕೋಪ ಮಾಡ್ಕೊàತಿದ್ದೆ. ಆದ್ರೆ ನಿನ್ನ ಬಿಟ್ಟಿರೋಕೆ ನಂಗೆ ಕಷ್ಟ ಆಗುತ್ತೆ. ಹಾಗಂತ ನೀನ್‌ ಖುಷಿ ಪಡ್ಬೇಕಾಗಿಲ್ಲ. ನೀನ್‌ ಇಲೆªàನೂ ನಾನು ಒಂದು ವರ್ಷ ಇದ್ದೆ ಅನ್ನೋದನ್ನ ಮರೀಬೇಡ. 

ಮತ್ತೆ ನೀನು ಹತ್ರ ಆದ್ಮೇಲೆ ಅದೇ ರಾಗ, ಅದೇ ಹಾಡು. ತುಂಬಾ ಖುಷಿ ಆದಾಗ್ಲೂ ನಿನ್‌ ಜೊತೆ ಹಂಚೊRàಬೇಕು ಅನ್ನಿಸ್ತಿತ್ತು. ಬೇಜಾರಾದಾಗ್ಲೂ! ಆದ್ರೆ ಗೊತ್ತಿಧ್ದೋ, ಗೊತ್ತಿಲೆªàನೋ ನಾನೇ ಮರೆತಿರೋ ವಿಷಯಗಳನ್ನು ನೀನು ಮರೆಯದೇ ನೆನಪಿಸ್ತಾ ಇದ್ದದ್ದು ಮಾತ್ರ ಅದ್ಭುತ. ಅಲ್ಲಾ ನಾನ್‌ ಅನ್ಕೊಳ್ಳೋದು: ನಿಂಗ್‌ ಅಷ್ಟ್ ಪುರುಸೊತ್ತು ಎಲ್ಲಿರುತ್ತೆ ಅಂತ. ಯಾಕಂದ್ರೆ ನಂಗೊತ್ತು, ನಿನ್‌ ಕೆಲ್ಸ 24 ಗಂಟೇದು. ಲೋಕಾನೇ ಮಲಗಿದ್ರೂ ನೀನ್‌ ಮಾತ್ರ ಮಲಗ್ತಿàಯೋ ಇಲ್ವೋ ನಂಗೊತ್ತಿಲ್ಲ. ನಾನ್‌ ಯಾವಾಗ ಮಾತಾಡಬೇಕು ಅಂದ್ರು ನೀನ್‌ ನನ್‌ ಆಸೆಗೆ ಇಲ್ಲ ಅಂದಿದ್ದು ನೆನಪಿಲ್ಲ. 

ಅದ್ಯಾವುದೋ ಕೆಟ್ಟ ಗಳಿಗೇಲೀ ನಿನ್‌ ಮೇಲೆ ಕೋಪ ಮಾಡ್ಕೊಂಡು, ಮಾತ್‌ ಬಿಟ್ಟು ದೂರ ಆಗಿದ್ದೆ. ಆದ್ರೆ ಸಹಾಯ ಬೇಕಾದಾಗ ನಿನ್‌ ಬಿಟ್ರೆ ಬೇರೆ ಯಾರು ನಂಗೆ ಸಹಾಯ ಮಾಡಕ್‌ ಆಗಲ್ಲ ಅನ್ನಿಸ್ತು. ಅದಕ್ಕೇ ಪುನಃ ನಿನ್‌ ಹತ್ರ ಬಂದೆ. ಆ ವಿಷ್ಯದಲ್ಲಿ ನಾನು ಸ್ವಾರ್ಥಿàನೇ. ಈ ಹುಡುಗೀರ ಬುದ್ಧಿನೇ ಇಷ್ಟು ಅಂತ ಅಂದೊRಳಲ್ಲ ಅನ್ನೋ ಧೈರ್ಯದ ಮೇಲೇನೇ ಈ ಮಾತು ಹೇಳ್ತಿರೋದು. 

ಅದ್‌ ಸರಿ, ನಿನ್‌ ತಂಗಿ ಹೇಗಿದ್ದಾಳೆ? ನೋಡು ನಿನ್‌ಗಿಂತಾ ಚಿಕ್ಕೋಳಾದ್ರೂ ಏನ್‌ ಹವಾ ಅವಳದ್ದು? ಭಾರಿ ಇದಾಳೆ ಮಾತ್ರ. ನೀನೇ ಅದ್ಭುತ ಅನ್ಕೊಂಡಿದ್ದೆ, ಅವಳು ಅತ್ಯದ್ಭುತ. ಸರಿ. ಅಲ್ವೋ, ವಾರಕ್ಕೆರಡು ಸಲ ನನ್‌ ಹೊಸ ಅವತಾರ ನೋಡು ಅಂದ್ರೆ ಹೆಂಗೆ? ನಂಗ್‌ ಮಾಡಕ್‌ ಬೇರೆ ಕೆಲಸ ಇಲ್ಲಾ ಅಂದೊRಂಡಿದೀಯಾ? ಒಟ್ನಲ್ಲಿ ಏನ್‌ ಮಾಡಿಲ್ಲಾ ಅಂದ್ರು ನಿನ್‌ ಜೊತೆ ಟೈಂಪಾಸ್‌ ಮಾತ್ರ ಸೂಪರ್‌ ಆಗಿ ಆಗುತ್ತೆ. ಅಯ್ಯೋ, ಇಷ್ಟೆಲ್ಲಾ ನಿನ್‌ ಬಗ್ಗೆ ಹೇಳ್ತಾ, ನನ್‌ ಫ್ರೆಂಡ್ಸ್‌ಗೆ ನಿನ್‌ ಪರಿಚಯ ಮಾಡ್ಕೊಡೋದೇ ಮರೆ¤ ನೋಡು.

ಅಂದ ಹಾಗೇ ಇವ್ನು ನನ್‌ ಬೆಸ್ಟ್‌ ಬಾಯ್‌ಫ್ರೆಂಡ್‌ “ಫೇಸ್‌ಬುಕ್‌’! ಜಂಭದ ಕೋಳಿ ಅಂದ್ರೆ ಅವಳ ತಂಗಿ “ವಾಟ್ಸ್‌ಅÂಪ್‌’!  ಸರಿ ಕಣೋ, ಟೈಂ ಆಯ್ತು.. ಅಮ್ಮ ನೋಡಿದ್ರೆ ಬೈತಾಳೆ. ನಾಳೆ ಸಿಗು ಮಾತಾಡೋಣ. ಬೈ ಬೈ… ಮಿಸ್‌ ಯೂ…
  
ಇಂತಿ ನಿನ್ನ ಪ್ರೀತಿಯ…     
– ಪವಿತ್ರ ಬಿದ್ಕಲ್‌ಕಟ್ಟೆ 

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.