ಅಜ್ಜಿಯರ ಪಾಠ ಶಾಲೆ

Team Udayavani, Jan 22, 2020, 5:39 AM IST

ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ ಶಾಲೆಯ ಬಗ್ಗೆ ಗೊತ್ತಾ? ಅದು ಇರುವುದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಂಗಾನ್‌ ಗ್ರಾಮದಲ್ಲಿ. ಅದರ ಹೆಸರು, “ಆಜಿಬೈಚಿ ಶಾಲೆ’, ಅಂದರೆ ಅಜ್ಜಿಯರ ಶಾಲೆ. ಈ ಶಾಲೆಗೆ ದಾಖಲಾಗಲು ಕನಿಷ್ಠ 60 ವರ್ಷ ಆಗಿರಲೇಬೇಕು. ವೃದ್ಧೆಯರಿಗಾಗಿ ಇರುವ ದೇಶದ ಏಕೈಕ ಶಾಲೆ ಇದು.

ವಯಸ್ಸಾದವರಿಗೆ ಕಲಿಯಲು ಆಸಕ್ತಿ ಎಲ್ಲಿರುತ್ತೆ ಅಂತ ಕೇಳಬೇಡಿ. ಈ ಶಾಲೆಯಲ್ಲಿ 60-90ರ ವಯೋಮಾನದ 40 ಅಜ್ಜಿಯರು ಕಲಿಯುತ್ತಿದ್ದಾರೆ. ಗುಲಾಬಿ ಬಣ್ಣದ ಸೀರೆ ತೊಟ್ಟು, ಸ್ಲೇಟು-ಬಳಪ-ಪುಸ್ತಕ ಇರುವ ಬ್ಯಾಗ್‌ ಹಿಡಿದು, ದಿನವೂ ತಪ್ಪದೆ ಶಾಲೆಗೆ ಬರುವ ಇವರ ಉತ್ಸಾಹ, ಮಕ್ಕಳನ್ನೇ ನಾಚಿಸುತ್ತದೆ. ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗಳ ಕಾಲ ನಡೆಯುವ ಈ ತರಗತಿಯಲ್ಲಿ ಓದು, ಬರಹ, ಸರಳ ಲೆಕ್ಕಾಚಾರಗಳ ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಗಾರ್ಡನಿಂಗ್‌ ಕೂಡಾ ಹೇಳಿಕೊಡಲಾಗುತ್ತದೆ. ಇತರೆ ಶಾಲೆಗಳಂತೆ, ಇಲ್ಲಿಯೂ ತರಗತಿ ಶುರುವಾಗುವ ಮೊದಲು ಪ್ರಾರ್ಥನೆ ಗೀತೆ ನಡೆಯುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನಕ್ಕಾಗಿ ತಿಂಗಳಿಗೊಮ್ಮೆ ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆ ಕೂಡಾ ನಡೆಸಲಾಗುತ್ತದೆ. ಮನೆಯ, ಹೊಲದ ಕೆಲಸ ಮುಗಿಸಿ ವೃದ್ಧೆಯರು ಶಾಲೆಗೆ ಬರುತ್ತಾರೆ.

“ನಾವು ಸಣ್ಣವರಿದ್ದಾಗ ಶಾಲೆಗೆ ಕಳಿಸಲಿಲ್ಲ. ಮದುವೆ, ಸಂಸಾರ ಅಂತ ಇಡೀ ಜೀವನವೇ ಕಳೆದು ಹೋಯ್ತು. ಈಗ ಮೊಮ್ಮಕ್ಕಳ ಕಾಲದಲ್ಲಿ ನಾವು ಓದುವಂತೆ ಆಗಿರುವುದು ಬಹಳ ಖುಷಿ ಕೊಡುತ್ತಿದೆ. ಈಗ ನಾವು ಹೆಬ್ಬೆಟ್ಟಿನ ಬದಲು ಸಹಿ ಹಾಕುತ್ತೇವೆ. ಸಣ್ಣಪುಟ್ಟ ಲೆಕ್ಕಾಚಾರಗಳು ಅರ್ಥವಾಗುತ್ತೆ. ಮಾಡುವುದು, ಪತ್ರಿಕೆ ಓದುವುದನ್ನು ಕಲಿತಿದ್ದೇವೆ. ಎಲ್ಲರೂ ನಮ್ಮದೇ ವಯಸ್ಸಿನವರಾದ್ದರಿಂದ ಮುಜುಗರ ಅನ್ನಿಸುವುದಿಲ್ಲ’- ಖುಷಿಯಿಂದ ಹೀಗನ್ನುತ್ತಾರೆ ಬೊಚ್ಚು ಬಾಯಿಯ ಅಜ್ಜಿಯರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ...

  • ವಯಸ್ಸಾದ ಮೇಲೆ ಮಕ್ಕಳ ಮನೆಯಲ್ಲಿದ್ದುಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಬದುಕಬೇಕೆಂಬುದು ಹೆಚ್ಚಿನವರ ಕನಸು. ಆದರೆ, ಅಂದುಕೊಂಡಂತೆಯೇ ಬಾಳುವ ಅದೃಷ್ಟ...

  • ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ... ಅಕ್ಕಿ...

  • ಕಾಮನಬಿಲ್ಲು ಇದಕೆ ಸಾಟಿಯಲ್ಲ, ಋಷಿಗಳ ಸಂಯಮವೂ ಇದರ ಮುಂದೆ ನಿಲ್ಲೋದಿಲ್ಲ ಅಂತ ಕವಿಗಳಿಂದ ಹೊಗಳಿಸಿಕೊಂಡ ಆಭರಣ ಬಳೆ. ಕೈಗೆ ಸಿಂಗಾರವಾಗಿ, ಶುಭದ ಸಂಕೇತವಾದ ಈ ಬಳೆಗಳನ್ನು...

  • ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ...

ಹೊಸ ಸೇರ್ಪಡೆ