ರೇಬಿಸ್‌; ಸೂಕ್ತ ಎಚ್ಚರಿಕೆ, ತುರ್ತು ಚಿಕಿತ್ಸೆಯಿಂದ ಖಚಿತ ನಿಯಂತ್ರಣ

Team Udayavani, Jan 5, 2020, 2:09 AM IST

41

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದಂತೆ ರೇಬೀಸ್‌ ಲಸಿಕೆಯನ್ನು ಇಂಟ್ರಾಮಸ್ಕೂಲರ್‌ (ಮಾಂಸಖಂಡದ ಮೂಲಕ) ಮತ್ತು ಇಂಟ್ರಾಡರ್ಮಲ್‌ (ಚರ್ಮದ ಮೂಲಕ) ಎರಡೂ ಮಾರ್ಗಗಳಿಂದ ನೀಡಬಹುದು. ಇಂಟ್ರಾಮಸ್ಕೂಲರ್‌ (ಮಾಂಸಖಂಡದ ಮೂಲಕ) ಮತ್ತು ಇಂಟ್ರಾಡರ್ಮಲ್‌ (ಚರ್ಮದ ಮೂಲಕ) ಮಾರ್ಗದ ವೇಳಾಪಟ್ಟಿ ಹೀಗಿದೆ:

ರೇಬಿಸ್‌ ಖಾಯಿಲೆಯು ರೇಬಿಸ್‌ ಲೈಸಾವೈರಸ್‌ನಿಂದ ಉಂಟಾಗುವಂತಹ ಮಾರಕ ಕಾಯಿಲೆ. ಆದರೆ ರೇಬಿಸ್‌ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕವಾದ ವ್ಯಕ್ತಿ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆದರೆ c ಕಾಯಿಲೆಯನ್ನು ತಡೆಗಟ್ಟಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಜಾಗತಿಕವಾಗಿ ಸುಮಾರು 50ರಿಂದ 60 ಸಾವಿರ ಜನರು ರೇಬಿಸ್‌ಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಭಾರತದಲ್ಲಿ ಇಪ್ಪತ್ತು ಸಾವಿರ ಅಂದರೆ 1/3ರಷ್ಟು ಜನರು ಸಾವಿಗೀಡಾಗುತ್ತಿದ್ದಾರೆ.

ರೇಬಿಸ್‌ ಸೋಂಕಿತ ಪ್ರಾಣಿಯು ಒಬ್ಬ ವ್ಯಕ್ತಿಗೆ ಕಚ್ಚಿದಾಗ ಅಥವಾ ಪರಚಿದಾಗ ಸೋಂಕಿತ ಪ್ರಾಣಿಯ ಲಾಲಾರಸ (ಜೊಲ್ಲು)ದಲ್ಲಿರುವ ವೈರಾಣುವು ಕಚ್ಚಿದ ಸ್ಥಳದಿಂದ ನರಗಳ ಮೂಲಕ ಮೆದುಳಿಗೆ ತಲುಪುತ್ತದೆ. ಅನಂತರ ಮೆದುಳು ಮತ್ತು ಬೆನ್ನುಹುರಿ ಉರಿಯೂತವನ್ನುಂಟು ಮಾಡಿ ರೇಬಿಸ್‌ ಖಾಯಿಲೆಯ ಲಕ್ಷಣಗಳು ಕಂಡುಬರುತ್ತವೆ. ನಾಯಿಗಳು ರೇಬಿಸ್‌ ಸೋಂಕಿನ ಮುಖ್ಯ ಮೂಲವಾಗಿವೆ. ಆದರೆ ಬೆಕ್ಕು, ಮಂಗ, ಬಾವಲಿ, ಹಸು, ಮೇಕೆ ಮತ್ತು ಯಾವುದೇ ಕಾಡು ಪ್ರಾಣಿಗಳ ಮೂಲಕ ಸೋಂಕು ಹರಡಬಹುದು.

ಪ್ರಾಣಿಯ ಕಡಿತದ ಅನಂತರ ರೇಬಿಸ್‌ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಮೂರು ತಿಂಗಳುಗಳಲ್ಲಿ ಕಂಡುಬರಬಹುದು. ಆದರೂ ಕೆಲವು ವ್ಯಕ್ತಿಗಳಲ್ಲಿ ಈ ರೋಗ ಲಕ್ಷಣಗಳು ಒಂದು ವಾರದಿಂದ ಒಂದು ವರ್ಷದ ಒಳಗೆ ಕಂಡುಬರಬಹುದು.

ಆರಂಭಿಕ ರೋಗ ಲಕ್ಷಣಗಳು
ಆರಂಭಿಕವಾಗಿ ಒಬ್ಬ ರೇಬಿಸ್‌ ಸೋಂಕಿತ ವ್ಯಕ್ತಿಯಲ್ಲಿ ಜ್ವರ, ನೋವು ಮತ್ತು ಗಾಯದ ಸ್ಥಳದಲ್ಲಿ ಮುಳ್ಳು ಚುಚ್ಚಿದ ಹಾಗೆ ಅಸಾಮಾನ್ಯ ಅಥವಾ ವಿವರಿಸಲಾಗದ ಜುಮ್ಮೆನಿಸುವಿಕೆ ಹಾಗೂ ಸುಡುವ ಸಂವೇದನೆ ಕಂಡುಬರುತ್ತದೆ. ಹಾಗೆಯೇ ಸೋಂಕಿತ ವ್ಯಕ್ತಿಯಲ್ಲಿ ಆತಂಕ ಮತ್ತು ದೇಹಾಲಸ್ಯವು ಕೂಡ ಕಂಡುಬರಬಹುದು.

ಸೋಂಕಿತ ವ್ಯಕ್ತಿಯ ಆರೋಗ್ಯದ ಗಂಭೀರ ಚಿಹ್ನೆ ಮತ್ತು ಲಕ್ಷಣಗಳು
ಗೊಂದಲ, ನೀರಿನ ಭಯ (ಹೈಡ್ರೋಫೋಬಿಯಾ), ಗಾಳಿಯ ಭಯ (ಏರೋಫೋಬಿಯಾ) ಮತ್ತು ಹೃದಯ ಮತ್ತು ಉಸಿರಾಟದಲ್ಲಿ ಸ್ತಂಭನ ಉಂಟಾಗಿ ಸಾವು ಸಂಭವಿಸುತ್ತದೆ.
ಪ್ರಾಣಿಯ ಕಡಿತದ ಅನಂತರ ಗಾಯದ ಚಿಕಿತ್ಸೆ

 ಪ್ರಾಥಮಿಕ ಚಿಕಿತ್ಸೆ: ಗಾಯವನ್ನು ತತ್‌ಕ್ಷಣವೇ ಹರಿಯುವ ನೀರು, ಸೋಪು ಮೂಲಕ ಕನಿಷ್ಠ ಹದಿನೈದು ನಿಮಿಷಗಳ ಕಾಲ ಸ್ವತ್ಛಗೊಳಿಸುವುದರಿಂದ ರೇಬಿಸ್‌ ವೈರಾಣುಗಳನ್ನು ದೇಹದಿಂದ ನಿಷ್ಕ್ರಿಯಗೊಳಿಸಬಹುದು.
 ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪೂರೈಸುವ ಪ್ರಬಲ ಮತ್ತು ಪರಿಣಾಮಕಾರಿ ರೇಬಿಸ್‌ ಲಸಿಕೆ ಮತ್ತು ಅಗತ್ಯವೆನಿಸಿದರೆ ರೇಬಿಸ್‌ ಇಮ್ಯೂನೋಗ್ಲೋಬಲಿನ್‌
ನೀಡಲಾಗುತ್ತದೆ.
 ಒಂದು ವೇಳೆ ನಾಯಿ,ಬೆಕ್ಕು, ಹಸುವಿನಂತಹ ಸಾಕು ಪ್ರಾಣಿಗಳಾಗಿದ್ದರೆ, ಅವುಗಳನ್ನು ಪ್ರತ್ಯೇಕವಾಗಿರಿಸಿ ಸರಿಸುಮಾರು ಹತ್ತು ದಿನಗಳ ಕಾಲ ರೇಬಿಸ್‌ ಸೋಂಕಿನ ಲಕ್ಷಣಗಳನ್ನು ಗಮನಿಸಬಹುದು.

ರೇಬಿಸ್‌ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕದ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ಮತ್ತು ರೋಗನಿರೋಧಕವನ್ನು ಈ ಕೆಳಕಂಡಂತೆ ವರ್ಗಿಕರಿಸಲಾಗಿದೆ.

ರೇಬೀಸ್‌ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳು:
ನಿಮ್ಮ ಸಾಕು ಪ್ರಾಣಿಗಳಿಗೆ ನಿಯಮಿತ ಮತ್ತು ನವೀಕೃತ ವ್ಯಾಕ್ಸಿನೇಶನ್‌(ಲಸಿಕೆ) ನೀಡುವುದು.
 ಪ್ರಾಣಿಗಳ ನಿಯಂತ್ರಣಕ್ಕೆ ಇಲಾಖೆಗೆ ಕರೆ ಮಾಡಿ ಮತ್ತು ಲಸಿಕೆ ಹಾಕದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ನೆರೆಹೊರೆಯ ಎಲ್ಲಾ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವುದು.
 ಪ್ರಾಣಿಗಳ ಕಡಿತವನ್ನು ಸೋಪ್‌ ಮತ್ತು ನೀರಿನಿಂದ ತೊಳೆಯಿರಿ.
 ರೇಬೀಸ್‌ ಖಾಯಿಲೆಯ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ಪೂರೈಕೆದಾರರನ್ನು ತಕ್ಷಣ ಸಂಪರ್ಕಿಸಿ.
 ಸಾಕು ಪ್ರಾಣಿಗಳನ್ನು ಹೊಂದಿದವರು ಅಥವಾ ಸಾಕು ಪ್ರಾಣಿಗಳನ್ನು ಪಾಲನೆ-ಪೋಷಣೆ ಮಾಡುವವರು ಮುಂಚಿತವಾಗಿ ರೇಬಿಸ್‌ ಲಸಿಕೆಯನ್ನು ಪಡೆಯುವುದು ಉತ್ತಮ. ಅದರ ವೇಳಾಪಟ್ಟಿ ಈ ಕೆಳಕಂಡಂತಿದೆ,

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ರೇಬೀಸ್‌ ಲಸಿಕೆ ಮತ್ತು ಇಮ್ಯೂನೊಗ್ಲೊಬಲಿನ್‌ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (ಕೆ.ಎಂ.ಸಿ.ಮಣಿಪಾಲ) ಯ ತುರ್ತು ಔಷಧ ವಿಭಾಗ (ಎಮರ್ಜೆನ್ಸಿ ವಿಭಾಗ)ದಲ್ಲಿ ಲಭ್ಯವಿರುತ್ತದೆ.

ಡಾ| ವೀಣಾ ಕಾಮತ್‌ ,
ಪ್ರೊಫೆಸರ್‌, ಕಮ್ಯೂನಿಟಿ ಮೆಡಿಸಿನ್‌, ಕೆಎಂಸಿ ಮಣಿಪಾಲ; ಕೊಆರ್ಡಿನೇಟರ್‌, ಸೆಂಟರ್‌ ಫಾರ್‌ ವ್ಯಾಕ್ಸಿನೇಶನ್‌ ಸ್ಟಡೀಸ್‌.

ಡಾ| ಚೈತ್ರಾ ಆರ್‌. ರಾವ್‌ ,
ಅಸೊಸಿಯೇಟ್‌ ಪ್ರೊಫೆಸರ್‌, ಕಮ್ಯೂನಿಟಿ ಮೆಡಿಸಿನ್‌ ವಿಭಾಗ.

ಡಾ| ಸಂದೇಶ್‌ ಕುಮಾರ್‌ ಎಂ.ಆರ್‌.
ಸೆಂಟರ್‌ ಫಾರ್‌ ವ್ಯಾಕ್ಸಿನ್‌ ಸ್ಟಡೀಸ್‌ ವಿಭಾಗ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.