ಪಾಕಿಸ್ಥಾನವನ್ನು ಕೆಡವಿದ ಆಸ್ಟ್ರೇಲಿಯ

Team Udayavani, Jun 13, 2019, 5:24 AM IST

ಪಾಕ್‌ ವಿರುದ್ಧ ಹ್ಯಾಟ್ರಿಕ್‌ ಶತಕ ಹೊಡೆದ ವಾರ್ನರ್‌

ಟೌಂಟನ್‌: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ಸಾಗಿದ ಬುಧವಾರದ ಟೌಂಟನ್‌ ವಿಶ್ವಕಪ್‌ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 41 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿದೆ.

ಡೇವಿಡ್‌ ವಾರ್ನರ್‌ ಅವರ ಶತಕ ಸಾಹಸದಿಂದ ಮೇಲುಗೈ ಸಾಧಿಸಿದ ಆಸ್ಟ್ರೇಲಿಯ, ಬಳಿಕ ವೇಗಿ ಮೊಹಮ್ಮದ್‌ ಆಮಿರ್‌ ಅವರ ಘಾತಕ ದಾಳಿಗೆ ದಿಢೀರ್‌ ಕುಸಿತ ಅನುಭವಿಸಿತು. ಆಸೀಸ್‌ 49 ಓವರ್‌ಗಳಲ್ಲಿ ಪೇರಿಸಿದ ಮೊತ್ತ 307 ರನ್‌. ಜವಾಬಿತ್ತ ಪಾಕಿಸ್ಥಾನ 45.4 ಓವರ್‌ಗಳಲ್ಲಿ 266ಕ್ಕೆ ಆಲೌಟ್‌ ಆಯಿತು.

ಕಳೆದ ಪಂದ್ಯಗಳಲ್ಲಿ ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿದ್ದ ವಾರ್ನರ್‌ ಪಾಕ್‌ ವಿರುದ್ಧ ನೈಜ ಆಟಕ್ಕೆ ಕುದುರಿಕೊಂಡರು. ಆರನ್‌ ಫಿಂಚ್‌ ಕೂಡ ಅಬ್ಬರಿಸಿದರು. ಈ ಜೋಡಿಯಿಂದ 22.1 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 146 ರನ್‌ ಸಂಗ್ರಹಗೊಂಡಿತು. 29ನೇ ಓವರ್‌ ಬಳಿಕ ಪಾಕ್‌ ಬೌಲರ್ ಸಂಪೂರ್ಣ ಹಿಡಿತ ಸಾಧಿಸಿದರು.

ಮುಂದಿನ 20 ಓವರ್‌ಗಳಲ್ಲಿ ಕಾಂಗರೂ ಪಡೆ ನಾಟಕೀಯ ಕುಸಿತಕ್ಕೆ ಸಿಲುಕಿತು. 118 ರನ್‌ ಅಂತರ ದಲ್ಲಿ 9 ವಿಕೆಟ್‌ ಹಾರಿ ಹೋಯಿತು. ಮೊದಲು ಬೌಲಿಂಗ್‌ ಆಯ್ದು ಕೊಂಡ ಪಾಕ್‌ ಸಮಾಧಾನದ ನಿಟ್ಟುಸಿರೆಳೆಯಿತು.

ವಾರ್ನರ್‌ ಸತತ 3ನೇ ಸೆಂಚುರಿ
ಡೇವಿಡ್‌ ವಾರ್ನರ್‌ ಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು. 110ನೇ ಏಕದಿನ ಪಂದ್ಯ ಆಡಲಿಳಿದ ವಾರ್ನರ್‌ 111 ಎಸೆತಗಳಿಂದ 107 ರನ್‌ ಬಾರಿಸಿ ಮೆರೆದಾಡಿದರು. ಸಿಡಿಸಿದ್ದು 11 ಬೌಂಡರಿ ಮತ್ತು ಒಂದು ಸಿಕ್ಸರ್‌. ಇದು ಪಾಕಿಸ್ಥಾನ ವಿರುದ್ಧ ವಾರ್ನರ್‌ ಬಾರಿಸಿದ ಹ್ಯಾಟ್ರಿಕ್‌ ಶತಕವೆಂಬುದು ವಿಶೇಷ.

ಆಕ್ರಮಣಕಾರಿ ಆಟವಾಡಿದ ನಾಯಕ ಆರನ್‌ ಫಿಂಚ್‌ 82 ರನ್‌ ಬಾರಿಸಿದರು. 84 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ ಒಳಗೊಂಡಿತ್ತು.

ಆಮಿರ್‌ ಘಾತಕ ಆಕ್ರಮಣ
ಮೇಡನ್‌ ಓವರ್‌ನೊಂದಿಗೆ ಬೌಲಿಂಗ್‌ ಆಕ್ರಮಣ ಆರಂಭಿಸಿದ ಮೊಹಮ್ಮದ್‌ ಆಮಿರ್‌ ಆಸೀಸ್‌ ಕಪ್ತಾನನ ವಿಕೆಟ್‌ ಬಳಿಕ ಘಾತಕ ದಾಳಿ ನಡೆಸಿದರು. ಮಾರ್ಷ್‌, ಖ್ವಾಜಾ, ಕ್ಯಾರಿ ಮತ್ತು ಸ್ಟಾರ್ಕ್‌ ವಿಕೆಟ್‌ ಉರುಳಿಸಿದರು. ಎಡಗೈ ಮಧ್ಯಮ ವೇಗಿ ಆಮಿರ್‌ ಸಾಧನೆ 30ಕ್ಕೆ 5 ವಿಕೆಟ್‌. ಅವರು ಏಕದಿನದಲ್ಲಿ 5 ವಿಕೆಟ್‌ ಹಾರಿಸಿದ್ದು ಇದೇ ಮೊದಲು. ಈ ಸಾಧನೆಯೊಂದಿಗೆ ವಿಶ್ವಕಪ್‌ ಪಂದ್ಯದಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ ಪಾಕಿಸ್ಥಾನದ 7ನೇ ಬೌಲರ್‌.

ಸ್ಕೋರ್‌ ಪಟ್ಟಿ
ಆಸ್ಟ್ರೇಲಿಯ
ಆರನ್‌ ಫಿಂಚ್‌ ಸಿ ಹಫೀಜ್‌ ಬಿ ಆಮಿರ್‌ 82
ಡೇವಿಡ್‌ ವಾರ್ನರ್‌ ಸಿ ಹಕ್‌ ಬಿ ಅಫ್ರಿದಿ 107
ಸ್ಟೀವನ್‌ ಸ್ಮಿತ್‌ ಸಿ ಅಲಿ ಬಿ ಹಫೀಜ್‌ 10
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಅಫ್ರಿದಿ 20
ಶಾನ್‌ ಮಾರ್ಷ್‌ ಸಿ ಮಲಿಕ್‌ ಬಿ ಆಮಿರ್‌ 23
ಉಸ್ಮಾನ್‌ ಖ್ವಾಜಾ ಸಿ ರಿಯಾಜ್‌ ಬಿ ಆಮಿರ್‌ 18
ಅಲೆಕ್ಸ್‌ ಕ್ಯಾರಿ ಎಲ್‌ಬಿಡಬ್ಲ್ಯು ಆಮಿರ್‌ 20
ನಥನ್‌ ಕೋಲ್ಟರ್‌ ನೈಲ್‌ ಸಿ ಸಫ‌ìರಾಜ್‌ ಬಿ ರಿಯಾಜ್‌ 2
ಪ್ಯಾಟ್‌ ಕಮಿನ್ಸ್‌ ಸಿ ಸಫ‌ìರಾಜ್‌ ಬಿ ಅಲಿ 2
ಮಿಚೆಲ್‌ ಸ್ಟಾರ್ಕ್‌ ಸಿ ಮಲಿಕ್‌ ಬಿ ಆಮಿರ್‌ 3
ಕೇನ್‌ ರಿಚರ್ಡ್‌ಸನ್‌ ಔಟಾಗದೆ 1
ಇತರ 19
ಒಟ್ಟು (49 ಓವರ್‌ಗಳಲ್ಲಿ ಆಲೌಟ್‌) 307
ವಿಕೆಟ್‌ ಪತನ: 1-146, 2-189, 3-223, 4-242, 5-277, 6-288, 7-299, 8-302, 9-304.
ಬೌಲಿಂಗ್‌: ಮೊಹಮ್ಮದ್‌ ಆಮಿರ್‌ 10-2-30-5
ಶಹೀನ್‌ ಅಫ್ರಿದಿ 10-0-70-2
ಹಸನ್‌ ಅಲಿ 10-0-67-1
ವಹಾಬ್‌ ರಿಯಾಜ್‌ 8-0-44-1
ಮೊಹಮ್ಮದ್‌ ಹಫೀಜ್‌ 7-0-60-1
ಶೋಯಿಬ್‌ ಮಲಿಕ್‌ 4-0-26-0
ಪಾಕಿಸ್ಥಾನ
ಇಮಾಮ್‌ ಉಲ್‌ ಹಕ್‌ ಸಿ ಕ್ಯಾರಿ ಬಿ ಕಮಿನ್ಸ್‌ 53
ಫ‌ಕಾರ್‌ ಜಮಾನ್‌ ಸಿ ರಿಚರ್ಡ್‌ಸನ್‌ ಬಿ ಕಮಿನ್ಸ್‌ 0
ಬಾಬರ್‌ ಆಜಂ ಸಿ ರಿಚರ್ಡ್‌ಸನ್‌ ಬಿ ನೈಲ್‌ 30
ಮೊಹಮ್ಮದ್‌ ಹಫೀಜ್‌ ಸಿ ಸ್ಟಾರ್ಕ್‌ ಬಿ ಫಿಂಚ್‌ 46
ಸಫ‌ìರಾಜ್‌ ಅಹ್ಮದ್‌ ರನೌಟ್‌ 40
ಶೋಯಿಬ್‌ ಮಲಿಕ್‌ ಸಿ ಕ್ಯಾರಿ ಬಿ ಕಮಿನ್ಸ್‌ 0
ಆಸಿಫ್ ಅಲಿ ಸಿ ಕ್ಯಾರಿ ಬಿ ರಿಚರ್ಡ್‌ಸನ್‌ 5
ಹಸನ್‌ ಅಲಿ ಸಿ ಖ್ವಾಜಾ ಬಿ ರಿಚರ್ಡ್‌ಸನ್‌ 32
ವಹಾಬ್‌ ರಿಯಾಜ್‌ ಸಿ ಕ್ಯಾರಿ ಬಿ ಸ್ಟಾರ್ಕ್‌ 45
ಮೊಹಮ್ಮದ್‌ ಆಮಿರ್‌ ಬಿ ಸ್ಟಾರ್ಕ್‌ 0
ಶಹೀನ್‌ ಅಫ್ರಿದಿ ಔಟಾಗದೆ 1
ಇತರ 14
ಒಟ್ಟು (45.4 ಓವರ್‌ಗಳಲ್ಲಿ ಆಲೌಟ್‌) 266
ವಿಕೆಟ್‌ ಪತನ: 1-2, 2-56, 3-136, 4-146, 5-147, 6-160, 7-200, 8-264, 9-265.
ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌ 10-0-33-3
ಮಿಚೆಲ್‌ ಸ್ಟಾರ್ಕ್‌ 9-1-43-2
ಕೇನ್‌ ರಿಚರ್ಡ್‌ಸನ್‌ 8.4-0-62-2
ನಥನ್‌ ಕೋಲ್ಟರ್‌ ನೈಲ್‌ 9-0-53-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 7-0-58-0
ಆರನ್‌ ಫಿಂಚ್‌ 2-0-13-1
ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ